Planet Retrograde 2022: ಮುಂದಿನ 108 ದಿನಗಳ ಕಾಲ ಈ ರಾಶಿಗಳ ಜನರಿಗೆ ಭಾರಿ ಧನಾಗಮನ

Jupiter Transit 2022: ಒಂದು ನಿಶ್ಚಿತ ಕಾಲಾಂತರದಲ್ಲಿ ಪ್ರತಿಯೊಂದು ಗ್ರಹ ತನ್ನ ರಾಶಿಯನ್ನು ಪರಿವರ್ತಿಸುತ್ತದೆ. ಆದರೆ ದೇವಗುರು ಎಂದೇ ಕರೆಯಲಾಗುವ ಬೃಹಸ್ಪತಿ ಅಥವಾ ಗುರು ತನ್ನದೆ ಆದ ಮೀನ ರಾಶಿಯಲ್ಲಿ ವಕ್ರನಡೆಯನ್ನು ಅನುಸರಿಸಲಿದ್ದಾನೆ. ಕೆಲ ರಾಶಿಗಳ ಜನರಿಗೆ ಇದರಿಂದ ಜಬರ್ದಸ್ತ್ ಲಾಭ ಸಿಗಲಿದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Aug 4, 2022, 08:02 AM IST
  • ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ.
  • ಯಾವುದೇ ಒಂದು ಗ್ರಹ ತನ್ನ ವಕ್ರನಡೆಯನ್ನು ಅನುಸರಿಸಿದರೆ,
  • ಅದರ ಶುಭ ಹಾಗೂ ಅಶುಖ ಪರಿಣಾಮಗಳು ಎಲ್ಲಾ ರಾಶಿಗಳ ಮೇಲೆ ಗೋಚರಿಸುತ್ತದೆ.
Planet Retrograde 2022: ಮುಂದಿನ 108 ದಿನಗಳ ಕಾಲ ಈ ರಾಶಿಗಳ ಜನರಿಗೆ ಭಾರಿ ಧನಾಗಮನ title=
Jupiter Retrograde 2022

Guru Vakri Effect: ವೈದಿಕ ಜೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ಗ್ರಹಕ್ಕೆ ತನ್ನದೇ ಆದ ವೈಶಿಷ್ಟ್ಯವಿದೆ. ಯಾವುದೇ ಒಂದು ಗ್ರಹ ತನ್ನ ವಕ್ರನಡೆಯನ್ನು ಅನುಸರಿಸಿದರೆ, ಅದರ ಶುಭ ಹಾಗೂ ಅಶುಖ ಪರಿಣಾಮಗಳು ಎಲ್ಲಾ ರಾಶಿಗಳ ಮೇಲೆ ಗೋಚರಿಸುತ್ತದೆ. ಜುಲೈ 29ರಿಂದ ಗುರುಗ್ರಹ ತನ್ನ ಸ್ವಂತ ರಾಶಿಯಾಗಿರುವ ಮೀನ ರಾಶಿಯಲ್ಲಿ ವಕ್ರನಡೆಯನ್ನು ಆರಂಭಿಸಿದೆ. ಹೀಗಾಗಿ ಮುಂದಿನ 108 ದಿನಗಳವರೆಗೆ ಆತ ಇದೇ ಸ್ಥಿತಿಯಲ್ಲಿ ಮುಂದುವರೆಯಲಿದ್ದಾನೆ. ಇದರ ನೇರ ಪ್ರಭಾವ ಕೆಲ ರಾಶಿಗಳ ಜನರ ಜೀವನದ ಮೇಲೆ ಸ್ಪಷ್ಟವಾಗಿ ನೋಡಬಹುದು.

ಜೋತಿಷ್ಯ ಶಾಸ್ತ್ರದ ಪ್ರಕಾರ ಗುರು, ಜ್ಞಾನ, ಪ್ರಗತಿ, ಶಿಕ್ಷಕ, ಧನ, ದಾನ ಹಾಗೂ ಪುಣ್ಯಕ್ಕೆ ಸಂಬಂಧಿಸಿದೆ. ಹೀಗಾಗಿ ಗುರುವನ ವಕ್ರನಡೆ ವಿವಿಧ ರಾಶಿಗಳ ಮೇಲೆ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಭಾವ ಬೀರುತ್ತದೆ. ಮೂರು ರಾಶಿಗಳ ಜನರಿಗೆ ಈ ಬಾರಿ ಭಾರಿ ಧನಲಾಗವಾಗಲಿದೆ.

