ಈ ತರಕಾರಿಗಳನ್ನು ಹಸಿ ಅಥವಾ ಅರ್ಧ ಬೇಯಿಸಿ ತಿನ್ನುವುದು ವಿಷದಷ್ಟೇ ಅಪಾಯ
ಕೆಲವು ತರಕಾರಿಗಳನ್ನು ಹಸಿ ಅಥವಾ ಬೇಯಿಸದೆ ಸೇವಿಸಿದರೆ, ಅದು ಆರೋಗ್ಯಕ್ಕೆ ದೊಡ್ಡ ಮಟ್ಟದ ಹಾನಿಯನ್ನು ಉಂಟುಮಾಡುತ್ತದೆ.
ನವದೆಹಲಿ : ಕೆಲವೊಂದು ತರಕಾರಿಗಳನ್ನು ಹಸಿಯಾಗಿ ತಿನ್ನುವುದು ರುಚಿಯು ಹೌದು, ಆರೋಗ್ಯಕ್ಕೂ ಒಳ್ಳೆಯದು. ಅಂಥಹ ತರಕಾರಿಗಳ ಪಟ್ಟಿಯೇ ಇದೆ. ಆದರೆ ತಜ್ಞರ ಪ್ರಕಾರ, ಕೆಲವು ತರಕಾರಿಗಳನ್ನು ಹಸಿ (side effects of raw vegetables) ಅಥವಾ ಬೇಯಿಸದೆ ಸೇವಿಸಿದರೆ, ಅದು ಆರೋಗ್ಯಕ್ಕೆ ದೊಡ್ಡ ಮಟ್ಟದ ಹಾನಿಯನ್ನು ಉಂಟುಮಾಡುತ್ತದೆ. ಈ ತರಕಾರಿಗಳು ಒಂದು ಥರ ವಿಷದಂತೆ ಕೆಲಸ ಮಾಡುತ್ತದೆ.
ಆಲೂಗಡ್ಡೆ :
ಯಾವಾಗ ಆಲೂಗಡ್ಡೆಗಳಲ್ಲಿ ಮೊಳಕೆ ಅಥವಾ ಹಸಿರು ಕಲೆಗಳು ಕಾಣಿಸಿಕೊಳ್ಳುತ್ತದೆ ಅಂಥಹ ಆಲೂಗಡ್ಡೆಯನ್ನು (Potato) ತಿನ್ನಲು ಹೋಗಬೇಡಿ. ಯಾಕೆಂದರೆ ಇಂಥಹ ಆಲುಗಡ್ಡೆಗಳಲ್ಲಿ ಸೋಲನೈನ್ ಉತ್ಪಾದನೆ ಪ್ರಾರಂಭವಾಗುತ್ತದೆ. ಅದು ಆರೋಗ್ಯಕ್ಕೆ ಹಾನಿ ಉಂಟು (Side effects of potato) ಮಾಡುತ್ತದೆ. ಇದು ತಲೆನೋವು, ವಾಕರಿಕೆ ಮತ್ತು ಅತಿಸಾರಕ್ಕೆ ಕಾರಣವಾಗಬಹುದು. ಕೆಲವೊಮ್ಮೆ ಇದು ಮಾರಕವಾಗಿಯೂ ಪರಿಣಮಿಸಬಹುದು.
ಇದನ್ನೂ ಓದಿ : ಕಿಡ್ನಿ ಆರೋಗ್ಯವಾಗಿರಬೇಕಾದರೆ ಸೇವಿಸಿ ಈ ಐದು ಆಹಾರ, ಸಿಗಲಿದೆ ಪ್ರಯೋಜನ
ಬದನೆ ಕಾಯಿ :
ಅರೆಬೆಂದ ಬದನೆಕಾಯಿಯನ್ನು (Brinjal) ಯಾವತ್ತೂ ತಿನ್ನಬೇಡಿ. ಯಾಕೆಂದರೆ, ಅರೆಬೆಂದ ಬದನೇಕಾಯಿ ಸೇವಿಸಿದರೆ ಅದರಲ್ಲಿರುವ ಪೌಷ್ಟಿಕಾಂಶಗಳು ಸಿಗವುದಿಲ್ಲ. ಅಲ್ಲದೆ, ಆಲೂಗಡ್ಡೆಯಂತೆ ಇದರಲ್ಲಿಯೂ, ಸೋಲಾನೈನ್ (solanine) ಅಂಶ ಇರುತ್ತದೆ. ಇದು ವಿಷಕಾರಿ ಪರಿಣಾಮವನ್ನು ಹೊಂದಿರುತ್ತದೆ. ಕೆಲವರು ಇದನ್ನು ಹಸಿಯಾಗಿಯೂ ತಿನ್ನುತ್ತಾರೆ. ಆದರೆ, ನಿಮಗೆ ಸೋಲನೈನ್ ಅಲರ್ಜಿ ಇದ್ದರೆ Gastrointestinal Distress ಸಮಸ್ಯೆ ಎದುರಾಗಬಹುದು. ಹಾಗಾಗಿ ಇದನ್ನು ತಿನ್ನುವಾಗ ಜಾಗರೂಕರಾಗಿರಿ.
ಸೋರೆಕಾಯಿ :
ಸೋರೆಕಾಯಿಯನ್ನು (bottle gourd) ಯಾವತ್ತೂ ಬೇಯಿಸಿಯೇ ತಿನ್ನಬೇಕು. ಅದನ್ನು ಹಸಿ ತಿನ್ನುವುದರಿಂದ ಹೊಟ್ಟೆಯ ಸಮಸ್ಯೆ ಉಂಟಾಗುತ್ತದೆ. ತರಕಾರಿಗಳನ್ನು ಕಚ್ಚಾ ತಿನ್ನುವುದರಿಂದ (side effects of raw vegetables) ಹೊಟ್ಟೆ ಮತ್ತು ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಎಂದು ತಜ್ಞರು ಹೇಳುತ್ತಾರೆ. ಅಲ್ಸರ್ ಅಥವಾ ಕೆಲ ಸಮಸ್ಯೆಗಳ ಸಂದರ್ಭದಲ್ಲಿ ಬಹು ಅಂಗ ಹಾನಿಯ ಅಪಾಯವೂ ಎದುರಾಗಬಹುದು. ಹಸಿ ಸೋರೆಕಾಯಿ ರಸ ಮತ್ತು ಸೋರೆಕಾಯಿಯನ್ನು ಹಸಿ ರೂಪದಲ್ಲಿ ತಿನ್ನುವುದು ತುಂಬಾ ಹಾನಿಕಾರಕ.
ಇದನ್ನೂ ಓದಿ : ಕೇವಲ ಮೂರು ದಿನ ಹಾಲಿನೊಂದಿಗೆ ಈ ವಸ್ತುವನ್ನು ಸೇರಿಸಿ ಕುಡಿದರೆ ಸಾಕು, ದೂರವಾಗಲಿದೆ ಈ ಕಾಯಿಲೆಗಳು
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