ಬೆಂಗಳೂರು: ಉಪ್ಪಿಗಿಂತ ರುಚಿ ಬೇರೆ ಇಲ್ಲಅಡುಗೆ ಮನೆಯಲ್ಲಿ ಉಪ್ಪಿನ ಮಹತ್ವ ಏನು ಅಂತ ಬೇರೆ ಹೇಳಬೇಕಿಲ್ಲ. ನಾವಿಲ್ಲಿ ಹೇಳೋದು ವಾಸ್ತು ಶಾಸ್ತ್ರ ವಿಚಾರದಲ್ಲಿ ಉಪ್ಪಿಗೇನು ಮಹತ್ವ ಇದೆ ಅನ್ನೋದನ್ನು.  ವಾಸ್ತು ವಿಚಾರದಲ್ಲಿ ಉಪ್ಪು ಅತ್ಯಂತ ಮಹತ್ವ ಪಡೆದುಕೊಂಡಿದೆ.


COMMERCIAL BREAK
SCROLL TO CONTINUE READING

ಚಿಟಿಕೆ ಉಪ್ಪು ನಿಮ್ಮಅದೃಷ್ಟ ಬದಲಾಯಿಸಬಲ್ಲದು..!
ಮನೆಯಲ್ಲಿನ ನೆಗೆಟಿವ್ ಎನರ್ಜಿ (Negative Energy) ಓಡಿಸಬಲ್ಲಅದ್ಭುತ ಶಕ್ತಿ ಉಪ್ಪಿನಲ್ಲಿದೆ.  ವಾಸ್ತು ಶಾಸ್ತ್ರದ  ಪ್ರಕಾರ  ಉಪ್ಪು (Salt) ನಿಮ್ಮ ಸ್ಟ್ರೆಸ್, ಆಯಾಸ ಎರಡನ್ನೂ ಕಡಿಮೆ ಮಾಡಬಲ್ಲದು. ಅಷ್ಟೆ ಅಲ್ಲ, ರಾಹು ಕೇತು ತರಲಿರುವ ಅಶುಭ ಫಲವನ್ನೂ ಉಪ್ಪು ಶಮನ ಮಾಡುತ್ತದೆ ಎನ್ನುತ್ತಾರೆ ವಾಸ್ತು ಪಂಡಿತರು. 


ಇದನ್ನೂ ಓದಿ : Mantra For Beautiful Wife: ಸುಂದರ ಮಡದಿ ಸಿಗಬೇಕೆ? ಈ ಮಂತ್ರ ಪಠಿಸಿ


ಮನೆಯಲ್ಲಿ ಮಹಾಲಕ್ಷ್ಮಿ ನೆಲೆಸಬೇಕಾದರೆ ಹೀಗೆ ಮಾಡಿ:
ಮನೆಯಲ್ಲಿ ನಿರಂತರ ಧನ ಪ್ರವಾಹ ಇರಬೇಕಾದರೆ, ಒಂದು ಗ್ಲಾಸ್  ನೀರಿಗೆ (Water) ಸ್ವಲ್ಪ ಉಪ್ಪು ಹಾಕಿ ಮನೆಯ ನೈರುತ್ಯ ದಿಕ್ಕಿನಲ್ಲಿಡಿ. ನೀರು ಒಣಗಿದಾಗ ಗ್ಲಾಸ್ ಸ್ವಚ್ಛ ಮಾಡಿ ಮತ್ತೆ ಅದರಲ್ಲಿ ಉಪ್ಪು ಮತ್ತು ನೀರು ಮಿಕ್ಸ್ ಮಾಡಿಡಿ.  ಹೀಗೆ ಮಾಡಿದ್ರೆ, ಮನೆಯಲ್ಲಿ ಧನ (Wealth) ಸಮೃದ್ದಿಯಾಗುತ್ತೆ ಎಂದು ಹೇಳುತ್ತದೆ ವಾಸ್ತು ಶಾಸ್ತ್ರ.


