ಇನ್ನು 48 ಗಂಟೆಗಳಲ್ಲಿ ಈ ರಾಶಿಯವರು ನಿರೀಕ್ಷಿಸಿದ್ದೆಲ್ಲಾ ಸಿಗಲಿದೆ , ಪ್ರತಿ ಹಂತದಲ್ಲೂ ಶುಕ್ರ ನೀಡಲಿದ್ದಾನೆ ಯಶಸ್ಸು
ಶುಕ್ರನ ರಾಶಿಚಕ್ರದಲ್ಲಿನ ಬದಲಾವಣೆಯು ಪ್ರೀತಿ, ಪ್ರಣಯ, ಹಣ, ಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತದೆ. ಆಗಸ್ಟ್ 7 ರಂದು ಕರ್ಕಾಟಕದಲ್ಲಿ ನಡೆಯಲಿರುವ ಶುಕ್ರ ಸಂಕ್ರಮಣ ನ 5 ರಾಶಿಯವರ ಅದೃಷ್ಟ ಬದಲಿಸಲಿದೆ.
ಬೆಂಗಳೂರು : ಜ್ಯೋತಿಷ್ಯದಲ್ಲಿ, ಶುಕ್ರ ಗ್ರಹವನ್ನು ಪ್ರೀತಿ, ಪ್ರಣಯ, ಸೌಕರ್ಯಗಳು, ವೈಭವ, ವೈವಾಹಿಕ ಸಂತೋಷ, ಸೌಂದರ್ಯ, ಕಲೆಯ ಅಂಶವೆಂದು ಕರೆಯಲಾಗುತ್ತದೆ. ಯಾರ ಜಾತಕದಲ್ಲಿ ಶುಕ್ರ ಗ್ರಹವು ಬಲವಾಗಿರುತ್ತದೆಯೋ ಆ ವ್ಯಕ್ತಿಯು ಐಷಾರಾಮಿ ಜೀವನವನ್ನು ಆನಂದಿಸುತ್ತಾನೆ ಎಂದು ಹೇಳಲಾಗುತ್ತದೆ. ಮತ್ತೊಂದೆಡೆ, ಶುಕ್ರ ಸಂಕ್ರಮಣ ಅಥವಾ ಅದರ ಸ್ಥಾನದಲ್ಲಿನ ಬದಲಾವಣೆಯು ಎಲ್ಲಾ ರಾಶಿಯವರ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಇದೀಗ ಮತ್ತೊಮ್ಮೆ ಶುಕ್ರ ಗ್ರಹವು ರಾಶಿಯನ್ನು ಪರಿವರ್ತಿಸಲಿದೆ. ಶುಕ್ರ ಗ್ರಹವು ಆಗಸ್ಟ್ 7 ರಂದು ಬೆಳಿಗ್ಗೆ 5 ಗಂಟೆಗೆ ಕರ್ಕ ರಾಶಿಯನ್ನು ಪ್ರವೇಶಿಸಲಿದೆ. ಶುಕ್ರ ಗ್ರಹವು ಕರ್ಕರಾಶಿಯಲ್ಲಿರುವಾಗ 5 ರಾಶಿಯವರಿಗೆ ಉತ್ತಮ ಸಮಯವಾಗಿರುತ್ತದೆ.
ಶುಕ್ರ ಸಂಕ್ರಮಣವು ಈ ರಾಶಿಯವರ ಅದೃಷ್ಟವನ್ನು ಬೆಳಗಿಸುತ್ತದೆ :
ಮೇಷ : ಮೇಷ ರಾಶಿಯವರಿಗೆ ಶುಕ್ರ ಸಂಕ್ರಮವು ಶುಭವಾಗಿರಲಿದೆ. ಅವರು ತಮ್ಮ ವೃತ್ತಿಜೀವನದಲ್ಲಿ ದೊಡ್ಡ ಮಟ್ಟದ ಲಾಭವನ್ನು ಗಳಿಸಬಹುದು. ಬಡ್ತಿ, ಸಂಬಳ ಹೆಚ್ಚಳವಾಗುವ ಸಂಪೂರ್ಣ ಅವಕಾಶಗಳಿವೆ.