1. ವೃಷಭ ರಾಶಿ - ಜೋತಿಷ್ಯ ಶಾಸ್ತ್ರದ ಪ್ರಕಾರ, ಈ ರಾಶಿಯ ಜನರ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ. ನಿಮ್ಮ ರಾಶಿಯ 11ನೇ ಭಾವದಲ್ಲಿ ಗುರು ವಕ್ರನಾಗಿದ್ದಾನೆ. ಈ ಸ್ಥಾನವನ್ನು ಸಾಮಾನ್ಯವಾಗಿ ಆದಾಯ ಮತ್ತು ಲಾಭದ ಸ್ಥಾನ ಎಂದು ಹೇಳಲಾಗುತ್ತದೆ. ಹೀಗಾಗಿ ಗುರುವಿನ ವಕ್ರ ನಡೆ ನಿಮ್ಮ ಆದಾಯವನ್ನು ಹೆಚ್ಚಿಸಲಿದೆ. ಅಷ್ಟೇ ಅಲ್ಲ ಆದಾಯದ ಹೊಸ ಮೂಲಗಳು ಕೂಡ ಸೃಷ್ಟಿಯಾಗಲಿವೆ. ವ್ಯಾಪಾರದಲ್ಲಿ ಜಬರ್ದಸ್ತ್ ಲಾಭ ಸಿಗಲಿದೆ. ಈ ಅವಧಿಯಲ್ಲಿ ವ್ಯಾಪಾರದ ಒಪ್ಪಂದವೊಂದು ಕುದುರುವುದರಿಂದ ನಿಮಗೆ ಭಾರಿ ಧನಲಾಭವಾಗುವ ಸಾಧ್ಯತೆ ಇದೆ.

ಗುರುವಿನ ಹಿಮ್ಮುಖ ಚಲನೆಯಿಂದ ನಿಮ್ಮ ಕೆಲಸದ ಶೈಲಿಯಲ್ಲಿ ಸುಧಾರಣೆ ಕಾಣಿಸಲಿದೆ. ಇದರಿಂದ ನೀವು ಪ್ರಶಂಸೆಗೆ ಪಾತ್ರರಾಗಬಹುದು. ಹೊಸ ವ್ಯವಹಾರ ಪ್ರಾರಂಭಿಸಲು ನೀವು ಯೋಚಿಸುತ್ತಿದ್ದರೆ, ಕೂಡಲೇ ಮಾಡಿ. ಗುರು ನಿಮ್ಮ 8ನೇ ಮನೆಯ ಅಧಿಪತಿಯಾದ ಕಾರಣ ಸಂಶೋಧನಾ ಕ್ಷೇತ್ರಕ್ಕೆ ಸಂಬಂಧಿಸಿದ ವ್ಯಕ್ತಿಗಳಿಗೆ ಭಾರಿ ಯಶಸ್ಸು ಸಿಗಲಿದೆ.

