48 ಗಂಟೆಗಳ ಬಳಿಕ ಶುಕ್ರ ಗೋಚರ, ಹಂಸ-ಮಾಲವ್ಯ ರಾಜಯೋಗಗಳ ಸೃಷ್ಟಿ, ಈ ಜನರಿಗೆ ಅಪಾರ ಧನ ಪ್ರಾಪ್ತಿ !
Shukra Gochar 2023: ವೈದಿಕ ಜ್ಯೋತಿಷ್ಯದ ಪ್ರಕಾರ, 48 ಗಂಟೆಗಳ ಬಳಿಕ ಶುಕ್ರ ಗೋಚರ ನೆರವೇರಲಿದ್ದು, ಇದು ಮಾಲವ್ಯ ರಾಜಯೋಗವನ್ನು ಸೃಷ್ಟಿಸಲಿದೆ. ಇದರಿಂದಾಗಿ 4 ರಾಶಿಗಳ ಜನರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ಆ ನಾಲ್ಕು ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ
Shukra Gochar 2023 Forming Malavya Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ತಮ್ಮ ಉಚ್ಛ ಮತ್ತು ನೀಚ ರಾಶಿಗಳಲ್ಲಿ ಪ್ರವೇಶಿಸುತ್ತವೆ. ಇದರಿಂದ ಮಾನವನ ಜೀವನ ಮತ್ತು ದೇಶ ಹಾಗೂ ಇಡೀ ಮೇಲೆ ಅವುಗಳ ಪ್ರಭಾವ ಕಂಡುಬರುತ್ತದೆ. ಫೆಬ್ರವರಿ 15 ರಂದು, ವೈಭವ ಮತ್ತು ಐಶ್ವರ್ಯದ ಅಂಶವಾದ ಶುಕ್ರ ಗ್ರಹವು ತನ್ನ ಉತ್ಕೃಷ್ಟ ರಾಶಿಯಾಗಿರುವ ಮೀನ ರಾಶಿಯನ್ನು ಪ್ರವೇಶಿಸಲಿದೆ. ಇದರಿಂದ ಮಾಲವ್ಯ ರಾಜಯೋಗ ರೂಪುಗೊಳ್ಳಲಿದೆ. ಈ ಯೋಗದ ಪರಿಣಾಮವು ಎಲ್ಲಾ ದ್ವಾದಶ ರಾಶಿಗಳ ಸ್ಥಳಿಯರ ಮೇಲೆ ಗೋಚರಿಸಲಿದೆ. ಆದರೆ 4 ರಾಶಿಗಳ ಜನರಿಗೆ ಇದು ಆರ್ಥಿಕ ಮತ್ತು ಘನತೆ ಗೌರವದ ವಿಷಯದಲ್ಲಿ ಅಪಾರ ಲಾಭಕಾರಿ ಸಾಬೀತಾಗಲಿದೆ. ಈ ಅವಧಿಯಲ್ಲಿ ಈ ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತು ಪ್ರಾಪ್ತಿಯಾಗಲಿದೆ. ಆ ಅದೃಷ್ಟದ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
ಮಿಥುನ ರಾಶಿ
ಮಾಲವ್ಯ ರಾಜಯೋಗವು ನಿಮಗೆ ಮಂಗಳಕರ ಮತ್ತು ಫಲಪ್ರದವಾಗಿದೆ ಸಾಬೀತಾಗಲಿದೆ. ಏಕೆಂದರೆ ಶುಕ್ರ ಗ್ರಹವು ನಿಮ್ಮ ಜಾತಕದ ಕರ್ಮ ಭಾವದಲ್ಲಿ ಮಾಲವ್ಯ ರಾಜಯೋಗವನ್ನು ರೂಪಿಸುತ್ತಿದೆ ಮತ್ತು ಇನ್ನೊಂದೆಡೆ ಗುರು ಹಂಸ ಎಂಬ ರಾಜಯೋಗವನ್ನು ರಚಿಸಿ ಈಗಾಗಲೇ ವಿರಜಮಾನನಾಗಿದ್ದಾನೆ . ಈ ಅವಧಿಯಲ್ಲಿ, ವೇತನ ಪಡೆಯುವ ಜನರಿಗೆ ತಾವು ಬಯಸಿದ ಸ್ಥಳಕ್ಕೆ ವರ್ಗಾವಣೆ ಭಾಗ್ಯ ಸಿಗಲಿದೆ. ಅಲ್ಲದೆ, ಸ್ಥಗಿತಗೊಂಡ ಮತ್ತು ನಿಮಗೆ ಬರಬೇಕಾದ ಹಣವನ್ನು ನೀವು ಪಡೆಯಬಹುದು. ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಇದೇ ವೇಳೆ, ಈ ಅವಧಿಯಲ್ಲಿ, ನೀವು ಕೆಲಸ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ಪ್ರಯಾಣ ನಡೆಸುವ ಸಾಧ್ಯತೆ ಇದೆ.
