ನಾಳೆಯಿಂದ ಧನುರ್ ಮಾಸ ಆರಂಭ, ಈ ತಿಂಗಳಲ್ಲಿಯೂ ನಡೆಸಬಹುದು ಈ ಶುಭ ಕಾರ್ಯಗಳನ್ನು

ಸೂರ್ಯನು ಧನು ರಾಶಿಗೆ ಪ್ರವೇಶಿಸಿದನಂತರ ಎಲ್ಲಾ ಶುಭ ಕಾರ್ಯಗಳಿಗೆ ವಿರಾಮ ಹಾಕಲಾಗುತ್ತದೆ. ಯಾಕೆಂದರೆ ಅಲ್ಲಿಂದ ಧನುರ್ ಮಾಸ ಪ್ರಾರಂಭವಾಗುತ್ತದೆ.

Written by - Ranjitha R K | Last Updated : Dec 15, 2021, 03:02 PM IST
  • ಸೂರ್ಯನು ಧನು ರಾಶಿಗೆ ಪ್ರವೇಶಿಸಿದರೆ ಶುಭ ಕಾರ್ಯಗಳು ನಡೆಯುವುದಿಲ್ಲ
  • ಜ್ಯೋತಿಷ್ಯ ಶಾಸ್ತ್ರದಲ್ಲಿ ಇದನ್ನು ಕಪ್ಪು ಮಾಸ ಎನ್ನುತ್ತಾರೆ
  • ಆದರೆ ಈ ಕೆಲಸವನ್ನು ಮಾಡಬಹುದಾಗಿದೆ
ನಾಳೆಯಿಂದ ಧನುರ್ ಮಾಸ ಆರಂಭ, ಈ ತಿಂಗಳಲ್ಲಿಯೂ ನಡೆಸಬಹುದು ಈ ಶುಭ ಕಾರ್ಯಗಳನ್ನು title=
ಸೂರ್ಯನು ಧನು ರಾಶಿಗೆ ಪ್ರವೇಶಿಸಿದರೆ ಶುಭ ಕಾರ್ಯಗಳು ನಡೆಯುವುದಿಲ್ಲ (file photo)

ನವದೆಹಲಿ : ಡಿಸೆಂಬರ್ 16 ರಂದು ಸೂರ್ಯನು ಧನು ರಾಶಿಗೆ (Sagitarius) ಪ್ರವೇಶಿಸಲಿದ್ದಾನೆ. ಸೂರ್ಯನು (Sun) ಧನು ರಾಶಿಗೆ ಪ್ರವೇಶಿಸಿದನಂತರ ಎಲ್ಲಾ ಶುಭ ಕಾರ್ಯಗಳಿಗೆ ವಿರಾಮ ಹಾಕಲಾಗುತ್ತದೆ. ಯಾಕೆಂದರೆ ಅಲ್ಲಿಂದ ಧನುರ್ ಮಾಸ   (Dhanurmaas) ಪ್ರಾರಂಭವಾಗುತ್ತದೆ. ಇದು ಸುಮಾರು ಒಂದು ತಿಂಗಳವರೆಗೆ ಇರುತ್ತದೆ. ಇದರ ನಂತರ, ಸೂರ್ಯನು ಮಕರ ರಾಶಿ ಪ್ರವೇಶಿಸಿದಾಗ, ಮತ್ತೆ ಶುಭ ಕಾರ್ಯಗಳನ್ನು ಮುಂದುವರೆಸಬಹುದಾಗಿದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ (Astrology) ಧನುರ್ ಮಾಸವನ್ನು ಕಪ್ಪು ಮಾಸ ಎಂದು ಕೂಡಾ ಕರೆಯಲಾಗುತ್ತದೆ. ಆದ್ದರಿಂದ ಈ ತಿಂಗಳಲ್ಲಿ ಯಾವುದೇ ಹೊಸ ಕೆಲಸವನ್ನು ಪ್ರಾರಂಭಿಸುವುದಿಲ್ಲ. ಇದಲ್ಲದೆ, ಮದುವೆ ಸೇರಿದಂತೆ ಶುಭ ಕಾರ್ಯಗಳನ್ನು ಕೂಡಾ ಈ ಸಂದರ್ಭದಲ್ಲಿ ಮಾಡುವಂತಿಲ್ಲ. ಆದರೆ, ಈ ಮಾಸದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದು ನಿಷಿದ್ಧವಾದರೂ, ಕೆಲವು ಕೆಲಸಗಳನ್ನು ಮಾಡಬಹುದಾಗಿದೆ. 

