Budh Uday 2023: ಬುಧ ಉದಯ ಪರಿಣಾಮ, ಜನವರಿ 12ರಿಂದ ಈ ರಾಶಿಯವರ ಮೇಲಿರಲಿದೆ ಲಕ್ಷ್ಮಿ ಕೃಪಾಕಟಾಕ್ಷ

Budh Uday 2023 Effect: ಹೊಸ ವರ್ಷಕ್ಕೆ ದಿನಗಣನೆ ಆರಂಭವಾಗಿದೆ. ಸೌರ ಮಂಡಲದ ದೃಷ್ಟಿಯಿಂದ 2023ರ ಮೊದಲ ತಿಂಗಳು ಎಂದರೆ ಜನವರಿಯನ್ನು ಬಹಳ ಮಹತ್ವ ಎಂದು ಹೇಳಲಾಗುತ್ತಿದೆ. 2023ರ ಜನವರಿ ತಿಂಗಳಿನಲ್ಲಿ ಗ್ರಹಗಳ ರಾಜಕುಮಾರ, ಸಂಪತ್ತು, ಬುದ್ಧಿವಂತಿಕೆ ಮತ್ತು ವ್ಯವಹಾರಕಾರಕ ಎಂದು ಬಣ್ಣಿಸಲ್ಪಡುವ ಬುಧ ಗ್ರಹವು ಧನು ರಾಶಿಯಲ್ಲಿ ಉದಯಿಸಲಿದೆ. ಇದರ ಪರಿಣಾಮ ಎಲ್ಲಾ ರಾಶಿಗಳ ಮೇಲೆ ಕಂಡು ಬರುತ್ತದೆ ಆದರೂ, ಇದನ್ನು ಮೂರು ರಾಶಿಯವರಿಗೆ ಬಹಳ ಮಂಗಳಕರ ಎಂದು ಹೇಳಲಾಗುತ್ತಿದೆ.

Written by - Yashaswini V | Last Updated : Dec 19, 2022, 10:38 AM IST
  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 12 ಜನವರಿ 2023ರಂದು ಧನು ರಾಶಿಯಲ್ಲಿ ಬುಧ ಉದಯಿಸಲಿದ್ದಾನೆ.
  • ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಚಕ್ರಗಳ ಮೇಲೆ ಕಂಡು ಬರುತ್ತದೆ.
  • ಆದರೆ, ಹೊಸ ವರ್ಷದಲ್ಲಿ ಧನು ರಾಶಿಯಲ್ಲಿ ಉದಯಿಸಲಿರುವ ಬುಧನು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ.
Budh Uday 2023: ಬುಧ ಉದಯ ಪರಿಣಾಮ, ಜನವರಿ 12ರಿಂದ ಈ ರಾಶಿಯವರ ಮೇಲಿರಲಿದೆ ಲಕ್ಷ್ಮಿ ಕೃಪಾಕಟಾಕ್ಷ  title=
Budha Uday Effect

Budh Uday 2023 Effect: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ನವಗ್ರಹಗಳ ಸಂಚಾರದಲ್ಲಿ ಸಣ್ಣ ಬದಲಾವಣೆಯೂ ಕೂಡ ದ್ವಾದಶ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ. ಯಾವುದೇ ಒಂದು ಗ್ರಹವು ಗ್ರಹಗಳ ರಾಜ ಸೂರ್ಯನಿಗೆ ಸಮೀಪಿಸಿದಾಗ ಅದು ಅಸ್ತಮಿಸುತ್ತದೆ. ಅರ್ಥಾತ್ ಆ ಗ್ರಹದ ಪ್ರಭಾವ ಕಡಿಮೆ ಆಗುತ್ತದೆ. ಬಳಿಕ ನಿರ್ದಿಷ್ಟ ಸಮಯದ ಬಳಿಕ ಆ ಗ್ರಹವು ಉದಯಿಸುತ್ತದೆ. ಇದೀಗ ಹೊಸ ವರ್ಷದ ಮೊದಲ ತಿಂಗಳಲ್ಲಿ ಅಂದರೆ 2023ರ ಜನವರಿಯಲ್ಲಿ ಗ್ರಹಗಳ ರಾಜಕುಮಾರ, ಸಂಪತ್ತು, ವ್ಯವಹಾರ, ಬುದ್ಧಿವಂತಿಕೆಯ ಅಂಶ ಎಂದು ಪರಿಗಣಿಸಲಾಗಿರುವ ಬುಧ ಉದಯಿಸಲಿದ್ದಾನೆ. 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 12 ಜನವರಿ 2023ರಂದು ಧನು ರಾಶಿಯಲ್ಲಿ ಬುಧ ಉದಯಿಸಲಿದ್ದಾನೆ. ಇದರ ಶುಭ-ಅಶುಭ ಪರಿಣಾಮಗಳು ಎಲ್ಲಾ 12 ರಾಶಿಚಕ್ರಗಳ ಮೇಲೆ ಕಂಡು ಬರುತ್ತದೆ. ಆದರೆ, ಹೊಸ ವರ್ಷದಲ್ಲಿ ಧನು ರಾಶಿಯಲ್ಲಿ ಉದಯಿಸಲಿರುವ ಬುಧನು ಕೆಲವು ರಾಶಿಯವರಿಗೆ ಭಾರೀ ಅದೃಷ್ಟವನ್ನು ಕರುಣಿಸಲಿದ್ದಾನೆ. ಬುಧ ಉದಯದ ಪರಿಣಾಮವಾಗಿ ಈ ರಾಶಿಯವರು ಸಂಪತ್ತಿನ ಅಧಿದೇವತೆ ತಾಯಿ ಲಕ್ಷ್ಮಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ಇದನ್ನೂ ಓದಿ- Safala Ekadashi 2022: ಸಫಲ ಏಕಾದಶಿಯಲ್ಲಿ 3 ಮಂಗಳಕರ ಯೋಗ, ಇಂದಿನಿಂದ ಬೆಳಗಲಿದೆ ಈ ರಾಶಿಯವರ ಅದೃಷ್ಟ

