ಕಿಚನ್‌ಗಾಗಿ ವಾಸ್ತು ಸಲಹೆಗಳು: ವಾಸ್ತು ಶಾಸ್ತ್ರದಲ್ಲಿ, ಮನೆ ಹೇಗಿರಬೇಕು, ಮನೆಯಲ್ಲಿ ಯಾವ ವಸ್ತುಗಳು ಯಾವ ದಿಕ್ಕಿನಲ್ಲಿರಬೇಕು ಎಂಬ ಅಂಶಗಳನ್ನು ತಿಳಿಸುವುದರ ಜೊತೆಗೆ ಅವುಗಳ ಉತ್ತಮ ಬಳಕೆಯ ಬಗ್ಗೆಯೂ ನಿರ್ದೇಶನ ನೀಡಲಾಗಿದೆ. ಅಷ್ಟೇ ಅಲ್ಲ, ವಾಸ್ತು ಶಾಸ್ತ್ರವು ಕೆಲವು ಪ್ರಮುಖ ವಸ್ತುಗಳ ಸರಿಯಾದ ಬಳಕೆಯ ಬಗ್ಗೆ ಮಾರ್ಗದರ್ಶನವನ್ನೂ ನೀಡುತ್ತದೆ. ಉದಾಹರಣೆಗೆ, ಅಡುಗೆಮನೆಯಲ್ಲಿ ಬಳಸುವ ಪಾತ್ರೆಗಳು, ಎಲೆಕ್ಟ್ರಾನಿಕ್ ವಸ್ತುಗಳು ಇತ್ಯಾದಿ. ಪ್ರತಿಯೊಂದು ಭಾರತೀಯ ಮನೆಯ ಅಡುಗೆಮನೆಯಲ್ಲಿ ರೊಟ್ಟಿ ಮಾಡಲು ತವಾ ಅಂದರೆ ಪ್ಯಾನ್ ಇದ್ದೇ ಇರುತ್ತದೆ. ಈ ಪ್ಯಾನ್ ಅನ್ನು ಬಳಸಲು ಸರಿಯಾದ ಮಾರ್ಗ ಏನು ಎಂಬುದನ್ನು ತಿಳಿದಿರುವುದು ಕೂಡ ಬಹಳ ಮುಖ್ಯ. ಇಲ್ಲದಿದ್ದರೆ ದೊಡ್ಡ ನಷ್ಟವನ್ನು ಅನುಭವಿಸಬೇಕಾಗಬಹುದು. 


COMMERCIAL BREAK
SCROLL TO CONTINUE READING

ಬಿಸಿ ಬಾಣಲೆಯಲ್ಲಿ ನೀರು ಸುರಿಯುವುದರಿಂದ ನಷ್ಟ:
ಸಾಮಾನ್ಯವಾಗಿ ಮನೆಗಳಲ್ಲಿ ಹಿರಿಯರು ಹೇಳುವ ಹಲವು ವಿಷಯಗಳನ್ನು ನಾವು ನಿರಾಕರಿಸುತ್ತೇವೆ. ಈ ವಿಷಯಗಳು ನಮ್ಮ ಶತಮಾನಗಳ-ಹಳೆಯ ಸಂಪ್ರದಾಯದ ಭಾಗವಾಗಿದೆ. ಇವುಗಳಲ್ಲಿ ಒಂದು ಬಿಸಿ ಪ್ಯಾನ್ ಮೇಲೆ ನೀರು ಹಾಕುವುದು. ಬಿಸಿಯಾದ ಬಾಣಲೆಯಲ್ಲಿ ನೀರು ಸುರಿಯಬಾರದು ಎಂದು ಹೇಳುವುದನ್ನು ನೀವು ಕೇಳಿರಬಹುದು, ಆದರೆ ಅದನ್ನು ಏಕೆ ಮಾಡಬಾರದು ಎಂದು ಇಂದು ನಮಗೆ ತಿಳಿದಿದೆಯೇ? 


ಇದನ್ನೂ ಓದಿ- ವಾಸ್ತು ಶಾಸ್ತ್ರ: ಮನೆಯಲ್ಲಿ ಮಾಡುವ ಈ ಸಣ್ಣ ತಪ್ಪುಗಳು ಅನಾರೋಗ್ಯ-ಒತ್ತಡ ಹೆಚ್ಚಿಸುತ್ತಂತೆ!


