Shani Ast 2023: ಕುಂಭ ರಾಶಿಯಲ್ಲಿ ಸಂಪೂರ್ಣ ಅಸ್ತನಾದ ಶನಿ, ಈ ರಾಶಿಗಳ ಸಂಕಷ್ಟದಲ್ಲಿ ಹೆಚ್ಚಳ!

Shani Ast In Aquarius 2023: ಕುಂಭ ರಾಶಿಯಲ್ಲಿ ಶನಿದೇವ ಪೂರ್ಣ ಪ್ರಮಾಣದಲ್ಲಿ ಅಸ್ತಮಿಸಿದ್ದಾನೆ. ಇದರಿಂದ 4 ರಾಶಿಗಳ ಜಾತಕದವರ ಸಂಕಷ್ಟದಲ್ಲಿ ಹೆಚ್ಚಳವಾಗಲಿದೆ. ಯಾವ ರಾಶಿಗಳ ಜನರು ಶನಿಯ ಸಂಪೂರ್ಣ ಅಸ್ತಾವಸ್ಥೆಯಲ್ಲಿ ಅತ್ಯಂತ ಜಾಗರೂಕರಾಗಿಬೇಕು ತಿಳಿದುಕೊಳ್ಳೋಣ ಬನ್ನಿ.  

Written by - Nitin Tabib | Last Updated : Feb 12, 2023, 08:38 PM IST
  • ಶನಿ ನಿಮ್ಮ ಜಾತಕದ ಸಪ್ತಮೇಶ ಹಾಗೂ ಅಷ್ಟಮೇಶ.
  • ಇದಲ್ಲದೆ ಶನಿ ನಿಮ್ಮ ಜಾತಕದ ಮಾರ್ಕೇಶ ಕೂಡ ಹೌದು.
  • ಆದ್ದರಿಂದಲೇ ಈ ಪರಿಸ್ಥಿತಿ ನಿಮಗೆ ಒಳ್ಳೆಯದಲ್ಲ.
Shani Ast 2023: ಕುಂಭ ರಾಶಿಯಲ್ಲಿ ಸಂಪೂರ್ಣ ಅಸ್ತನಾದ ಶನಿ, ಈ ರಾಶಿಗಳ ಸಂಕಷ್ಟದಲ್ಲಿ ಹೆಚ್ಚಳ! title=
ಸಂಪೂರ್ಣ ಅಸ್ತನಾದ ಶನಿ! ಯಾರಿಗೆ ಸಂಕಷ್ಟ?

Shani Dev Ast 2023: ವೈದಿಕ ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಕಾಲಕಾಲಕ್ಕೆ ಅಸ್ತಮಿಸುತ್ತವೆ ಮತ್ತು ಉದಯಿಸುತ್ತವೆ. ಮಾನವ ಜೀವನ ಮತ್ತು ದೇಶ-ಜಗತ್ತಿನ ಅವುಗಳ ಪ್ರಭಾವ ಕಂಡುಬರುತ್ತದೆ. ಕೆಲ ದಿನಗಳ ಹಿಂದೆಯಷ್ಟೇ ಕುಂಭ ರಾಶಿಗೆ ಪ್ರವೇಶಿಸಿರುವ ಶನಿದೇವನು  ಕುಂಭ ರಾಶಿಯಲ್ಲಿಯೇ ಇದೀಗ ಸಂಪೂರ್ಣ ಅಸ್ತಮಿಸಿದ್ದಾನೆ. ಒಂದು ಗ್ರಹವು ಸೂರ್ಯನ ಹತ್ತಿರ ಬಂದಾಗ, ಅಂದರೆ ಒಂದು ಗ್ರಹವು ಸುಮಾರು 4 ಡಿಗ್ರಿಗಳಷ್ಟು ಹತ್ತಿರಕ್ಕೆ ಬಂದಾಗ ಆ ಗ್ರಹವು ಸಂಪೂರ್ಣವಾಗಿ ಅಸ್ತಮಿಸುತ್ತದೆ. ಶನಿದೇವನ ಈ ಸಂಪೂರ್ಣ ಅಸ್ತಾವಸ್ಥೆಯ ಪ್ರಭಾವ ಎಲ್ಲಾ ದ್ವಾದಶ ರಾಶಿಗಳ ಮೇಲೆ ಕಂಡು ಬರಲಿದೆ. ಆದರೆ ವಿಶೇಷವಾಗಿ 4 ರಾಶಿಗಳ ಜನರು ಇದರಿಂದ ತುಂಬಾ ಜಾಗರೂಕರಾಗಿರಬೇಕು. ಆ 4 ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.

