Vastu Tips For Economic Crunch: ಪ್ರತಿಯೊಬ್ಬ ಮನುಷ್ಯನಿಗೆ ತನ್ನ ಜೀವನ ಆರಾಮವಾಗಿ ಕಳೆಯಬೇಕು ಎಂಬ ಆಸೆ ಇರುತ್ತದೆ. ಇದಕ್ಕಾಗಿ ಅವನು ತುಂಬಾ ಶ್ರಮಿಸುತ್ತಾನೆ. ಆದರೂ ಕೂಡ, ಅನೇಕ ಜನರು ಕಷ್ಟಪಟ್ಟು ಕೆಲಸ ಮಾಡಿದರೂ ಉತ್ತಮ ಫಲಿತಾಂಶಗಳನ್ನು ಪಡೆಯುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ, ಅವರು ಆಗಾಗ್ಗೆ ಆರ್ಥಿಕ ನಿರ್ಬಂಧಗಳನ್ನು ಎದುರಿಸಬೇಕಾಗುತ್ತದೆ. ಈ ಸಮಸ್ಯೆಗಳಿಗೆ ವಾಸ್ತು ದೋಷಗಳೂ ಕಾರಣವಾಗಿರಬಹುದು ಹೀಗಿರುವಾಗ, ವಾಸ್ತು ಶಾಸ್ತ್ರದಲ್ಲಿ ಕೆಲ ಪರಿಹಾರಗಳನ್ನು ಸೂಚಿಸಲಾಗಿದೆ. ಹಾಗಾದರೆ ಬನ್ನಿ ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೇಗೆ ತೊಲಗಿಸಬೇಕು ಮತ್ತು ಸುಖ-ಸಮೃದ್ಧಿಯನ್ನು ಹೇಗೆ ಹೆಚ್ಚಿಸಬೇಕು ತಿಳಿದುಕೊಳ್ಳೋಣ ಬನ್ನಿ.


COMMERCIAL BREAK
SCROLL TO CONTINUE READING

ಮಲಗುವ ಮುನ್ನ ಈ ಪರಿಹಾರಗಳನ್ನು ಮಾಡಿ
ಪ್ರತಿಯೊಬ್ಬ ವ್ಯಕ್ತಿಯು ತನ್ನ ಜೀವನದಲ್ಲಿ ಅತ್ಯಂತ ಕಾಳಜಿವಹಿಸಿ ತನ್ನ ಆಯ್ಕೆಯಂತೆ ಮನೆಯನ್ನು ನಿರ್ಮಿಸುತ್ತಾನೆ. ಅದನ್ನೂ ಅಚ್ಚುಕಟ್ಟಾಗಿ ಅಲಂಕರಿಸುತ್ತಾರೆ. ಆದರೆ, ಹಲವು ಬಾರಿ ವಾಸ್ತುವಿನ ಬಗ್ಗೆ ಸರಿಯಾಗಿ ಗಮನಹರಿಸುವುದಿಲ್ಲ, ಇದರಿಂದಾಗಿ ಮನೆಯಲ್ಲಿ ಸಮಸ್ಯೆಗಳು ಪ್ರಾರಂಭವಾಗುತ್ತವೆ. ಹೀಗಿರುವಾಗ, ರಾತ್ರಿ ಮಲಗುವ ಮೊದಲು ಮನೆಯಲ್ಲಿ ಕೆಲವು ಕ್ರಮಗಳನ್ನು ಕೈಗೊಳ್ಳುವುದರಿಂದ ಈ ಸಮಸ್ಯೆಗಳನ್ನು ಸಂಪೂರ್ಣವಾಗಿ ನಿವಾರಿಸಬಹುದು.


ಅಡುಗೆಮನೆಯಲ್ಲಿ ನೀರು ತುಂಬಿಸಿದ ಬಕೆಟ್ ಇಡಿ
ರಾತ್ರಿ ಮಲಗುವ ಮುನ್ನ ಒಂದು ಬಕೆಟ್ ನೀರು ತುಂಬಿ ಅಡುಗೆ ಮನೆಯಲ್ಲಿ ಇಡಿ. ಹೀಗೆ ಮಾಡುವುದರಿಂದ ಸಾಲದಿಂದ ಮುಕ್ತಿ ದೊರೆಯುತ್ತದೆ ಮತ್ತು ಹಣದ ಸಮಸ್ಯೆಯೂ ನಿವಾರಣೆಯಾಗುತ್ತದೆ. ಇದರೊಂದಿಗೆ ಮನೆಯ ಆರ್ಥಿಕ ಸ್ಥಿತಿಯೂ ಸುಧಾರಣೆಯಾಗುತ್ತದೆ.


ಬಾತ್ ರೂಮ್ ನಲ್ಲಿ ತುಂಬಿದ ಬಕೆಟ್ 
ವಾಸ್ತು ಶಾಸ್ತ್ರದ ಪ್ರಕಾರ ಬಾತ್ ರೂಂನಲ್ಲಿ ಇಟ್ಟಿರುವ ಬಕೆಟ್ ಖಾಲಿ ಇರಬಾರದು. ಸ್ನಾನಗೃಹದಲ್ಲಿ ತುಂಬಿದ ಬಕೆಟ್‌ ಇಡುವುದರಿಂದ ತಾಯಿ ಲಕ್ಷ್ಮಿ ಪ್ರಸನ್ನಗೊಳ್ಳುತ್ತಾಳೆ ಎಂದು ನಂಬಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ರಾತ್ರಿ ಮಲಗುವ ಮೊದಲು, ಸ್ನಾನಗೃಹದಲ್ಲಿ ನೀರು ತುಂಬಿದ ಬಕೆಟ್ ಅನ್ನು ಇರಿಸಿ.


ಇದನ್ನೂ ಓದಿ-Navratri 2022: ಈ ಬಾರಿ ಆನೆಯ ಮೇಲೆ ತಾಯಿ ದುರ್ಗೆಯ ಆಗಮನ, ಸಮೃದ್ಧಿಯೇ ಅಥವಾ ವಿನಾಶವೆ?


ಮುಖ್ಯದ್ವಾರದ ಬಳಿ ದೀಪವನ್ನು ಬೆಳಗಿಸಿ
ನಿಮ್ಮ ಮನೆಯಲ್ಲಿ ಸದಾ ತಾಯಿ ಲಕ್ಷ್ಮಿಯ ವಾಸ ಇರಬೇಕು ಎಂದು ನೀವು ಬಯಸುತ್ತಿದ್ದರೆ, ಮನೆಯ ಮುಖ್ಯ ದ್ವಾರದಲ್ಲಿ ಪ್ರತಿದಿನ ಸಂಜೆ ದೀಪವನ್ನು ಬೆಳಗಿಸಬೇಕು. ಇದರೊಂದಿಗೆ ಮುಖ್ಯ ಬಾಗಿಲಿನ ಮೇಲೂ ದೀಪ ಬೆಳಗಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿ ಪ್ರಸನ್ನಳಾಗುತ್ತಾಳೆ ಮತ್ತು ಮನೆಯಲ್ಲಿ ನೆಲೆಸುತ್ತಾಳೆ ಎನ್ನಲಾಗುತ್ತದೆ.


ಇದನ್ನೂ ಓದಿ-Lucky Name: ಇಂತಹ ಹುಡುಗರಿಗೆ ಬೇಗ ಇಂಪ್ರೆಸ್ ಆಗ್ತಾರೆ ಹುಡಗಿಯರು


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.