ವಾಸ್ತು ಶಾಸ್ತ್ರದ ಪ್ರಕಾರ, ಕಾದ ಬಾಣಲೆಗೆ ನೀರು ಸುರಿಯುವುದರಿಂದ ಬರುವ ಶಬ್ದವು ಮನೆಯಲ್ಲಿ ನಕಾರಾತ್ಮಕತೆಯನ್ನು ತರುತ್ತದೆ. ಇದು ಮನೆಯ ಸದಸ್ಯರನ್ನು ಕೆಲವು ಕಾಯಿಲೆಗಳಿಗೆ ಬಲಿಪಶು ಮಾಡಬಹುದು ಎನ್ನಲಾಗುತ್ತದೆ. 


ಬಿಸಿಯಾದ ಬಾಣಲೆಯ ಮೇಲೆ ನೀರು ಸುರಿಯುವುದರಿಂದ ಧಾರಾಕಾರ ಮಳೆಯಾಗುತ್ತದೆ ಎಂಬ ನಂಬಿಕೆಯೂ ಇದೆ. ಅಂತಹ ಮಳೆಯು ವಿನಾಶವನ್ನು ಉಂಟುಮಾಡುತ್ತದೆ. ಅಂದರೆ ಇದು ಮನೆಯಲ್ಲಿ ಅಂತಹ ಸನ್ನಿವೇಶವನ್ನು ಸೃಷ್ಟಿ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. 
 
ಪ್ಯಾನ್‌ ರಾಹುಗೆ ಸಂಬಂಧಿಸಿದೆ ಎಂದು ನಂಬಲಾಗಿದೆ. ಆದ್ದರಿಂದ, ಪ್ಯಾನ್‌ನ ಶುಚಿತ್ವ, ನಿರ್ವಹಣೆಯಲ್ಲಿ ಅಡಚಣೆಗಳು ದೊಡ್ಡ ತೊಂದರೆಗೆ ಕಾರಣವಾಗಬಹುದು. ವಾಸ್ತು ಶಾಸ್ತ್ರದ ಪ್ರಕಾರ, ಬಾಣಲೆಯನ್ನು ಯಾವಾಗಲೂ ಅಡುಗೆಮನೆಯಲ್ಲಿ ಅಂತಹ ಸ್ಥಳದಲ್ಲಿ ಇಡಬೇಕು, ಅದು ಹೊರಗಿನವರಿಗೆ ಸುಲಭವಾಗಿ ಗೋಚರಿಸುವಂತೆ ಇರಬಾರದು. 


ಇದನ್ನೂ ಓದಿ- Vastu Tips: ನಿವೇಶನ ಖರೀದಿಸುವಾಗ ಈ ತಪ್ಪುಗಳನ್ನು ಮಾಡಬೇಡಿ, ಇಲ್ದಿದ್ರೆ ಅದನ್ನು ಮಾರುವುದರಿಂದಲೂ ದೋಷ ತಗುಲುತ್ತದೆ


ಪ್ಯಾನ್ ಯಾವಾಗಲೂ ಮಲಗಿರಬೇಕು. ಅಂದರೆ ಉಲ್ಟಾ ಮಾಡಿ ಇಡಬೇಕು.


ತವಾವನ್ನು ಎಂದಿಗೂ ಕೊಳಕಾಗಿ ಇಟ್ಟುಕೊಳ್ಳಬೇಡಿ. ಇದನ್ನು ಬಳಸಿದ ನಂತರ ಯಾವಾಗಲೂ ಶುಚಿಗೊಳಿಸಿ. ಇಲ್ಲದಿದ್ದರೆ ಅದು ಬಡತನಕ್ಕೆ ಕಾರಣವಾಗುತ್ತದೆ.  


ನೀವು ರೊಟ್ಟಿ ಮಾಡಲು ಪ್ರಾರಂಭಿಸಿದಾಗ, ಪ್ಯಾನ್ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ. ಹೀಗೆ ಮಾಡುವುದರಿಂದ ಮನೆಯಲ್ಲಿ ಹಣ ಮತ್ತು ಆಹಾರದ ಕೊರತೆಯಾಗುವುದಿಲ್ಲ. ಮತ್ತೊಂದೆಡೆ, ನಾವು ಇದನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಿದರೆ, ಇದು ತವಾವನ್ನು ರೋಗಾಣು ಮುಕ್ತಗೊಳಿಸುತ್ತದೆ ಮತ್ತು ಅದರ ಮೇಲೆ ಮಾಡಿದ ರೊಟ್ಟಿಗಳನ್ನು ತಿನ್ನುವುದರಿಂದ ರೋಗಗಳು ಬರುವುದಿಲ್ಲ ಎನ್ನಲಾಗುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.