ವಾಸ್ತು ಶಾಸ್ತ್ರದಲ್ಲಿ ಉಪ್ಪಿನ ಮಹತ್ವ:
1. ಉಪ್ಪು ಮನೆಯಲ್ಲಿ ಪಾಸಿಟಿವ್ ಎನರ್ಜಿ (Posotive Energy) ತರುತ್ತದೆ ಜೊತೆಗೆ ಮನೆಯ ಸುಖ ಸಮೃದ್ಧಿಗೆ ಕಾರಣವಾಗುತ್ತದೆ. 
2. ರಾತ್ರಿ ಮಲಗುವ ಮುನ್ನ ಒಂದು ಚಿಟಿಕೆ ಉಪ್ಪಿಗೆ ನೀರು ಸೇರಿಸಿ ಕೈ, ಕಾಲುಗಳಿಗೆ ಸವರಿ. ಇದರಿಂದ ಸ್ಟ್ರೆಸ್ ಕಡಿಮೆಯಾಗುತ್ತೆ ಜೊತೆಗೆ ಒಳ್ಳೆ ನಿದ್ರೆ ಬರುತ್ತದೆ.
3. ನೆನಪಿನಲ್ಲಿಡಿ. ವಾಸ್ತು ಶಾಸ್ತ್ರ ಪ್ರಕಾರ (Vastu Tips) ಉಪ್ಪು ನೆಲಕ್ಕೆ ಚೆಲ್ಲುವುದು ಶುಭ ಶಕುನ  ಅಲ್ಲ. ಇದರಿಂದ ನಿಮ್ಮ ಚಂದ್ರ ದೆಸೆ ಮತ್ತು ಶುಕ್ರ ದೆಸೆ ಕಡಿಮೆಯಾಗಬಹುದು. ಸ್ಟೀಲ್ ಅಥವಾ ಲೋಹದ ಡಬ್ಬಗಳಲ್ಲಿ ಉಪ್ಪನ್ನು ಇಡಬಾರದು. ಉಪ್ಪು ಇಡಲು ಗ್ಲಾಸ್ ಡಬ್ಬವನ್ನೇ ಬಳಸಿ.
4. ತುಂಬಾ ಸ್ಟ್ರೆಸ್ ಇದ್ರೆ ಹೀಗೆ ಮಾಡಿ. ಸ್ನಾನ ಮಾಡೋ ಮೊದಲು ಒಂದು ಚಿಟಿಕೆ ಉಪ್ಪು ಟಬ್ ಗೆ ಹಾಕಿ. ನಂತರ ಆ ನೀರಲ್ಲಿ ಸ್ನಾನ ಮಾಡಿ. ಇದರಿಂದ ಸ್ಟ್ರೆಸ್ ಕಡಿಮೆ ಆಗುತ್ತದೆ. 
5. ಗುರುವಾರ ಒಂದು ದಿನ ಬಿಟ್ಟು, ವಾರದಲ್ಲಿ ಯಾವುದಾದರೂ ಒಂದು ದಿನ ನೀರಿಗೆ ಚಿಟಿಕೆ ಉಪ್ಪು ಬೆರೆಸಿ ಮನೆ ಒರೆಸಿ. ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೋಗುತ್ತದೆಯಂತೆ.
ಇದು ವಾಸ್ತು ಪಂಡಿತರು ಉಪ್ಪಿನ ವಿಚಾರದಲ್ಲಿ ಹೇಳಿರುವಂತಹ ಮಹತ್ವದ ಸಂಗತಿಗಳು. ನೀವು ವಾಸ್ತು ವಿಚಾರವನ್ನು ನಂಬುವಿರಿ ಎಂದಾದರೆ, ಈ ವಿಚಾರಗಳನ್ನು ಅವಲೋಕಿಸಬಹುದು.


ಇದನ್ನೂ ಓದಿ : ಅಶ್ವತ್ಥ ಮರದ ಈ ಆಧ್ಯಾತ್ಮಿಕ ಸಂಗತಿಗಳ ಕುರಿತು ನಿಮಗೆ ತಿಳಿದಿದೆಯೇ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.