ಬೆಂಗಳೂರು: ಮನೆಯಲ್ಲಿ ಕೆಲವೊಮ್ಮೆ, ಯಾವುದೇ ಕಾರಣವಿಲ್ಲದೆ ಕುಟುಂಬ ಸದಸ್ಯರ ನಡುವೆ ಸಣ್ಣ ವಾದಗಳು ನಡೆಯುತ್ತಲೇ ಇರುತ್ತವೆ. ಹಲವು ಬಾರಿ ಇಂತಹ ಸಣ್ಣ-ಪುಟ್ಟ ವಾದಗಳೇ ದೊಡ್ಡ ಜಗಳವಾಗಲು ಕಾರಣವಾಗುತ್ತದೆ. ಇಂತಹ ಜಗಳಗಳು ಮನೆಯ ಶಾಂತಿಯನ್ನೇ ಹಾಳು ಮಾಡುತ್ತದೆ. ಜೊತೆಗೆ ಮನೆಯವರ ನಡುವೆಯೇ ವೈಮನಸ್ಯವನ್ನು ಹೆಚ್ಚಿಸುತ್ತವೆ. ಅಂತಹ ಸಂದರ್ಭಗಳ ಹಿಂದೆ ವಾಸ್ತು ದೋಷಗಳೂ ಕಾರಣವಾಗಬಹುದು. ಆದ್ದರಿಂದ ಮನೆಯಲ್ಲಿ ಇರಿಸಲಾಗಿರುವ ವಸ್ತುಗಳ ಮೇಲೆ ನಿಗಾ ಇರಿಸಿ. ಇದರಿಂದಾಗಿ ಯಾವ ವಸ್ತುಗಳು ಮನೆಯಲ್ಲಿ ಕಾದಾಟಕ್ಕೆ ಕಾರಣವಾಗುತ್ತವೆ ಎಂದು ತಿಳಿಯಬಹುದು.


COMMERCIAL BREAK
SCROLL TO CONTINUE READING

ನಕಾರಾತ್ಮಕ ಶಕ್ತಿಯಿಂದಾಗಿ ಸಂಘರ್ಷಗಳು ಸಂಭವಿಸುತ್ತವೆ:
ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಮನೆಯನ್ನು ಸರಿಯಾದ ದಿಕ್ಕಿನಲ್ಲಿ ನಿರ್ಮಿಸದಿದ್ದರೆ ಅಥವಾ ಮನೆಯಲ್ಲಿ ಯಾವುದೇ ಮುರಿದ ವಸ್ತು ಇದ್ದರೆ, ಅದು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ತರುತ್ತದೆ. ಈ ನಕಾರಾತ್ಮಕ ಶಕ್ತಿಯು (Negative Energy) ಘರ್ಷಣೆಗೆ ಕಾರಣವಾಗುತ್ತದೆ. ಮನೆಯಲ್ಲಿ ಆಗಾಗ್ಗೆ ಜಗಳವಾಗುತ್ತಿದ್ದರೆ, ಮನೆಯಲ್ಲಿ ಇಟ್ಟಿರುವ ಮುರಿದ ವಸ್ತುಗಳನ್ನು ಮೊದಲು ಹೊರ ಹಾಕಿ. ಅಲ್ಲದೆ, ಈ ಘರ್ಷಣೆಯನ್ನು ತೊಡೆದುಹಾಕಲು ಮತ್ತು ಮನೆಯಲ್ಲಿ ಸಕಾರಾತ್ಮಕ ಶಕ್ತಿಯನ್ನು ಕಾಪಾಡಿಕೊಳ್ಳಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಿ.


ಇದನ್ನೂ ಓದಿ -  Watch Vastu Tips: ಯಮರಾಜನ ದಿಕ್ಕಂತೆ ಇದು; ಇಲ್ಲಿ ಗಡಿಯಾರ ಹಾಕುವ ತಪ್ಪು ಮಾಡದಿರಿ


ಮನೆಯಲ್ಲಿ ಆಗಾಗ್ಗೆ ಜಗಳವಾಗುವುದನ್ನು ತಪ್ಪಿಸಲು ಇರುವ ಸುಲಭ ಮಾರ್ಗಗಳು:-
- ಮನೆಯಲ್ಲಿ ಸದಾ ಕಾದಾಟವಾಗುತ್ತಿದ್ದರೆ ಗಂಗಾ ಜಲದಲ್ಲಿ ಕರ್ಪೂರವನ್ನು ಹಾಕಿ  ಮನೆಯ ಗೋಡೆಗಳು ಮತ್ತು ಮೂಲೆಗಳಲ್ಲಿ ವಾರಕ್ಕೊಮ್ಮೆ ಸಿಂಪಡಿಸಿ. ಇದು ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು (Negative Energy) ತೆಗೆದುಹಾಕುತ್ತದೆ.


