ವಾಸ್ತು ಟಿಪ್ಸ್: ಮನೆಯಲ್ಲಿ ಪ್ರತಿದಿನ ಈ ಐದು ಕೆಲಸ ಮಾಡುವುದರಿಂದ ಆರ್ಥಿಕ ಪ್ರಗತಿ

ಆರ್ಥಿಕ ಪ್ರಗತಿಗಾಗಿ ವಾಸ್ತು ಸಲಹೆ:  ಒಳ್ಳೆಯದನ್ನೇ ನುಡಿದರೆ ಒಳ್ಳೆಯದೇ ಆಗಲಿದೆ ಎಂದು ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ನಾವು ಎಷ್ಟು ಧನಾತ್ಮಕವಾಗಿ ಯೋಚಿಸುತ್ತೇವೋ ಅಷ್ಟು ಒಳ್ಳೆಯದೇ ಆಗಲಿದೆ. ಮನೆಯಲ್ಲಿ ಸದಾ ಒಳ್ಳೆಯ ವಿಷಯಗಳ ಬಗ್ಗೆ ಯೋಚಿಸುವುದರಿಂದ, ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಅದರ ಧನಾತ್ಮಕ ಪರಿಣಾಮವು ಕುಟುಂಬಸ್ಥರ ಆರೋಗ್ಯ, ಪ್ರಗತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಕೆಲವು ಪರಿಣಾಮಕಾರಿ ಪರಿಹಾರಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.

Written by - Yashaswini V | Last Updated : Apr 21, 2022, 03:30 PM IST
  • ಆರ್ಥಿಕ ಉನ್ನತಿಗಾಗಿ ನಿತ್ಯ ಮನೆಯಲ್ಲಿ ತಪ್ಪದೇ ಈ ಕೆಲಸಗಳನ್ನು ಮಾಡಿ
  • ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿದಿನ ಪಕ್ಷಿಗಳಿಗೆ ಆಹಾರ ನೀಡುವುದು ಅತ್ಯಂತ ಮಂಗಳಕರ ಕೆಲಸ.
  • ವಾಸ್ತುವಿನ ಪ್ರಕಾರ ಮನೆಯಲ್ಲಿ ಪ್ರತಿದಿನ ಕರ್ಪೂರವನ್ನು ಬೆಳಗಿಸಬೇಕು ಎಂದು ಹೇಳಲಾಗುತ್ತದೆ.
ವಾಸ್ತು ಟಿಪ್ಸ್: ಮನೆಯಲ್ಲಿ ಪ್ರತಿದಿನ ಈ ಐದು ಕೆಲಸ ಮಾಡುವುದರಿಂದ ಆರ್ಥಿಕ ಪ್ರಗತಿ  title=
Vastu TIps for money

ಸಂಪತ್ತಿಗಾಗಿ ವಾಸ್ತು ಸಲಹೆ: ವಾಸ್ತು ಶಾಸ್ತ್ರವು ಜೀವನದ ಪ್ರತಿಯೊಂದು ಅಂಶಗಳ ಮೇಲೆ ಪರಿಣಾಮ ಬೀರುತ್ತದೆ. ಮನೆಯಲ್ಲಿ ಧನಾತ್ಮಕತೆಯನ್ನು ಆಕರ್ಷಿಸಲು ಮತ್ತು ಸಂಪತ್ತಿನ ದೇವತೆಯಾದ ತಾಯಿ ಲಕ್ಷ್ಮಿಯನ್ನು ಮೆಚ್ಚಿಸಲು, ಆಕೆಯ ಕೃಪೆಗೆ ಪಾತ್ರರಾಗಲು ಸಹ ಕೆಲವು ಪರಿಣಾಮಕಾರಿ ಸಲಹೆಗಳನ್ನು ನೀಡಲಾಗಿದೆ. ಈ ಕ್ರಮಗಳನ್ನು ಅನುಸರಿಸುವುದರಿಂದ, ಮನೆಯಲ್ಲಿ ಸುಖ-ಶಾಂತಿ ನೆಲೆಸಿ, ಸಂತೋಷ-ಸಮೃದ್ಧಿ, ಸಂಪತ್ತು ವೃದ್ಧಿಯಾಗಲಿದೆ ಎಂಬುದು ನಂಬಿಕೆ. ಹಾಗಿದ್ದರೆ, ಮನೆಯಲ್ಲಿ ಆರ್ಥಿಕ ಸಮಸ್ಯೆಗಳಿಂದ ಮುಕ್ತಿ ಪಡೆದು ಸಂಪತ್ತನ್ನು ಗಳಿಸಲು ಅನುಸರಿಸಬೇಕಾದ ಕೆಲವು ವಾಸ್ತು ಸಲಹೆಗಳ ಬಗ್ಗೆ ತಿಳಿಯೋಣ... 