ಇದನ್ನೂ ಓದಿ : Vastu Tips: ಮರೆತು ಸಹ ಬಾತ್‌ರೂಮ್‌ನಲ್ಲಿ ಈ ವಸ್ತುಗಳನ್ನು ಇಡಬೇಡಿ, ವಾಸ್ತು ದೋಷಗಳಿಂದ ಬಡವರಾಗುತ್ತೀರಿ
ವೃಷಭ : ಶುಕ್ರ ಸಂಕ್ರಮಣವು ವೃಷಭ ರಾಶಿಯವರಿಗೆ ಭಾರೀ ಲಾಭವನ್ನು ನೀಡಲಿದೆ. ಈ ರಾಶಿಯವರಿಗೆ ಹೊಸ ಉದ್ಯೋಗಾವಕಾಶ ದೊರೆಯಲಿದೆ. ಉದ್ಯೋಗದಲ್ಲಿ ಬಡ್ತಿ ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೂ ಆದಾಯ ಹೆಚ್ಚಲಿದೆ. ವೈವಾಹಿಕ ಜೀವನದಲ್ಲಿ ಸಂತೋಷ ಇರುತ್ತದೆ.
ಮಿಥುನ: ಶುಕ್ರನ ರಾಶಿಯ ಬದಲಾವಣೆಯು ಮಿಥುನ ರಾಶಿಯವರಿಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಈ ಸಮಯವು ಅವರಿಗೆ ವಿಶೇಷವಾಗಿ ಪ್ರೀತಿಯ ವಿಷಯದಲ್ಲಿ ಉತ್ತಮವಾಗಿರುತ್ತದೆ. ಅವಿವಾಹಿತರಿಗೆ ಮದುವೆ ನಿಶ್ಚಯವಾಗಬಹುದು. ಕೆಲಸ ಕಾರ್ಯಗಳಲ್ಲಿ ಶುಭ ಫಲ ದೊರೆಯಲಿದೆ.
ಇದನ್ನೂ ಓದಿ : ಲಕ್ಷ್ಮೀ ಯನ್ನು ಒಲಿಸಿಕೊಳ್ಳಲು ಇಲ್ಲಿದೆ ಸರಳ ಉಪಾಯ, ಜೀವನ ಪೂರ್ತಿ ಇರುತ್ತದೆ ಲಕ್ಷ್ಮೀ ಕಟಾಕ್ಷ
ಕನ್ಯಾ: ಶುಕ್ರನ ಸ್ಥಾನ ಬದಲಾವಣೆಯು ಕನ್ಯಾ ರಾಶಿಯವರಿಗೆ ಅನೇಕ ಸಂತೋಷವನ್ನು ನೀಡುತ್ತದೆ. ಅವರು ತಮ್ಮ ಕೆಲಸಗಳಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಜೀವನದಲ್ಲಿ ಸೌಕರ್ಯಗಳು ಹೆಚ್ಚಾಗುತ್ತವೆ. ಮನೆ ಕಾರು ಖರೀದಿಸಬಹುದು. ದಂಪತಿಗಳ ನಡುವೆ ಪ್ರೀತಿ ಹೆಚ್ಚಾಗುತ್ತದೆ.
ತುಲಾ: ಶುಕ್ರನ ರಾಶಿ ಬದಲಾವಣೆಯು ತುಲಾ ರಾಶಿಯವರಿಗೆ ವೃತ್ತಿಯಲ್ಲಿ ಬಲವಾದ ಪ್ರಗತಿಯನ್ನು ನೀಡುತ್ತದೆ. ಅವರ ಕೆಲಸವನ್ನು ಪ್ರಶಂಸಿಸುವುದಲ್ಲದೆ, ಪ್ರತಿಯಾಗಿ ಬಡ್ತಿ ಕೂಡಾ ಪಡೆಯಲಿದ್ದಾರೆ. ವೇತನ ಹೆಚ್ಚಾಗಬಹುದು. ಹೊಸ ಉದ್ಯೋಗ ಸಿಗಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.