ನವದೆಹಲಿ : Food for kidney: ಆರೋಗ್ಯಕರ ದೇಹದಲ್ಲಿ ಮೂತ್ರಪಿಂಡ ಪ್ರಮುಖ ಪಾತ್ರ ವಹಿಸುತ್ತದೆ. ಇದು ಒಂದು ಪ್ರಮುಖ ಅಂಗವಾಗಿದ್ದು, ನಮ್ಮ ದೇಹವನ್ನು ಆರೋಗ್ಯವಾಗಿರಿಸುತ್ತದೆ. ಇದರ ಮುಖ್ಯ ಕಾರ್ಯವೆಂದರೆ ರಕ್ತದಿಂದ ತ್ಯಾಜ್ಯ ವಸ್ತುಗಳನ್ನು ಮತ್ತು ಅಧಿಕ ದ್ರವವನ್ನು ಶೋಧಿಸುವ ಮೂಲಕ ರಕ್ತವನ್ನು ಸ್ವಚ್ಛಗೊಳಿಸುವುದು ಮತ್ತು ಮೂತ್ರದ ಮೂಲಕ ತ್ಯಾಜ್ಯ ವಸ್ತುಗಳನ್ನು ಹೊರ ಹಾಕುವುದು.
ಆರೋಗ್ಯಕರ ಮೂತ್ರಪಿಂಡಗಳು ಆರೋಗ್ಯಕರ ದೇಹದ ರಚನೆಗೆ ಸಹಾಯ ಮಾಡುತ್ತದೆ. ಆದ್ದರಿಂದ, ಮೂತ್ರಪಿಂಡದ ಆರೋಗ್ಯವನ್ನು (Healthy kidney) ಕಾಪಾಡಿಕೊಳ್ಳಬೇಕಾದರೆ ಅದರ ಶುಚಿತ್ವದ ಕಡೆಗೆ ಗಮನ ಹರಿಸುವುದು ಬಹಳ ಮುಖ್ಯವಾಗಿರುತ್ತದೆ.
ಮೂತ್ರಪಿಂಡವನ್ನು ಶುಚಿಯಾಗಿಡುವುದು ಯಾಕೆ ಮುಖ್ಯ ?
ಮೂತ್ರಪಿಂಡದಲ್ಲಿ ಕೊಳಕು ಸಂಗ್ರಹವಾಗುವ ಮೂಲಕ, ಟಾಕ್ಸಿನ್ ಕೂಡಾ ಜಮಾವಣೆಯಾಗುತ್ತದೆ. ಇದು Kidney Stone ಅಪಾಯವನ್ನು ಹೆಚ್ಚಿಸುತ್ತದೆ. ಮೂತ್ರಪಿಂಡ ಸಂಬಂಧಿತ ರೋಗಗಳನ್ನು ತಡೆಗಟ್ಟಲು, ಮೂತ್ರಪಿಂಡವನ್ನು ಯಾವಾಗಲೂ ಸ್ವಚ್ಛವಾಗಿರಿಸುವುದು ಮುಖ್ಯ. ಆರೋಗ್ಯಕರ ಆಹಾರದಿಂದ ಇದು ಸಾಧ್ಯ. ಮೂತ್ರಪಿಂಡವನ್ನು ಸ್ವಚ್ಛಗೊಳಿಸಲು, ಆಹಾರದಲ್ಲಿ ಕೆಲವು ವಸ್ತುಗಳನ್ನು ಸೇರಿಸಿಕೊಳ್ಳಬೇಕು.
ಇದನ್ನೂ ಓದಿ : ಕೇವಲ ಮೂರು ದಿನ ಹಾಲಿನೊಂದಿಗೆ ಈ ವಸ್ತುವನ್ನು ಸೇರಿಸಿ ಕುಡಿದರೆ ಸಾಕು, ದೂರವಾಗಲಿದೆ ಈ ಕಾಯಿಲೆಗಳು
1. ನಿಂಬೆ :
ವಿಟಮಿನ್ ಸಿ (Vitamin C) ನಿಂಬೆಯಿಂದ ಸಮೃದ್ಧವಾಗಿರುವ ಮತ್ತು ಔಷಧೀಯ ಗುಣಗಳಿಂದ ಕೂಡಿರುವ ನಿಂಬೆ ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ನಿಂಬೆ ಪಾನಕದ (Lemon juice) ಮೂಲಕ ನಿಂಬೆಯನ್ನು ಸೇವಿಸಬಹುದು. ಇದು ಮೂತ್ರಪಿಂಡವನ್ನು ಸ್ವಚ್ಛಗೊಳಿಸುವುದಲ್ಲದೆ, ಮೂತ್ರಪಿಂಡದ ರೋಗಗಳಿಂದ ರಕ್ಷಿಸುತ್ತದೆ.
