Holi 2021: ಹೋಳಿ ದಹನದಲ್ಲಿ ಈ ಮರಗಳನ್ನು ಬಳಸುವುದು ಅಶುಭವೆಂದು ತಿಳಿದಿದೆಯೇ

ಹೋಳಿ ದಹನದಲ್ಲಿ ಯಾವ ಮರಗಳನ್ನು ಬಳಸಬಾರದು ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

Written by - Yashaswini V | Last Updated : Mar 24, 2021, 01:40 PM IST
  • ಹೋಳಿ ದಹನ ಅಥವಾ ಕಾಮ ದಹನ ಒಂದು ಸಾಂಪ್ರದಾಯಿಕ ಆಚರಣೆ
  • ಇದನ್ನು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವೆಂದೂ ಬಣ್ಣಿಸಲಾಗುತ್ತದೆ
  • ಆದರೆ ಈ ದಹನದ ಸಂದರ್ಭದಲ್ಲಿ ಕೆಲವು ಮರಗಳನ್ನು ದಹನ ಮಾಡಬಾರದು ಎಂದು ಹೇಳಲಾಗುತ್ತದೆ
Holi 2021: ಹೋಳಿ ದಹನದಲ್ಲಿ ಈ ಮರಗಳನ್ನು ಬಳಸುವುದು ಅಶುಭವೆಂದು ತಿಳಿದಿದೆಯೇ title=
Holi Dahan

ಬೆಂಗಳೂರು: ಚಿಕ್ಕವರಿಂದ ದೊಡ್ದವರವರೆಗೂ ಎಲ್ಲರೂ ಇಷ್ಟಪಡುವ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬ ಎಂದರೆ ಹೋಳಿ ಹಬ್ಬ. ಈ ವರ್ಷ 29 ಮಾರ್ಚ್ 2021ರಂದು ಹೋಳಿ ಹಬ್ಬವನ್ನು ಆಚರಿಸಲಾಗುತ್ತಿದೆ. ಹೋಳಿ ಹಬ್ಬದ ಆಚರಣೆಗೂ ಒಂದು ದಿನ ಮೊದಲು ಎಂದರೆ ಮಾರ್ಚ್ 28ರಂದು ಪೂಜೆ ಸಲ್ಲಿಸಿ ಹೋಳಿ ದಹನವನ್ನು ಆಚರಿಸಲಾಗುವುದು. ಉತ್ತರ ಭಾರತದ ಕಡೆ ಇದನ್ನು ಹೋಳಿ ದಹನ ಎಂದರೆ ದಕ್ಷಿಣ ಭಾರತದ ಕಡೆ ಇದನ್ನು ಕಾಮದಹನ ಎಂದು ಕರೆಯಲಾಗುತ್ತದೆ. ಇದನ್ನು ಕೆಟ್ಟದ್ದರ ವಿರುದ್ಧ ಒಳ್ಳೆಯದರ ವಿಜಯದ ಸಂಕೇತವೆಂದೂ ಬಣ್ಣಿಸಲಾಗುತ್ತದೆ.

ಹೋಳಿ (Holi) ದಹನ ಅಥವಾ ಕಾಮ ದಹನ ಒಂದು ಸಾಂಪ್ರದಾಯಿಕ ಆಚರಣೆ. ಆದರೆ ಈ ದಹನದ ಸಂದರ್ಭದಲ್ಲಿ ಕೆಲವು ಮರಗಳನ್ನು ದಹನ ಮಾಡಬಾರದು ಎಂದು ಹೇಳಲಾಗುತ್ತದೆ. ಹಾಗಾಗಿ ಕಾಮ ದಹನದಲ್ಲಿ ಯಾವ ಮರಗಳನ್ನು ಬಳಸಬಾರದು. ಯಾವ ಮರಗಳ ಬಳಕೆಯನ್ನು ಅಶುಭ ಎಂದು ಪರಿಗಣಿಸಲಾಗುತ್ತದೆ ಎಂಬುದನ್ನು ತಿಳಿಯುವುದು ಬಹಳ ಮುಖ್ಯ.

