Vastu Tips : ದಾರಿಯಲ್ಲಿ ಹಣ ಸಿಕ್ಕಿದರೆ ಶುಭ ಫಲಾನಾ ? ಅಶುಭಾನಾ ?
ದಾರಿಯಲ್ಲಿ ನಾಣ್ಯ ಸಿಕ್ಕಿದರೆ ಅದು ಆಧ್ಯಾತ್ಮಿಕತೆಗೆ ಸಂಬಂಧಪಟ್ಟ ವಿಚಾರವಾಗಿದೆ. ವಾಸ್ತು ಶಾಸ್ತ್ರದ ಪ್ರಕಾರ, ನಿಮಗೆ ರಸ್ತೆಯಲ್ಲಿ ಹಣ ಸಿಕ್ಕಿತು ಎಂದರೆ ಅದರ ಅರ್ಥ ನಿಮ್ಮ ಪೂರ್ವಜರ ಆಶೀರ್ವಾದ ನಿಮ್ಮೊಂದಿಗೆ ಇದೆ ಎಂದು.
ನವದೆಹಲಿ : ದಾರಿಯಲ್ಲಿ ಹೋಗುತ್ತಿದ್ದಾಗ ನಿಮಗೂ ಹಣ (Money) ಸಿಕ್ಕಿರಬಹುದು. ಅದು ನಾಣ್ಯ ಆದರೂ ಸರಿ, ನೋಟ್ ಆದರೂ ಸರಿ. ಆದರೆ ಹೀಗೆ ಹಣ ಸಿಕ್ಕಾಗ ಅದನ್ನ ಏನು ಮಾಡ್ಬೇಕು ಎನ್ನುವ ಬಗ್ಗೆ ಗೊಂದಲ ನಿಮಗೂ ಇರಬಹುದು. ಕೆಲವರು ಸಿಕ್ಕ ಹಣವನ್ನ ಹಾಗೆ ಎತ್ತಿಕೊಂಡು ತಮ್ಮ ಜೇಬಿನಲ್ಲಿಟ್ಟುಕೊಂಡರೆ, ಮತ್ತೆ ಕೆಲವರು ಅದನ್ನು ನಿರ್ಗತಿಕರಿಗೆ ದಾನ ಮಾಡುತ್ತಾರೆ. ಇನ್ನು ಕೆಲವರು ದೇವಸ್ಥಾನದ (Temple) ಹುಂಡಿಗೆ ಹಾಕಿಬಿಡುತ್ತಾರೆ. ಆದರೆ ದಾರಿಯಲ್ಲಿ ಹಣ ಸಿಗುವುದು ಶುಭಾನ ಅಶುಭಾನಾ ಅನ್ನೋದನ್ನ ತಿಳಿಯಿರಿ ..
ದಾರಿಯಲ್ಲಿ ಹಣ ಸಿಕ್ಕಿದರೆ ಅದು ಅದೃಷ್ಟದ ಸಂಕೇತ :
ದಾರಿಯಲ್ಲಿ ನಾಣ್ಯ ಸಿಕ್ಕಿದರೆ ಅದು ಆಧ್ಯಾತ್ಮಿಕತೆಗೆ ಸಂಬಂಧಪಟ್ಟ ವಿಚಾರವಾಗಿದೆ. ವಾಸ್ತು ಶಾಸ್ತ್ರದ (Vastu Tips) ಪ್ರಕಾರ, ನಿಮಗೆ ರಸ್ತೆಯಲ್ಲಿ ಹಣ ಸಿಕ್ಕಿತು ಎಂದರೆ ಅದರ ಅರ್ಥ ನಿಮ್ಮ ಪೂರ್ವಜರ ಆಶೀರ್ವಾದ ನಿಮ್ಮೊಂದಿಗೆ ಇದೆ ಎಂದು. ಹೀಗಾಗಿ ನೀವು ಪೂರ್ಣ ಶ್ರಮದಿಂದ ಯಾವುದೇ ಕೆಲಸ ಮಾಡಿದರೂ, ಅದರಲ್ಲಿ ಯಶಸ್ಸು ಪಡೆಯುತ್ತೀರಿ ಮತ್ತು ಪ್ರಗತಿ ಸಿಗುತ್ತದೆ. ನಮ್ಮಲ್ಲಿ ಸಂಪತ್ತನ್ನು ಲಕ್ಷ್ಮಿ ದೇವಿಗೆ (Godess Laxmi) ಹೋಲಿಸಲಾಗುತ್ತದೆ. ಹಾಗಾಗಿ ದಾರಿಯಲ್ಲಿ ಹಣ ಸಿಕ್ಕಿದರೆ ಲಕ್ಷ್ಮಿಯ ಸಂಪೂರ್ಣ ಕೃಪೆ ಸಿಕ್ಕಿದಂತೆ.
