ಆರೋಗ್ಯ ಮತ್ತು ಸಂಪತ್ತಿಗೆ ವಾಸ್ತು ಸಲಹೆಗಳು: ಆಹಾರವು ನಮ್ಮ ಆರೋಗ್ಯಕ್ಕೆ ನೇರವಾಗಿ ಸಂಬಂಧಿಸಿದೆ, ಆದರೆ ಇದರ ಹೊರತಾಗಿ, ಆಹಾರದಿಂದ ಬರುವ ಶಕ್ತಿಯು ಪ್ರತಿಯೊಬ್ಬರ ಮೇಲೆ ದೊಡ್ಡ ಪ್ರಭಾವ ಬೀರುತ್ತದೆ. ಆದ್ದರಿಂದ, ವಾಸ್ತು ಶಾಸ್ತ್ರದಲ್ಲಿ ಆಹಾರವನ್ನು ಬೇಯಿಸುವುದರಿಂದ ಹಿಡಿದು ಆಹಾರವನ್ನು ತಿನ್ನುವ ದಿಕ್ಕು ಮತ್ತು ವಿಧಾನಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ಆಹಾರಕ್ಕೆ ಸಂಬಂಧಿಸಿದಂತೆ ವಾಸ್ತು ಶಾಸ್ತ್ರದ ಈ ನಿಯಮಗಳನ್ನು ಪಾಲಿಸಬೇಕು. ಇಲ್ಲದಿದ್ದರೆ, ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರಬಹುದು ಎಂದು ಹೇಳಲಾಗುತ್ತದೆ.


COMMERCIAL BREAK
SCROLL TO CONTINUE READING

ಈ ದಿಕ್ಕಿಗೆ ಮುಖಮಾಡಿ ಎಂದಿಗೂ ಆಹಾರವನ್ನು ಸೇವಿಸಬೇಡಿ:
ಯಾವಾಗಲೂ ಆಹಾರ ಸೇವಿಸುವಾಗ ನೀವು ಯಾವ ದಿಕ್ಕಿಗೆ ಮುಖಮಾಡಿ ಕುಳಿತುಕೊಳ್ಳುತ್ತೀರಿ ಎಂಬುದನ್ನು ನೆನಪಿನಲ್ಲಿಡಿ. ತಪ್ಪು ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸುವುದರಿಂದ ದೊಡ್ಡ ಹಾನಿಯನ್ನುಂಟುಮಾಡುತ್ತದೆ. 


ಇದನ್ನೂ ಓದಿ- Zodiac change in June 2022: ಜೂನ್ ತಿಂಗಳಲ್ಲಿ, ಈ ನಾಲ್ಕು ರಾಶಿಯವರಿಗೆ ತಾಯಿ ಲಕ್ಷ್ಮಿಯ ಆಶೀರ್ವಾದ ಪ್ರಾಪ್ತಿ


