Vastu Tips For Camphor: ಹಿಂದೂ ಧರ್ಮದಲ್ಲಿ ಜ್ಯೋತಿಷ್ಯದಲ್ಲಿ ಕರ್ಪೂರಕ್ಕೆ ಮಹತ್ವದ ಸ್ಥಾನಮಾನವಿದೆ. ಯಾವುದೇ ದೇವರ ಪೂಜೆಯಲ್ಲಿ ಕರ್ಪೂರಕ್ಕೆ ವಿಶೇಷ ಪ್ರಾಮುಖ್ಯತೆ ಇದೆ. ಮನೆಯಲ್ಲಿ ಕರ್ಪೂರ ಬೆಳಗುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಸಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸುತ್ತದೆ ಎಂಬುದು ನಂಬಿಕೆ. ಆದರೆ, ಪೂಜೆಯಲ್ಲಿ ಬಳಸುವ ಈ ಕರ್ಪೂರವು ಮನೆಯ ವಾಸ್ತು ದೋಷವನ್ನು ನಿವಾರಿಸಬಲ್ಲದು ಎಂದು ನಿಮಗೆ ತಿಳಿದಿದೆಯೇ? 


COMMERCIAL BREAK
SCROLL TO CONTINUE READING

ಹೌದು, ವಾಸ್ತು ಪ್ರಕಾರ ಕರ್ಪೂರದ ಬಳಕೆಯಿಂದಲೂ ಹಲವು ವಾಸ್ತು ದೋಷಗಳನ್ನು ನಿವಾರಿಸಬಹುದಾಗಿದೆ. ಸುಲಭವಾಗಿ ಕೇವಲ ಎರಡು ರೂಪಾಯಿಗಳಲ್ಲಿ ಲಭ್ಯವಾಗುವ ಕರ್ಪೂರವು ಮನೆಯಲ್ಲಿ ಹಲವು ವಾಸ್ತು ದೋಷಗಳನ್ನು ನಿವಾರಿಸಬಲ್ಲ ಶಕ್ತಿಯನ್ನು ಹೊಂದಿದೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗಬಹುದು. ಅಷ್ಟೇ ಅಲ್ಲ, ಕರ್ಪೂರವು ನಮ್ಮ ಜೀವನದಲ್ಲಿ ಎದುರಾಗಿರುವ ಹಲವು ಸಮಸ್ಯೆಗಳಿಗೆ ಶೀಘ್ರದಲ್ಲೇ ಪರಿಹಾರವನ್ನು ನೀಡಬಲ್ಲದು. 


ವಾಸ್ತುವಿನ ದೃಷ್ಟಿಯಿಂದ  ಕರ್ಪೂರದಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯಿರಿ...
* ವಾಸ್ತು ದೋಷ ನಿವಾರಣೆಗೆ:

ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷವನ್ನು ನಿವಾರಿಸಲು ಕರ್ಪೂರ ಪ್ರಯೋಜನಕಾರಿ ಆಗಿದೆ. ಮನೆಯಲ್ಲಿ ನಿತ್ಯ ಬೆಳಿಗ್ಗೆ, ಸಂಜೆ ಪೂಜೆ ವೇಳೆಯಲ್ಲಿ ಒಂದು ಸಣ್ಣ ತುಂಡು ಕರ್ಪೂರವನ್ನು ಹಚ್ಚಿ ಬೆಳಗುವುದರಿಂದ ವಾಸ್ತು ದೋಷವನ್ನು ಸುಲಭವಾಗಿ ನಿವಾರಿಸಬಹುದು ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Budh Uday 2023: ಬುಧ ಉದಯ ಪರಿಣಾಮ, ಜನವರಿ 12ರಿಂದ ಈ ರಾಶಿಯವರ ಮೇಲಿರಲಿದೆ ಲಕ್ಷ್ಮಿ ಕೃಪಾಕಟಾಕ್ಷ


* ಆರ್ಥಿಕ ಬಿಕ್ಕಟ್ಟಿನಿಂದ ಹೊರಬರಲು ಸಹಕಾರಿ:
ನೀವು ನಿರಂತರವಾಗಿ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದರೆ ಒಂದು ಕರವಸ್ತ್ರದಲ್ಲಿ ಕರ್ಪೂರದ ತುಂಡನ್ನು ಕಟ್ಟಿ ಅದನ್ನು ನೀವು ಹಣ ಇಡುವ ಜಾಗದಲ್ಲಿ ಇಡಿ. ಇದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಶೀಘ್ರದಲ್ಲೇ ಹೊರಬರಬಹುದು ಎಂದು ಹೇಳಲಾಗುತ್ತದೆ.


* ಮನಃಶಾಂತಿಗಾಗಿ:
ವಾಸ್ತು ಶಾಸ್ತ್ರಜ್ಞರ ಪ್ರಕಾರ, ನಿಮ್ಮ ಪರ್ಸ್ ಅಥವಾ ಜೇಬಿನಲ್ಲಿ ಒಂದು ಸಣ್ಣ ಕರ್ಪೂರದ ತುಂಡನ್ನು ಕಟ್ಟಿ ಇಡುವುದರಿಂದ ನೀವು ಹೋಗುವ ಕೆಲಸದಲ್ಲಿ ಯಶಸ್ಸು ನಿಮ್ಮದಾಗುತ್ತದೆ. ಮಾತ್ರವಲ್ಲ, ಇದರಿಂದ ಮನಸ್ಸಿಗೂ ಶಾಂತಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ.


ಇದನ್ನೂ ಓದಿ- Bathroom Vastu: ಬಾತ್ ರೂಂನಲ್ಲಿರುವ ಬಕೆಟ್ ಕೂಡ ನಿಮ್ಮ ಅದೃಷ್ಟವನ್ನು ಬದಲಿಸಬಹುದು


* ಮಧುರ ದಾಂಪತ್ಯ ಜೀವನ:
ದಾಂಪತ್ಯದಲ್ಲಿ ಸುಕಾಸುಮ್ಮನೆ ಮನಸ್ಥಾಪ, ಜಗಳಗಳು ಆಗುತ್ತಿದ್ದರೆ ಇದರಿಂದ ಹೊರಬರಲು ಸದಾ ನಿಮ್ಮ ಬಳಿ ಒಂದು ಸಣ್ಣ ತುಂಡು ಕರ್ಪೂರವನ್ನು ಇಟ್ಟುಕೊಳ್ಳಲು ಸೂಚಿಸಲಾಗುತ್ತದೆ. ಹೀಗೆ ಮಾಡುವುದರಿಂದ ಐಶಾರಾಮಿ ಜೀವನಕಾರಕನಾದ ಶುಕ್ರನ ಆಶೀರ್ವಾದ ಪ್ರಾಪ್ತಿಯಾಗಲಿದ್ದು ಮಧುರವಾದ ದಾಂಪತ್ಯ ಜೀವನ ನಿಮ್ಮದಾಗಲಿದೆ ಎಂದು ಹೇಳಲಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.