ಇದನ್ನೂ ಓದಿ : Holi 2021 Skin Care Tips: ಈ ರೀತಿ ಬಣ್ಣಗಳಿಂದ ನಿಮ್ಮ ಚರ್ಮವನ್ನು ರಕ್ಷಿಸಿ
ದಾರಿಯಲ್ಲಿ ಸಿಕ್ಕಿದ ಹಣವನ್ನು ನಿಮ್ಮಲ್ಲಿಯೇ ಇಟ್ಟು ಕೊಳ್ಳಿ, ಖರ್ಚು ಮಾಡಬೇಡಿ :
ಎಷ್ಟೋ ಬಾರಿ ರಸ್ತೆಯ ಮೇಲೆ ಹಣ ಸಿಕ್ಕಿತು ಎಂದರೆ ನಮ್ಮ ಜೀವನದ ಹೊಸ ಆರಂಭದ (New start) ಸಂಕೇತವಾಗಿರಬಹುದು. ಹೊಸ ಯೋಜನೆ, ಹೊಸ ವ್ಯವಹಾರ ಅಥವಾ ಹೊಸ ಉದ್ಯೋಗವನ್ನು (Job) ಹುಡುಕುತ್ತಿದ್ದರೆ, ನಿಮ್ಮ ಕೆಲಸ ಕೈ ಗೂಡುವ ಸಂಕೇತವನ್ನು ಈ ಹಣ ನೀಡಬಹುದು.
- ದಾರಿಯಲ್ಲಿ ನಿಮಗೆ ಹಣ ಸಿಕ್ಕಿದರೆ, ಅದು ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗುವ ಸಂಕೇತವಾಗಿದೆ.
- ನೀವು ಕೆಲಸದಿಂದ ಮನೆಗೆ ಹಿಂದಿರುಗುವಾಗ ದಾರಿಯಲ್ಲಿ ಹಣ ಸಿಕ್ಕಿದರೆ ಹಣಕಾಸಿನ ಪ್ರಯೋಜನ ಸಿಗಲಿದೆ ಎಂದರ್ಥ.
- ರಸ್ತೆಯಲ್ಲಿ ಸಿಕ್ಕಿದ ಹಣವನ್ನು ದೇವಸ್ಥಾನದ ಹುಂಡಿಗೆ ಹಾಕುವುದು ಅಥವಾ ದಾನ ಮಾಡುವುದು ಮಾಡುವ ಬದಲು ಅದನ್ನು ನಿಮ್ಮ ಪರ್ಸ್‌ನಲ್ಲಿ (wallet) ಇಟ್ಟುಕೊಳ್ಳಿ . ಈ ರೀತಿ ಸಿಕ್ಕ ಹಣವನ್ನು ನಿಮ್ಮಲ್ಲೇ ಇರಿಸಿಕೊಳ್ಳಬೇಕು ಅದನ್ನು ಖರ್ಚು ಮಾಡಬಾರದು.
ಇದನ್ನೂ ಓದಿ : Holi 2021: ಹೋಳಿ ದಹನದಲ್ಲಿ ಈ ಮರಗಳನ್ನು ಬಳಸುವುದು ಅಶುಭವೆಂದು ತಿಳಿದಿದೆಯೇ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.