Lord Ganesha: ಈ ವಿಶಿಷ್ಟವಾದ ಗಣೇಶ ಮಂದಿರದಲ್ಲಿ ಪತ್ರದ ಮೂಲಕ ಮನಸ್ಸಿನ ಮಾತನ್ನು ಹೇಳುವ ಭಕ್ತರು

ಇಂದು ಗಣಪತಿಗೆ ಅರ್ಪಿತವಾದ ವಿನಾಯಕ ಚತುರ್ಥಿ ಮತ್ತು ಈ ವಿಶೇಷ ದಿನದಂದು, ಮೂರು ಕಣ್ಣುಗಳುಳ್ಳ ಗಣಪತಿಯ ವಿಶಿಷ್ಟ ದೇವಾಲಯದ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ.  

Written by - Yashaswini V | Last Updated : Mar 17, 2021, 11:45 AM IST
  • ಈ ದೇವಾಲಯದಲ್ಲಿ ಮೂರು ಕಣ್ಣುಗಳುಳ್ಳ ಗಣೇಶನನ್ನು ಕಾಣಬಹುದು
  • ಈ ತ್ರಿನೇತ್ರ ಗಣೇಶ ದೇವಾಲಯದ ಪ್ರತಿಮೆ ಸ್ವಯಂಭೂ ಎಂದು ನಂಬಲಾಗಿದೆ
  • ಭಕ್ತರು ತಮ್ಮ ಮನಸ್ಸಿನ ಮಾತನ್ನು ಹೇಳಲು ದೇವರಿಗೆ ಪತ್ರಗಳನ್ನು ಕಳುಹಿಸುತ್ತಾರೆ
Lord Ganesha: ಈ ವಿಶಿಷ್ಟವಾದ ಗಣೇಶ ಮಂದಿರದಲ್ಲಿ ಪತ್ರದ ಮೂಲಕ ಮನಸ್ಸಿನ ಮಾತನ್ನು ಹೇಳುವ ಭಕ್ತರು title=
Trinetra ganesha temple

ನವದೆಹಲಿ: ಯಾವುದೇ ಶುಭ ಕಾರ್ಯಕ್ಕೂ ಮೊದಲು ಗಣೇಶನ ಪೂಜೆ ಮಾಡುವುದು ನಮ್ಮ ಸಂಪ್ರದಾಯ. ಅದರಲ್ಲೂ ಸಂಕಷ್ಟಹರ ಎಂದೇ ಕರೆಯಲ್ಪಡುವ ಗಣಪತಿಯನ್ನು ವಿನಾಯಕ ಚತುರ್ಥಿ ದಿನದಂದು ಶ್ರದ್ಧಾ ಭಕ್ತಿಯಿಂದ ಪೂಜಿಸುವವರಿಗೆ ಅವರ ಕಷ್ಟಗಳು ದೂರವಾಗುತ್ತದೆ ಎಂಬ ನಂಬಿಕೆ ಇದೆ. ದೇಶಾದ್ಯಂತ ಗಣೇಶನ ಅನೇಕ ವಿಶಿಷ್ಟ ದೇವಾಲಯಗಳಿವೆ ಮತ್ತು ಎಲ್ಲವು ತಮ್ಮದೇ ಆದ ವಿಶೇಷ ಮಹತ್ವವನ್ನು ಹೊಂದಿವೆ. ಇಂದು ಅಂತಹದ್ದೇ ಒಂದು ವಿಶೇಷವಾದ ಗಣೇಶ ದೇವಾಲಯದ ಬಗ್ಗೆ ನಾವು ನಿಮಗೆ ಹೇಳುತ್ತಿದ್ದೇವೆ, ಅಲ್ಲಿ ಮೂರು ಕಣ್ಣಿನ ಗಣಪತಿ ಇದೆ. ಇದಲ್ಲದೆ, ಈ ವಿಶಿಷ್ಟ ದೇವರ ಮತ್ತು ಭಕ್ತರ ನಡುವಿನ ನಂಬಿಕೆಗೆ ಸಂಬಂಧಿಸಿದಂತೆ ಮತ್ತೊಂದು ವಿಶಿಷ್ಟ ಉದಾಹರಣೆ ಈ ದೇವಾಲಯದಲ್ಲಿ ಕಂಡುಬರುತ್ತದೆ.  ಲಕ್ಷಾಂತರ ಭಕ್ತರು ಈ ದೇವಾಲಯಕ್ಕೆ ಪತ್ರಗಳನ್ನು ಕಳುಹಿಸುತ್ತಾರೆ. ಭಕ್ತರು ಪತ್ರ ಬರೆದು ದೇವರ ಬಳಿ ತಮ್ಮ ಮನೋಕಾಮನೆಗಳನ್ನು ಹೇಳಿಕೊಳ್ಳುತ್ತಾರೆ. ಇದರಿಂದ ಅವರ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂಬ ನಂಬಿಕೆ ಅವರದು. ಬನ್ನಿ ಈ ವಿಶಿಷ್ಟ ದೇವಾಲಯ ಎಲ್ಲಿದೆ ಮತ್ತು ದೇವಾಲಯ ಸ್ಥಾಪನೆಯ ಹಿಂದಿನ ಕಥೆ ಏನು ಎಂದು ತಿಳಿಯೋಣ...

