ಶುಕ್ರವಾರದ ಉಪಾಯ: ಶುಕ್ರವಾರ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಆದ್ದರಿಂದ ಈ ದಿನವು ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಉತ್ತಮವಾಗಿದೆ. ಈ ದಿನ ಲಕ್ಷ್ಮಿ ದೇವಿಗೆ ಪ್ರಿಯವಾದಂತಹ ಕೆಲಸಗಳನ್ನು ಮಾಡಬೇಕು. ಅದೇ ಸಮಯದಲ್ಲಿ, ಲಕ್ಷ್ಮಿ ದೇವಿಗೆ ಕಿರಿಕಿರಿ ಉಂಟುಮಾಡುವ ವಿಷಯಗಳನ್ನು ತಪ್ಪಿಸಬೇಕು ಎಂದು ಹೇಳಲಾಗುತ್ತದೆ. ಶುಕ್ರವಾರದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ತೊಂದರೆಗಳು ಮತ್ತು ದುರದೃಷ್ಟವು ಬೆಂಬಿಡದೆ ಕಾಡುತ್ತದೆ ಎಂದು ಹೇಳಲಾಗುತ್ತದೆ. ಹಾಗಿದ್ದರೆ ಶುಕ್ರವಾರದಂದು ಅಪ್ಪಿತಪ್ಪಿಯೂ ಮಾಡಬಾರದ ಕೆಲಸಗಳ ಬಗ್ಗೆ ತಿಳಿಯೋಣ.
ಶುಕ್ರವಾರದಂದು ಈ ಕೆಲಸ ಮಾಡಬೇಡಿ:
ಶುಕ್ರವಾರ ಯಾರಿಗೂ ಸಾಲ ಕೊಡಬೇಡಿ ಅಥವಾ ತೆಗೆದುಕೊಳ್ಳಬೇಡಿ. ಶುಕ್ರವಾರದಂದು ಸಾಲ ವಹಿವಾಟು ಮಾಡುವುದರಿಂದ ಲಕ್ಷ್ಮಿ ದೇವಿಗೆ ಕೋಪ ಬರಬಹುದು. ಇದಲ್ಲದೇ ಈ ದಿನ ಕೊಟ್ಟ ಹಣ ವಾಪಸ್ ಬರುವುದಿಲ್ಲ, ಸಾಲ ಮಾಡಿದರೆ ತೀರಿಸಲು ತುಂಬಾ ಕಷ್ಟವಾಗುತ್ತದೆ ಎಂಬ ನಂಬಿಕೆ ಇದೆ.
ಶುಕ್ರವಾರದಂದು ಯಾರನ್ನೂ ಅವಮಾನಿಸಬೇಡಿ:
ಶುಕ್ರವಾರದಂದು ತಪ್ಪಾಗಿಯೂ ಯಾವುದೇ ಮಹಿಳೆ ಮತ್ತು ಕೈಲಾಗದವರನ್ನು ಅವಮಾನಿಸಬೇಡಿ. ಹೀಗೆ ಮಾಡುವುದರಿಂದ ನಿಮಗೆ ದೊಡ್ಡ ಆರ್ಥಿಕ ನಷ್ಟ ಉಂಟಾಗಬಹುದು.
ಇದನ್ನೂ ಓದಿ- ರಾತ್ರಿ ವೇಳೆ ಏಕೆ ಉಗುರು ಕತ್ತರಿಸಬಾರದು? ಅದರ ಹಿಂದಿನ ವೈಜ್ಞಾನಿಕ-ಧಾರ್ಮಿಕ ಕಾರಣಗಳಿವು
ಶುಕ್ರವಾರ ಯಾರಿಗೂ ಸಕ್ಕರೆ ಕೊಡಬೇಡ:
ಶುಕ್ರವಾರ ಯಾರಿಗೂ ಸಕ್ಕರೆ ಕೊಡಬೇಡಿ. ಈ ರೀತಿ ಮಾಡುವುದರಿಂದ ಜಾತಕದಲ್ಲಿ ಚಂದ್ರನು ದುರ್ಬಲನಾಗುತ್ತಾನೆ, ಇದರಿಂದ ಮಾನಸಿಕ ಒತ್ತಡ ಉಂಟಾಗುತ್ತದೆ. ಇದಲ್ಲದೆ, ಜೀವನದಲ್ಲಿ ಕಷ್ಟಗಳು ಮತ್ತು ದುಃಖಗಳು ಹೆಚ್ಚಾಗುತ್ತವೆ.
