Inauspicious Yog: ಶೀಘ್ರದಲ್ಲಿಯೇ ನಿರ್ಮಾಣಗೊಳ್ಳುತ್ತಿದೆ ಖತರ್ನಾಕ್ `ಜ್ವಾಲಾಮುಖಿ ಯೋಗ` ಕೇವಲ ನೆರಳು ಬಿದ್ರೆ ಸಾಕು....!
Very Inauspicious Yog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಕೆಲ ಯೋಗಗಳನ್ನು ಅತ್ಯಂತ ಅಶುಭ ಯೋಗಗಳು ಎಂದು ಹೇಳಲಾಗುತ್ತದೆ. ಇಂತಹುದೇ ಅಶುಭ ಯೋಗಗಳಲ್ಲಿ `ಜ್ವಾಲಾಮುಖಿ ಯೋಗ` ಕೂಡ ಒಂದು. ಯೋಗ ಶುಭವಾಗಿರಲಿ ಅಥವಾ ಅಶುಭವಾಗಿರಲಿ ಮಾನವ ಸೇರಿದಂತೆ ಭೂಮಿಯ ಮೇಲೆ ಇರುವ ಎಲ್ಲಾ ಚರಾಚರಗಳ ಮೇಲೆ ಈ ಯೋಗ ಪ್ರಭಾವ ಬೀರುತ್ತವೇ. `ಜ್ವಾಲಾಮುಖಿ` ಯೋಗ ಎಂದರೇನು ಮತ್ತು ಅದು ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ,
Very Inauspicious Yog: ಹಲವು ಬಾರಿ ನಾವು ಕೆಲಸ ಕಾರ್ಯಗಳ ಬಗ್ಗೆ ತುಂಬಾ ಉತ್ಸುಕರಾಗಿರುತ್ತೇವೆ ಮತ್ತು ಆ ಕಾರ್ಯಗಳನ್ನು ಪೂರ್ಣಗೊಳಿಸಲು ನಾವು ನಮ್ಮ ತನು-ಮನ-ಧನದಿಂದ ಪ್ರಯತ್ನಿಸುತ್ತೇವೆ. ಆದರೆ, ಕೆಲವೊಮ್ಮೆ ಎಷ್ಟೇ ಪ್ರಯತ್ನಪಟ್ಟರೂ ನಿಮಗೆ ಆ ಕೆಲಸದಲ್ಲಿ ತಪ್ಪುಗಳು ಕಂಡು ಬರಲಾರಂಭಿಸುತ್ತವೆ. ಏಕೆಂದರೆ ಯಾವ ಕೆಲಸದ ಪ್ರತಿ ನೀವು ಶೇ.100 ರಷ್ಟು ದೃಢಸಂಕಲ್ಪರಾಗಿರುವಿರೊ ಆ ಕೆಲಸದಲ್ಲಿ ಯಾವುದೋ ಒಂದು ರೀತಿಯಲ್ಲಿ ಅಡೆತಡೆಗಳು ಎದುರಾಗುತ್ತವೆ ಮತ್ತು ಕೆಲಸ ಪೂರ್ಣಗೊಳ್ಳದೇ ನಿಂತು ಹೋಗುತ್ತದೆ. ಹೀಗಿರುವಾಗ ಪ್ರತಿಯೊಬ್ಬ ವ್ಯಕ್ತಿ ತನ್ನ ದುರಾದೃಷ್ಟವನ್ನು ದೂಷಿಸುತ್ತಾನೆ. ಆದರೆ, ಗ್ರಹ ಹಾಗೂ ನಕ್ಷತ್ರಗಳ ಸ್ಥಿತಿಗತಿ ಕೂಡ ಕೆಲಸದ ಮೇಲೆ ಪ್ರಭಾವ ಬೀರುತ್ತದೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ. ಹೌದು, ಕೆಲ ಗ್ರಹ-ನಕ್ಷತ್ರಗಳ ಸ್ಥಿತಿಗತಿಗಳು ಅಶುಭ ಯೋಗ ರೂಪಿಸುತ್ತವೆ. ಇಂತಹುದೇ ಅಶುಭ ಯೋಗಗಳಲ್ಲಿ ಜ್ವಾಲಾಮುಖಿ ಯೋಗ ಕೂಡ ಒಂದು. ಈ ಯೋಗದ ಕುರಿತು ತಿಳಿದುಕೊಳ್ಳೋಣ ಬನ್ನಿ, ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ಮತ್ತು ಎಷ್ಟೇ ಶುಭ ಅಥವಾ ಮಂಗಳ ಕಾರ್ಯವನ್ನು ಈ ಯೋಗದಲ್ಲಿ ಮಾಡಿದರೆ, ಅದು ನಿಶ್ಚಿತವಾಗಿ ಈ ಅಶುಭಯೋಗದ ಪ್ರಭಾವಕ್ಕೆ ಒಳಗಾಗುತ್ತವೆ ಮತ್ತು ನಿಮ್ಮ ಪಾಲಿಗೆ ಅಶುಭ ಫಲಿತಾಂಶಗಳೇ ಪ್ರಾಪ್ತಿಯಾಗುತ್ತವೆ.
ಈ ಯೋಗ ಯಾವಾಗ ರೂಪುಗೊಳ್ಳುತ್ತಲಿದೆ?
