ಶೀಘ್ರವೇ ಶನಿದೇವನ ಪ್ರಕೋಪಕ್ಕೆ ಒಳಗಾಗಲಿದೆ ಈ ಎರಡು ರಾಶಿಗಳು, ಆರಂಭವಾಗಲಿದೆ ಶನಿ ಧೈಯಾ
ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 29 ರಂದು, ಶನಿಯ ರಾಶಿಚಕ್ರ ಚಿಹ್ನೆಯಲ್ಲಿ ಬದಲಾವಣೆಯಾಗಲಿದೆ. ಈ ಸಮಯದಲ್ಲಿ, ಶನಿ ದೇವನು ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ .
ಬೆಂಗಳೂರು : ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ಶನಿಯ ಸಂಕ್ರಮಣಕ್ಕೆ (Saturn transit) ವಿಶೇಷ ಮಹತ್ವವಿದೆ. ಶನಿದೇವನು ರಾಶಿಚಕ್ರವನ್ನು ಬದಲಾಯಿಸಿದಾಗ, ಶನಿಯ ಧೈಯಾವು ಕೆಲವು ರಾಶಿಗಳಲ್ಲಿ ಪ್ರಾರಂಭವಾಗುತ್ತದೆ. ಆದರೆ ಕೆಲವು ರಾಶಿಗಳಿಗೆ ಸಾಡೇ ಸಾತಿ (Shani sade saathi) ಪ್ರಾರಂಭವಾಗುತ್ತದೆ. ಶನಿದೇವನು ಜನವರಿ 18 ರಂದು ನಕ್ಷತ್ರಪುಂಜವನ್ನು ಬದಲಾಯಿಸಿದ್ದಾನೆ. ಇದೀಗ ಶನಿದೇವ (Shanidev) ತನ್ನ ರಾಶಿಯನ್ನು ಬದಲಾಯಿಸಲಿದ್ದಾನೆ. ಶನಿ ಗ್ರಹ ರಾಶಿ ಬದಲಾಯಿಸಲು ಎರಡೂವರೆ ವರ್ಷ ತೆಗೆದುಕೊಳ್ಳುತ್ತದೆ. ಈ ರೀತಿಯಾಗಿ, 12 ರಾಶಿಚಕ್ರ ಚಿಹ್ನೆಗಳ (Zodiac sign)ಚಕ್ರವನ್ನು ಪೂರ್ಣಗೊಳಿಸಲು 30 ವರ್ಷಗಳು ಬೇಕಾಗುತ್ತದೆ.
ಸಾಡೇ ಸಾತಿಯ ಎರಡನೇ ಚರಣ ಆರಂಭ :
ಜ್ಯೋತಿಷ್ಯದ (Astrology) ಲೆಕ್ಕಾಚಾರದ ಪ್ರಕಾರ, ಏಪ್ರಿಲ್ 29 ರಂದು, ಶನಿಯ ರಾಶಿಚಕ್ರ ಚಿಹ್ನೆಯಲ್ಲಿ ಬದಲಾವಣೆಯಾಗಲಿದೆ. ಈ ಸಮಯದಲ್ಲಿ, ಶನಿ ದೇವನು (Shani deva) ಕುಂಭ ರಾಶಿಯನ್ನು ಪ್ರವೇಶಿಸಲಿದ್ದಾನೆ . ಶನಿಯ ಈ ಸಂಕ್ರಮಣದಿಂದಾಗಿ, ಅನೇಕ ರಾಶಿಚಕ್ರ ಚಿಹ್ನೆಗಳ ಜೀವನದಲ್ಲಿ ವಿಶೇಷ ಬದಲಾವಣೆಗಳು ಕಂಡುಬರುತ್ತವೆ. ಅಲ್ಲದೆ, ಜ್ಯೋತಿಷ್ಯದ ದೃಷ್ಟಿಯಿಂದಲೂ ಶನಿಯ ಈ ರಾಶಿ ಬದಲಾವಣೆ ವಿಶೇಷವಾಗಿರುತ್ತದೆ.
ಇದನ್ನೂ ಓದಿ : Chanakya niti : ಜೀವನದಲ್ಲಿ ಮಾಡುವ ಈ ಒಂದು ತಪ್ಪಿನಿಂದ ರಾಜ ಕೂಡಾ ಬಿಕಾರಿಯಾಗಬಹುದು
ವಾಸ್ತವವಾಗಿ, ಈ ಸಮಯದಲ್ಲಿ ಶನಿಯು (Shani) ಕುಂಭ ರಾಶಿಯಲ್ಲಿ ಬಲವಾದ ಸ್ಥಾನದಲ್ಲಿ ಉಳಿಯುತ್ತಾನೆ. ಶನಿಯ ಈ ಸಂಕ್ರಮಣದಿಂದ ಕುಂಭ ರಾಶಿಯವರು ಹೆಚ್ಚು ತೊಂದರೆ ಅನುಭವಿಸುತ್ತಾರೆ. ಈ ರಾಶಿಚಕ್ರದಲ್ಲಿ (Zodiac Sign) ಸಾಡೇ ಸಾತಿಯ ಎರಡನೇ ಹಂತವು ಪ್ರಾರಂಭವಾಗುತ್ತದೆ. ಸಾಡೆ ಸಾತಿಯ (Sade sathi)ಎರಡನೇ ಹಂತವು ತುಂಬಾ ನೋವಿನಿಂದ ಕೂಡಿರುತ್ತದೆ.
ಈ ರಾಶಿಯವರಿಗೆ ಎರಡೂವರೆ ಅಥವಾ ಶನಿಯ ಧೈಯಾ ಪ್ರಾರಂಭವಾಗುತ್ತದೆ :
ಏಪ್ರಿಲ್ 29 ರಂದು ಶನಿಯು ಕುಂಭ ರಾಶಿಯಲ್ಲಿ ಸಂಕ್ರಮಿಸಿದ ತಕ್ಷಣ, ಕರ್ಕಾಟಕ ಮತ್ತು ವೃಶ್ಚಿಕ ರಾಶಿಯವರಿಗೆ ಶನಿಯ ಧೈಯವು ಪ್ರಾರಂಭವಾಗುತ್ತದೆ. ಆದರೆ ಮಿಥುನ ಮತ್ತು ತುಲಾ ರಾಶಿಯ (Libra) ಜನರು ಧೈಯಾದ ಪ್ರಭಾವದಿಂದ ಮುಕ್ತರಾಗುತ್ತಾರೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಜೂನ್ 5, 2022 ರಂದು, ಶನಿದೇವನು ಮತ್ತೆ ಹಿಮಮ್ಮುಖ ಚಲನೆ ಆರಂಭಿಸುತ್ತಾನೆ. ಜುಲೈ 12 ರಿಂದ ಮತ್ತೆ ಮಕರ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಶನಿಯ ಪ್ರಭಾವದಿಂದ ಮುಕ್ತಿ ಪಡೆದ ರಾಶಿಗಳು ಮತ್ತೆ ಶನಿಯ ಹಿಡಿತಕ್ಕೆ ಬರುತ್ತವೆ. ಇದಲ್ಲದೆ, ಶನಿಯು 12 ಜುಲೈ 2022 ರಿಂದ 17 ಜನವರಿ 2023 ರವರೆಗೆ ಮಕರ ರಾಶಿಯಲ್ಲಿರುತ್ತಾನೆ.
ಇದನ್ನೂ ಓದಿ : Numerology: ಈ ಜನರ ಮೇಲೆ ಸದಾ ಇರುತ್ತೆ ಲಕ್ಷ್ಮಿ ಕೃಪಾಕಟಾಕ್ಷ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.