Vastu Tips: ಮನೆಯ ನೆಲದ ಬಗ್ಗೆ ವಾಸ್ತು ಶಾಸ್ತ್ರದಲ್ಲಿ ಈ ಪ್ರಮುಖ ವಿಷಯಗಳನ್ನು ಹೇಳಲಾಗಿದೆ
Vastu Tips For Floor: ಮನೆಯಲ್ಲಿನ ನೆಲ ಹಾಗೂ ಅದರ ಮೇಲಿರುವ ಟೈಲ್ಸ್ ಗಳು ಕೂಡ ಕುಟುಂಬ ಸದಸ್ಯರಿಗೆ ಹಾನಿ ಮತ್ತು ಸಮೃದ್ಧಿಯನ್ನು ಉಂಟು ಮಾಡುತ್ತವೆ. ಹೀಗಾಗಿ ಮನೆ ನಿರ್ಮಿಸುವಾಗ ಮನೆಯ ನೆಲ ಹಾಗೂ ಅದರ ಮೇಲೆ ಅಳವಡಿಸಲಾಗುವ ಟೈಲ್ಸ್ ಗಳ ಬಗ್ಗೆ ವಿಶೇಷ ಕಾಳಜಿವಹಿಸುವ ಅವಶ್ಯಕತೆ ಇದೆ.
Floor Vastu Tips: ಮನೆಯಲ್ಲಿ ಧನಾತ್ಮಕ ಶಕ್ತಿಯ ಸಂಚಾರಕ್ಕಾಗಿ ವಾಸ್ತುದಲ್ಲಿ ಹಲವು ವಿಷಯಗಳನ್ನು ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ವಸ್ತುವಿಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಮನೆಯ ನೆಲವೂ ಕೂಡ ವಾಸ್ತು ದೋಷಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಮನೆಯ ನೆಲಕ್ಕೆ ಸಂಬಂಧಿಸಿದ ವಾಸ್ತುದೋಷ ನಿವಾರಣೆಗಾಗಿ ಹಲವು ವಿಷಯಗಳ ಕಾಳಜಿ ವಹಿಸುವುದು ಬಹಳ ಮುಖ್ಯವಾದ ಸಂಗತಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಜನರು ಮನೆಗೆ ಟೈಲ್ಸ್ ಮತ್ತು ಮಾರ್ಬಲ್ ಅಳವಡಿಸಿಕೊಳ್ಳುತ್ತಿದ್ದಾರೆ, ಇದರಿಂದ ಮನೆಗೆ ಹೊಸ ರೂಪವನ್ನು ನೀಡಲಾಗುತ್ತಿದೆ. ಆದರೆ ಮನೆಗಳಲ್ಲಿ ಕಲ್ಲುಗಳನ್ನು ಹಾಕುವುದು ಮಂಗಳಕರವೆಂದು ಪರಿಗಣಿಸಲಾಗುವುದಿಲ್ಲ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಇದಕ್ಕೆ ಕಾರಣವೇನು ಮತ್ತು ವಾಸ್ತು ಪ್ರಕಾರ ಮನೆಯ ನೆಲ ಹೇಗಿರಬೇಕು ಎಂಬುದನ್ನು ಹೇಳಲಾಗಿದೆ ತಿಳಿದುಕೊಳ್ಳೋಣ ಬನ್ನಿ.
ನೆಲಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ವಿಷಯಗಳು
>> ನೆಲವನ್ನು ಮಾಡುವಾಗ ಸಿಂಥೆಟಿಕ್ ಮಾರ್ಬಲ್ ಅನ್ನು ಎಂದಿಗೂ ಬಳಸಬೇಡಿ ಎಂದು ವಾಸ್ತು ತಜ್ಞರು ಹೇಳುತ್ತಾರೆ. ನೈಸರ್ಗಿಕ ಮಾರ್ಬಲ್ ಅನ್ನು ಬಳಸುವುದು ಯಾವಾಗಲೂ ಮಂಗಳಕರವಾಗಿದೆ.
>> ಕುಟುಂಬದ ಪ್ರತಿಷ್ಠೆಯನ್ನು ಹೆಚ್ಚಿಸಲು, ಮನೆಯ ದಕ್ಷಿಣ ದಿಕ್ಕಿನಲ್ಲಿ ನೆಲದ ಮೇಲೆ ಕೆಂಪು ಬಣ್ಣದ ಮಾರ್ಬಲ್ ಅಥವಾ ವಿನ್ಯಾಸವನ್ನು ಮಾಡುವುದು ಲಾಭದಾಯಕವಾಗಿದೆ.
>> ತಿಳಿ ಹಳದಿ ಬಣ್ಣದ ಟೈಲ್ಸ್ ಅಥವಾ ಮಾರ್ಬಲ್ಗಳನ್ನು ಮನೆಯಲ್ಲಿ ಬಳಸಿದರೆ, ವ್ಯಕ್ತಿಯ ಆರ್ಥಿಕ ಬಿಕ್ಕಟ್ಟು ನಿವಾರಣೆಯಾಗುತ್ತದೆ. ಇದಲ್ಲದೆ, ಮನೆಯಲ್ಲಿ ಸುಖ-ಸಮೃದ್ಧಿಯ ಆಗಮನವಾಗುತ್ತದೆ.
