Vastu Shastra for Money : ಎಷ್ಟೇ ಪ್ರಯತ್ನ ಪಟ್ಟರೂ ಹಣದ ಸಮಸ್ಯೆ ನೀಗದಿರುವುದಕ್ಕೆ ಈ ತಪ್ಪುಗಳು ಕಾರಣವಾಗಿರಬಹುದು
Vastu Shastra for Money: ಹಣದ ಕೊರತೆ ಅನೇಕ ಜನರ ಜೀವನದಲ್ಲಿ ದೊಡ್ಡ ಸಮಸ್ಯೆಯಾಗಿದೆ. ಎಷ್ಟೋ ಸಲ ಸಾಕಷ್ಟು ಹಣ ಸಂಪಾದಿಸಿದರೂ ಹಣ ಸಾಕಾಗುವುದೇ ಇಲ್ಲ. ಹೀಗೆ ಯಾಕೆ ಆಗುತ್ತದೆ ಎನ್ನುವುದನ್ನು ವಾಸ್ತು ಶಾಸ್ತ್ರದಲ್ಲಿ ವಿವರಿಸಿ ಹೇಳಲಾಗಿದೆ. ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾದ ಈ ತಪ್ಪುಗಳನ್ನು ಸರಿ ಪಡಿಸಿದರೆ, ದುಡಿದ ಹಣವು ಕೈ ಸೇರುತ್ತದೆ. ಹಣದ ಉಳಿತಾಯವೂ ಸಾಧ್ಯವಾಗುತ್ತದೆ ಎನ್ನಲಾಗಿದೆ.
ಬೆಂಗಳೂರು : Vastu Shastra for Money : ಪ್ರತಿಯೊಬ್ಬರೂ ಜೀವನದಲ್ಲಿ ಆರಾಮವಾಗಿ ಇರಬೇಕು ಎಂದು ಬಯಸುತ್ತಾರೆ. ಜೀವನದಲ್ಲಿ ಸಾಕಷ್ಟು ಹಣ, ಸೌಕರ್ಯಗಳು, ಸಂತೋಷವನ್ನು ಪಡೆಯಲು ಪ್ರತಿಯೊಬ್ಬರೂ ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಾರೆ. ಆದರೆ ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ಹಣ ಉಳಿಸುವುದು ಸಾಧ್ಯವಾಗುವುದಿಲ್ಲ. ನೆಮ್ಮದಿಯ ಬದುಕು ಲಭಿಸುವುದೂ ಇಲ್ಲ. ವಾಸ್ತು ಶಾಸ್ತ್ರದಲ್ಲಿ ಬಡತನಕ್ಕೆ ಕಾರಣವಾಗುವ ಹಲವು ಅಂಶಗಳನ್ನು ಹೇಳಲಾಗಿದೆ. ಈ ತಪ್ಪುಗಳಿಂದಾಗಿ, ಆರ್ಥಿಕ ಸ್ಥಿತಿ, ಪ್ರಗತಿ, ಯಶಸ್ಸಿಗೆ ಅಡೆತಡೆ ಉಂಟಾಗಲಿದೆ ಎಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ.
ಈ ತಪ್ಪುಗಳು ಆರ್ಥಿಕ ಸ್ಥಿತಿಯ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ :
ದೇವರ ಕೋಣೆಯಲ್ಲಿ ದೇವರ ವಿಗ್ರಹಗಳನ್ನು ಮುಖಾಮುಖಿಯಾಗಿ ಇರಿಸುವುದು : ವಾಸ್ತು ಶಾಸ್ತ್ರದ ಪ್ರಕಾರ, ದೇವರ ಕೋಣೆಯಲ್ಲಿ ದೇವರ ವಿಗ್ರ ಅಥವಾ ಫೋಟೋಗಳನ್ನು ಎದುರು ಬದುರಾಗಿ ಇಡಬಾರದು. ಹೀಗೆ ದೇವರ ಫೋಟೋಗಳನ್ನು ಮುಖಾಮುಖಿಯಾಗಿರುವಂತೆ ಇಟ್ಟರ ಮನೆಯಲ್ಲಿ ಸಾಕಷ್ಟು ಅಪಶ್ರುತಿ ಉಂಟಾಗುತ್ತದೆ. ಅಲ್ಲದೆ ಬಹಳಷ್ಟು ಋಣಾತ್ಮಕತೆಯನ್ನು ತರುತ್ತದೆ.
ಇದನ್ನೂ ಓದಿ : Rahu Planet Transit 2022: ಪೂರ್ತಿ ಒಂದು ವರ್ಷದವರೆಗೆ ಈ ರಾಶಿಯವರ ಮೇಲಿರಲಿದೆ ರಾಹುವಿನ ಕೃಪೆ, ಎಲ್ಲಾ ಕೆಲಸಗಳಲ್ಲಿಯೂ ಸಿಗಲಿದೆ ಯಶಸ್ಸು
ಹಾಸಿಗೆಯ ಮೇಲೆ ಕುಳಿತು ಊಟ ಮಾಡುವುದು :
ವಾಸ್ತು ಶಾಸ್ತ್ರದಲ್ಲಿ ಹಾಸಿಗೆಯ ಮೇಲೆ ಕುಳಿತು ತಿನ್ನುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಹೀಗೆ ಮಾಡುವುದರಿಂದ ಜೀವನದಲ್ಲಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ನಾವು ಮಾಡುವ ಈ ತಪ್ಪು ಆರ್ಥಿಕ ಸ್ಥಿತಿ ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರತ್ತದೆ. ಇದರಿಂದ ಆರ್ಥಿಕ ನಷ್ಟ ಉಂಟಾಗುತ್ತದೆ. ಮಾತ್ರವಲ್ಲ ಸಾಲ ಕೂಡಾ ಜಾಸ್ತಿಯಾಗಲಿದೆ.