ಮಿಥುನ ರಾಶಿ
ಶನಿದೇವನ ಸಂಪೂರ್ಣ ಅಸ್ತ ನಿಮ್ಮ ಪಾಲಿಗೆ ಹಾನಿಕಾರಕವೆಂದು ಸಾಬೀತಾಗಲಿದೆ. ಶನಿದೇವನು ಮಿಥುನ ಲಗ್ನದಲ್ಲಿ ನವಮೇಶ  ಮತ್ತು ಅಷ್ಟಮೇಶನಾಗಿದ್ದಾನೆ. ಅಂದರೆ ಆತ ಪಿತೃ ಮತ್ತು ಆರೋಗ್ಯ ಕಾರಕನಾಗಿದ್ದಾನೆ ಎಂದರ್ಥ. ಹೀಗಾಗಿ ಅನಾರೋಗ್ಯ ಪೀಡಿತರು ಹಾಗೂ  ಆಸ್ಪತ್ರೆಗೆ ದಾಖಲಾಗಿರುವವರಿಗೆ ಸಾಕಷ್ಟು ಕಾಳಜಿಯ ಅಗತ್ಯತೆ ಇದೆ. ಅಲ್ಲದೆ, ಈ ಸಮಯದಲ್ಲಿ ವಾಹನವನ್ನು ಎಚ್ಚರಿಕೆಯಿಂದ ಚಾಲನೆ ಮಾಡಿ, ಏಕೆಂದರೆ ಅಪಘಾತದ ಸಾಧ್ಯತೆಗಳು ಸೃಷ್ಟಿಯಾಗುತ್ತಿವೆ.

ಕರ್ಕ ರಾಶಿ
ಶನಿ ದೇವನ ಸಂಪೂರ್ಣ ಅಸ್ತ ಕರ್ಕ ರಾಶಿಯವರಿಗೆ ಪ್ರತಿಕೂಲ ಎಂದು ಸಾಬೀತಾಗಲಿದೆ. ಶನಿ ನಿಮ್ಮ ಜಾತಕದ ಸಪ್ತಮೇಶ ಹಾಗೂ ಅಷ್ಟಮೇಶ. ಇದಲ್ಲದೆ ಶನಿ ನಿಮ್ಮ ಜಾತಕದ ಮಾರ್ಕೇಶ ಕೂಡ ಹೌದು. ಆದ್ದರಿಂದಲೇ ಈ ಪರಿಸ್ಥಿತಿ ನಿಮಗೆ ಒಳ್ಳೆಯದಲ್ಲ. ನಿಮ್ಮ ಸಂಗಾತಿಯ ಆರೋಗ್ಯದ ಬಗ್ಗೆ ನೀವು ಕಾಳಜಿ ವಹಿಸಬೇಕು ಎಂದರ್ಥ. ಅಲ್ಲದೆ, ನಿಮ್ಮ ಸಂಗಾತಿಯೊಂದಿಗೆ ಹೆಜ್ಜೆ ಇರಿಸಿ. ಇದಲ್ಲದೆ ಈ ಅವಧಿಯಲ್ಲಿ ಹೊಸ ಹೂಡಿಕೆಗಳನ್ನು ಮಾಡುವುದನ್ನು ತಪ್ಪಿಸಿ, ಇಲ್ಲದಿದ್ದರೆ ನಷ್ಟವಾಗಬಹುದು.

ಇದನ್ನೂ ಓದಿ-ಹುಟ್ಟಿನಿಂದಲೇ ಅತ್ಯಂತ ಅದೃಷ್ಟವಂತರಾಗಿರುತ್ತಾರೆ ಈ ರಾಶಿಯ ಜನರು, ನಿಮ್ಮ ರಾಶಿ ಇದೆಯಾ ಈ ಪಟ್ಟಿಯಲ್ಲಿ?