ವೈದಿಕ ಪಂಚಾಂಗದ ಪ್ರಕಾರ ಜೂನ್ 5, 2023 ರಂದು ಬೆಳಗಿನ ಜಾವ ಸುಮಾರು 3 ಗಂಟೆ 23 ನಿಮಿಷಕ್ಕೆ ಈ 'ಜ್ವಾಲಾಮುಖಿ ಯೋಗ' ನಿರ್ಮಾಣಗೊಳ್ಳುತ್ತಿದೆ. ಈ ಯೋಗ ಬೆಳಗ್ಗೆ 6 ಗಂಟೆ 38 ನಿಮಿಷಕ್ಕೆ ಮುಕ್ತಾಯವಾಗಲಿದೆ.
ಇದು ಹೇಗೆ ನಿರ್ಮಾಣಗೊಳ್ಳುತ್ತದೆ?
ತಿಥಿ, ಯೋಗ ಹಾಗೂ ನಕ್ಷತ್ರಗಳ ಮೈತ್ರಿಯ ಕಾರಣ ಈ ಜ್ವಾಲಾಮುಖಿ ಯೋಗ ನಿರ್ಮಾಣಗೊಳ್ಳುತ್ತದೆ. ಈ ಅಶುಭ ಯೋಗ 5 ಸ್ಥಿತಿಗಳಲ್ಲಿ ಐದು ನಕ್ಷತ್ರಗಳ ಸಂಯೋಜನೆಯಿಂದ ರೂಪುಗೊಳ್ಳುತ್ತದೆ. ಮೊದಲನೆಯದಾಗಿ ಪ್ರತಿಪದೆ ತಿಥಿಯ ದಿನ ಮೂಲಾ ನಕ್ಷತ್ರವಿದ್ದರೆ, ಎರಡನೆಯದಾಗಿ ಪಂಚಮಿಯ ತಿಥಿಯಂದು ಭರಣಿ ನಕ್ಷತ್ರವಿದ್ದರೆ, ಮೂರನೆಯದಾಗಿ ಅಷ್ಟಮಿ ತಿಥಿಯಾಂಡು ಕೃತಿಕಾ ನಕ್ಷತ್ರವಿದ್ದರೆ, ನಾಲ್ಕನೆಯದಾಗಿ ನವಮಿ ತಿಥಿಯ ದಿನ ರೋಹಿಣಿ ನಕ್ಷತ್ರ ಬಂದರೆ ಮತ್ತು ಕೊನೆಯದಾಗಿ ದಶಮಿ ತಿಥಿಯ ದಿನ ಆಶ್ಲೇಷಾ ನಕ್ಷತ್ರ ಬಂದರೆ ಈ ಜ್ವಾಲಾಮುಖಿ ಯೋಗ ರೂಪುಗೊಳ್ಳುತ್ತದೆ.
ಈ ಅಶುಭ ಯೋಗದ ಪ್ರಭಾವವೇನು?
>> ಯಾವುದೇ ಶುಭ ಕಾರ್ಯವನ್ನು ಈ ಯೋಗದ ಕಾಲದಲ್ಲಿ ಮಾಡಲೇಬಾರದು ಎಂದು ಜೋತಿಷ್ಯ ಪಂಡಿತರು ಹೇಳುತ್ತಾರೆ.
>> ಯಾವುದೇ ಮಗು ಈ ಯೋಗದಲ್ಲಿ ಜನಿಸಿದರೆ, ಅದಕ್ಕೆ ಅರಿಷ್ಟ ಯೋಗ ತಗಲುವ ಸಾಧ್ಯತೆ ಇದೆ. ಇದಕ್ಕಾಗಿ ಮಗುವಿನ ಜಾತಕ ತೋರಿಸುವುದು ತುಂಬಾ ಮುಖ್ಯ.
>> ಯಾರೊಬ್ಬರ ವಿವಾಹ ಈ ಅಶುಭ ಯೋಗ ಕಾಲದಲ್ಲಿ ನೆರವೇರಿದರೆ, ಮದುವೆಯಲ್ಲಿ ಅಥವಾ ವೈವಾಹಿಕ ಜೀವನದಲ್ಲಿ ಒಂದಲ್ಲ ಒಂದು ರೀತಿಯ ಅಡೆತಡೆಗಳು ಎದುರಾಗುತ್ತಲೇ ಇರುತ್ತವೆ ಎನ್ನಲಾಗುತ್ತದೆ.
>> ಜ್ವಾಲಾಮುಖಿ ಯೋಗದ ಕಾಲದಲ್ಲಿ ಬಿತ್ತನೆ ಮಾಡಲಾದ ಬೀಜಗಳು ಕೂಡ ಉತ್ತಮ ಫಸಲು ನೀಡುವಲ್ಲಿ ವಿಫಲವಾಗುತ್ತವೆ ಎನ್ನಲಾಗುತ್ತದೆ.
>> ಯಾವುದೇ ಓರ್ವ ವ್ಯಕ್ತಿ ಈ ಯೋಗದ ಅವಧಿಯಲ್ಲಿ ಕಾಯಿಲೆಗೆ ಗುರಿಯಾದರೆ, ದೀರ್ಘ ಕಾಲದವರೆಗೆ ಆ ಕಾಯಿಲೆ ಆತನನ್ನು ತೊರೆಯುವುದಿಲ್ಲ ಎನ್ನಲಾಗುತ್ತದೆ.
>> ಹೊಸ ಮನೆ ಖರೀದಿ, ಕೊಳವೆ ಬಾವಿ ತೊಡಿಸುವುದಾಗಲಿ ಅಥವಾ ಮನೆಯ ಶಂಕುಸ್ಥಾಪನೆಯಾಗಲಿ ಈ ಅಶುಭ ಯೋಗದಲ್ಲಿ ಮಾಡಬಾರದು ಎಂದು ಹೇಳಲಾಗುತ್ತದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.