Shukra Rashi Parivartan 2021: ಶುಕ್ರನ ರಾಶಿ ಪರಿವರ್ತನೆಯಿಂದ ದ್ವಾದಶ ರಾಶಿಗಳ ಫಲಾಫಲ

Shukra Rashi Parivartan 2021: ಶುಕ್ರನ ರಾಶಿ ಪರಿವರ್ತನೆಯಿಂದಾಗಿ ಎಲ್ಲಾ 12 ರಾಶಿಗಳ ಮೇಲೆ ಯಾವ ರೀತಿ ಪರಿಣಾಮ ಉಂಟಾಗಲಿದೆ ಎಂದು ತಿಳಿಯಿರಿ.

Written by - Yashaswini V | Last Updated : May 26, 2021, 12:20 PM IST
  • ವೃಶ್ಚಿಕ ರಾಶಿಯವರು ಶತ್ರುಗಳ ಬಗ್ಗೆ ಎಚ್ಚರದಿಂದಿರಿ
  • ಶುಕ್ರ ರಾಶಿ ಪರಿವರ್ತನೆಯು ಮಕರ ರಾಶಿಯವರಿಗೆ ಹೆಚ್ಚು ಶುಭದಾಯಕವಾಗಿಲ್ಲ
  • ಶುಕ್ರನ ಈ ರಾಶಿಚಕ್ರ ಬದಲಾವಣೆಯಿಂದಾಗಿ ಕುಂಭ ರಾಶಿಯವರಿಗೆ ಒಳ್ಳೆಯದಾಗಲಿದೆ
Shukra Rashi Parivartan 2021: ಶುಕ್ರನ ರಾಶಿ ಪರಿವರ್ತನೆಯಿಂದ ದ್ವಾದಶ ರಾಶಿಗಳ ಫಲಾಫಲ  title=
Shukra Rashi Parivartan 2021

Shukra Rashi Parivartan 2021:  ಮೇ 29 ರಂದು ಶುಕ್ರ ತನ್ನ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಲಿದೆ. ಶುಕ್ರ ವೃಷಭ ರಾಶಿಯಿಂದ ಮಿಥುನ ರಾಶಿಗೆ ಚಲಿಸುತ್ತಿದ್ದಾನೆ. ಜೂನ್ 22 ರವರೆಗೆ, ಶುಕ್ರನು ಮಿಥುನ ರಾಶಿಯಲ್ಲಿಯೇ ಉಳಿಯಲಿದ್ದಾನೆ. ಶುಕ್ರನ ಈ ರಾಶಿ ಬದಲಾವಣೆಯಿಂದಾಗಿ, ದ್ವಾದಶ ರಾಶಿಗಳ ಮೇಲೂ ಪರಿಣಾಮ ಉಂಟಾಗಲಿದೆ. ಶುಕ್ರನ ಈ ರಾಶಿ ಬದಲಾವಣೆಯಿಂದಾಗಿ ದ್ವಾದಶ ರಾಶಿಗಳಿಗೆ ಯಾವ ರೀತಿ ಫಲಾಫಲ ಲಭ್ಯವಾಗಲಿದೆ ಎಂದು ತಿಳಿಯೋಣ...

ಮೇಷ ರಾಶಿ-

ARIES

ಶುಕ್ರನ ಈ ರಾಶಿ ಪರಿವರ್ತನೆಯಿಂದಾಗಿ ಮೇಷರಾಶಿಯವರಿಗೆ ಉದ್ಯೋಗ ಕ್ಷೇತ್ರದಲ್ಲಿ ಯಶಸ್ಸು ಪ್ರಾಪ್ತಿಯಾಗಲಿದೆ. ವೆಚ್ಚ ಹೆಚ್ಚಾಗುತ್ತದೆ. ಆದಾಗ್ಯೂ, ಕುಟುಂಬ ಜೀವನ ಮತ್ತು ವೈವಾಹಿಕ ಜೀವನವು ಚೆನ್ನಾಗಿರುತ್ತದೆ.

