Kombucha Drink: ಹಲವು ಬಾಲಿವುಡ್ ನಟ-ನಟಿಯರ ಫಿಟ್ನೆಸ್ ಮಂತ್ರ ಈ ಕೊಂಬುಚಾ ಡ್ರಿಂಕ್...ಏನಿದು?

Kombucha Drink: ಕೊಂಬುಚಾ ಡ್ರಿಂಕ್ ಹೆಸರಿನ ಪಾನೀಯವೊಂದು ಇತ್ತೀಚಿನ ದಿನಗಳಲ್ಲಿ ತುಂಬಾ ಜನಪ್ರೀಯತೆಯನ್ನು ಪಡೆದುಕೊಳ್ಳುತ್ತಿದೆ. ಈ ಪಾನೀಯ ಶರೀರಕ್ಕೆ ಹಲವು ವಿಧಗಳಲ್ಲಿ ಲಾಭಗಳನ್ನು ತಲುಪಿಸುತ್ತದೆ ಹಾಗೂ ಇದೇ ಕಾರಣದಿಂದ ಖ್ಯಾತ ನಟ-ನಟಿಯರು ಕೂಡ ಫಿಟ್ನೆಸ್ ಕಾಯ್ದುಕೊಳ್ಳಲು ಈ ಪಾನೀಯವನ್ನು ಸೇವಿಸುತ್ತಾರೆ ಎನ್ನಲಾಗಿದೆ.  

Written by - Nitin Tabib | Last Updated : Aug 28, 2022, 04:49 PM IST
  • ಕೊಂಬುಚಾ ಎಂಬ ಹೆಸರು ನೀವು ಮೊಟ್ಟಮೊದಲ ಬಾರಿಗೆ ಕೇಳುತ್ತಿರಬಹುದು.
  • ಕೊಂಬುಚಾ ಒಂದು ಹಗುರವಾದ ಎನರ್ಜೆಟಿಕ್ ಡ್ರಿಂಕ್ ಆಗಿದ್ದು,
  • ಬ್ಲಾಕ್ ಅಥವಾ ಗ್ರೀನ್ ಟೀ ರೀತಿಯೇ ಇರುತ್ತದೆ.
Kombucha Drink: ಹಲವು ಬಾಲಿವುಡ್ ನಟ-ನಟಿಯರ ಫಿಟ್ನೆಸ್ ಮಂತ್ರ ಈ ಕೊಂಬುಚಾ ಡ್ರಿಂಕ್...ಏನಿದು? title=
Benefits of Drinking Kombucha

Benefits of Drinking Kombucha : ಕೊಂಬುಚಾ ಎಂಬ ಹೆಸರು ನೀವು ಮೊಟ್ಟಮೊದಲ ಬಾರಿಗೆ ಕೇಳುತ್ತಿರಬಹುದು. ಕೊಂಬುಚಾ ಒಂದು ಹಗುರವಾದ ಎನರ್ಜೆಟಿಕ್ ಡ್ರಿಂಕ್ ಆಗಿದ್ದು, ಬ್ಲಾಕ್ ಅಥವಾ ಗ್ರೀನ್ ಟೀ ರೀತಿಯೇ ಇದೆ. ಆರೋಗ್ಯ ಲಾಭಕ್ಕಾಗಿ ಇದನ್ನು ಹೆಚ್ಚನ ಪ್ರಮಾಣದಲ್ಲಿ ಬಳಸಲಾಗುತ್ತಿದೆ. ಇದರಲ್ಲಿರುವ ಹೆಲ್ದಿ ಎಲಿಮೆಂಟ್ಸ್ ಗಳು ಹೊಟ್ಟೆಯ ಆರೋಗ್ಯಕ್ಕೆ ಉತ್ತಮ ಎಂದು ಹೇಳಲಾಗುತ್ತದೆ. ಈ ಆರೋಗ್ಯಕರ ಸಂಗತಿಗಳು ತೂಕ ಇಳಿಕೆಗೂ ಕೂಡ ಸಹಕಾರಿಯಾಗಿವೆ. ಹಲವು ಬಾಲಿವುಡ್ ನಟ-ನಟಿಯರು ತಮ್ಮನ್ನು ತಾವು ಫಿಟ್ ಆಗಿರಿಸಲು ಈ ಪಾನೀಯವನ್ನು ಸೇವಿಸಿ ಎನರ್ಜೆಟಿಕ್ ಆಗಿ ಇರುತ್ತಾರೆ. ಹಾಗಾದರೆ ಬನ್ನಿ ಈ ಕೊಂಬುಚಾ ಡ್ರಿಂಕ್ ಸೇವನೆಯಿಂದಾಗುವ ಲಾಭಗಲೇನು ತಿಳಿದುಕೊಳ್ಳೋಣ,

