Snakes Indications ಹಾವುಗಳಿಗೆ ಸಂಬಂಧಿಸಿದ ಶುಭ-ಅಶುಭ ಶಕುನಗಳ ಬಗ್ಗೆ ನಿಮಗೆ ತಿಳಿದಿದೆಯೇ?

Snakes Indications ಹಾವುಗಳಿಗೆ ಸಂಬಂಧಿಸಿದ ಕೆಲವು ಚಿಹ್ನೆಗಳು ಬಹಳ ಮುಖ್ಯ. ಈ ಚಿಹ್ನೆಗಳು ಕನಸಿನಲ್ಲಿ ಅಥವಾ ವಾಸ್ತವದಲ್ಲಿ ಹೇಗೇ ಕಂಡರೂ ಅವು ನಿಮ್ಮ ಅದೃಷ್ಟಕ್ಕೆ ಸಂಬಂಧಿಸಿವೆ.

Written by - Yashaswini V | Last Updated : Jan 25, 2022, 09:13 AM IST
  • ಹಾವುಗಳಿಗೆ ಸಂಬಂಧಿಸಿದ ಈ ಚಿಹ್ನೆಗಳು ನಿಮಗೆ ತಿಳಿದಿದೆಯೇ?
  • ಶುಭ ಮತ್ತು ಅಶುಭ ಘಟನೆಗಳ ಸೂಚನೆಯನ್ನು ನೀಡುತ್ತದೆ
  • ನೀವು ಹಾವನ್ನು ಕನಸಿನಲ್ಲಿ ಮತ್ತು ವಾಸ್ತವದಲ್ಲಿ ಕಂಡರೆ ಜಾಗರೂಕರಾಗಿರಿ
Snakes Indications ಹಾವುಗಳಿಗೆ ಸಂಬಂಧಿಸಿದ ಶುಭ-ಅಶುಭ ಶಕುನಗಳ ಬಗ್ಗೆ ನಿಮಗೆ ತಿಳಿದಿದೆಯೇ? title=
Snakes Indications

Snakes Indications: ಹಿಂದೂ ಧರ್ಮದಲ್ಲಿ ಹಾವುಗಳಿಗೆ ದೇವತೆಯ ಸ್ಥಾನಮಾನ ನೀಡಲಾಗಿದೆ. ಶಿವನು ತನ್ನ ಕೊರಳಲ್ಲಿ ಹಾವನ್ನು ಧರಿಸಿದ್ದಾನೆ. ದೇಶದಲ್ಲಿ ಅನೇಕ ನಾಗರ ದೇವಾಲಯಗಳಿವೆ. ಅಷ್ಟೇ ಅಲ್ಲ, ಹಾವುಗಳನ್ನು ನೇಮ-ನಿಷ್ಠೆಯಿಂದ ಪೂಜಿಸಲು  ಷಷ್ಠಿ, ನಾಗಪಂಚಮಿ ಹಬ್ಬವನ್ನು ಕೂಡ ಆಚರಿಸಲಾಗುತ್ತದೆ. ಆದರೆ ಇದರೊಂದಿಗೆ ಹಾವುಗಳಿಗೆ ಸಂಬಂಧಿಸಿದ ಅನೇಕ ಶಕುನಗಳೂ ಪ್ರಚಲಿತದಲ್ಲಿವೆ. ಇಂದು ನಾವು ಹಾವುಗಳಿಗೆ ಸಂಬಂಧ ಹೊಂದಿರುವ ಅಂತಹ ಮಂಗಳಕರ ಮತ್ತು ಅಶುಭಕರ ಚಿಹ್ನೆಗಳ ಬಗ್ಗೆ ತಿಳಿಸಲಿದ್ದೇವೆ. 

ಇವು ಹಾವುಗಳಿಗೆ ಸಂಬಂಧಿಸಿದ ಶುಭ ಮತ್ತು ಅಶುಭ ಚಿಹ್ನೆಗಳು :
ಬಿಳಿ ಹಾವು ವಾಸ್ತವದಲ್ಲಿ ಅಥವಾ ಕನಸಿನಲ್ಲಿ ಕಂಡುಬಂದರೆ, ಅದನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಅದೃಷ್ಟವಂತರಿಗೆ ಮಾತ್ರ ಇಂತಹ ಹಾವಿನ ದರ್ಶನವಾಗುತ್ತದೆ. ಬಿಳಿ ಹಾವಿನ ನೋಟವು ಜೀವನದಲ್ಲಿ ಅಪಾರ ಸಂಪತ್ತು ಮತ್ತು ವೈಭವವನ್ನು ಪಡೆಯುವ ಸಂಕೇತವಾಗಿದೆ. ಇದಲ್ಲದೆ, ಇದು ಉತ್ತಮ ಯಶಸ್ಸನ್ನು ಪಡೆಯುವ ಸಂಕೇತವಾಗಿದೆ. 

ದೇವಸ್ಥಾನದಲ್ಲಿ ಹಾವಿನ ದರ್ಶನವೂ (Snakes Indications) ಬಹಳ ಮಂಗಳಕರ. ದೇವಾಲಯದಲ್ಲಿ ಹಾವನ್ನು ಕಂಡರೆ ಶೀಘ್ರದಲ್ಲೇ ನಿಮ್ಮ ಕೆಲವು ದೊಡ್ಡ ಆಸೆಗಳು ಈಡೇರಲಿವೆ ಎಂದರ್ಥ. 

