Vastu Tips: ಮಲಗುವ ದಿಕ್ಕಿನ ಕುರಿತಾಗಿ ವಾಸ್ತುಶಾಸ್ತ್ರ ಏನು ಹೇಳುತ್ತೆ? ಅನುಸರಿಸಿ ಹಾನಿಯಿಂದ ಪಾರಾಗಿ

Vastu Tips: ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮಲಗುವ ಸಮಯದಲ್ಲಿ ತಲೆ ಮತ್ತು ಕಾಲುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಯಾವುದಾದರೊಂದು ದಿಕ್ಕಿನಲ್ಲಿ ಕಾಲು ಮತ್ತು ತಲೆ ಮಾಡಿ ಮಲಗುವುದು ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ತರುತ್ತದೆ ಎನ್ನಲಾಗಿದೆ. ಹಾಗಾದರೆ ಬನ್ನಿ ನಿದ್ರೆಗೆ ಸಂಬಂಧಿಸಿದ ಈ ವಾಸ್ತು ಶಾಸ್ತ್ರದ ಸಲಹೆಗಳ (Sleeping Vastu Tips) ಬಗ್ಗೆ ತಿಳಿದುಕೊಳ್ಳೋಣ.

Last Updated : Dec 11, 2020, 05:45 PM IST
  • ವಾಯುವ್ಯ ದಿಕ್ಕಿನೆಡೆಗೆ ಕಾಲು ಚಾಚಿ ಮಲಗುವುದು ಅಶುಭ.
  • ವಿವಾಹಯೋಗ್ಯ ಯುವಕ-ಯುವತಿಯರು ಉತ್ತರ ದಿಕ್ಕಿನೆಡೆಗೆ ತಲೆಯನ್ನಿಟ್ಟು ಮಲಗಿ.
  • ಮನೆಯ ಹಿರಿಯ ಜೀವಿಗಳು ಪಶ್ಚಿಮ ದಿಕ್ಕಿನ ಕಡೆಗೆ ಕಾಲು ಚಾಚಿ ಮಲಗಬೇಕು.
Vastu Tips: ಮಲಗುವ ದಿಕ್ಕಿನ ಕುರಿತಾಗಿ ವಾಸ್ತುಶಾಸ್ತ್ರ ಏನು ಹೇಳುತ್ತೆ? ಅನುಸರಿಸಿ ಹಾನಿಯಿಂದ ಪಾರಾಗಿ title=
Vastu Tips

Vastu Tips:ವಾಸ್ತು ಶಾಸ್ತ್ರದಲ್ಲಿ (Vastu Shastra) ದಿಕ್ಕುಗಳಿಗೆ (Directions)ಭಾರಿ ಮಹತ್ವ ಕಲ್ಪಿಸಲಾಗಿದೆ. ಇದರಲ್ಲಿ ದಿಕ್ಕುಗಳನ್ನು ಆಧರಿಸಿಯೇ ಶುಭ ಹಾಗೂ ಅಶುಭ, ಮಂಗಳ-ಅಮಂಗಳ ಸಂಗತಿಗಳನ್ನು ನಿರ್ಧರಿಸಲಾಗುತದೆ. ವಾಸ್ತು ಶಾಸ್ತ್ರ ನಿಯಮಗಳನ್ನು ಅನುಸರಿಸಿದರೆ ಸುಖ-ಸಮೃದ್ಧಿ ನಿಮ್ಮದಾಗುತ್ತದೆ. ಇವುಗಳನ್ನು ನಿರ್ಲಕ್ಷಿಸುವುದು ಹಲವು ಬಾರಿ ಸಂಕಷ್ಟವನ್ನು ತಂದೊಡ್ಡುತ್ತವೆ.

ಸಾಮಾನ್ಯವಾಗಿ ಜನರು ಯಾವುದಾದರೊಂದು ದಿಕ್ಕಿನಲ್ಲಿ ಕಾಲು ಮತ್ತು ತಲೆ ಮಾಡಿ ಮಲಗುತ್ತಾರೆ. ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮಲಗುವ ಸಮಯದಲ್ಲಿ ತಲೆ ಮತ್ತು ಕಾಲುಗಳನ್ನು ಸರಿಯಾದ ದಿಕ್ಕಿನಲ್ಲಿ ಇಡುವುದು ಬಹಳ ಮುಖ್ಯ. ಯಾವುದಾದರೊಂದು ದಿಕ್ಕಿನಲ್ಲಿ ಕಾಲು ಮತ್ತು ತಲೆ ಮಾಡಿ ಮಲಗುವುದು ಮಾನಸಿಕ ಮತ್ತು ಆರ್ಥಿಕ ತೊಂದರೆಗಳನ್ನು ತರುತ್ತದೆ ಎನ್ನಲಾಗಿದೆ. ಹಾಗಾದರೆ ಯಾವ ದಿಕ್ಕಿನಲ್ಲಿ ಕಾಲುಗಳನ್ನು ಹಾಗೂ ಯಾವ ದಿಕ್ಕಿನಲ್ಲಿ ತಲೆ ಮಾಡಿ ಮಲಗಬೇಕು ತಿಳಿಯೋಣ.

ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಸರಿಯಾದ ಪದ್ಧತಿ (Right Sleeping Direction As Per Vastu)
1. ವಾಸ್ತು ಪ್ರಕಾರ, ಎಂದಿಗೂ ಉತ್ತರ ಅಥವಾ ಪಶ್ಚಿಮ ದಿಕ್ಕಿನ ಕಡೆಗೆ ತಲೆ ಮಾಡಿ ಮಲಗಬೇಡಿ. ಈ ರೀತಿ ಮಲಗುವ ನಕಾರಾತ್ಮಕ ಶಕ್ತಿ ಸಂಚಾರಕ್ಕೆ ಕಾರಣ ಹಾಗೂ  ಒತ್ತಡವೂ ಹೆಚ್ಚುತ್ತದೆ. ವಾಸ್ತು ಪ್ರಕಾರ, ಒಬ್ಬರು ಯಾವಾಗಲೂ ದಕ್ಷಿಣ ಅಥವಾ ಪೂರ್ವ ದಿಕ್ಕಿನ ಕಡೆಗೆ ತಲೆ ಮಾಡಿ ಮಲಗಬೇಕು.

2. ವಾಸ್ತು ಪ್ರಕಾರ, ಮದುವೆಗೆ ಅರ್ಹರಾದ ಹುಡುಗ-ಹುಡುಗಿಯರು, ಅವರು ಉತ್ತರದ ಕಡೆಗೆ ಕಾಲು ಹಾಕಿ ಮಲಗಬೇಕು. ಹೀಗೆ ಮಾಡುವುದರಿಂದ ಶೀಘ್ರದಲ್ಲಿಯೇ ಕಂಕಣ ಬಲ ಕೂಡಿ ಬರುತ್ತದೆ.

3. ವಾಸ್ತು ಶಾಸ್ತ್ರದಲ್ಲಿ ಎಂದಿಗೂ ಮದುವೆಯಾಗದ ಮಹಿಳೆಯರು ಮನೆಯ ವಾಯುವ್ಯ ಕೋನದಲ್ಲಿ ಮಲಗಬಾರದು ಎಂದು ಹೇಳಲಾಗಿದೆ. ಈ ರೀತಿ ಮಾಡುವುದರಿಂದ ಅವರ ಮನದಲ್ಲಿ ಪ್ರತ್ಯೇಕ ಮನೆ ಮಾಡಿ ವಾಸಿಸುವ ಯೋಚನೆಗಳು ತುಂಬಿಕೊಳ್ಳುತ್ತವೆ.

ಇದನ್ನು ಓದಿ- Flat ಖರೀದಿಸಬೇಕೆ? ಮೊದಲು ಈ ಸಂಗತಿಗಳನ್ನು ಗಮನದಲ್ಲಿಟ್ಟು ವಿಚಾರಿಸಿಕೊಳ್ಳಿ

4. ವಾಸ್ತು ಪ್ರಕಾರ, ಮನೆಯ ಹಿರಿಯರು ಪಶ್ಚಿಮ ದಿಕ್ಕಿನೆಡೆಗೆ  ಕಾಲು ಚಾಚಿ ಮಲಗಬೇಕು. ಪಶ್ಚಿಮ ದಿಕ್ಕಿನಲ್ಲಿ ಕಾಲು ಚಾಚಿ ಮಲಗುವುದರಿಂದ ಅವರ ಆರೋಗ್ಯ ಸ್ಥಿತಿ ಚೆನ್ನಾಗಿರುತ್ತದೆ.

5. ವಾಸ್ತುಶಾಸ್ತ್ರದ  (Vastu Shastra)  ಪ್ರಕಾರ ಮನೆಯ ಮಲಗುವ ಕೋಣೆ ಅಥವಾ ಜಾಗದಲ್ಲಿ ಅಪ್ಪಿ-ತಪ್ಪಿಯೂ ಕೂಡ ಪ್ಲಾಸ್ಟಿಕ್ ಹೂವು ಅಥವಾ ಸಸ್ಯಗಳನ್ನು ಇಡಬಾರದು. ಇದರಿಂದ ಮನೆಯಲ್ಲಿ ಆರ್ಥಿಕ ಮುಗ್ಗಟ್ಟು ಉದ್ಭವಿಸುತ್ತದೆ.

ಇದನ್ನು ಓದಿ- Vastu Shastraದ ನಿಯಮಗಳ ಅನುಸಾರ Kitchen ನಿರ್ಮಿಸಿ, ಕೌಟುಂಬಿಕ ಆರೋಗ್ಯ ಸೌಖ್ಯ ನಿಮ್ಮದಾಗಿಸಿಕೊಳ್ಳಿ

6.ನಿತ್ಯ ಬೆಳಗ್ಗೆ-ಸಂಜೆ ಹೊತ್ತು ಮನೆಯ ಎಲ್ಲ ಕೋಣೆಗಳಲ್ಲಿ  ಕರ್ಪೂರ ಉರಿಸಬೇಕು. ಇದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ತೊಲಗುತ್ತದೆ.

Trending News