ಇಂದಿನಿಂದ ಈ 5 ರಾಶಿಯವರಿಗೆ ಕೂಡಿಬರಲಿದೆ ಅದೃಷ್ಟ ! ಶನಿಯ ರಾಶಿಯಲ್ಲಿ ರೂಪುಗೊಳ್ಳುತ್ತಿದೆ ಪಂಚ ಗ್ರಹಿ ಯೋಗ

ಬಹಳ ಶುಭ  ಯೋಗಗಳೊಂದಿಗೆ ಪ್ರಾರಂಭವಾಗುವ ಈ ತಿಂಗಳು 5 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಮಕರ ರಾಶಿಯಲ್ಲಿ 5 ಗ್ರಹಗಳು ಒಟ್ಟಿಗೆ ಸೇರುತ್ತಿರುವುದರಿಂದ 5 ರಾಶಿಗಳಿಗೆ ಅಪಾರ ಹಣ, ಯಶಸ್ಸು ಮತ್ತು ಸಂತೋಷ ಸಿಗಲಿದೆ. 

Written by - Zee Kannada News Desk | Last Updated : Mar 1, 2022, 04:14 PM IST
  • ಐದು ರಾಶಿಯವರಿಗೆ ಶುಭವನ್ನೇ ಹೊತ್ತು ತರಲಿದೆ ಮಾರ್ಚ್
  • ಅಪಾರ ಹಣ ಮತ್ತು ಯಶಸ್ಸು ಸಿಗಲಿದೆ
  • ಪಂಚ ಗ್ರಹ ರೋಗ ನೀಡಲಿದೆ ಭಾರೀ ಯಶಸ್ಸು
ಇಂದಿನಿಂದ ಈ 5 ರಾಶಿಯವರಿಗೆ ಕೂಡಿಬರಲಿದೆ ಅದೃಷ್ಟ ! ಶನಿಯ ರಾಶಿಯಲ್ಲಿ ರೂಪುಗೊಳ್ಳುತ್ತಿದೆ ಪಂಚ ಗ್ರಹಿ ಯೋಗ title=
ಐದು ರಾಶಿಯವರಿಗೆ ಶುಭವನ್ನೇ ಹೊತ್ತು ತರಲಿದೆ ಮಾರ್ಚ್ ಅಪಾರ ಹಣ ಮತ್ತು ಯಶಸ್ಸು ಸಿಗಲಿದೆ (file photo)

ನವದೆಹಲಿ :  ಇಂದು ಮಹಾಶಿವರಾತ್ರಿಯಸಂಭ್ರಮ (Mahashivaratri).  ಇದರೊಂದಿಗೆ ಮಾರ್ಚ್ 2022 ರ ಮೊದಲ ದಿನದಂದು, ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ. ಮಾತ್ರವಲ್ಲ ಅಪರೂಪದ ಪಂಚ ಗ್ರಹ ರೋಗ ಕೂಡಾ ರಚನೆಯಾಗುತ್ತಿವೆ (Panchagraha Yoga). ಬಹಳ ಶುಭ  ಯೋಗಗಳೊಂದಿಗೆ ಪ್ರಾರಂಭವಾಗುವ ಈ ತಿಂಗಳು 5 ರಾಶಿಯ ಜನರಿಗೆ ತುಂಬಾ ಮಂಗಳಕರವಾಗಿರುತ್ತದೆ. ಮಕರ ರಾಶಿಯಲ್ಲಿ (Capricorn)5 ಗ್ರಹಗಳು ಒಟ್ಟಿಗೆ ಸೇರುತ್ತಿರುವುದರಿಂದ 5 ರಾಶಿಗಳಿಗೆ ಅಪಾರ ಹಣ, ಯಶಸ್ಸು ಮತ್ತು ಸಂತೋಷ ಸಿಗಲಿದೆ. ಒಟ್ಟಿನಲ್ಲಿ ಮಾರ್ಚ್ ತಿಂಗಳು  ಈ ರಾಶಿಯವರಿಗೆ ಬಹಳ ಶುಭಾವಾಗಿರಲಿದೆ. 

ಮೇಷ ರಾಶಿ : ಪಂಚಗ್ರಹಿ ಯೋಗದಿಂದ (Panchagraha yoga)ಪ್ರಾರಂಭವಾಗುವ ಮಾರ್ಚ್ ತಿಂಗಳು, ಮೇಷ ರಾಶಿಯವರಿಗೆ  ವೃತ್ತಿ ಜೀವನದಲ್ಲಿ ಅಗಾಧವಾದ ಲಾಭಗಳನ್ನು ನೀಡುತ್ತದೆ. ವಿಶೇಷವಾಗಿ ವ್ಯಾಪಾರಿಗಳು ದೊಡ್ಡ ಲಾಭವನ್ನು ಗಳಿಸುತ್ತಾರೆ. ಉದ್ಯೋಗಾಕಾಂಕ್ಷಿಗಳು ಹೊಸ ಉದ್ಯೋಗ ಪ್ರಸ್ತಾಪವನ್ನು ಪಡೆಯಬಹುದು. ಬಡ್ತಿ ಪಡೆಯುವ ಸಂಭವ ಹೆಚ್ಚಾಗಿರುತ್ತದೆ. 