* ವಾಸ್ತು ಶಾಸ್ತ್ರದ ಪ್ರಕಾರ ಪೂರ್ವ ಅಥವಾ ಈಶಾನ್ಯ ದಿಕ್ಕಿಗೆ ಮುಖ ಮಾಡಿ ಆಹಾರ ಸೇವಿಸುವುದು ಉತ್ತಮ. ಹೀಗೆ ಮಾಡುವುದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ವ್ಯಕ್ತಿಯು ದೀರ್ಘಾಯುಷ್ಯವನ್ನು ಹೊಂದುತ್ತಾನೆ. 
* ಸಂಪತ್ತಿನ ದೇವರಾದ ಕುಬೇರನು ಉತ್ತರ ದಿಕ್ಕಿಗೆ ಅಭಿಮುಖವಾಗಿ ಕುಳಿತು ಆಹಾರವನ್ನು ಸೇವಿಸುವುದರಿಂದ ಪ್ರಸನ್ನನಾಗುತ್ತಾನೆ ಮತ್ತು ಅಂತಹ ವ್ಯಕ್ತಿಯು ಶ್ರೀಮಂತನಾಗುತ್ತಾನೆ. 
* ಆದರೆ ಪಶ್ಚಿಮ ದಿಕ್ಕಿಗೆ ಮುಖಮಾಡಿ ಆಹಾರ ಸೇವಿಸುವುದರಿಂದ ರೋಗಗಳು ದೂರವಾಗುತ್ತವೆ. ವ್ಯಕ್ತಿಯ ಮಾನಸಿಕ ಆರೋಗ್ಯವೂ ಉತ್ತಮವಾಗಿರುತ್ತದೆ. 
* ಆದರೆ ಯಾವತ್ತೂ ದಕ್ಷಿಣಾಭಿಮುಖವಾಗಿ ಕುಳಿತು ಆಹಾರವನ್ನು ಸೇವಿಸಬಾರದು ಎಂಬುದನ್ನು ಯಾವಾಗಲೂ ನೆನಪಿನಲ್ಲಿಡಿ. ಇದು ಯಮನ ದಿಕ್ಕು ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿಕ್ಕಿನಲ್ಲಿ ಕುಳಿತು ಆಹಾರ ಸೇವಿಸುವುದರಿಂದ  ವ್ಯಕ್ತಿಯು ರೋಗಗಳಿಗೆ ಬಲಿಯಾಗುತ್ತಾನೆ, ಜೊತೆಗೆ ಅವನ ಆಯುಷ್ಯ ಕೂಡ ಕಡಿಮೆ ಆಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ಈ ದಿಕ್ಕಿಗೆ ಮುಖಮಾಡಿ ಆಹಾರ ಸೇವಿಸುವ ತಪ್ಪನ್ನು ಎಂದಿಗೂ ಮಾಡಬೇಡಿ.


ಇದನ್ನೂ ಓದಿ- June Monthly Horoscope: ಈ ರಾಶಿಯವರು ಜೂನ್ ಆರಂಭದಲ್ಲಿ ಘರ್ಷಣೆ ಅನುಭವಿಸಬಹುದು


ಆಹಾರದ ವಿಷಯದಲ್ಲಿ ಈ ತಪ್ಪುಗಳನ್ನು ಮಾಡಬೇಡಿ :
- ಆಹಾರ ತಿನ್ನುವಾಗ ಸರಿಯಾದ ದಿಕ್ಕಿನಲ್ಲಿ ಕುಳಿತುಕೊಳ್ಳುವುದರ ಜೊತೆಗೆ, ಇತರ ಕೆಲವು ವಿಷಯಗಳನ್ನು ಸಹ ನೋಡಿಕೊಳ್ಳಿ. ಆಹಾರವನ್ನು ತಯಾರಿಸುವಾಗ, ಯಾವಾಗಲೂ ಮೊದಲ ತುತ್ತನ್ನು ಹಸುವಿಗೆ ಮತ್ತು ಬೇರೆ ಪ್ರಾಣಿ-ಪಕ್ಷಿಗಳಿಗೆ ತೆಗೆದಿಡಿ. 
- ಆಹಾರದಲ್ಲಿ ಕೂದಲು ಸಿಕ್ಕರೆ ಅಥವಾ ಯಾರದ್ದಾದರೂ ಕಾಲಿಗೆ ಆಹಾರ ತಾಕಿದರೆ ಅಂತಹ ಆಹಾರವನ್ನು ಸೇವಿಸಬೇಡಿ. ಅಂತಹ ಆಹಾರವು ಕಲುಷಿತವಾಗಿದೆ ಮತ್ತು ನಕಾರಾತ್ಮಕ ಶಕ್ತಿಯನ್ನು ನೀಡುತ್ತದೆ. ಇದರಿಂದಾಗಿ ವ್ಯಕ್ತಿಯು ಅನಾರೋಗ್ಯ ಮತ್ತು ಹಣದ ಕೊರತೆಗೆ ಬಲಿಯಾಗುತ್ತಾನೆ. 
- ಯಾವಾಗಲೂ ತಾಜಾ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ. 
- ಆಹಾರ ಸೇವಿಸುವಾಗ ಯಾವುದೇ ತಪ್ಪು ಆಲೋಚನೆಗಳು ನಿಮ್ಮ ಮನಸ್ಸಿಗೆ ಬರದಂತೆ ಪ್ರಯತ್ನಿಸಿ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.