ಈ ಕೆಲಸವನ್ನು  ಧನುರ್ ಮಾಸದಲ್ಲಿಯೂ ಮಾಡಬಹುದಾಗಿದೆ : 
ಪ್ರೇಮವಿವಾಹ (Love marriage) ಅಥವಾ ಸ್ವಯಂವರದ ವಿಷಯವಾದರೆ ಈ ಮಾಸದಲ್ಲಿ ಆಗಬಹುದು. ಇದಲ್ಲದೇ ಜಾತಕದಲ್ಲಿ ಗುರು ಧನು ರಾಶಿಯಲ್ಲಿದ್ದರೆ (Sagitarius) ಅಂತಹ ಪರಿಸ್ಥಿತಿಯಲ್ಲಿ ಈ ಮಾಸದಲ್ಲಿ ಶುಭ ಕಾರ್ಯಗಳನ್ನು ನಡೆಸಬಹುದು. ಪೂಜೆಗೆ ಸಂಬಂಧಿಸಿದ ಶುಭ ಕಾರ್ಯಗಳನ್ನು ಸಹ ಮಾಡಬಹುದು. ಅಲ್ಲದೆ, ಧನುರ್ ಮಾಸದಲ್ಲಿ ಸೀಮಂತ, ಅನ್ನಪ್ರಾಶನ ಇತ್ಯಾದಿ ಕೆಲಸವನ್ನು ಈಗಾಗಲೇ ನಿಗದಿಪಡಿಸಿದರೆ, ಈ ಅವಧಿಯಲ್ಲಿ ಪೂರ್ಣಗೊಳಿಸಬಹುದು. ಇದರೊಂದಿಗೆ ಶ್ರಾದ್ಧ, ಪೂರ್ವಜರಿಗೆ ತರ್ಪಣ ಬಿಡುವ ಕಾರ್ಯಗಳಿಗೆ ಕೂಡಾ ನಿಷಿದ್ಧವಿರುವುದಿಲ್ಲ.  

ಇದನ್ನೂ ಓದಿ : ಉದ್ಯೋಗ ನಷ್ಟದ ಸಂಕೇತ ನೀಡುತ್ತದೆ ಈ ರೀತಿಯ ಕನಸುಗಳು, ಎದುರಾಗಬಹುದು ಆರ್ಥಿಕ ನಷ್ಟ

ಈ ಮಾಸದಲ್ಲಿ ಮದುವೆ ಏಕೆ ಮಾಡಲಾಗುವುದಿಲ್ಲ : 
ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯುವುದು ಮದುವೆಯ ಉದ್ದೇಶವಾಗಿದೆ. ಜ್ಯೋತಿಷ್ಯದಲ್ಲಿ (Astrology), ಧನು ರಾಶಿಯನ್ನು ಸಮೃದ್ಧಿ ಮತ್ತು ಅದೃಷ್ಟದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಮಾಸದಲ್ಲಿ ಸೂರ್ಯದೇವನು (Sun transit) ಧನು ರಾಶಿಗೆ ತೆರಳುತ್ತಾನೆ. ಇದನ್ನು ಸಂತೋಷ ಮತ್ತು ಸಮೃದ್ಧಿಗೆ ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಈ ಸಮಯದಲ್ಲಿ ಮದುವೆಯಾದರೆ, ಭಾವನಾತ್ಮಕ ಸಂತೋಷ ಅಥವಾ ದೈಹಿಕ ಸಂತೋಷವನ್ನು ಪಡೆಯುವುಡು ಸಾದ್ಯವಿಲ್ಲ ಎನ್ನುವುದು ನಂಬಿಕೆ. ಇದಲ್ಲದೆ, ಅದೃಷ್ಟ ಕೂಡಾ ದುರ್ಬಲಗೊಳ್ಳಲು ಪ್ರಾರಂಭಿಸುತ್ತದೆ. 

ಇದನ್ನೂ ಓದಿ : ಶನಿದೇವನ ಕೃಪೆಯಿಂದ 2022 ರಲ್ಲಿ ಬೆಳಗಲಿದೆ ಈ ಮೂರು ರಾಶಿಯವರ ಅದೃಷ್ಟ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News