ಮಕರ ರಾಶಿ
ಶನಿದೇವನ ಸಂಪೂರ್ಣ ಅಸ್ತ ನಿಮಗೆ ಹಾನಿಕಾರಕವೆಂದು ಸಾಬೀತಾಗುವ ಸಾಧ್ಯತೆ ಇದೆ. ಶನಿದೇವ ನಿಮ್ಮ ಲಗ್ನ ಭಾವಕ್ಕೆ ಅಧಿಪತಿ. ಹೀಗಾಗಿ ಈ ಅವಧಿಯಲ್ಲಿ ನೀವು ಜ್ವರದಿಂದ ಬಳಲುವ ಸಾಧ್ಯತೆ ಇದೆ. ಶೀತ, ನೆಗಡಿ ಬರುವ ಸಾಧ್ಯತೆ ಇದೆ. ಕನಿಷ್ಠ 15 ರಿಂದ 20 ದಿನಗಳಲ್ಲಿ ನೀವು ಪುನಃ ಆರೋಗ್ಯವಂತರಾಗುವಿರಿ. ಇದೇ ವೇಳೆ ಸಂಗಾತಿಯೊಂದಿಗೆ ಯಾವುದಾದರೊಂದು ವಿಷಯಕ್ಕೆ ಸಂಬಂಧಿಸಿದಂತೆ ವೈಮನಸ್ಸು ಉಂಟಾಗುವ ಸಾಧ್ಯತೆ ಇದೆ. ಮತ್ತೊಂದೆಡೆ, ನೀವು ಉದ್ಯಮಿಯಾಗಿದ್ದರೆ, ಈ ಅವಧಿಯಲ್ಲಿ ನಿಮ್ಮ ವ್ಯವಹಾರವು ತನ್ನ ಗತಿಯನ್ನು ಕಳೆದುಕೊಳ್ಳಲಿದೆ.

ಇದನ್ನೂ ಓದಿ-Hindu New Year: ಶೀಘ್ರದಲ್ಲಿಯೇ ಹೊಸ ಸಂವತ್ಸರ ಆರಂಭ, 30 ವರ್ಷಗಳ ಬಳಿಕ ಶುಭ ಸಂಯೋಗ, ಈ ರಾಶಿಗಳ ಜನರ ಒಳ್ಳೆಯ ದಿನಗಳು ಆರಂಭ

ಕುಂಭ ರಾಶಿ 
ಶನಿದೇವನ ಸಂಪೂರ್ಣ ಅಸ್ತ ಕುಂಭ ರಾಶಿಯವರಿಗೆ ಆರೋಗ್ಯದ ದೃಷ್ಟಿಯಿಂದ ಅಶುಭವೆಂದು ಭಾವಿಸಲಾಗುತ್ತದೆ. ಏಕೆಂದರೆ ಶನಿದೇವನು ನಿಮ್ಮ ರಾಶಿಯಿಂದ ಲಗ್ನ ಮತ್ತು ದ್ವಾದಶ ಭಾವದ ಅಧಿಪತಿ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಮೇಲೆ ಸುಳ್ಳು ಆರೋಪಗಳು ಕೇಳಿ ಬರುವ ಸಾಧ್ಯತೆಗಳಿವೆ. ಅಲ್ಲದೆ, ಆರೋಗ್ಯದಲ್ಲಿ ಕ್ಷೀಣಿಸಬಹುದು. ಗಂಟಲು ಮತ್ತು ಬಾಯಿಯಲ್ಲಿ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ದೇಹದಲ್ಲಿ ಅನೇಕ ಸೋಂಕುಗಳು ಇರಬಹುದು. ಇನ್ನೊಂದೆಡೆ ನಿಮ್ಮ ಕೂಡಿಬಂದ ಕೆಲಸಗಳು ಕೂಡ ಹಾಳಾಗುವ ಸಾಧ್ಯತೆ ಇದೆ.

ಇದನ್ನೂ ಓದಿ-ದೇವಗುರು ಬೃಹಸ್ಪತಿಯ ಮನೆಗೆ ಶುಕ್ರನ ಪ್ರವೇಶ, 3 ರಾಶಿಗಳ ಜನರ ಮೇಲೆ ಭಾರಿ ಹಣದ ಸುರಿಮಳೆ, ಸಿಗಲಿದೆ ಬಡ್ತಿ ಭಾಗ್ಯ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News