ಬೆಂಗಳೂರು :  Shukra gochara 2022: ಸಂಪತ್ತು, ಸಂತೋಷ ಮತ್ತು ಆಸ್ತಿಯ ಅಂಶವಾಗಿರುವ  ಶುಕ್ರ ಗ್ರಹವು ಶೀಘ್ರದಲ್ಲೇ ರಾಶಿಚಕ್ರವನ್ನು ಬದಲಾಯಿಸಲಿದೆ (Venus Transit). ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಸ್ತುತ ಮಕರ ರಾಶಿಯಲ್ಲಿರುವ ಶುಕ್ರ, ಮಾರ್ಚ್ 31 ರ ಬೆಳಿಗ್ಗೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ (Vinus transit 2022). ಶುಕ್ರನನ್ನು ವೃಷಭ ಮತ್ತು ತುಲಾ ರಾಶಿಯ ಅಧಿಪತಿ ಎಂದು ಪರಿಗಣಿಸಲಾಗುತ್ತದೆ. ಶುಕ್ರ ಸಂಕ್ರಮಣದಿಂದಾಗಿ ಈ  ಮೂರು ರಾಶಿಯವರಿಗೆ ಲಾಭವಾಗಲಿದೆ.  


COMMERCIAL BREAK
SCROLL TO CONTINUE READING

ಮೇಷ ರಾಶಿ (Aries):
ಮೇಷ ರಾಶಿಯ ಜಾತಕದಲ್ಲಿ, ಶುಕ್ರನು ಹನ್ನೊಂದನೇ ಮನೆಯಲ್ಲಿ ಅಂದರೆ ಲಾಭದ ಸ್ಥಳದಲ್ಲಿ ಗೋಚರಿಸಲಿದ್ದಾನೆ. ಶುಕ್ರ ಸಂಕ್ರಮಣದ ಅವಧಿಯಲ್ಲಿ, ಮೇಷ ರಾಶಿಯ ಜನರು ಆರ್ಥಿಕ ಸಮೃದ್ಧಿಯನ್ನು ಪಡೆಯುತ್ತಾರೆ (Venus transit effects). ಇದರೊಂದಿಗೆ ವ್ಯಾಪಾರದಲ್ಲಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಆರ್ಥಿಕ ಪ್ರಗತಿಗೂ ಇದು ಕಾರಣವಾಗುತ್ತದೆ. 


ಇದನ್ನೂ ಓದಿ : Rahu Ketu Rashi Parivartan: ರಾಹು-ಕೇತುಗಳ ಹಿಮ್ಮುಖ ಚಲನೆ, ಈ 5 ರಾಶಿಯವರು ಎಚ್ಚರದಿಂದಿರಿ


ಮಿಥುನ ರಾಶಿ  (Gemini): 
ಶುಕ್ರನು 9ನೇ ಮನೆಯಲ್ಲಿ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಒಂಬತ್ತನೇ ಮನೆಯಿಂದ ಶುಕ್ರನ ಸಂಚಾರವು ಅದೃಷ್ಟವನ್ನು ಹೆಚ್ಚಿಸುತ್ತದೆ (Shukra Rashi parivarthane). ಇದರೊಂದಿಗೆ, ಉದ್ಯೋಗ ಮತ್ತು ವ್ಯವಹಾರದಲ್ಲಿ ಹಣಕಾಸಿನ ಲಾಭದ ಮೂಲಗಳನ್ನು ಹೆಚ್ಚಿಸುತ್ತದೆ. ಶುಕ್ರ ಸಂಚಾರದ ಪ್ರಭಾವದಿಂದ ಮನೆ ಮತ್ತು ಆಸ್ತಿಗಳನ್ನು ಖರೀದಿಸಬಹುದು. ಅಲ್ಲದೆ, ಪಾಲುದಾರಿಕೆ ವ್ಯವಹಾರದಿಂದ ಸಾಕಷ್ಟು ಲಾಭ ಇರುತ್ತದೆ. 


ಮಕರ ರಾಶಿ (Capricorn):
ಮಕರ ರಾಶಿಯವರಿಗೆ ಶುಕ್ರ ಸಂಕ್ರಮವು (Venus transit) ಪ್ರಯೋಜನಕಾರಿಯಾಗಿ ಪರಿಣಮಿಸಲಿದೆ. ಅಲ್ಲದೆ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಶುಕ್ರನ ಸಂಕ್ರಮಣವು ಎರಡನೇ ಮನೆಯಲ್ಲಿ ಸಂಭವಿಸಲಿದೆ. ಜಾತಕದ ಎರಡನೇ ಮನೆಯಲ್ಲಿ ಶುಕ್ರ ಸಂಕ್ರಮಿಸಿದಾಗ, ಸಂಪತ್ತು ಮತ್ತು ಕುಟುಂಬ ಕೆಲಸದಲ್ಲಿ ಮಹತ್ತರವಾದ ಪ್ರಗತಿ ಕಂಡುಬರುತ್ತದೆ. 


ಇದನ್ನೂ ಓದಿ : 30 ವರ್ಷಗಳ ನಂತರ ಈ 3 ರಾಶಿಯವರ ಜೀವನದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಲಿದ್ದಾನೆ ಶನಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.