Vastu Tips: ಮಲಗುವಾಗ ಈ ವಸ್ತುಗಳನ್ನು ನಿಮ್ಮ ದಿಂಬಿನ ಕೆಳಗಿಡಿ, ಅದೃಷ್ಟ ಬದಲಾಗುತ್ತೆ

Vastu Tips - ಹಲವು ಬಾರಿ, ಮಲಗಿದ ನಂತರವೂ ಕೂಡ ಗಂಟೆಗಳವರೆಗೆ ನಿದ್ರೆಯೇ ಬರೋದಿಲ್ಲ ಮತ್ತು ಕೆಟ್ಟ ಆಲೋಚನೆಗಳು ಮನಸ್ಸಿನಲ್ಲಿ ಬರುತ್ತಲೇ ಇರುತ್ತವೆ. ಈ ಸಮಸ್ಯೆಗಳನ್ನು ತಪ್ಪಿಸಲು, ನೀವು ವಾಸ್ತುಗೆ ಸಂಬಂಧಿಸಿದ ಕೆಲವು ಪರಿಹಾರಗಳನ್ನು ಪ್ರಯತ್ನಿಸಬಹುದು.

Last Updated : Feb 22, 2021, 02:32 PM IST
  • ಕೆಟ್ಟ ಕನಸುಗಳು ಬೀಳುತ್ತಿದ್ದಾರೆ ದಿಂಬಿನ ಕೆಳಗೆ ಈ ವಸ್ತುಗಳನ್ನಿಡಿ.
  • ನಕಾರಾತ್ಮಕ ಶಕ್ತಿಯನ್ನು ತೊಲಗಿಸಲು ಈ ಉಪಾಯ ಮಾಡಿ.
  • ಮಲಗುವ ಮುನ್ನ ದಿಂಬಿನ ಕೆಳಗೆ ಈ ವಸ್ತುಗಳನ್ನು ಇಡುವುದರಿಂದ ಲಾಭ ಸಿಗುತ್ತದೆ.
Vastu Tips: ಮಲಗುವಾಗ ಈ ವಸ್ತುಗಳನ್ನು ನಿಮ್ಮ ದಿಂಬಿನ ಕೆಳಗಿಡಿ, ಅದೃಷ್ಟ ಬದಲಾಗುತ್ತೆ title=
Vastu Tips (File Photo)

ನವದೆಹಲಿ: Vastu Tips - ಹಲವು ಬಾರಿ ಸಮಸ್ಯೆಗಳು ನಮ್ಮನ್ನು ಸುತ್ತುವರೆದಿರುತ್ತವೆ. ಹಾಗೂ ನೆಮ್ಮದಿ ಇರದೇ ಇರುವ ಕಾರಣ ರಾತ್ರಿ ನಿದ್ರೆಯೇ ಬರುವುದಿಲ್ಲ.  ಕೆಲವೇ ಗಂಟೆಗಳ ನಿದ್ರೆ ಮಾರನೆ ದಿನ ವ್ಯಕ್ತಿಯ ಮೂಡ್ ಹಾಳಾಗಲು ಕಾರಣವಾಗುತ್ತದೆ ಹಾಗೂ ಇದು ವ್ಯಕ್ತಿಯ ಕೆಲಸದ ಮೇಲೂ ಕೂಡ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯ ಜೀವನದಲ್ಲಿ ಸಂಕಷ್ಟಗಳು ಹೆಚ್ಚಾಗುತ್ತವೆ. ಜೋತಿಷ್ಯ ಶಾಸ್ತ್ರ (Jyotish) ಸೇರಿದಂತೆ ವಾಸ್ತು ಶಾಸ್ತ್ರದಲ್ಲಿಯೂ (Vastu Shastra) ಕೂಡ ಕೆಲ ವಸ್ತುಗಳನ್ನು ದಿಂಬಿನ ಕೆಳಗೆ ಇಡುವುದರಿಂದ ಉತ್ತಮ ಗುಣಮಟ್ಟದ ನಿದ್ರೆಯ ಜೊತೆಗೆ ನೆಮ್ಮದಿ ಕೂಡ ನಿಮ್ಮದಾಗಿಸಬಹುದು ಎಂದು ಹೇಳಲಾಗಿದೆ. ಜೀವನದಲ್ಲಿ ಆರ್ಥಿಕ ಸಮಸ್ಯೆ (Financial Problem) ಇದ್ದರೂ ಕೂಡ ಇದರಿಂದ ನಿವಾರಣೆಯಾಗುತ್ತವೆ.