ಸ್ವಯಂಭೂ ತ್ರಿನೇತ್ರ ಗಣೇಶ ದೇವಾಲಯದ ಪ್ರತಿಮೆ :
ತ್ರಿನೇತ್ರ ಗಣೇಶನ  (Trinetra Ganesha) ಈ ದೇವಾಲಯವು ರಾಜಸ್ಥಾನದ ಸವಾಯಿ ಮಾಧೋಪುರ ಜಿಲ್ಲೆಯ ವಿಶ್ವ ಪರಂಪರೆಯಲ್ಲಿ ಸೇರ್ಪಡೆಗೊಂಡಿರುವ ರಣಥಂಬೋರ್ ಕೋಟೆಯಲ್ಲಿದೆ (Ranthambhore Fort). ಈ ಮೂರು ಕಣ್ಣಿನ ಗಣೇಶನನ್ನು ನೋಡಲು ದೇಶ ಮಾತ್ರವಲ್ಲ ವಿಶ್ವದ ಮೂಲೆ ಮೂಲೆಯಿಂದ ನೂರಾರು ಜನರು ಈ ದೇವಾಲಯಕ್ಕೆ ಬರುತ್ತಾರೆ. ಇದಲ್ಲದೆ, ಮಂಗಳ ಕಾರ್ಯಗಳಿಗೆ ಗಣೇಶನನ್ನು ಆಹ್ವಾನಿಸಲು ದೇಶದಾದ್ಯಂತದ ಸಾವಿರಾರು ಆಹ್ವಾನ ಪತ್ರಗಳು ಈ ಗಣೇಶ ದೇವಾಲಯಕ್ಕೆ ಬರುತ್ತವೆ. ತ್ರಿನೇತ್ರ ಗಣೇಶ ದೇವಾಲಯದ ಈ ಪ್ರತಿಮೆಯು ಸ್ವಯಂಭೂ ಎಂದು ನಂಬಲಾಗಿದೆ, ಅಂದರೆ ಅದು ಸ್ವತಃ ಉದ್ಭವಗೊಂಡಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯದಲ್ಲಿ ಇರುವ ಗಣೇಶನ ವಿಗ್ರಹದ ಮೂರನೇ ಕಣ್ಣನ್ನು ಬುದ್ಧಿವಂತಿಕೆಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ವಿಶಿಷ್ಟ ದೇವಾಲಯದಲ್ಲಿ ಗಣೇಶನು ತನ್ನ ಇಡೀ ಕುಟುಂಬದೊಂದಿಗೆ ಕುಳಿತಿದ್ದಾನೆ. ಈ ದೇವಾಲಯದಲ್ಲಿ ಗಣೇಶನ ಇಬ್ಬರು ಹೆಂಡತಿಯರು - ರಿದ್ಧಿ, ಸಿದ್ದಿ ಮತ್ತು ಇಬ್ಬರು ಗಂಡು ಮಕ್ಕಳು - ಶುಭ ಮತ್ತು ಲಾಭ ಕೂಡ ಇದ್ದಾರೆ. ಇದಲ್ಲದೆ ಗಣೇಶನ ವಾಹನ ಮೂಷಿಕ ಕೂಡ ಇದೆ.