ಒಳ್ಳೆಯದನ್ನೇ ನುಡಿದರೆ ಒಳ್ಳೆಯದೇ ಆಗಲಿದೆ ಎಂದು ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ನಾವು ಎಷ್ಟು ಧನಾತ್ಮಕವಾಗಿ ಯೋಚಿಸುತ್ತೇವೋ ಅಷ್ಟು ಒಳ್ಳೆಯದೇ ಆಗಲಿದೆ. ಮನೆಯಲ್ಲಿ ಸದಾ ಒಳ್ಳೆಯ ವಿಷಯಗಳ ಬಗ್ಗೆ ಯೋಚಿಸುವುದರಿಂದ, ಒಳ್ಳೆಯ ಕೆಲಸಗಳನ್ನು ಮಾಡುವುದರಿಂದ ಅದರ ಧನಾತ್ಮಕ ಪರಿಣಾಮವು ಕುಟುಂಬಸ್ಥರ ಆರೋಗ್ಯ, ಪ್ರಗತಿ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಹೇಳಲಾಗುತ್ತದೆ. ಅಂತಹ ಕೆಲವು ಪರಿಣಾಮಕಾರಿ ಪರಿಹಾರಗಳನ್ನು ವಾಸ್ತು ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ. ಮನೆಯಲ್ಲಿ ಪ್ರತಿನಿತ್ಯ ಕೆಲವು ಕೆಲಸಗಳನ್ನು ಮಾಡುವುದರಿಂದ ಆರ್ಥಿಕ ಪ್ರಗತಿ ಸಾಧ್ಯ ಎಂದು ಹೇಳಲಾಗುತ್ತದೆ. 

ಆರ್ಥಿಕ ಉನ್ನತಿಗಾಗಿ ನಿತ್ಯ ಮನೆಯಲ್ಲಿ ತಪ್ಪದೇ ಈ ಕೆಲಸಗಳನ್ನು ಮಾಡಿ:
ಮನೆಯಲ್ಲಿ ಪ್ರತಿದಿನ ಕರ್ಪೂರವನ್ನು ಉರಿಸಬೇಕು:

ವಾಸ್ತುವಿನ ಪ್ರಕಾರ ಮನೆಯಲ್ಲಿ ಪ್ರತಿದಿನ ಕರ್ಪೂರವನ್ನು ಬೆಳಗಿಸಬೇಕು ಎಂದು ಹೇಳಲಾಗುತ್ತದೆ. ಮನೆಯಲ್ಲಿ ಕರ್ಪೂರ ಉರಿಸುವುದರಿಂದ ಇದು ನಕಾರಾತ್ಮಕ ಶಕ್ತಿಯನ್ನು ದೂರಮಾಡಿ, ಸಕಾರಾತ್ಮಕ ಶಕ್ತಿಯು ಮನೆಯಲ್ಲಿ ಆವರಿಸಲು ಸಹಾಯಕವಾಗಿದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- Surya Gochar: ಮುಂದಿನ 24 ದಿನಗಳವರೆಗೆ ಈ ನಾಲ್ಕು ರಾಶಿಯವರ ಮೇಲೆ ಸೂರ್ಯದೇವನ ಕೃಪೆ

ಮುಸ್ಸಂಜೆ ಪೂಜೆಯ ವೇಳೆ ಸಾಸಿವೆ ಎಣ್ಣೆ ದೀಪ:
ಪ್ರತಿಯೊಬ್ಬರಿಗೂ ನಿತ್ಯ ಮುಸ್ಸಂಜೆ ಸಮಯದಲ್ಲಿ ದೇವರಿಗೆ ದೀಪ ಬೆಳಗಿಸುವ ಅಭ್ಯಾಸ ಇರುತ್ತದೆ. ಸಂಜೆ ಸಮಯದಲ್ಲಿ ದೇವರನ್ನು ಪೂಜಿಸುವಾಗ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಮತ್ತು ಅದರಲ್ಲಿ ಲವಂಗವನ್ನು ಹಾಕಿದರೆ ಒಳ್ಳೆಯದು. ಈ ರೀತಿ ಮಾಡುವುದನ್ನು ತುಂಬಾ ಶುಭ ಎಂದು ಪರಿಗಣಿಸಲಾಗಿದೆ. 

ಪಕ್ಷಿಗಳಿಗೆ ಆಹಾರ ನೀಡಿ:
ವಾಸ್ತು ಶಾಸ್ತ್ರದ ಪ್ರಕಾರ, ಪ್ರತಿದಿನ ಪಕ್ಷಿಗಳಿಗೆ ಆಹಾರ ನೀಡುವುದು ಅತ್ಯಂತ ಮಂಗಳಕರ ಕೆಲಸ. ಈ ಕೆಲಸವನ್ನು ರೂಢಿಸಿಕೊಳ್ಳುವುದರಿಂದ ಅಂತಹ ಮನೆಯಲ್ಲಿ ಎಂದಿಗೂ ಕೂಡ ಹಣಕಾಸಿನ ಸಮಸ್ಯೆ ತಲೆದೂರುವುದಿಲ್ಲ. ಜೊತೆಗೆ ಕುಟುಂಬ ಸದಸ್ಯರು ವೃತ್ತಿ ಜೀವನದಲ್ಲಿ  ಪ್ರಗತಿ ಹೊಂದುತ್ತಾರೆ. ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ ಎಂದು ಹೇಳಲಾಗುತ್ತದೆ.

