Vastu Tips: ಮನೆಯ ಈ ದಿಕ್ಕಿನ ಗೋಡೆಯ ಮೇಲೆ ಅಪ್ಪಿತಪ್ಪಿಯೂ ಕೂಡ ಗಡಿಯಾರ ಹಾಕಬೇಡಿ, ಇಲ್ದಿದ್ರೆ ಪ್ರಗತಿ ನಿಂತುಹೋಗುತ್ತದೆ
Vastu Tips For Clock: ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ಸಂಗತಿಗಳಿಗೆ ಕೆಲ ನಿಯಮಗಳನ್ನು ಹೇಳಲಾಗಿದೆ. ಯಾವುದೇ ವಸ್ತುವನ್ನು ಸರಿಯಾದ ಜಾಗ ಮತ್ತು ದಿಕ್ಕಿನಲ್ಲಿ ಇಡುವುದು ಯಾವಾಗಲು ಮಂಗಳಕರ ಎನ್ನಲಾಗಿದೆ. ಹೀಗಾಗಿ ಇಂದು ನಾವು ನಿಮಗೆ ಗೋಡೆಯ ಮೇಲಿನ ಗಡಿಯಾರದ ಬಗ್ಗೆ ಮಾಹಿತಿಯನ್ನು ನೀಡಲಿದ್ದೇವೆ.
Vastu For Wall Clock: ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿನ ಎಲ್ಲಾ ವಸ್ತುಗಳನ್ನು ಇಡಲು ಮತ್ತು ಅನ್ವಯಿಸಲು ಕೆಲವು ನಿಯಮಗಳು ಮತ್ತು ನಿಬಂಧನೆಗಳಿವೆ. ಈ ನೀತಿನಿಯಮಗಳನ್ನು ಗಮನದಲ್ಲಿಟ್ಟುಕೊಂಡು ವಸ್ತುಗಳನ್ನು ಇರಿಸಿದರೆ, ಅವು ಮಂಗಳಕರ ಫಲ ನೀಡುತ್ತವೆ. ಎಲ್ಲವನ್ನೂ ಸರಿಯಾದ ದಿಕ್ಕಿನಲ್ಲಿ ಇರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕತೆಯ ಸಂಚಾರ ಉಂಟಾಗುತ್ತದೆ. ಹೀಗಾಗಿ ಇಂದು ನಾವು ಮನೆಯ ಗೋಡೆ ಮೇಲಿರುವ ಗಡಿಯಾರದ ಬಗ್ಗೆ ಕೆಲ ವಾಸ್ತು ನಿಯಮಗಳನ್ನು ತಿಳಿದುಕೊಳ್ಳೋಣ.
ಮನೆಯ ಗೋಡೆಯ ಮೇಲಿರುವ ಗಡಿಯಾರ ಕೇವಲ ಸಮಯವನ್ನು ಮಾತ್ರ ಹೇಳದೆ ಅನೇಕ ಶುಭ ಮತ್ತು ಅಶುಭ ಸಂಕೇತಗಳನ್ನು ಸಹ ನೀಡುತ್ತದೆ. ವಾಸ್ತು ನಿಯಮಗಳ ಪ್ರಕಾರ, ಗಡಿಯಾರವನ್ನು ತಪ್ಪಾಗಿ ಬಳಸಿದರೆ, ಅದು ಹಾನಿಗೆ ಕಾರಣವಾಗುತ್ತದೆ. ಗಡಿಯಾರವು ನಮ್ಜೀಮ ವನದ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿನ ನಿಂತುಹೋದ ಗಡಿಯಾರ ನಕಾರಾತ್ಮಕತೆ ಪಸರಿಸುತ್ತದೆ. ಅಷ್ಟೇ ಅಲ್ಲ ಮನೆಯೂ ಕೂಡ ಗಡಿಯಾರದಂತೆ ನಿರ್ಜೀವವಾಗುತ್ತದೆ. ಗಡಿಯಾರದ ಬಗೆಗಿನ ವಾಸ್ತು ಶಾಸ್ತ್ರದ ನಿಯಮಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ವಾಸ್ತುಶಾಸ್ತ್ರದಲ್ಲಿನ ಗಡಿಯಾರದ ಕುರಿತು ನಿಯಮಗಳು ಇಂತಿವೆ
ನಿಂತುಹೋದ ಗಡಿಯಾರವು ಅಶುಭ ಚಿಹ್ನೆಗಳನ್ನು ನೀಡುತ್ತದೆ
ವಾಸ್ತು ತಜ್ಞರ ಪ್ರಕಾರ, ನಿಂತುಹೋದ ಗಡಿಯಾರವು ಅಶುಭ ಸೂಚಕವಾಗಿದೆ. ಗಡಿಯಾರ ನಿಂತುಹೋದ ಮನೆಯಲ್ಲಿ ರೋಗಗಳು ಬರಲಾರಂಭಿಸುತ್ತವೆ. ಹಣದ ಕೊರತೆ ಎದುರಾಗುತ್ತದೆ. ಇದರೊಂದಿಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಸಂಚಾರ ಹೆಚ್ಚಾಗುತ್ತದೆ. ಆದ್ದರಿಂದ, ಮನೆಯಲ್ಲಿ ನಿಂತುಹೋದ ಗಡಿಯಾರವನ್ನು ಎಂದಿಗೂ ಇಡಬೇಡಿ. ಗಡಿಯಾರಕ್ಕೆ ಸಂಬಂಧಿಸಿದ ಕೆಲವು ವಿಶೇಷ ವಿಷಯಗಳ ಬಗ್ಗೆ ಕಾಳಜಿ ವಹಿಸಿದರೆ, ನಿಮ್ಮ ಕೆಟ್ಟ ಸಮಯ ಸಹ ಒಳ್ಳೆಯದಾಗಲು ಕಾಲ ಬೇಕಾಗುವುದಿಲ್ಲ.
