Vastu Tips: ನಿಮ್ಮ ಮನೆಯಲ್ಲೂ ಈ ವಸ್ತುಗಳು ಇದೆಯಾ? ಜೀವನವೇ ನಾಶವಾಗಬಹುದು ಎಚ್ಚರ!
Vastu Tips For House: ಸಾಮಾನ್ಯವಾಗಿ ಜನರು ತಮ್ಮ ಮನೆಯನ್ನು ಅಲಂಕರಿಸಲು ದುಬಾರಿ ವಸ್ತುಗಳನ್ನು ಬಳಸುತ್ತಾರೆ. ಆದರೆ ಮನೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಗೊತ್ತಾ? ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು.
Vastu Tips For House: ವಾಸ್ತು ಶಾಸ್ತ್ರದ ಪ್ರಕಾರ ಮನೆ ವಿನ್ಯಾಸ ಎಂದರೆ ಮನೆಯ ದಿಕ್ಕು, ಯಾವ ಜಾಗದಲ್ಲಿ ಏನಿರಬೇಕು ಎಂಬುದನ್ನು ನೋಡುವುದು ಮಾತ್ರವಲ್ಲ. ಮನೆಯಲ್ಲಿ ಯಾವ ವಸ್ತುಗಳಿರಬೇಕು ಮತ್ತು ಯಾವ ವಸ್ತುಗಳನ್ನು ಇಡಬಾರದು ಎಂಬ ಬಗ್ಗೆಯೂ ತಿಳಿದಿರಬೇಕು. ಸಾಮಾನ್ಯವಾಗಿ ಮನೆಯ ಅಲಂಕಾರಕ್ಕಾಗಿ ನಾವು ಹಲವು ವಸ್ತುಗಳನ್ನು ಮನೆಗೆ ತರುತ್ತೇವೆ. ಅಲಂಕಾರಿಕ ವಸ್ತುಗಳನ್ನು ಮನೆಗೆ ತರುವಾಗ ನಾವು ವಾಸ್ತುವಿನ ಬಗ್ಗೆ ಹೆಚ್ಚು ಗಮನ ಹರಿಸುವುದಿಲ್ಲ. ಆಗಾಗ ನಮ್ಮ ಮನೆಯಲ್ಲಿ ಇಂತಹ ಕೆಲವು ವಸ್ತುಗಳನ್ನು ತರುತ್ತೇವೆ, ಇದರಿಂದ ನಕಾರಾತ್ಮಕ ಶಕ್ತಿ ಮನೆಯನ್ನು ಪ್ರವೇಶಿಸಲು ಪ್ರಾರಂಭಿಸುತ್ತವೆ. ಆದರೆ ನಮ್ಮ ಗಮನ ಆ ವಿಷಯಗಳತ್ತ ಹೋಗುವುದಿಲ್ಲ. ವಾಸ್ತು ಪ್ರಕಾರ ಮನೆಯಲ್ಲಿ ಕೆಲವು ವಸ್ತುಗಳನ್ನು ಇಡುವುದನ್ನು ತಪ್ಪಿಸಬೇಕು. ಅಂತಹ ವಸ್ತುಗಳು ಯಾವುವು ಎಂದು ತಿಳಿಯೋಣ.
