Vastu Tips: ಸಾಯಂಕಾಲ ಯಾವುದೇ ಕಾರಣಕ್ಕೂ ಈ ಕೆಲಸಗಳನ್ನು ಮಾಡಬೇಡಿ!
ವಾಸ್ತು ಶಾಸ್ತ್ರ, ಧರ್ಮ ಮತ್ತು ಜ್ಯೋತಿಷ್ಯದಲ್ಲಿ ಸಂಜೆ ವೇಳೆ ಏನು ಮಾಡಬೇಕು ಅಥವಾ ಏನು ಮಾಡಬಾರದು ಎನ್ನುವುದರ ಬಗ್ಗೆ ಅನೇಕ ವಿಷಯಗಳನ್ನು ಉಲ್ಲೇಖಿಸಲಾಗಿದೆ. ಇದನ್ನು ಅನುಸರಿಸದಿದ್ದರೆ ಜೀವನವು ಕಷ್ಟಗಳಿಂದ ಸುತ್ತುವರಿಯಲಿದೆ.
ನವದೆಹಲಿ: ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವು ತುಂಬಾ ವಿಶೇಷವಾಗಿದೆ. ಆದ್ದರಿಂದ ಈ ವೇಳೆ ಕೆಲವು ಪ್ರಮುಖ ಕೆಲಸ ಮಾಡದಂತೆ ಸಲಹೆ ನೀಡಲಾಗಿದೆ. ಹಿಂದೂ ಧರ್ಮ, ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದಲ್ಲಿ ಬೆಳಗ್ಗೆ ಮತ್ತು ಸಂಜೆ ಸಮಯದ ಬಗ್ಗೆ ಕೆಲ ನಿಯಮಗಳ ಬಗ್ಗೆ ಉಲ್ಲೇಖಿಸಲಾಗಿದೆ. ಈ ನಿಯಮಗಳು ಬೆಳಗ್ಗೆ ಮತ್ತು ಸಂಜೆ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳ ಕುರಿತಾಗಿವೆ.
ಸಾಯಂಕಾಲದಲ್ಲಿ ಮಾಡಲು ನಿಷಿದ್ಧವೆಂದು ಹೇಳಲಾಗುವ ಇಂತಹ ವಿಷಯಗಳ ಬಗ್ಗೆ ಇಂದು ನಾವು ನಿಮಗೆ ತಿಳಿಸಲಿದ್ದೇವೆ. ಈ ಕೆಲಸಗಳನ್ನು ಸಂಜೆ ವೇಳೆ ಮಾಡಿದರೆ ಅನೇಕ ತೊಂದರೆಗಳು ಎದುರಾಗುತ್ತವೆ. ಇದನ್ನು ಪಾಲಿಸದ ಯಾವುದೇ ವ್ಯಕ್ತಿ ದರಿದ್ರನಾಗುತ್ತಾನೆ. ಅಲ್ಲದೆ ಪಾಪದಲ್ಲಿ ಪಾಲುಗಾರನಾಗಿ ಗೌರವ ಕಳೆದುಕೊಳ್ಳುತ್ತಾನೆಂದು ಹೇಳಲಾಗಿದೆ.
ಇದನ್ನೂ ಓದಿ: Zodiac Matches: ಈ ರಾಶಿಯ ಜನರು ಲೈಫ್ ಲಾಂಗ್ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ
ಯಾವುದೇ ಕಾರಣಕ್ಕೂ ಸಂಜೆ ಈ ಕೆಲಸ ಮಾಡಬೇಡಿ
ಸೂರ್ಯಾಸ್ತದ ಸಮಯದಲ್ಲಿ ಕೆಲವು ಕೆಲಸಗಳನ್ನು ಮಾಡಲು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಆದ್ದರಿಂದ ಈ ಕೆಲಸಗಳನ್ನು ಆದಷ್ಟು ತಪ್ಪಿಸಬೇಕು.
ಸೂರ್ಯಾಸ್ತದ ಸಮಯದಲ್ಲಿ ಯಾರೂ ಮಲಗಬಾರದು. ನೀವು ಅನಾರೋಗ್ಯ ಅಥವಾ ವಯಸ್ಸಾದವರಾಗಿದ್ದರೆ ಇದರಿಂದ ವಿನಾಯಿತಿ ತೆಗೆದುಕೊಳ್ಳಬಹುದು. ಇಲ್ಲದಿದ್ದರೆ ಆರೋಗ್ಯವಂತ ಜನರು ಸಂಜೆ ಮಲಗಬಾರದು. ಇದನ್ನು ಮಾಡುವುದರಿಂದ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.
ಸೂರ್ಯಾಸ್ತದ ಸಮಯದಲ್ಲಿ ಆಹಾರ ಸೇವಿಸಬಾರದು. ಹೀಗೆ ಮಾಡುವುದರಿಂದ ಮುಂದಿನ ಜನ್ಮದಲ್ಲಿ ಪ್ರಾಣಿಯಾಗಿ ಹುಟ್ಟುತ್ತಾರಂತೆ.
ಸಂಜೆ ಯಾರಿಗೂ ಹಾಲು, ಮೊಸರು, ಉಪ್ಪನ್ನು ದಾನ ಮಾಡಬಾರದಂತೆ. ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿರುವ ಲಕ್ಷ್ಮಿ ದೂರವಾಗುತ್ತಾಳಂತೆ.
ಸಂಜೆ ವೇಳೆ ಯಾರಿಗೂ ಸಾಲ ನೀಡಬಾರದಂತೆ. ಒಂದು ವೇಳೆ ಈ ಸಮಯದಲ್ಲಿ ಸಾಲ ಕೊಟ್ಟರೆ ತಾಯಿ ಲಕ್ಷ್ಮಿದೇವಿ ಕೋಪಗೊಳ್ಳುತ್ತಾಳಂತೆ.
ಸಂಜೆ ಅಧ್ಯಯನ ಮಾಡುವ ಬದಲು ಪ್ರಾರ್ಥನೆ ಮಾಡುವುದು ಉತ್ತಮ. ಹೀಗಾಗಿ ಈ ಸಮಯದಲ್ಲಿ ಮಂತ್ರ ಜಪ ಅಥವಾ ಆರತಿ ಮಾಡಲಾಗುತ್ತದೆ.
ಪತಿ-ಪತ್ನಿ ಸಂಧ್ಯಾಕಾಲದಲ್ಲಿ ಎಂದಿಗೂ ಸಂಬಂಧವನ್ನು ಹೊಂದಬಾರದು. ಗರುಡ ಪುರಾಣದ ಪ್ರಕಾರ ಹೀಗೆ ಮಾಡುವುದು ಸಂಸ್ಕಾರಹೀನವಂತೆ.
ಸಂಜೆ ಅಪ್ಪಿತಪ್ಪಿಯೂ ಗುಡಿಸುವುದು, ಒರೆಸುವುದು ಮಾಡಬಾರದು. ಹೀಗೆ ಮಾಡುವುದರಿಂದ ಹಣದ ನಷ್ಟ ಮತ್ತು ದುಂದುಗಾರಿಕೆ ಹೆಚ್ಚಾಗುತ್ತದಂತೆ.
ಇದನ್ನೂ ಓದಿ: ಈ ರಾಶಿಯವರು ತುಂಬಾ ತಮಾಷಿಗರು ಮತ್ತೆ ಅಷ್ಟೆ ಕೋಪಿಷ್ಟರು!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.