>> ಮನೆ ಕಟ್ಟುವಾಗ ಹಳೆಯ ಇಟ್ಟಿಗೆ, ಕಲ್ಲು, ಮಣ್ಣು ಅಥವಾ ಕಬ್ಬಿಣದ ವಸ್ತುಗಳನ್ನು ಖರೀದಿಸದಂತೆ ವಿಶೇಷ ಕಾಳಜಿ ವಹಿಸಿ. ಹೊಸ ಮನೆಯನ್ನು ಕಟ್ಟುವಾಗ ನಿರ್ಮಾಣ ಸಾಮಗ್ರಿಗಳು ಯಾವಾಗಲೂ ಹೊಸದಾಗಿರಬೇಕು.
ಈ ಕಾರಣದಿಂದ ಮನೆಯ ನೆಲಕ್ಕೆ ಕಲ್ಲುಗಳನ್ನು ಬಳಸಬಾರದು
ಮನೆಯ ನೆಲ ನಿರ್ಮಾಣಕ್ಕೆ ಕಲ್ಲುಗಳನ್ನು ಬಳಸಿದರೆ ಮನೆಯ ಯಜಮಾನನಿಗೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗುತ್ತದೆ. ಇದಲ್ಲದೆ ಮನೆಯಲ್ಲಿ ಕಲಹದ ವಾತಾವರಣ ನಿರ್ಮಾಣವಾಗುತ್ತದೆ. ಇದಲ್ಲದೆ ಸಾಮಾನ್ಯವಾಗಿ, ಕಲ್ಲುಗಳನ್ನು ಧಾರ್ಮಿಕ ಸ್ಥಳಗಳು, ದೇವಾಲಯಗಳು ಅಥವಾ ಮಠಗಳು ಇತ್ಯಾದಿಗಳಲ್ಲಿ ಮಾತ್ರ ಬಳಸಲಾಗುತ್ತದೆ. ಹೀಗಿರುವಾಗ ಒಂದು ವೇಳೆ ನೀವು ನಿಮ್ಮ ಮನೆಯಲ್ಲಿ ಕಲ್ಲನ್ನು ಬಳಸಲು ಬಯಸುತ್ತಿದ್ದರೆ, ಅವುಗಳನ್ನು ನೀವು ಮನೆಯ ದೇವರ ಕೋಣೆಯಲ್ಲಿ ಮಾತ್ರ ಬಳಸಬಹುದು.
ಇದನ್ನೂ ಓದಿ-ಜೂನ್ 14 ರವರೆಗೆ ಈ ರಾಶಿಯವರಿಗೆ ಭಾರೀ ಅದೃಷ್ಟ..! ಎಲ್ಲಾ ಕೆಲಸವನ್ನು ಕೈ ಗೂಡಿಸಲಿದ್ದಾನೆ ಸೂರ್ಯ ದೇವ
ಟೈಲ್ಸ್ ಮತ್ತು ಮಾರ್ಬಲ್ಗಳನ್ನು ಬಳಸುವಾಗ ಈ ವಿಷಯಗಳನ್ನು ನೆನಪಿನಲ್ಲಿಡಿ
ಮನೆಯಲ್ಲಿ ಟೈಲ್ಸ್ ಅಥವಾ ಮಾರ್ಬಲ್ ಅನ್ನು ಅಳವಡಿಸಬೇಕಾದರೆ, ಸರಿಯಾದ ಬಣ್ಣ ಮತ್ತು ಟೈಲ್ಸ್ ಬಳಸಿ. ನೆಲದಲ್ಲಿ ತುಂಬಾ ತಿಳಿ ಬಣ್ಣದ ಟೈಲ್ಸ್ ಮತ್ತು ಮಾರ್ಬಲ್ಗಳನ್ನು ಅಳವಡಿಸಲಾಗುತ್ತಿದೆ ಎಂಬುದರೆ ವಿಶೇಷ ಕಾಳಜಿವಹಿಸಿ. ಬಣ್ಣಗಳ ಸರಿಯಾದ ಆಯ್ಕೆ ಮನೆಯಲ್ಲಿ ಧನಾತ್ಮಕ ಶಕ್ತಿ ಮತ್ತು ಶಾಂತಿ ನೆಲೆಸಲು ಕಾರಣವಾಗುತ್ತದೆ.
ಇದನ್ನೂ ಓದಿ-ಈ ರಾಶಿಯವರ ಮೇಲೆ ಬೀಳಲಿದೆ ಶನಿಯ ವಕ್ರ ದೃಷ್ಟಿ .! ಆದರೆ ನಾಲ್ಕು ರಾಶಿಯವರ ಮೇಲೆ ಭಾರೀ ಕೃಪಾ ಕಟಾಕ್ಷ
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.