ಸಂಕಷ್ಟ ಚತುರ್ಥಿ ದಿನ ಮಾಡಲೇ ಬೇಡಿ ಈ ತಪ್ಪು, ಸಂಭವಿಸಬಹುದು ಭಾರೀ ನಷ್ಟ

ಚತುರ್ಥಿ ದಿನದಂದು ಯಾರೂ ಸುಳ್ಳು ಹೇಳಬಾರದು. ಇದು ಉದ್ಯೋಗ ಮತ್ತು ವ್ಯವಹಾರದಲ್ಲಿ ನಷ್ಟವನ್ನು ಉಂಟುಮಾಡುತ್ತದೆ.

Written by - Ranjitha R K | Last Updated : Jun 27, 2021, 10:49 AM IST
  • ಚತುರ್ಥಿ ದಿನದಂದು ಬೆಳ್ಳುಳ್ಳಿ-ಈರುಳ್ಳಿ ನಾನ್ ವೆಜ್ ಸೇವಿಸಬೇಡಿ
  • ಸುಳ್ಳು ಹೇಳಿದರೆ ಉದ್ಯೋಗ-ವ್ಯವಹಾರದಲ್ಲಿ ನಷ್ಟ ಉಂಟಾಗುತ್ತದೆ
  • ಈ ದಿನ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಬೇಕು
ಸಂಕಷ್ಟ ಚತುರ್ಥಿ ದಿನ ಮಾಡಲೇ ಬೇಡಿ ಈ ತಪ್ಪು, ಸಂಭವಿಸಬಹುದು ಭಾರೀ ನಷ್ಟ title=
ಈ ದಿನ ಗಣೇಶನಿಗೆ ವಿಶೇಷ ಪೂಜೆ ಸಲ್ಲಿಸಬೇಕು (photo zee news)

ನವದೆಹಲಿ : ಚತುರ್ಥಿ ತಿಂಗಳಿಗೆ ಎರಡು ಬಾರಿ ಬರುತ್ತದೆ. ಕೃಷ್ಣ ಪಕ್ಷದಲ್ಲಿ ಬೀಳುವ ಚತುರ್ಥಿಯನ್ನು ಸಂಕಷ್ಟಿ ಚತುರ್ಥಿ (Sankashti Chathurti) ಮತ್ತು ಶುಕ್ಲ ಪಕ್ಷದ ಚತುರ್ಥಿಯನ್ನು ವಿನಾಯಕ ಚತುರ್ಥಿ ಎಂದು ಕರೆಯಲಾಗುತ್ತದೆ. ಪ್ರತಿಯೊಂದು ಚತುರ್ಥಿಗೂ ತನ್ನದೇ ಆದ ಮಹತ್ವವಿದೆ ಮತ್ತು ಗಣೇಶನಿಗೆ (Lord Ganesha) ಅರ್ಪಿತವಾಗಿದೆ. ಈ ದಿನ ಗಣಪತಿಯನ್ನು ಪೂಜಿಸುವುದು ಮತ್ತು ಉಪವಾಸ ಮಾಡುವುದರಿಂದ ಸಾಕಷ್ಟು ಪ್ರಯೋಜನಗಳು ಸಿಗುತ್ತವೆ. ಆದರೆ ಈ ದಿನ ಧರ್ಮದಲ್ಲಿ ನಿಷೇಧಿಸಲಾಗಿರುವ ಕೆಲಸಗಳನ್ನು ಮಾಡುವುದರಿಂದ ಹೆಚ್ಚಿನ ಹಾನಿ ಉಂಟಾಗುತ್ತದೆ. 

ಚತುರ್ಥಿಯಲ್ಲಿ ಈ ಕೆಲಸವನ್ನು ಎಂದಿಗೂ ಮಾಡಬೇಡಿ :
-ಚತುರ್ಥಿ ದಿನದಂದು (Sankashti Chathurti) ಯಾರೂ ಸುಳ್ಳು ಹೇಳಬಾರದು. ಇದು ಉದ್ಯೋಗ ಮತ್ತು ವ್ಯವಹಾರದಲ್ಲಿ ನಷ್ಟವನ್ನು ಉಂಟುಮಾಡುತ್ತದೆ.
-ಚತುರ್ಥಿ ತಿಥಿಯಂದು ಶುಭ ಕೆಲಸ ಮಾಡುವುದನ್ನು ನಿಷೇಧಿಸಲಾಗಿದೆ. ಈ ದಿನದಂದು ಶುಭ ಕೆಲಸ ಮಾಡುವುದರಿಂದ ನಷ್ಟ ಸಂಭವಿಸುತ್ತದೆ ಎನ್ನಲಾಗಿದೆ. 

ಇದನ್ನೂ ಓದಿ : Astrology: ಯಾವ ರಾಶಿಯ ಸಂಗಾತಿ ನಮಗೆ ಬೆಸ್ಟ್ ಸಂಗಾತಿ? ಬಹುತೇಕ ಜನರಿಗೆ ಇದರ ಉತ್ತರ ತಿಳಿದಿಲ್ಲ

- ಗುರುವಾರ ಚತುರ್ಥಿ ಮೃತ್ಯವನ್ನು ಮತ್ತು ಶನಿವಾರದ (Saturday) ಚತುರ್ಥಿ ಸಿದ್ಧಿದಾಯಕಾವಗಿರುತ್ತದೆಯಂತೆ. ಆದ್ದರಿಂದ ಅದಕ್ಕೆ ತಕ್ಕಂತೆ ಕೆಲಸ ಮಾಡಬೇಕು.
- ಗಣೇಶನಿಗೆ  ತುಳಸಿಯನ್ನು ಅರ್ಪಿಸಬಾರದು.
-ಈ ದಿನ ಈರುಳ್ಳಿ, ಬೆಳ್ಳುಳ್ಳಿ (garlic), ಆಲ್ಕೋಹಾಲ್ ಮತ್ತು ಮಾಂಸವನ್ನು ಸೇವಿಸಬಾರದು.
-ಈ ದಿನ ಗಂಡ ಹೆಂಡತಿ ಸಂಯಮ ವಹಿಸಬೇಕು.
-ಚತುರ್ಥಿ ದಿನದಂದು ಯಾವುದೇ ಪ್ರಾಣಿ ಅಥವಾ ಪಕ್ಷಿಗಳಿಗೆ ಕಿರುಕುಳ ನೀಡಬಾರದು, ಅವುಗಳನ್ನು ಕೊಲ್ಲಬಾರದು.
- ಅಂದಹಾಗೆ, ಯಾವುದೇ ದಿನ ವಯಸ್ಸಾದವರನ್ನು ಅಥವಾ ಬ್ರಾಹ್ಮಣರನ್ನು ಅವಮಾನಿಸಬಾರದು. ಆದರೆ ಚತುರ್ಥಿ ದಿನದಂದು ಈ ರೀತಿ ಮಾಡಿದರೆ ಅದಕ್ಕೆ ಭಾರೀ ಬೆಲೆ ತೆರಬೇಕಾಗುತ್ತದೆ. 

ಇದನ್ನೂ ಓದಿ :  Oil Lamp : ಮನೆಯಲ್ಲಿ ಹಚ್ಚಿದ ದೀಪವನ್ನ ಬಾಯಿಯಿಂದ, ಕೈಯಿಂದ ಆರಿಸಬಾರದು ಯಾಕೆ? ಇಲ್ಲಿ ಓದಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News