ನವದೆಹಲಿ:  Popularity Remedies - ಹಣ (Money) ಮತ್ತು ಹೆಸರು (Name Fame) ಈ ಎರಡು ವಿಷಯ ಜೀವನದಲ್ಲಿ ಯಾರಿಗೆ ತಾನೇ ಬೇಡ. ಎಲ್ಲರಿಗೂ ಖ್ಯಾತಿ ಪಡೆಯುವ ಹಂಬಲವಿರುತ್ತದೆ. ಇದಕ್ಕಾಗಿ, ಜನರು ವಿವಿಧ ಕೆಲಸಗಳನ್ನು ಮಾಡುತ್ತಾರೆ ಮತ್ತು ಅನೇಕ ಒಳ್ಳೆಯ ಮತ್ತು ಕೆಟ್ಟ ಮಾರ್ಗಗಳನ್ನು ಅನುಸರಿಸುತ್ತಾರೆ. ಆದರೆ, ಪ್ರಸಿದ್ಧರಾಗುವುದು ಎಲ್ಲರ ಅದೃಷ್ಟದಲ್ಲಿ ಬರೆದಿರುವುದಿಲ್ಲ. ಜೋತಿಷ್ಯ ಶಾಸ್ತ್ರದಲ್ಲಿ (Astrology) ಇದಕ್ಕಾಗಿಯೇ ಕೆಲ ಪರಿಹಾರಗಳನ್ನು ಸೂಚಿಸಲಾಗಿದೆ. ಇವುಗಳನ್ನು ಅನುಸರಿಸುವ ಮೂಲಕ ನೀವು ಬೇಗನೆ ಪ್ರಸಿದ್ದಿ ಸಂಪಾದಿಸಬಹುದು. ಇದು ನಿಮಗೆ ಸಮಾಜದಲ್ಲಿ ವಿಭಿನ್ನವಾದ ಗುರುತನ್ನು ಮತ್ತು ಸ್ಥಾನವನ್ನು ನೀಡುತ್ತದೆ.


COMMERCIAL BREAK
SCROLL TO CONTINUE READING

ಖ್ಯಾತಿಯನ್ನು ಪಡೆಯುವ ಮಾರ್ಗಗಳು (Effective Remedies For Popularity)
>> ಖ್ಯಾತಿಯನ್ನು ಪಡೆಯಲು, ಮನೆಯಲ್ಲಿ ಸಕಾರಾತ್ಮಕತೆ ಇರಬೇಕು, ಆಗ ಮಾತ್ರ ನೀವು ಧನಾತ್ಮಕ ಶಕ್ತಿಯಿಂದ ತುಂಬಿರುವಿರಿ. ಇದಕ್ಕಾಗಿ ಮನೆಯಲ್ಲಿ  ಬೆಳಗ್ಗೆ ಮತ್ತು ಸಂಜೆ ಕರ್ಪೂರವನ್ನು ಸುಡಬೇಕು.
>> ಜ್ಯೋತಿಷ್ಯದಲ್ಲಿ, ಸೂರ್ಯನನ್ನು ಯಶಸ್ಸು ಮತ್ತು ಗೌರವದ ಅಂಶವೆಂದು ಪರಿಗಣಿಸಲಾಗಿದೆ. ಆದ್ದರಿಂದ, ಸೂರ್ಯನಿಗೆ ರೋಲಿ ಮಿಶ್ರಿತ ನೀರನ್ನು ಅರ್ಪಿಸಿ, ಹಳದಿ ಬಟ್ಟೆಗಳನ್ನು ಧರಿಸಿ, ಕೆಂಪು ಚಂದನವನ್ನು ಲೇಪಿಸಿ. ಇದರಿಂದ ನಿಮ್ಮ ಜಾತಕದಲ್ಲಿ ಸೂರ್ಯ ಬಲ ಹೆಚ್ಚಾಗುತ್ತದೆ ಮತ್ತು ಆತ ನಿಮಗೆ ಯಶಸ್ಸನ್ನು ದಯಪಾಲಿಸುತ್ತಾನೆ ಮತ್ತು ಅಪಾರ ಖ್ಯಾತಿಯನ್ನು ಸಹ ನೀಡುತ್ತಾನೆ.
>> ಕೀರ್ತಿ ಪಡೆಯಲು ದೇವಿ ದುರ್ಗೆಯ ಕೃಪೆ ಅಗತ್ಯ. ದುರ್ಗೆಯನ್ನು ಮೆಚ್ಚಿಸಲು ದೇವಿಯ ಆರಾಧನೆ ಮಾಡಿ. ದೇವಿಗ ಲವಂಗ, ಬಳೆಗಳು, ಕರ್ಪೂರ, ದಾಸವಾಳದ ಹೂವುಗಳು, ಸಿಂಧೂರ ಮತ್ತು ಸುಗಂಧ ದ್ರವ್ಯಗಳನ್ನು ಅರ್ಪಿಸಿ.