2023ರ ಜನವರಿಯಲ್ಲಿ ಧನು ರಾಶಿಯಲ್ಲಿ ಬುಧ ಉದಯ- ಈ ರಾಶಿಯವರಿಗೆ ತುಂಬಾ ಅದೃಷ್ಟ:-
ವೃಶ್ಚಿಕ ರಾಶಿಯವರಿಗೆ ಬಂಪರ್ ಲಾಭ:

ಧನು ರಾಶಿಯಲ್ಲಿ ಉದಯಿಸಲಿರುವ ಬುಧನು ವೃಶ್ಚಿಕ ರಾಶಿಯವರಿಗೆ ಬಂಪರ್ ಲಾಭವನ್ನು ನೀಡಲಿದ್ದಾನೆ. ಈ ಸಮಯದಲ್ಲಿ ಸರಿಯಾದ ಲೆಕ್ಕಾಚಾರದೊಂದಿಗೆ ಮಾಡಿದ ಹೂಡಿಕೆಯು ಅಪಾರ ಲಾಭವನ್ನು ನೀಡಲಿದೆ. ಹೊಸ ಹಣಕಾಸಿನ ಮೂಲಗಳು ಸೃಷ್ಟಿಯಾಗಲಿದ್ದು ತಾಯಿ ಲಕ್ಷ್ಮಿ ಕೃಪಾಕಟಾಕ್ಷದಿಂದ ಹಣದ ಹೊಳೆಯೇ ಹರಿಯಲಿದೆ. ಇದರಿಂದ ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಸಿಗಲಿದ್ದು, ಮನೆ, ವಾಹನ ಖರೀದಿ ಯೋಗವೂ ಇದೆ.

ಕುಂಭ ರಾಶಿಯವರಿಗೆ ಆದಾಯ ಹೆಚ್ಚಳ:
ಹೊಸ ವರ್ಷದ ಜನವರಿಯಲ್ಲಿ ಉದಯಿಸಲಿರುವ ಬುಧನು ಕುಂಭ ರಾಶಿಯವರ ಆದಾಯವನ್ನು ಹೆಚ್ಚಿಸಲಿದ್ದಾನೆ. ಈ ಸಮಯದಲ್ಲಿ ಆದಾಯದ ಹೊಸ ಮೂಲಗಳು ಸೃಷ್ಟಿಯಾಗಲಿದ್ದು ಆರ್ಥಿಕವಾಗಿ ಬಲಿಷ್ಠರಾಗುವಿರಿ. ವಿತ್ತೀಯ ಲಾಭದಿಂದಾಗಿ ನಿಮ್ಮ ಹಳೆಯ ಸಾಲಗಳನ್ನು ಮರುಪಾವತಿಸಲು ಇದು ಸಕಾಲ.

ಇದನ್ನೂ ಓದಿ- Sun Saturn Transit 2023: ಒಂದೇ ರಾಶಿಯಲ್ಲಿ ಸೂರ್ಯ-ಶನಿ, ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ

ಮೀನ ರಾಶಿಯವರು ವೃತ್ತಿರಂಗದಲ್ಲಿ ಉತ್ತುಂಗಕ್ಕೇರುವರು:
2023ರ ಜನವರಿಯಲ್ಲಿ ಬುಧ ಉದಯದ ಪರಿಣಾಮವು ಮೀನ ರಾಶಿಯವರ ವೃತ್ತಿ ರಂಗದಲ್ಲಿ ಅಪಾರ ಪ್ರಯೋಜನವನ್ನು ನೀಡಲಿದೆ. ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಮಾತ್ರವಲ್ಲ ವ್ಯಾಪಾರಸ್ಥರೂ ಕೂಡ ಬಂಪರ್ ಲಾಭ ಗಳಿಸಲಿದ್ದಾರೆ. ನಿಮ್ಮ ವ್ಯಾಪಾರ-ವ್ಯವಹಾರವನ್ನು ವಿಸ್ತರಿಸಲು ಬಯಸುವವರಿಗೆ ಇದು ಒಳ್ಳೆಯ ಸಮಯ. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವ ನಿರುದ್ಯೋಗಿಗಳಿಗೆ ಒಳ್ಳೆಯ ಕಂಪನಿಯಿಂದ ಉದ್ಯೋಗದ ಆಫರ್ ಬರಬಹುದು. 

ಸೂಚನೆ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News