ವೃಷಭ ರಾಶಿ-

ಶುಕ್ರನು ನಿಮ್ಮ ರಾಶಿಯನ್ನು ಬಿಟ್ಟು ಮಿಥುನ ರಾಶಿಗೆ ಪ್ರವೇಶಿಸುವುದರಿಂದ ನಿಮ್ಮ ವೆಚ್ಚ ಕಡಿಮೆಯಾಗುತ್ತದೆ. ಕುಟುಂಬ ಸದಸ್ಯರಲ್ಲಿ ಪ್ರೀತಿ ಹೆಚ್ಚಾಗುತ್ತದೆ. ಹೊಸ ವಾಹನ ಅಥವಾ ಮನೆ ಖರೀದಿಸುವ ಸಾಧ್ಯತೆಗಳಿವೆ.

ಮಿಥುನ ರಾಶಿ -

ನಿಮ್ಮ ಗೌರವ ಹೆಚ್ಚಾಗುತ್ತದೆ. ಉದ್ಯೋಗದಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ. ಶುಕ್ರನ ರಾಶಿ ಬದಲಾವಣೆಯು ಶಿಕ್ಷಣ (Education) ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ತುಂಬಾ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ಮದುವೆಯಾಗದವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

ಕಟಕ ರಾಶಿ -

ಶುಕ್ರನ ರಾಶಿಚಕ್ರ ಬದಲಾವಣೆಯು ನಿಮಗೆ ಒಳ್ಳೆಯ ಫಲಗಳನ್ನು ನೀಡುವ ಸಾಧ್ಯತೆ ಕಡಿಮೆ ಎಂದೇ ಹೇಳಬಹುದು. ನಿಮ್ಮ ವೆಚ್ಚ ಹೆಚ್ಚಾಗುತ್ತದೆ. ಮನೆಯ ಸದಸ್ಯರ ಆರೋಗ್ಯದ ಬಗ್ಗೆ ನಿಗಾವಹಿಸಿ.

ಇದನ್ನೂ ಓದಿ - Chandra Grahan 2021: ಎಲ್ಲಿ ಗೋಚರಿಸಲಿದೆ ಚಂದ್ರಗ್ರಹಣ? ಗ್ರಹಣ ಕಾಲದಲ್ಲಿ ಏನು ಮಾಡಬೇಕು ಏನು ಮಾಡಬಾರದು ತಿಳಿಯಿರಿ

ಸಿಂಹ ರಾಶಿ -

ಕಠಿಣ ಪರಿಶ್ರಮದ ನಂತರ ನೀವು ಯಶಸ್ಸನ್ನು ಪಡೆಯುತ್ತೀರಿ. ವ್ಯವಹಾರಕ್ಕೆ ಸಮಯ ಒಳ್ಳೆಯದು. ಆರೋಗ್ಯದತ್ತ ಗಮನ ಹರಿಸುವ ಅವಶ್ಯಕತೆಯಿದೆ.

ಕನ್ಯಾ ರಾಶಿ -

ಆರ್ಥಿಕ ಭಾಗವು ಬಲವಾಗಿರುತ್ತದೆ. ಕೃತಿಗಳಲ್ಲಿ ಯಶಸ್ಸು ಸಾಧಿಸಲಾಗುವುದು. ಕುಟುಂಬ ಮತ್ತು ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ.

ತುಲಾ ರಾಶಿ -

ಮಿಥುನ ರಾಶಿಗೆ ಶುಕ್ರನ ಪ್ರವೇಶದಿಂದಾಗಿ ತುಲಾ ರಾಶಿಯವರಿಗೆ ಒಳ್ಳೆಯದಾಗಲಿದೆ. ಈ ಸಮಯದಲ್ಲಿ ನೀವು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸಲಿದ್ದೀರಿ. ನೀವು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ.