ಗಡಿಯಾರವನ್ನು ದಕ್ಷಿಣ ದಿಕ್ಕಿನಲ್ಲಿ ಇಡಬೇಡಿ
ವಾಸ್ತು ಶಾಸ್ತ್ರ ಪ್ರಕಾರ ಮನೆಯ ದಕ್ಷಿಣ ದಿಕ್ಕು ನಿಶ್ಚಲತೆಯ ದಿಕ್ಕು. ಈ ದಿಕ್ಕಿನಲ್ಲಿ ಗಡಿಯಾರವನ್ನು ಹಾಕುವುದರಿಂದ ನಿಮ್ಮ ಪ್ರಗತಿ ಕುಂಠಿತಗೊಳ್ಳುತ್ತದೆ. ಇದರೊಂದಿಗೆ ಈ ದಿಕ್ಕಿಗೆ ಗಡಿಯಾರ ಹಾಕುವುದರಿಂದ ಮನೆಯ ಯಜಮಾನನ ಆರೋಗ್ಯ ಹದಗೆಡುತ್ತದೆ ಎಂಬ ನಂಬಿಕೆಯೂ ಇದೆ. ಇದಲ್ಲದೆ ಮನೆಯಲ್ಲಿ ದುಂದುವೆಚ್ಚವೂ ಹೆಚ್ಚಾಗತೊಡಗುತ್ತದೆ. ಇದರಿಂದ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗತೊಡಗುತ್ತವೆ ಮತ್ತು ನಕಾರಾತ್ಮಕ ವಾತಾವರಣ ನಿರ್ಮಾಣವಾಗುತ್ತದೆ. ಮನೆಯ ದಕ್ಷಿಣ ದಿಕ್ಕನ್ನು ಯಮನ ದಿಕ್ಕು ಎಂದು ಕರೆಯುತ್ತಾರೆ, ಆದ್ದರಿಂದ ಈ ದಿಕ್ಕಿನಲ್ಲಿ ಗಡಿಯಾರ ಇಡುವುದರಿಂದ ಕುಟುಂಬದ ಸದಸ್ಯರ ಪ್ರಗತಿ ನಿಂತುಹೋಗುತ್ತದೆ.
ಬಾಗಿಲಿಗೆ ಗಡಿಯಾರವನ್ನು ತೂಗುಹಾಕಬೇಡಿ
ಒಬ್ಬ ವ್ಯಕ್ತಿಯು ಮನೆಯ ಬಾಗಿಲಿನ ಮೇಲೆ ಗಡಿಯಾರವನ್ನು ಹಾಕಿದರೆ, ಅವನ ಒತ್ತಡ ಹೆಚ್ಚಾಗುತ್ತದೆ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಈ ಕಾರಣದಿಂದಾಗಿ, ಅವನು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಇದೇ ವೇಳೆ ಜನರು ಮನೆಯನ್ನು ಪ್ರವೇಶಿಸುತ್ತದೆ ಅವರ ದೃಷ್ಟಿ ಗಡಿಯಾರದ ಮೇಲೆ ಬೀಳುವ ಹಾಗಿರಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗಿದೆ.
ಇದನ್ನೂ ಓದಿ-Akshaya Tritiya 2022: ಇತಿಹಾಸ, ಪೂಜಾ ವಿಧಾನ, ಚಿನ್ನ ಖರೀದಿಸುವ ಸಮಯದ ಸಂಪೂರ್ಣ ಮಾಹಿತಿ ಇಲ್ಲಿದೆ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.