ಏನಿದು ಕೊಂಬುಚಾ?
ಕೊಂಬುಚಾ ಒಂದು ರೀತಿಯ ಫರ್ಮೆಂಟೆಡ್ ಕಪ್ಪು ಚಹಾ ಅಂದರೆ ಬ್ಲಾಕ್ ಟೀ ಆಗಿದೆ. ಈ ಬ್ಲಾಕ್ ಟೀ ಅನ್ನು ಟೀ ಫಂಗಸ್ ಸಹಾಯದಿಂದ ಫರ್ಮೆಂಟ್ ಮಾಡಲಾಗುತ್ತದೆ. ಕೆಲ ದಿನಗಳಿಂದ ಹಿಡಿದು, ಕೆಲ ವಾರಗಳವರೆಗೆ ಈ ಪ್ರಕ್ರಿಯೆ ನಡೆಸಲಾಗುತ್ತದೆ ಎನ್ನಲಾಗಿದೆ. ಈ ಪ್ರಕ್ರಿಯೆಯಲ್ಲಿ ಸಕ್ಕರೆಯನ್ನು ಕೂಡ ಬಳಸಲಾಗುತ್ತದೆ. ಈ ಫರ್ಮೆಂಟ್ ಪ್ರಕ್ರಿಯೆ ಮುಗಿದ ಬಳಿಕ, ನೀವು ನಿಮ್ಮ ಇಚ್ಛೆಗೆ ಅನುಗುಣವಾಗಿ ಇದರಲ್ಲಿ ಪದಾರ್ಥಗಳನ್ನು ಬೆರೆಸಬಹುದು. ಇದನ್ನು ಬಿಸಿ ಅಥವಾ ತಣ್ಣಗೆ ಎರಡೂ ವಿಧದಲ್ಲಿ  ಕುಡಿಯಬಹುದು. ಇದು ಕೆಫೀನ್ ಮುಕ್ತವಾಗಿರುವ ಒಂದು ಪಾನೀಯವಾಗಿದೆ.

ಕೊಂಬುಚಾ  ಡ್ರಿಂಕ್ ಸೇವನೆಯ ಲಾಭಗಳು
ಟೀಸ್ಟಿ ಟೀ-
ಕೊಂಬುಚಾವನ್ನು ನಿಧಾನ ಗತಿಯಲ್ಲಿ ಫರ್ಮೆಂಟ್ ಮಾಡಲಾಗುವ ಕಾರಣ, ಇದರಲ್ಲಿರುವ ಹಲವಾರು ಕಿಣ್ವಗಳು, ಸಕ್ಕರೆ ಮತ್ತು ಚಹಾವನ್ನು 7 ರಿಂದ 10 ದಿನಗಳ ಅವಧಿಯಲ್ಲಿ ಸ್ವಲ್ಪ ಹುಳಿ, ಕಾರ್ಬೊನೇಟೆಡ್ ಮತ್ತು ರಿಫ್ರೆಶ್ ಪಾನೀಯವಾಗಿ ಪರಿವರ್ತಿಸುತ್ತವೆ, ಹೀಗಾಗಿ ಇದು ಉತ್ತಮ ರುಚಿಯನ್ನು ನೀಡುತ್ತದೆ.

ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ- ಕೊಂಬುಚಾ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರೊಳಗೆ ಕಂಡುಬರುವ ಬ್ಯಾಕ್ಟೀರಿಯಾವು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ತಡೆಯುತ್ತದೆ. ಆದರೆ, ಈ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ಅಗತ್ಯವಿದೆ.
 
ತೂಕ ಇಳಿಕೆಗೆ ಸಹಕಾರಿ- ತೂಕ ಇಳಿಕೆಗೆ ಗ್ರೀನ್ ಟೀ ಅತ್ಯುತ್ತಮ ಎಂದು ಹೇಳಲಾಗುತ್ತದೆ. ಹೋಲಿಸುವುದು ತಪ್ಪಾದರೂ ಕೂಡ, ನೀವು ಚಹಾದಿಂದ ಕೊಂಬುಚಾವನ್ನು ತಯಾರಿಸಿದಾಗ, ಅದು ನಿಮ್ಮ ಕರುಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ತೂಕವನ್ನು ಕಳೆದುಕೊಳ್ಳುವಲ್ಲಿ ಇದು ಸಹಾಯ ಮಾಡುತ್ತದೆ.

ಇದನ್ನೂ ಓದಿ-Drawbacks of Being Single: ಒಂಟಿಯಾಗಿರುವುದರಿಂದ ಆಗುವ ಈ 4 ಹಾನಿಗಳು ನಿಮಗೆ ತಿಳಿದಿವೆಯಾ?
 
ಯಕೃತ್ತು ಆರೋಗ್ಯಕ್ಕೆ ಉತ್ತಮ - ದೇಹಕ್ಕೆ ಹಾನಿ ಉಂಟುಮಾಡುವ ಹಲವು ಅಂಶಗಳನ್ನು ಕೊಂಬುಚಾ ಕೊಲ್ಲುತ್ತದೆ. ಜೊತೆಗೆ, ಕೊಂಬುಚಾ ಯಕೃತ್ತನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಅದನ್ನು ಹಾನಿಗೊಳಗಾಗುವ ವಸ್ತುಗಳಿಂದ ರಕ್ಷಿಸುತ್ತದೆ.

ಇದನ್ನೂ ಓದಿ-Weight Loss: ತೂಕ ಇಳಿಕೆ ಸೇರಿದಂತೆ ಹಲವು ಕಾಯಿಲೆಗಳಿಗೆ ರಾಮಬಾಣ ತಾಮ್ರ ಜಲ, ಹೇಗೆ ಸೇವಿಸಬೇಕು?

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News