ನವದೆಹಲಿ : ಕಷ್ಟಪಟ್ಟು ಕೆಲಸ ಮಾಡಿದ ನಂತರವೂ ಯಶಸ್ಸು ಸಿಗುತ್ತಿಲ್ಲ, ಮನೆಯಲ್ಲಿ ಮನಸ್ತಾಪ, ಗಲಾಟೆಗಳು ನಡಿಯುತ್ತಲೇ ಇರುತ್ತವೆ. ಆರ್ಥಿಕ ಬಿಕ್ಕಟ್ಟು ಮುಗಿಯುವುದೇ ಇಲ್ಲ ಎಂದು ಯಾವತ್ತಾದರೂ ಅನ್ನಿಸಿದೆಯಾ?  ಈ ಎಲ್ಲಾ ಸಮಸ್ಯೆಗಳಿಗೆ ಮನೆಯಲ್ಲಿ ನೆಲೆಸಿರುವ ನಕಾರಾತ್ಮಕ ಶಕ್ತಿ (Negetive energy)  ಕಾರಣವಾಗಿರಬಹುದು. ಸೂಕ್ತ ಸಮಯಕ್ಕೆ ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುವುದರಿಂದ ಎಲ್ಲ ಸಮಸ್ಯೆಗಳು ಬಗೆಹರಿದು ಮತ್ತೆ ಮನೆಯಲ್ಲಿ ಸಕಾರಾತ್ಮಕ ಶಕ್ತಿ (Positive energy) ನೆಲೆಸಲು ಸಾಧ್ಯವಾಗುತ್ತದೆ. ನಿಮಗೂ ನಿಮ್ಮ ಮನೆಯಲ್ಲಿ ವಾಸ್ತು ಸಂಬಂಧಿ  ಸಮಸ್ಯೆಗಳಿವೆ ಎಂದು ಅನಿಸಿದರೆ ಗುರುವಾರ ಈ ಸುಲಭ ಪರಿಹಾರಗಳನ್ನು ಮಾಡಿ ನೋಡಿ.. 


COMMERCIAL BREAK
SCROLL TO CONTINUE READING

 ಗುರುವಾರ  ಈ ಕೆಲಸವನ್ನು ಮಾಡಿ : 
ಅರಿಶಿನವನ್ನು (Turmeric) ಆಹಾರದ ರುಚಿ ಮತ್ತು ಬಣ್ಣವನ್ನು ಹೆಚ್ಚಿಸಲು ಬಳಸುತ್ತೇವೆ. ಔಷಧೀಯ ರೂಪದಲ್ಲಿಯೂ ಅರಶಿನವನ್ನು ಬಳಸಲಾಗುತ್ತದೆ. ಜ್ಯೋತಿಷ್ಯದಲ್ಲಿ (Astrology)  ಅರಿಶಿನಕ್ಕೆ ಮಹತ್ವದ ಸ್ಥಾನವಿದೆ. ಅರಿಶಿನವನ್ನು ಪ್ರತಿ ಮಂಗಳ ಕಾರ್ಯದಲ್ಲಿಯೂ ಬಳಸಲಾಗುತ್ತದೆ. ಗುರು ಗ್ರಹಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ತೆಗೆದುಹಾಕಲು ಸಹಾ ಅರಿಶಿನವನ್ನು ಬಳಸಲಾಗುತ್ತದೆ. 


ಇದನ್ನೂ ಓದಿShukra luck : ಈ ನಾಲ್ಕು ರಾಶಿಯವರಿಗೆ ಶುಕ್ರದೆಸೆ! ಈ ಅದೃಷ್ಟವಂತರಲ್ಲಿ ನೀವಿದ್ದೀರಾ?


ಈ ಪರಿಹಾರ ಕಾರ್ಯಗಳನ್ನು ಗುರುವಾರ ಮಾಡಿ ನೋಡಿ: 


1. ಗುರುವಾರ, ಸ್ನಾನದ ನೀರಿಗೆ (water) ಒಂದು ಚಿಟಿಕೆ ಅರಿಶಿನ ಸೇರಿಸಿ. ಈ ಅರಿಶಿನ ನೀರಿನಿಂದ ಸ್ನಾನ ಮಾಡುವಾಗ 'ನಮೋ ಭಾಗವತ ವಾಸುದೇವಾಯ ನಮಃ ಎಂಬ ಮಂತ್ರವನ್ನು ಪಠಿಸಿ. ಹೀಗೆ ಮಾಡುವುದರಿಂದ ವೃತ್ತಿಜೀವನಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನಲಾಗುತ್ತದೆ. ಅಲ್ಲದೆ ಉದ್ಯೋಗ (Job) ಅಥವಾ ವ್ಯವಹಾರದಲ್ಲಿ ಯಶಸ್ಸು ಪಡೆಯಲು ಕೂಡಾ ಇದು ಸಹಕಾರಿಯಾಗುತ್ತದೆ ಎನ್ನುತ್ತಾರೆ ವಾಸ್ತುಬಲ್ಲವರು. ಅರಿಶಿನ ಮಿಶ್ರಿತ ನೀರಿನಿಂದ ಸ್ನಾನ ಮಾಡುವುದರಿಂದ ಮದುವೆಗೆ ಸಂಬಂಧಪಟ್ಟಂತೆ ಎದುರಾಗುವ ಸಮಸ್ಯೆಗಳು ಕೂಡಾ ನಿವಾರಣೆಯಾಗುತ್ತದೆಯಂತೆ. 


