ನವದೆಹಲಿ :  Vastu Tips For Money:  ಪ್ರತಿಯೊಬ್ಬ ವ್ಯಕ್ತಿಯು ಶ್ರೀಮಂತನಾಗಲು ಬಯಸುತ್ತಾನೆ. ಇದಕ್ಕಾಗಿ ಬಹಳಷ್ಟು ಶ್ರಮ ಕೂಡಾ ವಹಿಸುತ್ತಾರೆ. ಆದರೆ ಕೆಲವರು ಎಷ್ಟೇ ಪ್ರಯತ್ನಪಟ್ಟರೂ ಯಶಸ್ಸು ಸಿಗುವುದೇ ಇಲ್ಲ. ಹೀಗೆ ಯಾಕೆ ಎಂದು ಯೋಚಿಸಿದರೆ ಇದಕ್ಕೆ ವಾಸ್ತು ದೋಷವೂ (Vastu Dosha) ಕಾರಣವಿರಬಹುದು. ವಾಸ್ತು ದೋಷವಿದ್ದರೆ ಹನದ ಅಭಾವ ಎದುರಾಗುತ್ತದೆ. ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಸಂಪತ್ತನ್ನು ಹೆಚ್ಚಿಸಲು ಮನೆಯಲ್ಲಿ ಕೆಲವು ವಸ್ತುಗಳನ್ನು ಹೊಂದಿರುವುದು ಬಹಳ ಮುಖ್ಯವಾಗಿರುತ್ತದೆ. ಈ ವಸ್ತುಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಅತ್ಯಮತ ಶುಭವೆಂದು ಪರಿಗಣಿಸಲಾಗುತ್ತದೆ. 


COMMERCIAL BREAK
SCROLL TO CONTINUE READING

ಗಣೇಶನ (Lord Ganesha) ಫೋಟೋವನ್ನು ಮನೆಯ ಮುಖ್ಯ ಬಾಗಿಲಿಗೆ ಹಾಕಿ: 
ವಾಸ್ತು (Vastu) ಪ್ರಕಾರ ಗಣೇಶನ ಫೋಟೋವನ್ನು (Lord Ganesha) ಮನೆಯ ಮುಖ್ಯ ಬಾಗಿಲಿನ ಎರಡೂ ಬದಿಗಳಲ್ಲಿ ಇಡಬೇಕು. ಗಣೇಶನ ಫೋಟೋವನ್ನು ಹಾಕುವುದರಿಂದ ಮನೆಯ ವಾಸ್ತು ದೋಷ (vastu dosha) ನಿವಾರಣೆಯಾಗುತ್ತದೆಯಂತೆ. ಇದರೊಂದಿಗೆ ಮನೆಯಲ್ಲಿ ಸಂತೋಷ ಮತ್ತು ಶಾಂತಿ ನೆಲೆಯಾಗುತ್ತದೆಯಂತೆ. 


ಇದನ್ನೂ ಓದಿ : ಸಂಕಷ್ಟ ಚತುರ್ಥಿ ದಿನ ಮಾಡಲೇ ಬೇಡಿ ಈ ತಪ್ಪು, ಸಂಭವಿಸಬಹುದು ಭಾರೀ ನಷ್ಟ


ತುಳಸಿ :
ವಾಸ್ತು ಪ್ರಕಾರ, ಮನೆಯಲ್ಲಿ ತುಳಸಿ (Tulsi) ಗಿಡವನ್ನು ನೆಡಬೇಕು. ಮನೆಯಂಗಳದಲ್ಲಿ ತುಳಸಿ ಸಸಿ ಇದ್ದರೆ ಅದು ಬಹಳ ಶುಭವೆಂದು ಪರಿಗಣಿಸಲಾಗುತ್ತದೆ.  ತುಳಸಿ ಸಸ್ಯವನ್ನು ಮನೆಯಲ್ಲಿ ಇಡುವುದರಿಂದ ಪಾಸಿಟಿವ್ ಎನರ್ಜಿ (Positive energy) ನೆಲೆಯಾಗುತ್ತದೆ. ಆರ್ಥಿಕ ಸಮಸ್ಯೆಯೂ ನಿವಾರಣೆಯಾಗುತ್ತದೆ. 


ದೇವಾಲಯ : 
ಮನೆಯಲ್ಲಿ ದೇವರ ಕೋಣೆ (Pooja room) ಇರಬೇಕು. ದೇವರ ಕೊಣೆಯಿರದಿದ್ದರೆ ದೇವರ ಪೋಟೋ ಅಥವಾ ಮೂರ್ತಿಗಳನ್ನು ಇಡಲು ಪ್ರತ್ಯೇಕ ಮಂಟಪವಾದರೂ ಇರಬೇಕು ಈ ಪೂಜಾಮನೆಯಲ್ಲಿ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ದೀಪ ಬೆಳಗಬೇಕು. ಇದರೊಂದಿಗೆ, ತಾಯಿ ಲಕ್ಷ್ಮಿಯ (Godess Lakshmi) ವಿಶೇಷ ಅನುಗ್ರಹವು ಮನೆಯಲ್ಲಿ ಇರುತ್ತದೆ. ಅಲ್ಲದೆ, ಹಣದ ನಷ್ಟವನ್ನೂ ತಪ್ಪಿಸಬಹುದು.


ಇದನ್ನೂ ಓದಿ : Astrology: ಯಾವ ರಾಶಿಯ ಸಂಗಾತಿ ನಮಗೆ ಬೆಸ್ಟ್ ಸಂಗಾತಿ? ಬಹುತೇಕ ಜನರಿಗೆ ಇದರ ಉತ್ತರ ತಿಳಿದಿಲ್ಲ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.