ಕನ್ಯಾ ರಾಶಿ
ಮಾಲವ್ಯ ರಾಜಯೋಗವು ನಿಮಗೆ ಅನುಕೂಲಕರವಾಗಿದೆ. ಏಕೆಂದರೆ ವೈವಾಹಿಕ ಜೀವನದ ಭಾವದಲ್ಲಿ ಈ ರಾಜಯೋಗವನ್ನು ರೂಪುಗೊಳ್ಳಲಿದೆ. ಇನ್ನೊಂದೆಡೆ, ಹಂಸ್ ರಾಜಯೋಗ ನಿರ್ಮಾಣದ ಲಾಭ ಕೂಡ ನಿಮಗೆ ಸಿಗಲಿದೆ. ಆದ್ದರಿಂದ, ಈ ಅವಧಿಯಲ್ಲಿ , ನಿಮ್ಮ ಸಂಗಾತಿಯ ಸಲಹೆಯನ್ನು ಪಡೆದ ಬಳಿಕ ಮಾತ್ರ ಹಣವನ್ನು ಹೂಡಿಕೆ ಮಾಡಿದರೆ ಉತ್ತಮ, ಅದು ಭವಿಷ್ಯದಲ್ಲಿ ನಿಮಗೆ ಲಾಭವನ್ನು ನೀಡುತ್ತದೆ. ಇದರೊಂದಿಗೆ ಸಂಗಾತಿಯೊಂದಿಗೆ ಉತ್ತಮ ಹೊಂದಾಣಿಕೆ ಇರಲಿದೆ. ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಭಾರಿ ಬೆಂಬಲ ಸಿಗಲಿದೆ. ಇಷ್ಟಾರ್ಥಗಳು ಈಡೇರಲಿವೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರಬಹುದು.
ಇದನ್ನೂ ಓದಿ- Bad Cholesterol ನಿಯಂತ್ರಣ, ತೂಕ ಇಳಿಕೆಯ ಜೊತೆಗೆ ಹಲವು ಆರೋಗ್ಯ ಲಾಭಗಳನ್ನು ಹೊಂದಿದೆ ಈ ಚಹಾ!
ವೃಷಭ ರಾಶಿ
ಶುಕ್ರನ ಸಂಕ್ರಮವು ನಿಮಗೆ ಲಾಭದಾಯಕವೆಂದು ಸಾಬೀತಾಗುವ ಎಲ್ಲಾ ಸಾಧ್ಯತೆಗಳಿವೆ. ಏಕೆಂದರೆ ಗುರು ಈಗಾಗಲೇ ಇರುವ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಶುಕ್ರ ಕೂಡ ಸಾಗಲಿದ್ದಾನೆ. ಹೀಗಾಗಿ ಪ್ರೇಮವಿವಾಹಕ್ಕೆ ಗುರು ಮತ್ತು ಶುಕ್ರರ ಸಂಯೋಗ ತುಂಬಾ ಉತ್ತಮ ಸಂಯೋಗ ಎನ್ನಲಾಗುತ್ತದೆ. ಇದಲ್ಲದೆ ಹೊಸ ಸಂಗಾತಿಯು ನಿಮ್ಮ ಜೀವನವನ್ನು ಪ್ರವೇಶಿಸಬಹುದು. ಇದರಿಂದ ಪ್ರೀತಿ ಜೀವನ ಉತ್ತಮವಾಗಲಿದೆ. ಈ ಅವಧಿಯಲ್ಲಿ ಹಠಾತ್ ಧನಲಾಭದ ಸಾಧ್ಯತೆಗಳಿವೆ. ಉದ್ಯೋಗಸ್ಥರು ಹೊಸ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಈ ಅವಧಿಯಲ್ಲಿ ಸಂತಾನ ಪ್ರಗತಿ ಕಂಡುಬರಬಹುದು.
ಇದನ್ನೂ ಓದಿ-Valentine's Day 2023: ಈ ಬಾರಿಯ ಪ್ರೇಮಿಗಳ ದಿನದಂದು ನಿಮ್ಮ ಸಂಗಾತಿಗೆ ನೀಡಿ ಈ ವಿಶಿಷ್ಟ ಉಡುಗೊರೆ
ಧನು ರಾಶಿ
ಮಾಲವ್ಯ ರಾಜಯೋಗವು ನಿಮಗೆ ಪ್ರಯೋಜನಕಾರಿ ಎಂದು ಸಾಬೀತಾಗಲಿದೆ. ಏಕೆಂದರೆ ಈ ರಾಜಯೋಗವು ನಿಮ್ಮ ಸಂಕ್ರಮಣದ ಜಾತಕದ ಚತುರ್ಥ ಭಾವದಲ್ಲಿ ರೂಪುಗೊಳ್ಳುತ್ತದೆ. ಇದರೊಂದಿಗೆ ಹಂಸ್ ಹೆಸರಿನ ರಾಜಯೋಗ ಈಗಾಗಲೇ ಅಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ನೀವು ಈ ಅವಧಿಯಲ್ಲಿ ಎಲ್ಲಾ ದೈಹಿಕ ಸಂತೋಷಗಳನ್ನು ಪಡೆಯಬಹುದು. ಇದರೊಂದಿಗೆ, ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ ಮತ್ತು ನಿಮ್ಮ ಆರ್ಥಿಕ ಸ್ಥಿತಿಯು ಬಲವಾಗಿರುತ್ತದೆ. ಈ ಅವಧಿಯಲ್ಲಿ, ನೀವು ಆಸ್ತಿ ಅಥವಾ ವಾಹನವನ್ನು ಖರೀದಿಸಲು ನಿಮ್ಮ ಮನಸ್ಸು ಮಾಡಬಹುದು. ಹಾಗೆಯೇ ರಾಜಕೀಯದ ಜತೆ ನಂಟು ಇದ್ದರೆ ಸ್ಥಾನಮಾನ ಪ್ರಾಪ್ತಿಯಾಗಲಿದೆ.
ಇದನ್ನೂ ಓದಿ-Shani Ast 2023: ಕುಂಭ ರಾಶಿಯಲ್ಲಿ ಸಂಪೂರ್ಣ ಅಸ್ತನಾದ ಶನಿ, ಈ ರಾಶಿಗಳ ಸಂಕಷ್ಟದಲ್ಲಿ ಹೆಚ್ಚಳ!
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.