Vastu Tips: ವಾಸ್ತುಶಾಸ್ತ್ರದಲ್ಲಿ ಕೇವಲ ದಿಕ್ಕುಗಳ ಮಾಹಿತಿಯಷ್ಟೇ ನೀಡಲಾಗಿಲ್ಲ. ದೈನಂದಿನ ಜೀವನದಲ್ಲಿ ಬಳಕೆಯಾಗುವ ವಸ್ತುಗಳ ಬಗ್ಗೆಯೂ ಕೂಡ ಹೇಳಲಾಗಿದೆ. ಇದಲ್ಲದೆ ಪೂಜೆ-ಪುನಸ್ಕಾರಗಳ ವಸ್ತುಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ ದೈನಂದಿನ ಜೀವನಕ್ಕೆ ಸಂಬಂಧಿಸಿದಂತೆ ಕೆಲ ನಿಯಮಗಳ ಪಾಲನೆ ಅನಿವಾರ್ಯ. ಅವುಗಳನ್ನು ಪಾಲಿಸದೆ ಹೋದಲ್ಲಿ ದಾರಿದ್ರ್ಯ, ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಹಾಗಾದರೆ ಬನ್ನಿ ದೈನಂದಿನ ಬಳಕೆಯಲ್ಲಿ ಉಪಯೋಗಿಸಲ್ಪಡುವ ಯಾವ ಯಾವ ವಸ್ತುಗಳನ್ನು ನೆಲದ ಮೇಲಿಡಬಾರದು ಎಂಬುದನ್ನು ತಿಳಿದುಕೊಳ್ಳೋಣ. 


COMMERCIAL BREAK
SCROLL TO CONTINUE READING

1. ಶಾಳಿಗ್ರಾಮ (Shaligram) ಅಥವಾ ಶಿವಲಿಂಗ (Shivling)
ಹಿಂದೂ ಧರ್ಮಶಾಸ್ತ್ರಗಳ ಪ್ರಕಾರ ಶಾಳಿಗ್ರಾಮವನ್ನು ಶ್ರೀವಿಷ್ಣುವಿನ ಪ್ರತೀಕ ಹಾಗೂ ಶಿವಲಿಂಗವನ್ನು ದೇವಾಧಿದೇವ ಮಹಾದೇವನ ಪ್ರತೀಕ ಎಂದು ಹೇಳಲಾಗಿದೆ. ಹೀಗಾಗಿ ಅವುಗಳನ್ನು ಅಪ್ಪಿ-ತಪ್ಪಿಯೂ ಕೂಡ ನೆಲದ ಮೇಲಿಡಬಾರದು. ದೇವಸ್ಥಾನದ ಅಥವಾ ದೇವರ ಕೋಣೆಯ ಸ್ವಚ್ಚತೆಯ ವೇಳೆ ಜನರಿಂದ ಸಾಮಾನ್ಯವಾಗಿ ಇಂತಹ ತಪ್ಪು ನಡೆಯುವ ಸಾಧ್ಯತೆ ಇರುತ್ತದೆ. ಹೀಗಾಗಿ ಸ್ವಚ್ಚತೆಯ ವೇಳೆ ಅವುಗಳನ್ನು ಶುಭ್ರ ಬಟ್ಟೆಯಲ್ಲಿ ಸುತ್ತಿ ಜಗಲಿ ಅಥವಾ ಕಟ್ಟಿಗೆಯ ಪಟ್ಟಿಯ ಮೇಲಿಡಬೇಕು.