ಆಹಾರ ತಯಾರಿಸುವ ಮುನ್ನ ಈ ಕೆಲಸ ಮಾಡಿ:
ಮನೆಯಲ್ಲಿ ನಿತ್ಯ ಬೆಳಿಗ್ಗೆ ನೀವು ಆಹಾರ ತಯಾರಿಸುವ ಒಲೆಯನ್ನು ಪೂಜಿಸಿ, ಒಲೆಯ ಮೇಲೆ ಹಾಲು ಸಿಂಪಡಿಸಿ ನಂತರ ಆಹಾರವನ್ನು ತಯಾರಿಸಿ. ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯು ಸಂತುಷ್ಟಳಾಗುತ್ತಾಳೆ. ಅಂತ ಮನೆಯಲ್ಲಿ ಸದಾ ತಾಯಿ ಲಕ್ಷ್ಮಿ ನೆಲೆಸುತ್ತಾಳೆ ಎನ್ನಲಾಗುತ್ತದೆ.

ಇದನ್ನೂ ಓದಿ- Vastu Tips : ಮನೆಯ ಗೋಡೆ ಹೀಗಿದ್ದರೆ ಕುಟುಂಬದಲ್ಲಿ ಅನಾರೋಗ್ಯ ಸಮಸ್ಯೆ : ಇಲ್ಲಿದೆ ಪರಿಹಾರ

ಆರ್ಥಿಕ ಬಿಕ್ಕಟ್ಟಿನಿಂದ ಮುಕ್ತಿ ಪಡೆಯಲು ಈ ಕ್ರಮಗಳು ಸಹ ಬಹಳ ಪರಿಣಾಮಕಾರಿ :
* ವಾರಕ್ಕೊಮ್ಮೆ ಮನೆಯಲ್ಲಿ ಧೂಪ ಹಚ್ಚಿ ಅದರ ಹೊಗೆಯನ್ನು ಮನೆಯ ಮೂಲೆ-ಮೂಲೆಯಲ್ಲಿ ಹರದುವುದರಿಂದ ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗಿ ಧನಾತ್ಮಕ ಶಕ್ತಿ ತುಂಬುತ್ತದೆ. 
*  ಇದಲ್ಲದೇ ಪ್ರತಿ ಗುರುವಾರ ತುಳಸಿ ಗಿಡಕ್ಕೆ ಹಾಲನ್ನು ಅರ್ಪಿಸಿ. ಈ ಕಾರಣದಿಂದಾಗಿ, ಆರ್ಥಿಕ ಸ್ಥಿತಿಯು ವೇಗವಾಗಿ ಸುಧಾರಿಸುತ್ತದೆ. 
* ಶನಿವಾರದಂದು ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪವನ್ನು ಬೆಳಗಿಸಿ, ಇದರಿಂದ ಶನಿ ಮತ್ತು ಮಂಗಳ ಗ್ರಹಗಳ ಅಶುಭ ಪರಿಣಾಮಗಳು ಕಡಿಮೆ ಆಗಿ ಶುಭ ಫಲಿತಾಂಶಗಳನ್ನು ನೀಡುತ್ತವೆ.
*  ಶುಕ್ರವಾರ ಲಕ್ಷ್ಮಿ ದೇವಿಯನ್ನು ಮೆಚ್ಚಿಸಲು ಬಹಳ ವಿಶೇಷವಾದ ದಿನವಾಗಿದೆ. ಶುಕ್ರವಾರ ರಾತ್ರಿ, ನೇಮ-ನಿಷ್ಠೆಯಿಂದ ಲಕ್ಷ್ಮಿ ದೇವಿಯನ್ನು ಪೂಜಿಸಿದ ನಂತರ, ಹಾಲಿನಿಂದ ಮಾಡಿದ ಸಿಹಿತಿಂಡಿಗಳನ್ನು ಅರ್ಪಿಸಿ.  
ಇದರಿಂದ ಲಕ್ಷ್ಮಿಯು ಸಂತುಷ್ಟಳಾಗಿ ಸಾಕಷ್ಟು ಹಣವನ್ನು ನೀಡುತ್ತಾಳೆ. 
* ಎಲ್ಲಕ್ಕಿಂತ ಹೆಚ್ಚಾಗಿ, ನಿಮ್ಮ ಆದಾಯದ ಒಂದು ಭಾಗವನ್ನು ನಿರ್ಗತಿಕರಿಗೆ ದಾನ ಮಾಡಿ, ಸಂಪತ್ತು ದಿನದಿಂದ ದಿನಕ್ಕೆ ನಾಲ್ಕು ಪಟ್ಟು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News