ಇದನ್ನೂ ಓದಿ : Copper Ring Benefits : ತಾಮ್ರದ ಉಂಗುರ ಧರಿಸಿಸುವುದರಿಂದ ಯಾವ ರಾಶಿಯವರಿಗೆ ಅದೃಷ್ಟ 

ವೃಷಭ ರಾಶಿ : ವೃಷಭ ರಾಶಿಯವರಿಗೆ (Taurus)ಈಗ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಪ್ರತಿಯೊಂದು ಕೆಲಸದಲ್ಲಿಯೂ ಯಶಸ್ಸು ಸಿಗಲಿದೆ. ವೃತ್ತಿಜೀವನದಲ್ಲಿ ಕೆಲವು ಉತ್ತಮ ಸಾಧನೆಗಳನ್ನು ಸಾಧಿಸಬಹುದು. ಬಡ್ತಿ ಸಿಗಬಹುದು ಅಥವಾ ಹೊಸ ಕೆಲಸ ಸಿಗಬಹುದು.  ಆರ್ಥಿಕ  ಪ್ರಯೋಜನಕಾರಿಯಾಗಲಿದೆ. ಕುಟುಂಬದಲ್ಲಿ ಸಂತೋಷ ಇರುತ್ತದೆ. ಪ್ರೇಮ ಜೀವನವೂ ಸುಖಮಯವಾಗಿರುತ್ತದೆ. 

ತುಲಾ: ತುಲಾ ರಾಶಿಯವರ (Libra) ಜೀವನದಲ್ಲಿ ಸಾಂಸಾರಿಕ ಸೌಕರ್ಯಗಳು ಹೆಚ್ಚಾಗುವುದು. ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಪ್ರಮೋಷನ್-ಇನ್ಕ್ರಿಮೆಂಟ್ ಸಭವ ಅಧಿಕವಾಗಿದೆ.  ಇಲ್ಲಿಯವರೆಗೆ ಸ್ಥಗಿತಗೊಂಡಿದ್ದ ಕೆಲಸಗಳು ಮತ್ತೆ ಆರಂಭವಾಗಲಿವೆ. ಪ್ರೇಮ ಜೀವನ ಮತ್ತು ವೈವಾಹಿಕ ಜೀವನ ಉತ್ತಮವಾಗಿರುತ್ತದೆ. 

ಇದನ್ನೂ ಓದಿ : Buissness ನಲ್ಲಿ ಅಪಾರ ಯಶಸ್ಸು ದೊರಕಿಸಿ ಕೊಡುತ್ತದೆ ಈ ಯಂತ್ರ, ನಿಂತುಹೋದ ವ್ಯಾಪಾರ ಕೂಡ ಮತ್ತೆ ಆರಂಭವಾಗುತ್ತದೆ

ವೃಶ್ಚಿಕ ರಾಶಿ : ಮಾರ್ಚ್ ತಿಂಗಳು ವೃಶ್ಚಿಕ ರಾಶಿಯವರಿಗೆ (Scorpio) ಬಹಳಷ್ಟು ಲಾಭವನ್ನು ನೀಡುತ್ತದೆ. ಆದಾಯ ಹೆಚ್ಚಲಿದೆ. ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸವು ಹೆಚ್ಚಾಗುತ್ತದೆ, ಇದರಿಂದಾಗಿ ಪ್ರತಿಯೊಂದು ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸುವುದು ಸಾಧ್ಯವಾಗುತ್ತದೆ. ಕುಟುಂಬದ ದೃಷ್ಟಿಯಿಂದಲೂ ಸಮಯ ಉತ್ತಮವಾಗಿರುತ್ತದೆ. 

ಕುಂಭ: ಕುಂಭ ರಾಶಿಯವರಿಗೆ (Aquarius) ಮಾರ್ಚ್ ತಿಂಗಳು ಶುಭವನ್ನೇ ಹೊತ್ತು ತರಲಿದೆ. ಹೊಸ ಸಂಬಂಧಗಳು ರೂಪುಗೊಳ್ಳುತ್ತವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಸಮಯ ತುಂಬಾ ಉಪಯುಕ್ತವಾಗಿರುತ್ತದೆ. ವ್ಯಾಪಾರ ವೃದ್ಧಿಯಾಗಬಹುದು. ಹೊಸ ಉದ್ಯೋಗ ಸಿಗಬಹುದು. ಆತ್ಮವಿಶ್ವಾಸ ಹೆಚ್ಚಲಿದೆ. ಮನೆಯಲ್ಲಿ ಪ್ರೀತಿ ಮತ್ತು ಸಂತೋಷ ಇರುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಪುಷ್ಟೀಕರಿಸುವುದಿಲ್ಲ .

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News