2. ಗುರುವಾರ, ಯಾವುದೇ ಪ್ರಮುಖ ಕೆಲಸಕ್ಕಾಗಿ ಮನೆಯಿಂದ ಹೊರಗೆ ಹೋಗುತ್ತಿದ್ದರೆ, ಹಣೆಗೆ ಕುಂಕುಮದ ಜೊತೆಗೆ ಅರಿಶಿನ ತಿಲಕವನ್ನು (Turmeric tilak) ಇಡುವುದರಿಂದ ಕೆಲಸ ಸಿದ್ದಿಸುತ್ತದೆಯಂತೆ.  


ಇದನ್ನೂ ಓದಿ : Vastu tips : ಈ ವಸ್ತುಗಳನ್ನು ತಪ್ಪಿಯೂ ನೆಲದ ಮೇಲೆ ಇಡಬೇಡಿ..!


3. ಇದಲ್ಲದೆ, ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷವಿದ್ದರೆ (Vastu dosh), ಮನೆಯ ಎಲ್ಲಾ ಕೋಣೆಗಳ ಮೂಲೆಗಳಲ್ಲಿ ಚಿಟಕಿ ಅರಿಶಿನವನ್ನು ಸಿಂಪಡಿಸಬೇಕು. ಮತ್ತು  ಮನೆಯ ಹೊಸ್ತಿಲಲ್ಲಿ ಅರಿಶಿನವನ್ನು ಹಾಕಬೇಕಂತೆ.  ಹೀಗೆ ಮಾಡುವುದರಿಂದ ವಾಸ್ತು ದೋಷವನ್ನು ತೆಗೆದು ಹಾಕುವುದು ಸಾಧ್ಯವಾಗುತ್ತದೆ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.   


ಗುರುವಾರ, ಈ ಸಮಸ್ಯೆಗಳು ಪ್ರತಿ ಸಮಸ್ಯೆಯನ್ನು ಸಹ ತೆಗೆದುಹಾಕುತ್ತದೆ :
- ಯಾರ ಜಾತಕದಲ್ಲಿ ಗುರು ಬಲವು ದುರ್ಬಲವಾಗಿರುತ್ತದೆಯೋ ಅವರು ಗುರುವಾರ (Thursday) ಉಪವಾಸವನ್ನು ಆಚರಿಸಬೇಕು. 
- ನೀವು ಗುರುವಾರ ಉಪವಾಸ ಮಾಡಲು ಸಾಧ್ಯವಾಗದಿದ್ದರೆ, ಗುರುವಾರ ದೇವಾಲಯದಲ್ಲಿ ಕೇಸರಿ ಮತ್ತು ಕಡಲೆಬೇಳೆಯನ್ನು  ದಾನ ಮಾಡಿ. ಇದಲ್ಲದೆ, ಈ ದಿನ ಹಣೆಯ ಮೇಲೆ ಹಳದಿ ಚಂದನದ ತಿಲಕ ಹಚ್ಚಿ.
- ಗುರುವಾರ, ಅಗತ್ಯವಿರುವವರಿಗೆ ಶಿಕ್ಷಣಕ್ಕೆ ಸಂಬಂಧಿಸಿದ ಪುಸ್ತಕಗಳು (Book) ಅಥವಾ ಧಾರ್ಮಿಕ ಪುಸ್ತಕಗಳನ್ನು ದಾನವಗಿ ನೀಡಿ. ಹೀಗೆ ಮಾಡುವುದರಿಂದ ಭಗವಾನ್ ವಿಷ್ಣು (Lord Vishnu) ಮತ್ತು ಬೃಹಸ್ಪತಿ ದೇವರ ಆಶೀರ್ವಾದ ಸಿಗುತ್ತದೆ. 
- ಹಣಕಾಸಿನ ತೊಂದರೆಯಿದ ತಪ್ಪಿಸಲು ಗುರುವಾರ ಯಾರಿಗೂ ಹಣವನ್ನು ಸಾಲ ನೀಡಬೇಡಿ ಅಥವಾ ಸಾಲ ಪಡೆಯಬೇಡಿ.  


ಇದನ್ನೂ ಓದಿ : Lord Ganesha: ಈ ವಿಶಿಷ್ಟವಾದ ಗಣೇಶ ಮಂದಿರದಲ್ಲಿ ಪತ್ರದ ಮೂಲಕ ಮನಸ್ಸಿನ ಮಾತನ್ನು ಹೇಳುವ ಭಕ್ತರು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