ಇದನ್ನೂ ಓದಿ - Holi 2021: ಈ ವರ್ಷ ಹೋಳಿಗೆ ನೈಸರ್ಗಿಕ ಬಣ್ಣಗಳನ್ನು ನಿಮ್ಮ ಮನೆಯಲ್ಲಿಯೇ ತಯಾರಿಸಿ

ಧರ್ಮಗ್ರಂಥಗಳ ಪ್ರಕಾರ, ರಾಹು-ಕೇತುಗಳಿಗೆ ಸಂಬಂಧಿಸಿದ ಕೆಲವು ಮರಗಳನ್ನು ದುಷ್ಟತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ಹೋಳಿ ದಹನಕ್ಕೆ (Holi Dahan) ಯಾವ ಮರಗಳನ್ನು ಬಳಸಬೇಕು, ಯಾವ ಮರಗಳನ್ನು ಬಳಸಬಾರದು  ಎಂದು ತಿಳಿಯೋಣ...

- ಹೋಳಿ ದಹನದಲ್ಲಿ ಈಚಲ ಮರ, ಬೇವಿನ ಮರ, ಹತ್ತಿ ಮರವನ್ನು ಬಳಸಬೇಕು. ಇದರೊಂದಿಗೆ ಬೆರಣಿಯನ್ನು  ಬಳಸಲಾಗುತ್ತದೆ. 

ಇದನ್ನೂ ಓದಿ - ಕೊರೊನಾವೈರಸ್ ಪ್ರಕರಣ ಹೆಚ್ಚಳ ಹಿನ್ನಲೆಯಲ್ಲಿ ಹೋಳಿ, ನವರಾತ್ರಿಗೆ ನಿಷೇಧ ಹೇರಿದ ದೆಹಲಿ ಸರ್ಕಾರ

- ಈ ಋತುವಿನಲ್ಲಿ ಹತ್ತಿ ಮರದ ಎಲೆಗಳು ಬೀಳಲು ಪ್ರಾರಂಭಿಸುತ್ತವೆ, ಈ ರೀತಿಯಲ್ಲಿ ಅವುಗಳನ್ನು ಸುಡದಿದ್ದರೆ, ಅದರಿಂದ ಹುಳುಗಳು  ಪ್ರಾರಂಭಿಸುತ್ತವೆ. ಹಾಗಾಗಿಯೇ ಈ ಮರವನ್ನು ದಹನದಲ್ಲಿ ಬಳಸಬೇಕು ಎಂದೂ ಹೇಳಲಾಗುತ್ತದೆ. 

- ಹತ್ತಿ ಮರದ ವಿಶೇಷತೆಯೆಂದರೆ ಅದನ್ನು ಸುಡುವುದರಿಂದ ಸೊಳ್ಳೆಗಳನ್ನು ನಾಶ ಮಾಡುವುದರ ಜೊತೆಗೆ ಗಾಳಿ ಶುದ್ಧೀಕರಿಸುತ್ತದೆ, ಬ್ಯಾಕ್ಟೀರಿಯಾಗಳು ಹೊರಹಾಕಲ್ಪಡುತ್ತವೆ. 

- ನೆನಪಿಡಬೇಕಾದ ಅಂಶವೆಂದರೆ ಈ ಕಟ್ಟಿಗೆಗಳನ್ನು ದಹಿಸಲು ಹಸುವಿನ ಬೆರಣಿಯನ್ನು ಬಳಸಬೇಕು. 

- ಹೋಳಿ ದಹನ ಅಥವಾ ಕಾಮದಹನದಲ್ಲಿ ಅಪ್ಪಿತಪ್ಪಿಯೂ ಅಶ್ವತ್ಥ ಮರ ಮತ್ತು ಮಾವಿನ ಮರವನ್ನು ಸುಡಬಾರದು. ಹಾಗೆ ಮಾಡುವುದನ್ನು ಅಶುಭವೆಂದು ಪರಿಗಣಿಸಲಾಗಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News