ಮಲಗುವ ವೇಳೆ ವಾಸ್ತುಗೆ (Sleep Time Vastu) ಸಂಬಂಧಿಸಿದ ಈ ಉಪಾಯಗಳನ್ನು ಮಾಡಿ
- ಒಂದು ವೇಳೆ ನಿಮ್ಮ ಮಗು ಮಲಗಿರುವ ವೇಳೆ ಭಯಪಟ್ಟು ಬೆಚ್ಚಿ ಬಿದ್ದು ಎದ್ದು ಕುಳಿತು ಅಳಲು ಪ್ರಾರಂಭಿಸಿದರೆ, ಮಲಗುವ ವೇಳೆ ಮಗುವಿನ ದಿಂಬಿನ ಕೆಳಗೆ ಲೋಹದ ವಸ್ತುವೊಂದನ್ನು ಇಡಿ. ಇದನ್ನು ಮಾಡುವುದರಿಂದ ನೀವು ನಕಾರಾತ್ಮಕ ಶಕ್ತಿ (Negative Energy) ನಿಮ್ಮ ಮಗುವಿನ ಹತ್ತಿರಕ್ಕೂ ಸುಳಿಯುವುದನ್ನು ತಪ್ಪಿಸಬಹುದು ಹಾಗೂ ಮಗು ರಾತ್ರಿ ಇಡೀ ನೆಮ್ಮೆದಿಯಿಂದ ಸುಖ ನಿದ್ರೆಗೆ ಜಾರಲಿದೆ. ವಯಸ್ಕರಿಗೂ ಕೂಡ ಒಂದು ವೇಳೆ ರಾತ್ರಿ ಹೊತ್ತು ಕೆಟ್ಟ ಆಲೋಚನೆಗಳು (Bad Thoughts) ಬರುತ್ತಿದ್ದರೆ ಅವರ ದಿಂಬಿನ ಕೆಳಗೂ ಕೂಡ ಚಾಕು, ಕತ್ತರಿ ಅಥವಾ ಯಾವುದಾದರೊಂದು ಲೋಹದ ವಸ್ತುವನ್ನಿಡಿ (Things To Keep Under Pillow). 

- ಒಂದು ವೇಳೆ ಮನಸ್ಸಿನಲ್ಲಿ ಯಾವುದೇ ರೀತಿಯ ಭಯ, ಶಂಕೆ ಇದ್ದರೆ, ಕೆಟ್ಟ ಕನಸುಗಳು ಬಿದ್ದು ಮನಸ್ಸು ಶಾಂತವಾಗಿಲ್ಲದರ ಕಾರಣ ನಿದ್ರೆ ಬರುತ್ತಿಲ್ಲ ಎಂದಾದರೆ, ಮಲಗುವ ಮುನ್ನ ಹನುಮಾನ ಚಾಲಿಸಾ ಪಠಿಸಿ. ನಂತರ ಹನುಮಾನ್ ಚಾಲಿಸಾ (Hanuman Chalisa) ಪುಸ್ತಕವನ್ನು ನಿಮ್ಮ ತಲೆ ಭಾಗದಲ್ಲಿಟ್ಟುಕೊಂಡು ಮಲಗಿ. ಇದರಿಂದ ಮಾನಸಿಕ ಬಲ ಸಿಗುತ್ತದೆ ಮತ್ತು ಸುತ್ತ ಮುಟ್ಟಲು ಸಕಾರಾತ್ಮಕ ಶಕ್ತಿ (Postive Energy) ಆವರಿಸುತ್ತದೆ. ದುರ್ಗಾ ಸಪ್ತಶತಿಯನ್ನೂ ಕೂಡ ನೀವು ನಿಮ್ಮ ದಿಂಬಿನ ಬಳಿ ಇಟ್ಟುಕೊಳ್ಳಬಹುದು. ಇದರಿಂದ ನಿಮ್ಮ ಮನಸ್ಸಿನಲ್ಲಿರುವ ಭಯ ಹಾಗೂ ಒತ್ತಡ ನಿವಾರಣೆಯಾಗುತ್ತದೆ.