ಇದನ್ನೂ ಓದಿ - Ganesh Chaturthi 2020: ಗಣಪತಿಯ 8 ಅದ್ಭುತ ದೇವಾಲಯಗಳ ಬಗ್ಗೆ ನಿಮಗೆಷ್ಟು ಗೊತ್ತು

ಪತ್ರಗಳನ್ನು ದೇವರ ಮುಂದೆ ಓದಲಾಗುತ್ತದೆ :
ವಿಳಾಸ- ಗಣೇಶ, ಶ್ರೀ ಗಣೇಶ್ ಜಿ, ರಣಥಂಬೋರ್ ಕೋಟೆ, ಜಿಲ್ಲೆ- ಸವಾಯಿ ಮಾಧಾಪುರ (ರಾಜಸ್ಥಾನ) ಎಂಬ ವಿಳಾಸದ ಮೂಲಕ ಈ ದೇವಾಲಯಕ್ಕೆ ಪತ್ರವನ್ನು ತಲುಪಿಸಲಾಗುವುದು. ಪೋಸ್ಟ್‌ಮನ್‌ಗಳು ಈ ಪತ್ರಗಳನ್ನು ಮತ್ತು ಆಮಂತ್ರಣ ಪತ್ರಗಳನ್ನು ದೇವರಿಗೆ ಪೂರ್ಣ ಭಕ್ತಿಯಿಂದ ತಲುಪಿಸುತ್ತಾರೆ ಮತ್ತು ದೇವಾಲಯದ ಅರ್ಚಕರು ಈ ಪತ್ರಗಳನ್ನು ಮತ್ತು ಆಮಂತ್ರಣ ಪತ್ರಗಳನ್ನು ಭಗವಾನ್ ತ್ರಿನೇತ್ರ ಗಣೇಶನ ಮುಂದೆ ಓದುತ್ತಾರೆ ಎಂದು ಕೂಡ ಹೇಳಲಾಗುತ್ತದೆ.

ಇದನ್ನೂ ಓದಿ - ಪುಣೆ: ಚಳಿಗಾಲದಲ್ಲಿ ಸ್ವೆಟರ್ ಧರಿಸುವ ಗಣಪತಿ, 30 ವರ್ಷಗಳ ಹಳೆಯ ಸಂಪ್ರದಾಯ

ದೇವಾಲಯವನ್ನು ಸ್ಥಾಪಿಸಿದವರು ಯಾರು?
ಗಣಪತಿ ಜಿ (Lord Ganesha) ದೇವಾಲಯವನ್ನು ರಣಥಂಬೋರ್ ರಾಜ ಹಮೀರ್ 10 ನೇ ಶತಮಾನದಲ್ಲಿ ಸ್ಥಾಪಿಸಿದ. ದೆಹಲಿಯ ಆಡಳಿತಗಾರ ಅಲಾವುದ್ದೀನ್ ಖಿಲ್ಜಿಯೊಂದಿಗಿನ ಯುದ್ಧದ ಸಮಯದಲ್ಲಿ ಗಣೇಶ್ ಜಿ ರಾಜನ ಕನಸಿನಲ್ಲಿ ಬಂದು ಅವನನ್ನು ಆಶೀರ್ವದಿಸಿದನು ಮತ್ತು ರಾಜನು ಯುದ್ಧದಲ್ಲಿ ವಿಜಯಶಾಲಿಯಾಗಿದ್ದನು ಎಂದು ಹೇಳಲಾಗುತ್ತದೆ. ಅದರ ನಂತರ ರಾಜನು ತನ್ನ ಕೋಟೆಯಲ್ಲಿ ಗಣೇಶ ದೇವಾಲಯವನ್ನು ನಿರ್ಮಿಸಿದನು ಎಂದು ಹೇಳಲಾಗುತ್ತದೆ.

(ಗಮನಿಸಿ: ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಜೀ ನ್ಯೂಸ್ ಇವುಗಳನ್ನು ಖಚಿತಪಡಿಸುವುದಿಲ್ಲ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News