- ಮನೆಯಲ್ಲಿ ಬೆಳಿಗ್ಗೆ ಮತ್ತು ಸಂಜೆ ಅಗ್ನಿಹೋತ್ರವನ್ನು ಮಾಡುವುದರಿಂದ, ಮನೆಯಲ್ಲಿರುವ ಋಣಾತ್ಮಕ ಶಕ್ತಿಯು ಕೊನೆಗೊಳ್ಳುತ್ತದೆ. ಇದಕ್ಕಾಗಿ, ಪ್ರತಿದಿನ ಹಸುವಿನ ಬೆರಣಿ ಸುಟ್ಟು ಮತ್ತು ಅದರ ಹೊಗೆಯನ್ನು ಮನೆ ತುಂಬ ಹರಡಿ. ಅಲ್ಲದೆ, ವಾರಕ್ಕೊಮ್ಮೆಯಾದರೂ, ಮನೆಯಾದ್ಯಂತ ಸುಗಂಧ ದ್ರವ್ಯ ಹೊಗೆಯನ್ನು ಹರಡಿ ಮತ್ತು ಈ ಸಮಯದಲ್ಲಿ ಮನೆಯ ಕಿಟಕಿ ಬಾಗಿಲು ತೆರೆಯಿರಿ. ಪರಿಹಾರಕ್ಕಾಗಿ ಸಮಯವನ್ನು ನಿಗದಿಪಡಿಸಲು ಮರೆಯದಿರಿ ಮತ್ತು ಯಾವಾಗಲೂ ಅದೇ ಸಮಯದಲ್ಲಿ ಮಾಡಿ ಈ ಕೆಲಸ ಮಾಡಿ.


- ಮನೆ ಪ್ರವೇಶಿಸಲು 2 ಬಾಗಿಲುಗಳಿದ್ದರೆ, ಯಾವಾಗಲೂ ಮನೆಯ ಮುಖ್ಯ ಬಾಗಿಲನ್ನು ಮಾತ್ರ ಬಳಸಿ. ವಾಸ್ತು ಶಾಸ್ತ್ರದ (Vastu Shastra) ಪ್ರಕಾರ, ಹಿಂಬಾಗಿಲನ್ನು ಎಂದಿಗೂ ಮನೆಯೊಳಗೆ ಹೋಗಲು ಬಳಸಬಾರದು. ಇದನ್ನು ಮಾಡುವುದರಿಂದ ಮನೆಗೆ ನಕಾರಾತ್ಮಕ ಶಕ್ತಿಯನ್ನು ತರುತ್ತದೆ, ಇದು ಮನೆಯಲ್ಲಿ ಜಗಳವನ್ನು ಹೆಚ್ಚಿಸುತ್ತದೆ.


ಇದನ್ನೂ ಓದಿ - Vastu Tips: ಸಂತಾನ ಪ್ರಾಪ್ತಿ, ಸುಖ-ಶಾಂತಿಗಾಗಿ ಮನೆಯಲ್ಲಿರಲಿ ಈ ರೀತಿಯ ಚಿತ್ರ


- ಪ್ರತಿದಿನ ಸಂಜೆ ಸೂರ್ಯ ಮುಳುಗಿದ ನಂತರ, ಮನೆಯಲ್ಲಿ ದೀಪವನ್ನು ಬೆಳಗಿಸಿ. ಸಾಧ್ಯವಾದರೆ, ಎಲ್ಲಾ ಸದಸ್ಯರು ಒಟ್ಟಾಗಿ ಪೂಜಾ-ಆರತಿಯನ್ನು ಮಾಡಿದರೆ ಒಳ್ಳೆಯದು. ಇದು ಸಂಬಂಧಗಳನ್ನು ಸುಧಾರಿಸುತ್ತದೆ ಮತ್ತು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.


- ವಾಸ್ತು ಶಾಸ್ತ್ರದ ಪ್ರಕಾರ ಮನೆಯ ಮುಖ್ಯ ದ್ವಾರದಲ್ಲಿ ಸೂರ್ಯನ ಪ್ರತಿಮೆಯನ್ನು ಸ್ಥಾಪಿಸುವುದು ಬಹಳ ಶುಭವೆಂದು ಪರಿಗಣಿಸಲಾಗಿದೆ. ಇದಕ್ಕಾಗಿ, ಹಿತ್ತಾಳೆಯ ಲೋಹದಿಂದ ಮಾಡಿದ ಸೂರ್ಯನನ್ನು ಮುಖ್ಯ ಬಾಗಿಲಿನ ಮೇಲಿರುವ ಗೋಡೆಯ ಮೇಲೆ ಹಾಕಿ. ಇದನ್ನು ಮಾಡುವುದರಿಂದ, ಮನೆಯಲ್ಲಿ ಸಕಾರಾತ್ಮಕ ಶಕ್ತಿಯ ಹರಿವು ಇರುತ್ತದೆ.



(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.