ಇದನ್ನೂ ಓದಿ-Snakes Indications ಹಾವುಗಳಿಗೆ ಸಂಬಂಧಿಸಿದ ಶುಭ-ಅಶುಭ ಶಕುನಗಳ ಬಗ್ಗೆ ನಿಮಗೆ ತಿಳಿದಿದೆಯೇ?

>> ಮನೆಯಲ್ಲಿ ರಾಧಾ-ಕೃಷ್ಣರ ವಿಗ್ರಹ ಅಥವಾ ಚಿತ್ರವನ್ನು ಇರಿಸಿ. ಅವರನ್ನು ಆರಾಧಿಸಿ. ಅದು ನಿಮ್ಮನ್ನು ಅದೃಷ್ಟವಂತರನ್ನಾಗಿ ಮಾಡುತ್ತದೆ.
>> ಪ್ರತಿದಿನದ ಪ್ರಕಾರ ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಿ. ಇದರಿಂದ ನೀವು ಪ್ರತಿದಿನ ನಿಮ್ಮ ಕೆಲಸದಲ್ಲಿ ಯಶಸ್ಸು ಮತ್ತು ಖ್ಯಾತಿಯನ್ನು ಪಡೆಯುತ್ತೀರಿ. ಉದಾಹರಣೆಗೆ, ಸೋಮವಾರ ಮನೆಯಿಂದ ಹೊರಡುವ ಮೊದಲು, ಕನ್ನಡಿಯಲ್ಲಿ ನಿಮ್ಮ ಮುಖವನ್ನು ನೋಡಿ. ಮಂಗಳವಾರ ಸಿಹಿ ಅಥವಾ ಬೆಲ್ಲ ತಿಂದ ನಂತರ ಹೊರಗೆ ಹೋಗಿ. ಬುಧವಾರ ಮನೆಯಿಂದ ಹೊರಡುವ ಮುನ್ನ ಹಸಿರು ಕೊತ್ತಂಬರಿ ಸೊಪ್ಪನ್ನು ಸೇವಿಸಿ. ನೀವು ಗುರುವಾರ ಲಡ್ಡೂಗಳನ್ನು ತಿನ್ನಬಹುದು. ಶುಕ್ರವಾರದಂದು ಹಾಲಿನಿಂದ ಮಾಡಿದ ಪದಾರ್ಥಗಳನ್ನು ಸೇವಿಸಿ. ಶನಿವಾರ ತುಪ್ಪ ತಿಂದು ಹೊರಗೆ ಹೋಗಿ. ಇದೆ ವೇಳೆ ಭಾನುವಾರ ಮನೆಯಿಂದ ಹೊರಡುವಾಗ, ನಿಮ್ಮೊಂದಿಗೆ ಒಂದು ವೀಳ್ಯದೆಲೆ ಇಟ್ಟುಕೊಳ್ಳಿ. ಈ ಕ್ರಮಗಳು ನಿಮ್ಮ ಪ್ರತಿ ದಿನವನ್ನು ಯಶಸ್ವಿಯಾಗಿಸುತ್ತದೆ.


ಇದನ್ನೂ ಓದಿ-Shani Rashi Parivartan 2022: ಶನಿ ರಾಶಿ ಬದಲಾವಣೆ, ಈ 3 ರಾಶಿಯವರಿಗೆ ಕೆಟ್ಟ ದಿನಗಳು ಆರಂಭ


(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಿರಿ. ಝೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)


ಇದನ್ನೂ ಓದಿ - ಮುಂದಿನ 10 ದಿನಗಳವರೆಗೆ ಈ 3 ರಾಶಿಗಳಿಗೆ ತ್ರಿಗ್ರಹ ಯೋಗ: ಉದ್ಯೋಗ-ವ್ಯವಹಾರದಲ್ಲಿ ಅದ್ಭುತ ಪ್ರಗತಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.