ರಾತ್ರಿ ವೇಳೆ ಅಡುಗೆ ಮನೆಯನ್ನು ಶುಚಿ ಮಾಡದೇ ಹಾಗೆಯೇ ಬಿಡುವುದು :
ಹಲವು ಮನೆಗಳಲ್ಲಿ ರಾತ್ರಿ ಊಟದ ನಂತರ ಅಡುಗೆ ಮನೆಯನ್ನು ಸ್ವಚ್ಛಗೊಳಿಸುವುದಿಲ್ಲ. ಅಡುಗೆ ಮನೆಯನ್ನು ಶುಚಿಗೊಳಿಸದೆ ಹಾಗೆಯೇ ಬಿಟ್ಟರೆ, ಲಕ್ಷ್ಮೀ ದೆವಿಯ ಅವಕೃಪೆಗೆ ಪಾತ್ರರಾಗಬೆಕಾಗುತ್ತದೆ. ಹಾಗಾಗಿ ರಾತ್ರಿ ಮಲಗುವ ಮುನ್ನ ಅಡುಗೆ ಮನೆಯನ್ನು ಶುಚಿಗೊಳಿ ಸುವುದನ್ನು ಮರೆಯಬೇಡಿ.
ಮುಖ್ಯ ಬಾಗಿಲಲ್ಲಿ ಕಸವನ್ನು ಇಡುವುದು:
ಉತ್ತಮ ಆರ್ಥಿಕ ಸ್ಥಿತಿಗೆ ಮನೆಯ ಮುಖ್ಯ ದ್ವಾರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಮನೆಯ ಮುಖ್ಯ ಬಾಗಿಲಲ್ಲಿ ಎಂದಿಗೂ ಕಸ ಅಥವಾ ಕಸದ ತೊಟ್ಟಿಯನ್ನು ಇಡಬೇಡಿ. . ಯಾವಾಗಲೂಮನೆಯ ಮುಖ್ಯ ದ್ವಾರವನ್ನು ಶುಚಿಯಾಗಿಡಿ. ಇನ್ನು ಮನೆಯ ಬಾಗಿಲು ಹಾಕುವಾಗ ಅಥವಾ ತೆರೆಯುವಾಗ ಶಬ್ದ ಬರದಂತೆ ನೋಡಿಕೊಳ್ಳಬೇಕು.
ಇದನ್ನೂ ಓದಿ : ಇಂದು ತಪ್ಪಾಗಿಯೂ ಈ 7 ಕೆಲಸಗಳನ್ನು ಮಾಡಬೇಡಿ, ದುರದೃಷ್ಟವು ಎಂದಿಗೂ ಬೆನ್ನು ಬಿಡುವುದಿಲ್ಲ!
ನೀರಿನ ತೊಟ್ಟಿಕ್ಕುವುದು :
ನೀರನ್ನು ಎಂದಿಗೂ ವ್ಯರ್ಥ ಮಾಡಬೇಡಿ. ಹಾಗೆಯೇ ಮನೆಯ ಯಾವುದೇ ನಲ್ಲಿಯೂ ತೊಟ್ಟಿಕ್ಕದಂತೆ ನೋಡಿಕೊಳ್ಳಿ. ನೀರು ವ್ಯರ್ಥವಾಗುವುದರಿಂದ ಧನಹಾನಿ, ಗೌರವಕ್ಕೆ ಧಕ್ಕೆಯಾಗುತ್ತದೆ.
ಮನೆಯಲ್ಲಿ ಇಡುವ ಖಾಲಿ ನೀರಿನ ಪಾತ್ರೆಗಳು:
ರಾತ್ರಿ ಸಮಯದಲ್ಲಿ ನೀರಿನ ಪಾತ್ರೆಗಳನ್ನು ಮನೆಯಲ್ಲಿ ಖಾಲಿ ಇಡಬಾರದು. ಅದು ಬಾತ್ ರೂಂನಲ್ಲಿ ಇಟ್ಟಿರುವ ಬಕೆಟ್ ಆಗಿರಲಿ ಅಥವಾ ಅಡುಗೆಮನೆಯಲ್ಲಿ ಇಟ್ಟಿರುವ ಕುಡಿಯುವ ನೀರಿನ ಪಾತ್ರೆಯೇ ಆಗಿರಲಿ. ನೀರ್ನ ಪಾತ್ರೆಗಳನ್ನು ಯಾವಾಗಲೂ ತುಂಬಿಟ್ಟುಕೊಳ್ಳಿ. ನೀರಿನ ಪಾತ್ರೆಗಳನ್ನು ಖಾಲಿ ಬಿಟ್ಟರೆ ಆರ್ಥಿಕ ಸಂಕಷ್ಟ ಎದುರಾಗುತ್ತದೆ ಎನ್ನುತ್ತದೆ ವಾಸ್ತು ಶಾಸ್ತ್ರ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.