2. ಶುಂಠಿ :
ಮೂತ್ರಪಿಂಡವನ್ನು ಶುದ್ಧೀಕರಿಸುವಲ್ಲಿ ಶುಂಠಿ (Ginger) ಕೂಡ ಪರಿಣಾಮಕಾರಿಯಾಗಿದೆ. ಶುಂಠಿಯಲ್ಲಿ ಕ್ಯಾಲ್ಸಿಯಂ, ಅಯೋಡಿನ್, ಕಬ್ಬಿಣ ಮತ್ತು ಇತರ ಪೋಷಕಾಂಶಗಳು ಹೇರಳವಾಗಿದ್ದು, ಇದು ಮೂತ್ರಪಿಂಡದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
3. ಕೊತ್ತಂಬರಿ ಸೊಪ್ಪು :
ಕೊತ್ತಂಬರಿ ಸೊಪ್ಪಿನಲ್ಲಿ (Coriander leaves) ಮ್ಯಾಂಗನೀಸ್, ಕಬ್ಬಿಣ, ಮೆಗ್ನೀಸಿಯಮ್, ವಿಟಮಿನ್ ಸಿ, ವಿಟಮಿನ್ ಕೆ ಮತ್ತು ಪ್ರೋಟೀನ್ ಇರುತ್ತದೆ. ಕೊತ್ತಂಬರಿಯ ಎಲ್ಲಾ ಗುಣಗಳು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತವೆ. ಕೊತ್ತಂಬರಿ ಸೊಪ್ಪನ್ನು ಆಹಾರದಲ್ಲಿ ಅಥವಾ ಸಲಾಡ್ ರೂಪದಲ್ಲಿ ಬಳಸಬಹುದು.
ಇದನ್ನೂ ಓದಿ : Black Hair Colour: ಬಿಳಿ ಕೂದಲಿನ ಸಮಸ್ಯೆ ನಿವಾರಿಸಲು ಮೆಹಂದಿಯೊಂದಿಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ
4. ಕೆಂಪು ದ್ರಾಕ್ಷಿ :
ಕೆಂಪು ದ್ರಾಕ್ಷಿ (Red grapes) ಸೇವನೆಯು ಮೂತ್ರಪಿಂಡಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ವಿಟಮಿನ್ ಸಿ, ಬಿ 6 ಮತ್ತು ವಿಟಮಿನ್ ಎ ಸೇರಿದಂತೆ ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಇದು ಮಾತ್ರವಲ್ಲ, ಇದರಲ್ಲಿ ಕಬ್ಬಿಣ, ಕ್ಯಾಲ್ಸಿಯಂ, ಫೋಲೇಟ್ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಇದು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.
5. ಮೊಸರು :
ಮೊಸರಿನಲ್ಲಿ (Curd) ಉತ್ತಮ ಪ್ರಮಾಣದ ಪ್ರೋಬಯಾಟಿಕ್ ಬ್ಯಾಕ್ಟೀರಿಯಾ ಇದ್ದು, ಇದು ಮೂತ್ರಪಿಂಡಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ. ಮೊಸರಿನಲ್ಲಿರುವ ಔಷಧೀಯ ಗುಣಗಳು ಜೀರ್ಣಕ್ರಿಯೆಯನ್ನು (Curd for digestion) ಬಲಪಡಿಸುವುದರ ಜೊತೆಗೆ ರೋಗನಿರೋಧಕ ಶಕ್ತಿಯನ್ನು (immunity) ಹೆಚ್ಚಿಸುತ್ತದೆ. ಆದ್ದರಿಂದ ನಿಮ್ಮ ಆಹಾರದಲ್ಲಿ ಮೊಸರಿಗೊಂದು ಜಾಗ ಇರಲಿ .
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