ಅದೇ ಸಮಯದಲ್ಲಿ, ಶಿವಲಿಂಗದ ಮೇಲೆ ಹಾವು ಸುತ್ತಿರುವುದನ್ನು ನೋಡುವುದು ತುಂಬಾ ಮಂಗಳಕರ. ಹಾವು ತನ್ನ ಇಷ್ಟ ಶಿವನನ್ನು ಸಂಧಿಸುವ ಈ ಅದ್ಭುತ ದೃಶ್ಯವನ್ನು ನೋಡಿದರೆ ನೀವು ಶಿವನ ಆಶೀರ್ವಾದ ಪಡೆಯಲಿದ್ದೀರಿ ಎಂದರ್ಥ. ಅಂತಹ ಕನಸನ್ನು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. 

ಇದನ್ನೂ ಓದಿ- Shani Rashi Parivartan 2022: ಶನಿ ರಾಶಿ ಬದಲಾವಣೆ, ಈ 3 ರಾಶಿಯವರಿಗೆ ಕೆಟ್ಟ ದಿನಗಳು ಆರಂಭ

ಎಡಬದಿಯಿಂದ ಹಾವು ಬಂದು ದಾರಿ ಕಡಿದರೆ ಅದು ನಷ್ಟದ ಸಂಕೇತ. ಇಂತಹ ಕನಸು (Snake In Dream) ಅಥವಾ ನಿಜ ಜೀವನದಲ್ಲಿ ಇಂತಹ ಘಟನೆ ನಡೆದರೆ ಎಚ್ಚರಿಕೆಯಿಂದ ವರ್ತಿಸಬೇಕು. 

ಮತ್ತೊಂದೆಡೆ, ಹಾವು ನಿಮ್ಮ ಬಲಭಾಗದಿಂದ ಬಂದು ದಾರಿಯನ್ನು ಹಾದಿ ಹೋದರೆ ತುಂಬಾ ಮಂಗಳಕರವಾಗಿದೆ. ಇದು ಯಶಸ್ಸಿನ ಸಂಕೇತವಾಗಿದೆ. 

ಅದೇ ರೀತಿ ಹಾವು ಮರ ಹತ್ತುತ್ತಿರುವುದನ್ನು ನೋಡಿದರೆ ನಿಮಗೆ ಏನಾದರೂ ಒಳ್ಳೆಯದಾಗಲಿದೆ ಎಂದರ್ಥ. ಹಣ ಮಾಡುವ ಬಲವಾದ ಸಾಧ್ಯತೆಯೂ ಇದೆ. 

ಅದೇ ಸಮಯದಲ್ಲಿ, ಮರದಿಂದ ಹಾವು ಕೆಳಗೆ ಬರುವುದನ್ನು ನೋಡುವುದು ಹಣದ ನಷ್ಟದ ಸಂಕೇತವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ವ್ಯವಹಾರ ಅಥವಾ ಹಣಕ್ಕೆ ಸಂಬಂಧಿಸಿದ ಕೆಲಸವನ್ನು ಎಚ್ಚರಿಕೆಯಿಂದ ಮಾಡಬೇಕು. ಆದರೆ, ಬಡವರು ಇಂತಹ ಘಟನೆಯನ್ನು ನೋಡಿದರೆ ಹಣ ಗಳಿಸುತ್ತಾರೆ. 

ಸತ್ತ ಹಾವು ಕನಸಿನಲ್ಲಿ ಕಂಡರೂ ಅಥವಾ ವಾಸ್ತವದಲ್ಲಿ ಕಂಡರೂ ಅದು ಅಶುಭ. ಇದು ಸಂಭವಿಸಿದಲ್ಲಿ, ಶಿವ ದೇವಾಲಯಕ್ಕೆ ಹೋಗಿ ನಿಮ್ಮನ್ನು ರಕ್ಷಿಸಲು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವಂತೆ ದೇವರನ್ನು ಪ್ರಾರ್ಥಿಸಿ. ಶಿವನಿಗೆ ನೀರು ಮತ್ತು ಹಸಿ ಹಾಲಿನಿಂದ ಅಭಿಷೇಕ ಮಾಡುವುದರಿಂದ ತೊಂದರೆ ದೂರವಾಗುತ್ತದೆ. 

ಇದನ್ನೂ ಓದಿ- ಮುಂದಿನ 10 ದಿನಗಳವರೆಗೆ ಈ 3 ರಾಶಿಗಳಿಗೆ ತ್ರಿಗ್ರಹ ಯೋಗ: ಉದ್ಯೋಗ-ವ್ಯವಹಾರದಲ್ಲಿ ಅದ್ಭುತ ಪ್ರಗತಿ

ಅದೇ ಸಮಯದಲ್ಲಿ, ನಾಗ-ನಾಗಿಣಿ ಪ್ರೇಮ-ನಾಟಕವನ್ನು ನೋಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ, ಆದರೆ ಆ ಸ್ಥಳದಲ್ಲಿ ಉಳಿಯುವ ತಪ್ಪನ್ನು ಮಾಡಬೇಡಿ.  

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News