ಇದನ್ನೂ ಓದಿ- Mercury Planet And Skin Problems: ಬುಧ ಅಶುಭನಾದರೆ ತ್ವಚೆಗೆ ಸಂಬಂಧಿಸಿದ ವ್ಯಾಧಿಗಳು ಬರುತ್ತವೆ

- ವಾಸ್ತುಶಾಸ್ತ್ರದಲ್ಲಿ ಬೆಳ್ಳುಳ್ಳಿಯನ್ನು (Garlic) ಕೂಡ ಸೌಭಾಗ್ಯದ ಪ್ರತೀಕ ಎಂದು ಹೇಳಲಾಗಿದೆ. ದಿಂಬಿನ ಕೆಳಗೆ ಬೆಳ್ಳುಳ್ಳಿ ಕುಡಿಗಳನ್ನು ಇಟ್ಟುಕೊಂಡು ಮಲಗುವುದರಿಂದ ವ್ಯಕ್ತಿಯ ಸುತ್ತಮುತ್ತಲು ಪಾಸಿಟಿವ್ ಎನರ್ಜಿ ಸಂಚರಿಸುತ್ತದೆ ಹಾಗೂ ಋಣಾತ್ಮಕ ಶಕ್ತಿ (Negative Energy)ನಾಶವಾಗುತ್ತದೆ. ಇದರಿಂದ ಮನಸ್ಸಿನಲ್ಲಿ ನಕಾರಾತ್ಮಕ ಆಲೋಚನೆಗಳು ಕೂಡ ಬರುವುದಿಲ್ಲ

ಇದನ್ನೂ ಓದಿ- ನಿಮಗೂ ನಿಮ್ಮ Best Friend ಮೇಲೆ ಪ್ರೀತಿ ಹುಟ್ಟಿದೆಯೇ? ಈ Love Signಗಳನ್ನು ತಿಳಿದುಕೊಳ್ಳಿ

- ಮಲಗುವ ವೇಳೆ ದಿಂಬಿನ ಕೆಳಗೆ ಸೌಂಫ್ (Fennel Seeds) ಬೀಜಗಳನ್ನು ಇಟ್ಟುಕೊಂಡು ಮಲಗುವುದರಿಂದ ರಾಹು ದೋಷ ಪರಿಹಾರವಾಗುತ್ತದೆ. ಇದರಿಂದ ರಾಹುವಿನ ಕೆಟ್ಟ ಪ್ರಭಾವ ಕೂಡ ಕಡಿಮೆಯಾಗುತ್ತದೆ. ಇದಲ್ಲದೆ ದಿಂಬಿನ ಕೆಳಗೆ ಹಸಿರು ಬಣ್ಣದ ಏಲಕ್ಕಿ (Cardamom) ಇಟ್ಟು ಮಲಗುವುದರಿಂದ ವ್ಯಕ್ತಿಗೆ ಗಾಢ ನಿದ್ರೆ (Good Sleep)ಬರುತ್ತದೆ.

ಇದನ್ನೂ ಓದಿ- New Dress Wearing: ವಾರದ ಈ ದಿನಗಳಂದು ಹೊಸ ಬಟ್ಟೆ ಧರಿಸಬೇಡಿ, ಸಂಕಷ್ಟ ಎದುರಾದೀತು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News