ನವದೆಹಲಿ : ಶಿಕ್ಷಣ ಎನ್ನುವುದು ಯಶಸ್ವಿ ಜೀವನ ಮತ್ತು ವೃತ್ತಿಜೀವನಕ್ಕೆ ಬಹಳ ಮುಖ್ಯ. ಒಳ್ಳೆಯ ಕಾಲೇಜಿನಲ್ಲಿ ಪ್ರವೇಶ ಪಡೆಯಬೇಕಾದರೆ, ಬಯಸಿದ ಉದ್ಯೋಗಕ್ಕಾಗಿ ಸಂದರ್ಶನದಲ್ಲಿ ಉತ್ತೀರ್ಣರಾಗಬೇಕಾದರೆ ನಾವು ಹೇಗೆ ಅದಕ್ಕೆ ತಯಾರಿ ನಡೆಸುತ್ತೇವೆ ಎನ್ನುವುದು ಮುಖ್ಯವಾಗಿರುತ್ತದೆ (Study room vastu). ಇದಕ್ಕಾಗಿ ಸ್ಟಡಿ ರೂಮ್ ಮತ್ತು ಸ್ಟಡಿ ಟೇಬಲ್ ಅನ್ನು ವಾಸ್ತು ಪ್ರಕಾರ ಸರಿಯಾಗಿ ಅಳವಡಿಸಿಕೊಂಡರೆ ಯಶಸ್ಸು ಸಿಗುತ್ತದೆ.  ಹೀಗೆ ಮಾಡಿದರೆ ಏಕಾಗ್ರತೆ ಹೆಚ್ಚುತ್ತದೆ (Vastu tips).


COMMERCIAL BREAK
SCROLL TO CONTINUE READING

ಸ್ಟಡಿ ರೂಂನ ವಾಸ್ತು ಪರಿಹಾರಗಳು :
-ಅಧ್ಯಯನ ಕೊಠಡಿಯು ಅಂದರೆ ಸ್ಟಡಿ ರೂಂ ಅಚ್ಚುಕಟ್ಟಾಗಿರಬೇಕು. ಅದರಲ್ಲಿ ಅನಗತ್ಯ ವಸ್ತುಗಳನ್ನು ಹಾಕಬೇಡಿ (Study room vastu). ಅದು ನಕಾರಾತ್ಮಕತೆಯನ್ನು ತರುತ್ತದೆ ಮತ್ತು ಗಮನವನ್ನು ಬೇರೆಡೆಗೆ ಒಯ್ಯುತ್ತದೆ. 
-ಸ್ಟಡಿ ರೂಂನಲ್ಲಿ ಸರಸ್ವತಿ ದೇವಿಯ (Godess Saraswati) ಚಿತ್ರವನ್ನು ಹಾಕಿ. ಮಹರ್ಷಿ ವೇದವ್ಯಾಸರ ಚಿತ್ರವನ್ನು ಹಾಕಿದರೂ ಒಳ್ಳೆಯದು. 
-ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಅಧ್ಯಯನ ಕೊಠಡಿಯನ್ನು ಹೊಂದುವುದು ತುಂಬಾ ಮಂಗಳಕರವಾಗಿರುತ್ತದೆ. ಅಧ್ಯಯನ ಕೊಠಡಿಯ ಈಶಾನ್ಯ ಕೋನವನ್ನು ಖಾಲಿ ಇಡಲು ಪ್ರಯತ್ನಿಸಿ. ನಿಮ್ಮ ಸ್ಟಡಿ ಟೇಬಲ್ (Study table) ಅನ್ನು ದಕ್ಷಿಣ ಅಥವಾ ಪಶ್ಚಿಮ ಗೋಡೆಗೆ ಹತ್ತಿರ ಇರಿಸಿ. ಹೀಗೆ ಇಟ್ಟರೆ ನೀವು ಅಧ್ಯಯನ ಮಾಡುವಾಗ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಕೂ-ರಬಹುದು. 
ಉತ್ತರ ದಿಕ್ಕಿಗೆ ಮುಖಮಾಡಿ ಓದುವುದು ಉತ್ತಮ.  ಅಧ್ಯಯನ ಕೊಠಡಿಯ ಗೋಡೆಗಳ ಬಣ್ಣವನ್ನು ಬಿಳಿ, ಗುಲಾಬಿ ಅಥವಾ ಕೆನೆ ಬಣ್ಣದಲ್ಲಿ ಇರಿಸಿ. ಅಧ್ಯಯನ ಕೊಠಡಿಯಲ್ಲಿ ಎಂದಿಗೂ ಗಾಢ ಬಣ್ಣಗಳನ್ನು ಬಳಸಬೇಡಿ. 


ಇದನ್ನೂ ಓದಿ: ಇಂದಿನಿಂದ ಈ 5 ರಾಶಿಯವರಿಗೆ ಕೂಡಿಬರಲಿದೆ ಅದೃಷ್ಟ ! ಶನಿಯ ರಾಶಿಯಲ್ಲಿ ರೂಪುಗೊಳ್ಳುತ್ತಿದೆ ಪಂಚ ಗ್ರಹಿ ಯೋಗ


ಸ್ಟಡಿ ರೂಂನಲ್ಲಿ ಹಸಿರು ಗಿಳಿಯ ಚಿತ್ರವನ್ನು ಹಾಕುವುದರಿಂದ ಏಕಾಗ್ರತೆ ಹೆಚ್ಚುತ್ತದೆ. 
ಕತ್ತರಿ-ಸೂಜಿ, ಕನ್ನಡಿಗಳು, ಎಲೆಕ್ಟ್ರಾನಿಕ್ ವಸ್ತುಗಳು, ಫಿಲ್ಮ್ ಪೋಸ್ಟರ್‌ಗಳು, ವಿಡಿಯೋ ಗೇಮ್‌ಗಳು, ತ್ಯಾಜ್ಯ ಪೇಪರ್, ಪುರಾತನ ಪ್ರತಿಮೆಗಳು ಮತ್ತು ಪರಭಕ್ಷಕ ಪ್ರಾಣಿಗಳ ಚಿತ್ರಗಳನ್ನು ಸ್ಟಡಿ ರೂಂನಲ್ಲಿ  ಎಂದಿಗೂ ತಪ್ಪಿಯೂ ಇರಿಸಬೇಡಿ. ಇದು ನಕಾರಾತ್ಮಕತೆಯನ್ನು (Negetive energy) ಉಂಟುಮಾಡುತ್ತದೆ. ಅಧ್ಯಯನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. 


ಇದನ್ನೂ ಓದಿ: Mahamrityunjaya Mantra: ಎಂತಹ ದೊಡ್ಡ ಕಷ್ಟವನ್ನಾದರೂ ನಿವಾರಿಸುತ್ತೆ ಈ ಮಹಾಮಂತ್ರದ ಪಠಣ


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ .


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.