ಇದನ್ನು ಓದಿ-Vastu Tips: ಮಲಗುವ ದಿಕ್ಕಿನ ಕುರಿತಾಗಿ ವಾಸ್ತುಶಾಸ್ತ್ರ ಏನು ಹೇಳುತ್ತೆ? ಅನುಸರಿಸಿ ಹಾನಿಯಿಂದ ಪಾರಾಗಿ


2. ಧೂಪ, ದೀಪ, ಶಂಖ ಹಾಗೂ ಪುಷ್ಪಗಳು (Flowers)
ಭಗವದ್ಗೀತೆಯಲ್ಲಿ ಉಲ್ಲೇಖಿಸಿರುವಂತೆ, ಶಂಖ, ದೀಪ, ಧೂಪ, ಯಂತ್ರ, ತುಳಸಿದಳ, ಕರ್ಪೂರ, ಚಂದನ, ಜಪಮಾಲೆ ಇತ್ಯಾದಿ ಪೂಜಾ ಸಾಮಗ್ರಿಗಳನ್ನು ನೆಲದ ಮೇಲಿಡಬಾರದು. ಅರ್ಚನೆಯ ವೇಳೆ ಈ ಎಲ್ಲ ಸಂಗತಿಗಳನ್ನು ಬಳಸಲಾಗುತ್ತದೆ. ಹೀಗಾಗಿ ಅವುಗಳನ್ನು ನೆಲದ ಮೇಲೆ ಇಡಬೇಡಿ.


ಇದನ್ನು ಓದಿ-Pair Of Silver Elephants: Good Luck ನಿಮ್ಮದಾಗಿಸಲು ಮನೆಯಲ್ಲಿರಿಸಿ ಬೆಳ್ಳಿ ಲೋಹದ ಆನೆಗಳ ಜೋಡಿ


3. ರತ್ನ (Gems)
ಶಾಸ್ತ್ರಗಳಲ್ಲಿ ಉಲ್ಲೇಖಿಸಿರುವಂತೆ, ಮುತ್ತು, ರತ್ನ ಹಾಗೂ ಚಿನ್ನದಂತಹ ಬಹುಮೂಲ್ಯ ವಸ್ತುಗಳನ್ನು ನೇರವಾಗಿ ಭೂಮಿಯ ಮೇಲಿರಿಸಬಾರದು ಎನ್ನಲಾಗಿದೆ. ಏಕೆಂದರೆ ಧಾತುಗಳು ಯಾವುದಾದರೊಂದು ಗ್ರಹದ ಜೊತೆಗೆ ಸಂಬಂಧ ಹೊಂದಿರುತ್ತವೆ. ಇವುಗಳನ್ನು ನೇರವಾಗಿ ನೆಲದ ಮೇಲಿಡುವುದು ಅಪಶಕುನ ಎಂದು ಭಾವಿಸಲಾಗುತ್ತದೆ. 


ಇದನ್ನು ಓದಿ-Flat ಖರೀದಿಸಬೇಕೆ? ಮೊದಲು ಈ ಸಂಗತಿಗಳನ್ನು ಗಮನದಲ್ಲಿಟ್ಟು ವಿಚಾರಿಸಿಕೊಳ್ಳಿ


4. ಚಿಪ್ಪು
ಚಿಪ್ಪು ಸಮುದ್ರದಲ್ಲಿ ಉತ್ಪತ್ತಿಯಾಗುವ ಕಾರಣ ದೇವಿ ಲಕುಮಿಯ ಜೊತೆಗೆ ಇದು ನೇರ ಸಂಬಂಧ ಹೊಂದಿದೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಹೀಗಾಗಿ ಅದನ್ನು ಕೂಡ ನೆಲದ ಮೇಲಿಡಬಾರದು. ಲಕ್ಷ್ಮಿ (Lakshmi) ಪೂಜೆಯ ಸಂದರ್ಭದಲ್ಲಿ ಚಿಪ್ಪು ಹಾಗೂ ಕವಡೆಗೆ ವಿಶೇಷ ಮಹತ್ವವಿದೆ ಎಂಬುದನ್ನು ಮರೆಯದಿರಿ.


ಇದನ್ನು ಓದಿ-Vastu Tips: ಮನೆಯ ಮುಖ್ಯದ್ವಾರದ ಮೇಲಿರಲಿ ಈ 5 ಸಂಗತಿಗಳು, ಭಾಗ್ಯ ಹೊಳೆಯಲಿದೆ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.