ನವದೆಹಲಿ: Venus Remedies - ಜ್ಯೋತಿಷ್ಯದ  (Astrology) ಪ್ರಕಾರ, 9 ಗ್ರಹಗಳು ಜೀವನದ ವಿವಿಧ ಅಂಶಗಳ ಕಾರಕಗಳಾಗಿವೆ ಮತ್ತು ಎಲ್ಲಾ ರಾಶಿಚಕ್ರ ಚಿಹ್ನೆಗಳ (Zodiac Sign) ಮೇಲೆ ಪರಿಣಾಮ ಬೀರುತ್ತವೆ. ಪ್ರತಿಯೊಬ್ಬ ವ್ಯಕ್ತಿಯ ಜಾತಕದಲ್ಲಿ ಗ್ರಹಗಳ ಸ್ಥಾನವು ಅವನ ಸಂತೋಷ, ಆರೋಗ್ಯ, ಸಂಪತ್ತು, ಕುಟುಂಬ, ಯಶಸ್ಸು ಇತ್ಯಾದಿಗಳ ಮೇಲೆ ಪರಿಣಾಮ ಬೀರುತ್ತದೆ. ಯಾವುದೇ ಒಂದು ವಿಷಯಕ್ಕೆ ಸಂಬಂಧಿಸಿದ ಗ್ರಹಗಳು ದುರ್ಬಲವಾಗಿದ್ದರೆ, ಆ ಸಂದರ್ಭದಲ್ಲಿ ವ್ಯಕ್ತಿ ಆ ವಿಷಯದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ಪ್ರಮುಖ ಗ್ರಹಗಳಲ್ಲಿ ಒಂದು ಶುಕ್ರ(Shukra). ಜಾತಕದಲ್ಲಿ ಒಂದು ವೇಳೆ ಶುಕ್ರ  (Venus)  ದುರ್ಬಲನಾಗಿದ್ದರೆ, ವ್ಯಕ್ತಿಯ ಜೀವನದಲ್ಲಿ ಕಡಿಮೆ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ವ್ಯಕ್ತಿ  ಹಣದ ಸಮಸ್ಯೆ  (Money Problem)  ಮತ್ತು ವೈವಾಹಿಕ ಜೀವನದಲ್ಲಿ (Married Life) ಸಂಕಷ್ಟ ಎದುರಿಸಬೇಕಾಗುತ್ತದೆ.


COMMERCIAL BREAK
SCROLL TO CONTINUE READING

ಭೌತಿಕ ಸುಖದ ಕಾರಕ  ಶುಕ್ರ
ಒಂದು ವೇಳೆ ಜಾತಕದಲ್ಲಿ ಶುಕ್ರ ಪ್ರಬಲನಾಗಿದ್ದರೆ ವ್ಯಕ್ತಿಯು ಅಗಾಧವಾದ ಭೌತಿಕ ಸುಖವನ್ನು ಪಡೆಯುತ್ತಾನೆ. ಅವನು ಐಶಾರಾಮಿ ಜೆವನವನ್ನು ಸಾಗಿಸುತ್ತಾನೆ ಮತ್ತು  ಆನಂದಿಸುತ್ತಾನೆ. ಅಂದರೆ ಅವನು ವೈಭವೋಪೇತ ಜೀವನವನ್ನು ನಡೆಸುತ್ತಾನೆ. ಶುಕ್ರ ಗ್ರಹವು ಭೌತಿಕ ಸಂತೋಷದ ದೃಷ್ಟಿಯಿಂದ ಬಲವಾಗಿರುವುದು ಬಹಳ ಮುಖ್ಯ. ಶುಕ್ರ ಗ್ರಹ ದುರ್ಬಲವಾಗಿದ್ದರೆ ವೈವಾಹಿಕ ಜೀವನದಲ್ಲಿ ಏರಿಳಿತಗಳು ಉಂಟಾಗುತ್ತವೆ ಮತ್ತು ಅನೇಕ ಬಾರಿ ಸಂಬಂಧ ಮುರಿದು ಬೀಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಶುಕ್ರ ಗ್ರಹಕ್ಕೆ ಸಂಬಂಧಿಸಿದ ಕೆಲವು ಕ್ರಮಗಳನ್ನು ಅನುಸರಿಸುವುದು ಸೂಕ್ತ.