2. ಮಿಥುನ ರಾಶಿ - ಗುರುವಿನ ಹಿಮ್ಮುಖ ಚಲನೆ ಮಿಥುನ ಜಾತಕದವರ ಜೀವನದಲ್ಲಿ ಪ್ರಮುಖ ಬದಲಾವಣೆಗಳು ಕಂಡುಬರಲಿವೆ. ನಿಮ್ಮ ರಾಶಿಯ 10ನೇ ಭಾವದಲ್ಲಿ ಗುರು ಹಿಮ್ಮೆಟ್ಟಿದ್ದಾನೆ. ಈ ಸ್ಥಾನವನ್ನು ಸಾಮಾನ್ಯವಾಗಿ ಉದ್ಯೋಗ, ವ್ಯವಹಾರ ಹಾಗೂ ಕೆಲಸದ ಸ್ಥಾನ ಎಂದು ಪರಿಗಣಿಸಲಾಗುತ್ತದೆ, ಹೀಗಾಗಿ ಈ ಅವಧಿಯಲ್ಲಿ ನಿಮಗೆ ಹೊಸ ಉದ್ಯೋಗದ ಪ್ರಸ್ತಾಪ ಸಿಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಉತ್ತಮ ಆದಾಯ ಹರಿದು ಬರಲಿದೆ. ಹೀಗಾಗಿ ನೀವು ವ್ಯಾಪಾರ ವಿಸ್ತರಣೆಯ ಕುರಿತು ಕೂಡ ಯೋಚಿಸಬಹುದು.
ಮಾರ್ಕೆಟಿಂಗ್ ಮತ್ತು ಮಾಧ್ಯಮಕ್ಕೆ ಸಂಬಂಧಿಸಿದ ಜನರಿಗೆ ಈ ಸಮಯ ತುಂಬಾ ಅನುಕೂಲಕರವಾಗಿದೆ. ಬುಧ ಮಿಥುನ ರಾಶಿಗೆ ಅಧಿಪತಿ. ಬುಧ ಹಾಗೂ ಗುರುವಿನ ಮಧ್ಯೆ ಸ್ನೇಹಭಾವದ ಸಂಬಂಧವಿದೆ. ಹೀಗಾಗಿ ಈ ಸಮಯವು ನಿಮಗೆ ಅತ್ಯಂತ ಲಾಭಕಾರಿಯಾಗಿರಲಿದೆ. 

ಇದನ್ನೂ ಓದಿ-Chanakya Niti: ಹೆಂಡತಿ ತನ್ನ ಗಂಡನ ಜತೆ ಈ 5 ರಹಸ್ಯಗಳನ್ನು ಯಾವತ್ತೂ ಹಂಚಿಕೊಳ್ಳುವುದಿಲ್ಲವಂತೆ

3. ಕರ್ಕ ರಾಶಿ - ನಿಮ್ಮ ಜಾತಕದ ನವಮ ಅಂದರೆ ಒಂಬತ್ತನೇ ಭಾವದಲ್ಲಿ ಗುರು ವಕ್ರನಡೆಯನ್ನು ಅನುಸರಿಸಿದ್ದಾನೆ. ಇದನ್ನು ಭಾಗ್ಯ ಮತ್ತು ವಿದೇಶ ಯಾತ್ರೆಯ ಸ್ಥಾನ ಎಂದು ಭಾವಿಸಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಭಾಗ್ಯದ ಸಂಪೂರ್ಣ ಸಾಥ್ ಸಿಗಲಿದೆ. ವ್ಯಾಪಾರಕ್ಕೆ ಸಂಬಂಧಿಸಿದಂತೆ ಚಿಕ್ಕ-ಪುಟ್ಟ ಯಾತ್ರೆಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಯಾತ್ರೆಗಳಿಂದ ನಿಮಗೆ ಲಾಭ ಸಿಗಲಿದೆ. ಗುರು ನಿಮ್ಮ ಜಾತಕದ ಆರನೇ ಸ್ಥಾನದ ಅಧಿಪತಿ. ಇದನ್ನು ರೋಗ, ಕೋರ್ಟ್-ಕಚೇರಿ ಹಾಗೂ ಶತ್ರುವಿನ ಸ್ಥಾನ ಎನ್ನಲಾಗುತ್ತದೆ. ಹೀಗಾಗಿ ಈ ಅವಧಿಯಲ್ಲಿ ನೀವು ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಈ ಅವಧಿಯಲ್ಲಿ ನೀವು ಮುತ್ತು ಧರಿಸುವುದು ನಿಮಗೆ ಲಾಭ ನೀಡಲಿದೆ.

ಇದನ್ನೂ ಓದಿ-ಅಡುಗೆ ಮನೆಯ ಈ ವಸ್ತುಗಳನ್ನು ಯಾರಿಗೂ ಸಾಲ ನೀಡಬೇಡಿ, ನೀವೇ ಸಾಲಗಾರರಾಗಬಹುದು ..!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

 

Trending News