ವೃಶ್ಚಿಕ ರಾಶಿ -

ಶತ್ರುಗಳ ಬಗ್ಗೆ ಎಚ್ಚರದಿಂದಿರಿ. ಹಣವನ್ನು ಚಿಂತನಶೀಲವಾಗಿ ಖರ್ಚು ಮಾಡಿ. ಆರೋಗ್ಯದ ಬಗ್ಗೆ ಗಮನ ಕೊಡಿ. ನೀವು ಮಾನಸಿಕ ಒತ್ತಡವನ್ನು ಎದುರಿಸಬೇಕಾಗಬಹುದು. ವೈವಾಹಿಕ ಜೀವನದಲ್ಲಿ ಸಮಸ್ಯೆ ಇರಬಹುದು.

ಇದನ್ನೂ ಓದಿ - Lunar eclipse 2021: ಇಂದು ವರ್ಷದ ಮೊದಲ ಚಂದ್ರ ಗ್ರಹಣ, ಈ ವಸ್ತುಗಳನ್ನು ದಾನ ಮಾಡಿದರೆ ಈ ಸಮಸ್ಯೆಗಳಿಗೆ ಸಿಗಲಿದೆ ಪರಿಹಾರ

ಧನು ರಾಶಿ -

ಶುಕ್ರನ ರಾಶಿಚಕ್ರ ಬದಲಾವಣೆಯು ನಿಮಗೆ ಒಳ್ಳೆಯದು ಎಂದು ಸಾಬೀತುಪಡಿಸುತ್ತದೆ. ವೈವಾಹಿಕ ಜೀವನವು ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿ ಲಾಭ ಇರುತ್ತದೆ.

ಮಕರ ರಾಶಿ -

ಶುಕ್ರ ರಾಶಿ ಪರಿವರ್ತನೆಯು (Rashi Parivartan) ನಿಮಗೆ ಹೆಚ್ಚು ಶುಭದಾಯವಾಗಿಲ್ಲ. ಹಣದ ನಷ್ಟವಿರಬಹುದು, ಆರೋಗ್ಯ ದುರ್ಬಲವಾಗಬಹುದು. ಈ ಸಮಯದಲ್ಲಿ, ನೀವು ಅನೇಕ ಸಮಸ್ಯೆಗಳನ್ನು ಎದುರಿಸಬಹುದು.

ಕುಂಭ ರಾಶಿ -

ಶುಕ್ರನ ಈ ರಾಶಿಚಕ್ರ ಬದಲಾವಣೆಯಿಂದಾಗಿ ನಿಮಗೆ ಒಳ್ಳೆಯದಾಗಲಿದೆ. ಮೌಲ್ಯ - ಗೌರವ, ಸ್ಥಾನ, ಪ್ರತಿಷ್ಠೆ, ಸಂಪತ್ತು ನಿಮ್ಮದಾಗಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿ ಕಾಣಬಹುದು. ಆದರೆ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಅವಶ್ಯಕತೆಯಿದೆ.

ಮೀನ ರಾಶಿ -

ಹೊಸ ವಾಹನ ಅಥವಾ ಮನೆ ಖರೀದಿಸುವ ಸಾಧ್ಯತೆಗಳಿವೆ. ಕಠಿಣ ಪರಿಶ್ರಮದ ನಂತರ ನೀವು ಯಶಸ್ಸನ್ನು ಪಡೆಯುತ್ತೀರಿ. ಪ್ರೇಮ ಸಂಬಂಧದಲ್ಲಿ ತೊಂದರೆ ಇರಬಹುದು.

ಇದನ್ನೂ ಓದಿ - Chandra Grahan 2021 Pregnancy Precautions: ಚಂದ್ರಗ್ರಹಣದ ಸಮಯದಲ್ಲಿ ಗರ್ಭವತಿ ಮಹಿಳೆಯರು ಈ ಕೆಲಸಗಳನ್ನು ಮಾಡಬಾರದು

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.  ಈ ಮಾಹಿತಿಯನ್ನು ಅನುಸರಿಸುವ ಮುನ್ನ ಸಂಬಂಧಿತ ಕ್ಷೇತ್ರದ ತಜ್ಞರ ಸಲಹೆ ಪಡೆಯುವುದು ಉತ್ತಮ)

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News