Gajkesari Yog: ಏಪ್ರಿಲ್ 17 ರಂದು ನಿರ್ಮಾಣಗೊಳ್ಳುತ್ತಿದೆ ಗಜಕೇಸರಿ ಯೋಗ,4 ರಾಶಿಗಳ ಜನರಿಗೆ ಅಪಾರ ಧನಪ್ರಾಪ್ತಿ!

Gajkesari Yog In Pisces: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಇತ್ತೀಚೆಗಷ್ಟೇ ದೇವಗುರು ಬೃಹಸ್ಪತಿ 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ತನ್ನ ಸ್ವರಾಹಿಯಾಗಿರುವ ಮೀನ ರಾಶಿಯಲ್ಲಿ ವಿರಾಜಮಾನನಾಗಿದ್ದಾನೆ. ಇದೀಗ ಇದೀಗ ಮೀನ ರಾಶಿಯಲ್ಲಿ ಚಂದ್ರನ ಜೊತೆಗೆ ಮೈತ್ರಿ ಮಾಡಿಕೊಂಡು ಆತ ಗಜಕೇಸರಿ ರಾಜಯೋಗವನ್ನು ನಿರ್ಮಿಸಲು ಹೊರಟಿದ್ದಾನೆ. ಈ ಯೋಗದ ಕಾರಣ 4 ರಾಶಿಗಳ ಜನರ ಜೀವನದಲ್ಲಿ ಅಪಾರ ಸಕಾರಾತ್ಮಕ ಬದಲಾವಣೆಗಳು ನಡೆಯಲಿವೆ. ಇದರಿಂದ ಅವರಿಗೆ ಅಪಾರ ಧನ ಪ್ರಾಪ್ತಿಯ ಯೋಗ ರೂಪುಗೊಳ್ಳಲಿದೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ. 
 

Gajkesari Rajyog In Meen: ಜೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹ ಒಂದು ನಿರ್ಧಿಷ್ಟ ಕಾಲಾಂತರದಲ್ಲಿ ತನ್ನ ರಾಶಿಯನ್ನು ಪರಿವರ್ತಿಸುವ ಮೂಲಕ ಶುಭ ಹಾಗೂ ಅಶುಭ ಯೋಗಗಳನ್ನು ನಿರ್ಮಿಸುತ್ತವೆ ಮತ್ತು ಈ ಯೋಗಗಳು ಭೂಮಿಯ ಮೇಲಿರುವ ಮಾನವ ಸೇರಿದಂತೆ ಸಕಲ ಚರಾಚರಗಳ ಮೇಲೆ ತನ್ನ ಪ್ರಭಾವವನ್ನು ಬೀರುತ್ತವೆ. ಇತ್ತೀಚೆಗಷ್ಟೇ 12 ವರ್ಷಗಳ ಸುದೀರ್ಘ ಅವಧಿಯ ಬಳಿಕ ದೇವಗುರು ಬೃಹಸ್ಪತಿ ತನ್ನ ಸ್ವರಾಶಿಯಾಗಿರುವ ಗುರು ರಾಶಿಗೆ ಸಾಗಿ ಅಲ್ಲಿ ವಿರಾಜಮಾನನಾಗಿದ್ದಾನೆ. ಇದೀಗ ಈ ರಾಶಿಗೆ ಚಂದ್ರನ ಪ್ರವೇಶ ಕೂಡ ನೆರವೇರಲಿದ್ದು, ಇದರಿಂದ ಮೀನ ರಾಶಿಯಲ್ಲಿ ಗುರು-ಚಂದ್ರರ ಮೈತ್ರಿಯ ಕಾರಣ ಗಜಕೇಸರಿ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಚಂದ್ರನ ಈ ಸಂಕ್ರಮಣ ಏಪ್ರಿಲ್ 17 ರಂದು ಸೋಮವಾರದ ದಿನ ರಾತ್ರಿ 8 ಗಂಟೆ 51 ನಿಮಿಷಕ್ಕೆ ನೆರವೇರಲಿದೆ. ಮೀನ ರಾಶಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಈ ಶುಭ ಯೋಗ 4 ರಾಶಿಗಳ ಜನರ ಜೀವನದಲ್ಲಿ ಅಪಾರ ಧನಪ್ರಾಪ್ತಿಯ ಯೋಗ ರೂಪಿಸುತ್ತಿದೆ. ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Akshaya Tritiya 2023: ಮಂಗಳನ ರಾಶಿಯಲ್ಲಿ 'ಪಂಚಗ್ರಹಿ ಯೋಗ', 4 ರಾಶಿಗಳ ಜನರಿಗೆ ಅಪಾರ ಧನ-ಸಂಪತ್ತಿನ ಜೊತೆಗೆ ಉನ್ನತಿಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಕರ್ಕ ರಾಶಿ: ಗಜಕೇಸರಿ ರಾಜಯೋಗ ನಿಮ್ಮ ಜಾತಕದ ಪಾಲಿಗೆ ಅಂತ್ಯಂತ ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಈ ಯೋಗ ನಿಮ್ಮ ಗೋಚರ ಜಾತಕದ ನವಮಭಾವದ್ಲ್ಲಿ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಸರ್ಕಾರಿ ನೌಕರಿ ಸಿಗುವ ಎಲ್ಲಾ ಲಕ್ಷಣಗಳು ಗೋಚರಿಸುತ್ತಿವೆ ಪ್ರಯತ್ನ ಬಿಡಬೇಡಿ. ಇದರಿಂದ ನಿಮ್ಮ ಘನತೆ-ಗೌರವ ಹೆಚ್ಚಾಗಲಿದ್ದು, ನೀವು ಹಲವು ಮಂಗಳ ಹಾಗೂ ಧಾರ್ಮಿಕ ಕೆಲಸಗಳಲ್ಲಿ ಪಾಲ್ಗೊಳ್ಳುವಿರಿ.   

