Numerology: ಈ ಜನರ ಮೇಲೆ ಸದಾ ಇರುತ್ತೆ ಲಕ್ಷ್ಮಿ ಕೃಪಾಕಟಾಕ್ಷ

Numerology: ಸಂಖ್ಯಾಶಾಸ್ತ್ರವು ರಾಡಿಕ್ಸ್ ಆಧಾರದ ಮೇಲೆ ಜನರ ಭವಿಷ್ಯ ಮತ್ತು ಸ್ವಭಾವದ ಬಗ್ಗೆ ಹೇಳುತ್ತದೆ. ಇದರ ಪ್ರಕಾರ, ನಿರ್ದಿಷ್ಟ ದಿನಾಂಕಗಳಲ್ಲಿ ಜನಿಸಿದವರು ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ. 

Written by - Zee Kannada News Desk | Last Updated : Feb 22, 2022, 11:17 AM IST
  • ಈ ಜನರು ತಮ್ಮ ಜೀವನದುದ್ದಕ್ಕೂ ಶ್ರೀಮಂತರಾಗಿದ್ದಾರೆ
  • ಇವರಿಗೆ ಎಂದಿಗೂ ಹಣದ ಕೊರತೆ ಇರುವುದಿಲ್ಲ
  • ರಾಡಿಕ್ಸ್ 9 ರ ಸ್ಥಳೀಯರು ಹುಟ್ಟಿನಿಂದಲೇ ತಾಯಿ ಲಕ್ಷ್ಮಿಯ ಆಶೀರ್ವಾದವನ್ನು ಹೊಂದಿದ್ದಾರೆ
Numerology: ಈ ಜನರ ಮೇಲೆ ಸದಾ ಇರುತ್ತೆ ಲಕ್ಷ್ಮಿ ಕೃಪಾಕಟಾಕ್ಷ title=
Lucky numbers

Numerology: ಸಂಪತ್ತಿನ ಅಧಿದೇವತೆಯಾದ ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಜನರು ವಿವಿಧ ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಕೆಲವರು ತಮ್ಮ ಜನ್ಮದಿನದಿಂದಲೇ ಲಕ್ಷ್ಮಿ ದೇವಿಯ ಆಶೀರ್ವಾದವನ್ನು ಪಡೆದಿರುತ್ತಾರೆ. ಅವರು ತಮ್ಮ ಜೀವನದುದ್ದಕ್ಕೂ ಅಪಾರ ಸಂಪತ್ತನ್ನು ಆನಂದಿಸುತ್ತಾರೆ. ನಿರ್ದಿಷ್ಟ ದಿನಾಂಕದಂದು ಜನಿಸಿದವರನ್ನು ಅದೃಷ್ಟವಂತರು ಎಂದು ಹೇಳಲಾಗುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಈ ಅದೃಷ್ಟವಂತರು ರಾಡಿಕ್ಸ್ 9 ರವರು. ಅಂದರೆ, ಯಾವುದೇ ತಿಂಗಳ 9, 27 ಅಥವಾ 18 ರಂದು ಜನಿಸಿದವರು ಹಣದ ವಿಷಯದಲ್ಲಿ ತುಂಬಾ ಅದೃಷ್ಟವಂತರು ಎಂದು ಹೇಳಲಾಗುತ್ತದೆ.

ಇವರಿಗೆ ಜೀವನದುದ್ದಕ್ಕೂ ಹಣದ ಕೊರತೆ ಇರುವುದಿಲ್ಲ:
ರಾಡಿಕ್ಸ್ 9 ರ ಜನರ ಜೀವನದಲ್ಲಿ ಎಂದಿಗೂ ಹಣದ (Money) ಕೊರತೆ ಇರುವುದಿಲ್ಲ. ಇವರ ಬಳಿ ಯಾವಾಗಲೂ ಸಾಕಷ್ಟು ಹಣ ಇರುತ್ತದೆ. ಅದೇ ಸಮಯದಲ್ಲಿ, ಅವರು ತಮ್ಮ ಮಾತಿನಲ್ಲಿ ದೃಢವಾಗಿರುತ್ತಾರೆ. ಇವರು ಸದಾ ನುಡಿದಂತೆ ನಡೆಯುವವರು. ಅವರು ಸವಾಲುಗಳನ್ನು ದೃಢವಾಗಿ ಎದುರಿಸುತ್ತಾರೆ. ರಾಡಿಕ್ಸ್ 9 ರ ಅಧಿಪತಿ ಮಂಗಳ. ಇದರಿಂದಾಗಿ ಈ ಜನರಿಗೆ ಬುದ್ಧಯ ಜೊತೆಗೆ ಧೈರ್ಯವೂ ಹೆಚ್ಚಿರುತ್ತದೆ. 

ಇದನ್ನೂ ಓದಿ- Bad Luck Sign: ಈ ಅಭ್ಯಾಸಗಳಿಂದ ಜೀವನದಲ್ಲಿ ಎದುರಾಗುತ್ತೆ ಸಂಕಷ್ಟ!

ರಾಜಕೀಯ ಮತ್ತು ಆಡಳಿತದಲ್ಲಿ ಕೀರ್ತಿ: 
ರಾಡಿಕ್ಸ್ 9 ರ ಸ್ಥಳೀಯರಿಗೆ ರಾಜಕೀಯ ಮತ್ತು ಆಡಳಿತ ಕ್ಷೇತ್ರಗಳಲ್ಲಿ ಕೆಲಸ ಮಾಡುವುದು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಅವರು ಈ ಕ್ಷೇತ್ರಗಳಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ. ಇವರು ರಾಜಕೀಯದಲ್ಲಿದ್ದರೆ ಉತ್ತಮ ನಾಯಕರಾಗುತ್ತಾರೆ. ಆಡಳಿತಾತ್ಮಕ ಸೇವೆಗಳಲ್ಲಿ ಅವರು ಐಎಎಸ್, ಐಪಿಎಸ್, ರೈಲ್ವೇ (Railways) ಇತ್ಯಾದಿಗಳಲ್ಲಿ ಉತ್ತಮ ಸಾಧನೆ ಮಾಡುತ್ತಾರೆ. ಈ ಜನರು ಅಪಾಯಗಳನ್ನು ತೆಗೆದುಕೊಳ್ಳಲು ಹೆದರುವುದಿಲ್ಲ. 

ಇದನ್ನೂ ಓದಿ- Sri Anjaneya ನ 8 ಸಿದ್ಧಿಗಳು ಯಾವುದು? ಈ ಕಾರಣದಿಂದ ಹನುಮನಿಗೆ ಪವನಪುತ್ರ ಎಂದು ಕರೆಯಲಾಗುತ್ತದೆ?

ಸ್ವಭಾವತಃ ಕೋಪಿಷ್ಠರು:
ಮಂಗಳನ ಪ್ರಭಾವದಿಂದ ಈ ಜನರು ಕೋಪಗೊಳ್ಳುವ ಸ್ವಭಾವದವರು. ಈ ಕಾರಣದಿಂದಾಗಿ, ಅವರು ತಮ್ಮ ಸಂಗಾತಿ ಮತ್ತು ಒಡಹುಟ್ಟಿದವರ ಜೊತೆ ಚೆನ್ನಾಗಿ ಹೊಂದಿಕೊಳ್ಳುವುದಿಲ್ಲ. ಇವರಲ್ಲಿ ವಿವಾಹೇತರ ಸಂಬಂಧ ಇರುವ ಸಾಧ್ಯತೆಯೂ ಇದೆ ಎಂದು ಸಹ ಹೇಳಲಾಗುತ್ತದೆ.

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News