ವಾಸ್ತು ಪ್ರಕಾರ ಮನೆಯಲ್ಲಿ ಇಂತಹ ವಸ್ತುಗಳನ್ನು ಇಡಬಾರದು:
* ಮನೆಯಲ್ಲಿ ತಾಜ್ ಮಹಲ್ ಇಡಬೇಡಿ:
ಸಾಮಾನ್ಯವಾಗಿ ದಂಪತಿಗಳು ಅಥವಾ ಸ್ನೇಹಿತರು ತಾಜ್ ಮಹಲ್ (Taj Mahal) ಅನ್ನು ಪರಸ್ಪರ ಉಡುಗೊರೆಯಾಗಿ ನೀಡುವುದನ್ನು ನೀವು ನೋಡಿರಬೇಕು, ಆದರೆ ಹಾಗೆ ಮಾಡುವುದು ತಪ್ಪು. ತಾಜ್ ಮಹಲ್ ಅನ್ನು ಪರಸ್ಪರ ಪ್ರೀತಿಯ ಸಂಕೇತವೆಂದು ಭಾವಿಸುವ ದಂಪತಿಗಳು ತಾಜ್ ಮಹಲ್ ಅನ್ನು ಪರಸ್ಪರ ಉಡುಗೊರೆಯಾಗಿ ನೀಡುತ್ತಾರೆ, ಆದರೆ ತಾಜ್ ಮಹಲ್ ಅನ್ನು ಪರಸ್ಪರ ನೀಡುವುದು ತಪ್ಪು ಎಂದು ಪರಿಗಣಿಸಲಾಗುತ್ತದೆ. ಅಷ್ಟೇ ಅಲ್ಲ ಮನೆಯಲ್ಲಿ ತಾಜ್ ಮಹಲ್ ಇಡುವುದರಿಂದ ಪರಸ್ಪರರ ನಡುವೆ ವೈಮನಸ್ಯ ಕಾದಾಟ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ- ಮನೆಯ ಸುತ್ತಮುತ್ತ ಈ ವಸ್ತುಗಳೇನಾದರೂ ಇದ್ದರೆ ಎದುರಿಸಬೇಕಾಗುತ್ತದೆ ಆರ್ಥಿಕ ಸಂಕಷ್ಟ
* ಮುರಿದ ಗಾಜು/ಒಡೆದ ಫೋಟೋ ಕೂಡ ಕೆಟ್ಟ ಶಕುನವಾಗಿದೆ:
ಯಾರೂ ಸಹ ತಮ್ಮ ಮನೆಯಲ್ಲಿ ಒಡೆದ ಗಾಜನ್ನು ಅಥವಾ ಒಡೆದ ಫೋಟೋವನ್ನು ಇಡಬಾರದು. ಏಕೆಂದರೆ ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಒಡೆದ ಚಿತ್ರ ಅಥವಾ ಗಾಜಿನನ್ನು ಅಶುಭವೆಂದು ಪರಿಗಣಿಸಲಾಗುತ್ತದೆ, ಅದು ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತದೆ.
ಇದನ್ನೂ ಓದಿ- ಈ ಐದು ವಸ್ತುಗಳನ್ನು ಚೆಲ್ಲಿದರೆ ಶನಿದೇವರು ಜೀವನವೆಲ್ಲಾ ನೀಡುತ್ತಾರೆ ಸಂಕಷ್ಟ
* ಯುದ್ದ, ಕಾದಾಟದ ಚಿತ್ರ ಇಡುವುದನ್ನು ತಪ್ಪಿಸಿ:
ಸಾಮಾನ್ಯವಾಗಿ ಕೆಲವರು ತಮ್ಮ ಮನೆಯಲ್ಲಿ ಫೈಟರ್ಸ್ ಚಿತ್ರವನ್ನು ಇಟ್ಟುಕೊಳ್ಳುವ ಅಭ್ಯಾಸವನ್ನು ಹೊಂದಿರುವುದನ್ನು ನೀವು ನೋಡಿರಬೇಕು. ಹಾಗೆ ಮಾಡುವಾಗ ತಪ್ಪು. ಯಾರದ್ದಾದರೂ ಮನೆಯಲ್ಲಿ ಯುದ್ಧದಂತಹ ಚಿತ್ರಗಳಿದ್ದರೆ, ಆ ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳಿಗೆ ಎಡೆಮಾಡಿಕೊಡುತ್ತದೆ. ಹಾಗಾಗಿ, ಯುದ್ಧ ಸಂಬಂಧಿತ ಚಿತ್ರಗಳನ್ನು ಮನೆಯಲ್ಲಿಡುವುದನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ.
ಸೂಚನೆ: ಮೇಲೆ ತಿಳಿಸಿದ ವಸ್ತುಗಳು ನಿಮ್ಮ ಮನೆಯಲ್ಲಿದ್ದರೆ, ತಕ್ಷಣ ಆ ವಸ್ತುಗಳನ್ನು ಹೊರತೆಗೆಯಿರಿ. ಆದಾಗ್ಯೂ, ಒಮ್ಮೆ ತಜ್ಞರ ಅಭಿಪ್ರಾಯವನ್ನು ತೆಗೆದುಕೊಳ್ಳಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.