2 /4

ಕನ್ಯಾ ರಾಶಿ: ಗುರು ಚಂದ್ರರ ಮೈತ್ರಿಯ ಕಾರಣ ನಿರ್ಮಾಣ ಗೊಳ್ಳುತ್ತಿರುವ ಈ ರಾಜಯೋಗ. ನಿಮ್ಮ ಪಾಲಿಗೆ ಅತ್ಯಂತ ಸುಖಕರ ಹಾಗೂ ಲಾಭಕಾರಿ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ಈ ರಾಜಯೋಗ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ವಿವಾಹಿತರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಾಧ್ಯತೆ ಇದೆ. ಪಾರ್ಟ್ನರ್ಶಿಪ್ ಕೆಲಸದಲ್ಲಿ ನಿಮಗೆ ಅಪಾರ ಧನ ಪ್ರಾಪ್ತಿಯಾಗಲಿದ್ದು, ಹೊಸ ಕೆಲಸ ಆರಂಭಿಸಲು ಇದೆ ಸಕಾಲ ಆಗಿದೆ.    

3 /4

ವೃಷಭ ರಾಶಿ: ನಿಮ್ಮ ಜಾತಕದವರ ಪಾಲಿಗೆ ಗಜಕೇಸರಿ ರಾಜಯೋಗ ಅತ್ಯಂತ ಶುಭ ಫಲದಾಯಿ ಸಾಬೀತಾಗಲಿದೆ. ಏಕೆಂದರೆ ಈ ರಾಜಯೋಗ ನಿಮ್ಮ ಗೋಚರ ಜಾತಕದ ಆದಾಯ ಹಾಗೂ ಲಾಭದ ಸ್ಥಾನದಲ್ಲಿ ರೂಪುಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಅಪಾರ ಹೆಚ್ಚಳ ಕಂಡುಬರಲಿದೆ. ಜೊತೆಗೆ ನಿಮಗೆ ಸಂತಾನ ಶುಖ ಕೂಡ ಪ್ರಾಪ್ತಿಯಾಗಲಿದೆ. ಇದಲ್ಲದೆ ನಿಮ್ಮ ಸಂತಾನಕ್ಕೆ ಉನ್ನತಿಯ ಯೋಗ ಕೂಡ ಇದೆ. ನಿಮಗೆ ಈ ಅವಧಿಯಲ್ಲಿ ಎಲ್ಲಾ ಭೌತಿಕ ಸುಖಗಳು ಪ್ರಾಪ್ತಿಯಾಗಲಿವೆ. ವಿದೇಶದಿಂದ ಲಾಭ ಉಂಟಾಗಲಿದೆ. ಆಮದು-ರಫ್ತೀನ ವ್ಯವಹಾರದಲ್ಲಿರುವವರಿಗೆ ಈ ಗಜಕೇಸರಿ ರಾಜಯೋಗ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ.  

4 /4

ಮಿಥುನ ರಾಶಿ: ಗಜಕೇಸರಿ ಜಾರಯೋಗ ಮಿಥುನ ರಾಶಿಯ ಜಾತಕದವರ ಪಾಲಿಗೆ ಲಾಭಪ್ರದ ಸಾಬೀತಾಗಲಿದೆ. ಏಕೆಂದರೆ ಈ ರಾಜಯೋಗ ನಿಮ್ಮ ಜಾತಕದ ದಶಮ ಭಾವದಲ್ಲಿ ರೂಪುಗೊಳ್ಳುತಿದೆ. ಈ ಅವಧಿಯಲ್ಲಿ ನಿಮ್ಮ ಕೆಲಸ-ಕಾರ್ಯಗಳಲ್ಲಿ ಅಪಾರ ಯಶಸ್ಸು ಕಂಡುಬರಲಿದೆ. ಬಾಳಸಂಗಾತಿಯ ಉನ್ನತಿಗೂ ಇದು ಕಾರಣವಾಗಲಿದೆ. ನೌಕರಿ-ವ್ಯಾಪಾರದಲ್ಲಿಯೂ ಕೂಡ ಉನ್ನತಿಯ ಯೋಗವಿದೆ. ಈ ಅವಧಿಯಲ್ಲಿ ನೀವು ಯಾವುದಾದರೊಂದು ಆಸ್ತಿಯನ್ನು ಖರೀದಿಸಬಹುದು. ಅದೃಷ್ಟ ಕೂಡ ಹೆಚ್ಚಾಗಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ನಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)