ನವದೆಹಲಿ : 2021ನೇ ವರ್ಷಕ್ಕೆ ಕಾಲಿಡಲಿದ್ದು, ಹೊಸ ವರ್ಷ ಆರಂಭವಾಗಲಿದೆ. ಮುಂಬರುವ ವರ್ಷವು ಅತ್ಯಂತ ಯಶಸ್ವಿಯಾಗಿರಬೇಕು ಎಂದು ಬಯಸಿದರೆ ಇದಕ್ಕಾಗಿ ಉತ್ತಮ ಅವಕಾಶವಿದೆ. ಡಿಸೆಂಬರ್ 30 ರಂದು ಸಫಲ ಏಕಾದಶಿ (saphala ekadashi).  ಈ ದಿನದಂದು ವಿಶೇಷವಾದ ಕಾರ್ಯವನ್ನು ಮಾಡುವುದರಿಂದ ವಿಷ್ಣುವನ್ನು (Lord Vishnu) ಒಲಿಸಿಕೊಳ್ಳಬಹುದು. ಅಲ್ಲದೆ ವಿಷ್ಣು ನಮ್ಮ ಮನದ ಆಸೆಯನ್ನು ಈಡೆರಿಸುತ್ತಾನೆ. ಮಾರಾಲ್ಲ ಜೀವನದಲ್ಲಿ ಸಾಕಷ್ಟು ಪ್ರಗತಿ ಸಿಗುತ್ತದೆ. ಇದಲ್ಲದೆ, ಇದು 2021ರ ಕೊನೆಯ ಏಕಾದಶಿಯಾಗಿದೆ. 


COMMERCIAL BREAK
SCROLL TO CONTINUE READING

 ಸಫಲ ಏಕಾದಶಿ ಅನದರೆ ಏನು ?  
ಪೌಷ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ಸಫಲ ಏಕಾದಶಿ (saphala ekadashi). ಎಂದು ಕರೆಯಲಾಗುತ್ತದೆ. ಧರ್ಮ ಮತ್ತು ಜ್ಯೋತಿಷ್ಯದ ಪ್ರಕಾರ (Astrology), ಈ ದಿನದಂದು ಉಪವಾಸ ಕೈಗೊಳ್ಳುವುದರಿಂದ ಪ್ರತಿಯೊಂದು ಕೆಲಸದಲ್ಲಿ ಯಶಸ್ಸು ಸಿಗುತ್ತದೆ. ಈ ದಿನದಂದು ಉಪವಾಸ ಆಚರಿಸುವವರ ಮೇಲೆ ವಿಷ್ಣುವಿನ (Lord Vishnu) ವಿಶೇಷ ಅನುಗ್ರಹವಿರುತ್ತದೆ. ಪುರಾಣಗಳ ಪ್ರಕಾರ, ಮಹಾಭಾರತಕ್ಕೂ ಮೊದಲು ಪಾಂಡವರು ಸಫಲ ಏಕಾದಶಿಯ ಉಪವಾಸವನ್ನು ಆಚರಿಸಿದ್ದರೂ ಎಂದು ಹೇಳಲಾಗುತ್ತದೆ.  


ಇದನ್ನೂ ಓದಿ : ನಾಳೆಯಿಂದ ಧನುರ್ ಮಾಸ ಆರಂಭ, ಈ ತಿಂಗಳಲ್ಲಿಯೂ ನಡೆಸಬಹುದು ಈ ಶುಭ ಕಾರ್ಯಗಳನ್ನು


ಮಂಗಳಕರ ಸಮಯ ಮತ್ತು ಪೂಜಾ ವಿಧಾನ : 
ಸಫಲ ಏಕಾದಶಿ ಡಿಸೆಂಬರ್ 29 ರಂದು ಸಂಜೆ 04:12 ರಿಂದ ಪ್ರಾರಂಭವಾಗಿ, ಡಿಸೆಂಬರ್ 30 ರಂದು ಮಧ್ಯಾಹ್ನ 01:40 ರವರೆಗೆ ಇರುತ್ತದೆ. ಪೂಜೆಗೆ ಶುಭ ಸಮಯ ಮಧ್ಯಾಹ್ನ 1 ಗಂಟೆಯ ಮೊದಲು ಇರುತ್ತದೆ. ಆದರೆ ಉಪವಾಸ ಪಾರಣ ಡಿಸೆಂಬರ್ 31 ರಂದು ಬೆಳಿಗ್ಗೆ 07:14 ರಿಂದ 09:18 ನಿಮಿಷಗಳವರೆಗೆ ಇರುತ್ತದೆ. ಸಫಲ ಏಕಾದಶಿಯ ದಿನ ಪ್ರಾತಃಕಾಲ ಸ್ನಾನ ಮಾಡಿ ವಿಷ್ಣುವಿನ (Lord Vishnu) ದರ್ಶನ ಪಡೆದು ವ್ರತವನ್ನು ಆರಂಭಿಸಬೇಕು. 


ಪೂಜೆಗಾಗಿ ಅರಿಶಿನ-ಅಕ್ಷತೆಯನ್ನು ದೇವರಿಗೆ ಅರ್ಪಿಸಿ. ನಂತರ ಧೂಪ-ದೀಪವನ್ನು ಬೆಳಗಬೇಕು. ಹಣ್ಣುಗಳು, ಪಂಚಾಮೃತ, ತೆಂಗಿನಕಾಯಿ, ವೀಳ್ಯದೆಲೆ, ಆಮ್ಲಾ, ದಾಳಿಂಬೆ ಮತ್ತು ಲವಂಗ ಇತ್ಯಾದಿಗಳನ್ನು ಅರ್ಪಿಸಿ. ಉಪವಾಸದ ದಿನದಂದು ಗರಿಷ್ಠ ಸಮಯದವರೆಗೆ ಶ್ರೀ ಹರಿ ನಾಮವನ್ನು ಜಪಿಸಲು ಪ್ರಯತ್ನಿಸಿ. ಇದಲ್ಲದೇ ಉಪವಾಸದ ಮರುದಿನ ಬಡವರಿಗೆ ಅನ್ನದಾನ ಮಾಡಿ. 


ಇದನ್ನೂ ಓದಿ : Vastu Shastra: ಮಲಗುವ ಕೋಣೆಯಲ್ಲಿ ಕನ್ನಡಿ ಇಡುವುದು ಒಳ್ಳೆಯದೇ? ನಿಮಗಿದು ಗೊತ್ತಿರಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.