ಇದನ್ನೂ ಓದಿ-Astrology: ಪ್ರೀತಿ ಎಂದರೆ ಹೆದರುವ ಈ ರಾಶಿಯವರು ಸಹಿಸಲ್ಲ ದಾಂಪತ್ಯ ದ್ರೋಹ


ಶುಕ್ರಗ್ರಹವನ್ನು ಬಲಪಡಿಸುವ ಉಪಾಯ 
ಜ್ಯೋತಿಷ್ಯಶಾಸ್ತ್ರ  ಮತ್ತು ಲಾಲ್ ಕಿತಾಬ್ ನಲ್ಲಿ ಶುಕ್ರನನ್ನು ಬಲಪಡಿಸುವ ಹಲವು ಪರಿಹಾರಗಳನ್ನು ನೀಡಲಾಗಿದೆ. ಶುಕ್ರವಾರ ಈ ಕೆಲವು ಪರಿಹಾರಗಳನ್ನು ಮಾಡಲು ಉತ್ತಮವಾಗಿದೆ. ಏಕೆಂದರೆ ಶುಕ್ರವಾರ ಸಂಪತ್ತಿನ ದೇವತೆಯಾದ ಲಕ್ಷ್ಮಿ ದೇವಿಗೆ ಸಮರ್ಪಿತವಾಗಿದೆ. ಇದಕ್ಕಾಗಿ ಶುಕ್ರವಾರ ಲಕ್ಷ್ಮಿ ದೇವಿಯನ್ನು ಪೂಜಿಸಬೇಕು. ಇದರೊಂದಿಗೆ, ಶ್ರೀ ಸೂಕ್ತವನ್ನು ಪಠಿಸಬೇಕು. ಹೀಗ ಮಾಡುವ ಮೂಲಕ ನೀವು ನಿಮ್ಮ ಜೀವನದ ಹಣಕಾಸಿನ ಸಮಸ್ಯೆಯನ್ನು ನಿವಾರಿಸಬಹುದು. ಇದಲ್ಲದೇ, ಶುಕ್ರವಾರ ಹಾಲು, ಅಕ್ಕಿ, ಬಿಳಿ ಬಟ್ಟೆಯಂತಹ ಬಿಳಿ ವಸ್ತುಗಳನ್ನು ದಾನ ಮಾಡಿ. ಶುಕ್ರವಾರ ಹಾಲಿನಿಂದ ತಯಾರಿಸಿದ ಖೀರ್ ಅಥವಾ ಸಿಹಿತಿಂಡಿಗಳನ್ನು ಲಕ್ಷ್ಮಿ ದೇವಿಗೆ ಅರ್ಪಿಸುವುದರ ಜೊತೆಗೆ ಕನ್ಯೆಗೂ ಉಣಬಡಿಸಿ.


ಇದನ್ನೂ ಓದಿ-Astrology : ಈ 3 ರಾಶಿಯವರು ತುಂಬಾ ನಿಗೂಢರು : ಇವರು ಹುಟ್ಟಿನಿಂದಲೇ ಅದೃಷ್ಟವಂತರಂತೆ


(ಸೂಚನೆ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಉಪಾಯಗಳನ್ನು ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆಯಲು ಮರೆಯಬೇಡಿ)


ಇದನ್ನೂ ಓದಿ-ಈ ಕೆಟ್ಟ ಅಭ್ಯಾಸಗಳನ್ನು ತಕ್ಷಣವೇ ಬಿಟ್ಟುಬಿಡಿ, ಇಲ್ಲದಿದ್ದರೆ ಮೂಳೆಗಳು ದುರ್ಬಲವಾಗುತ್ತವೆ..!


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