ಶುಕ್ರವಾರದಂದು ಮಾಂಸಾಹಾರ ಸೇವಿಸಬೇಡಿ:
ಶುಕ್ರವಾರದಂದು ಮಾಂಸಾಹಾರಿ-ಮದ್ಯ ಸೇವಿಸಬೇಡಿ. ನೀವು ಲಕ್ಷ್ಮಿ ಅಥವಾ ಇತರ ಯಾವುದೇ ದೇವತೆಯನ್ನು ಪೂಜಿಸದಿದ್ದರೂ ಸಹ, ಶುಕ್ರವಾರದಂದು ಅವುಗಳನ್ನು ಸೇವಿಸಬೇಡಿ. ಅಂದಹಾಗೆ, ದೇವತೆಗಳ ಆಶೀರ್ವಾದ ಪಡೆಯಲು ಸದಾ ಸಾತ್ವಿಕ ಆಹಾರವನ್ನು ಸೇವಿಸಬೇಕು.
ಅಮಲು ಪದಾರ್ಥಗಳಿಂದ ದೂರವಿರಿ:
ಶುಕ್ರವಾರದಂದು ಮದ್ಯ ಸೇರಿದಂತೆ ಇತರ ಅಮಲು ಪದಾರ್ಥಗಳಿಂದ ದೂರವಿರಬೇಕು. ಇಲ್ಲವಾದರೆ ಶನಿ, ರಾಹು-ಕೇತುಗಳ ಕೋಪವನ್ನೂ ಎದುರಿಸಬೇಕಾಗುತ್ತದೆ.
ಇದನ್ನೂ ಓದಿ- ಮೇ 15 ರಿಂದ ಬದಲಾಗಲಿದೆ ಈ 6 ರಾಶಿಯವರ ಭವಿಷ್ಯ, ಸೂರ್ಯ ಬೆಳಗಲಿದ್ದಾನೆ ಅದೃಷ್ಟ
ಮನೆಯನ್ನು ಯಾವಾಗಲೂ ಶುಚಿಯಾಗಿಡಿ:
ನಿಮ್ಮ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು, ಆದರೆ ವಿಶೇಷವಾಗಿ ಶುಕ್ರವಾರ, ಇದನ್ನು ನೆನಪಿನಲ್ಲಿಡಿ. ಈ ದಿನ ಅಡುಗೆ ಮನೆ, ಪೂಜಾ ಸ್ಥಳ, ಮುಖ್ಯ ದ್ವಾರ ಇತ್ಯಾದಿಗಳನ್ನು ಸ್ವಚ್ಛಗೊಳಿಸಿ. ಮುಖ್ಯ ದ್ವಾರದಲ್ಲಿ ಹಸುವಿನ ತುಪ್ಪದ ದೀಪವನ್ನು ಬೆಳಗಿಸಿ.
ಜಗಳವಾಡುವುದನ್ನು ತಪ್ಪಿಸಿ:
ಶುಕ್ರವಾರ ಯಾರೊಂದಿಗೂ ಜಗಳವಾಡಬೇಡಿ, ನಿಂದನೀಯ ಮಾತುಗಳನ್ನಾಡಬೇಡಿ. ಶುಕ್ರವಾರವೂ ಮನೆಯಲ್ಲಿ ಜಗಳವಾಡಬೇಡಿ. ಅಶಾಂತಿ ಇರುವಂತಹ ಸ್ಥಳದಲ್ಲಿ ಮಾ ಲಕ್ಷ್ಮಿ ಎಂದಿಗೂ ನೆಲೆಸುವುದಿಲ್ಲ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.