Vishnu Puran: ಶತಮಾನಗಳ ಹಿಂದೆ ವಿಷ್ಣು ಪುರಾಣದಲ್ಲಿ ಹೇಳಿದ ಈ ಸಂಗತಿಗಳು ಇಂದು ನಿಜ ಸಾಬೀತಾಗುತ್ತಿವೆಯೇ?
Vishnu Puran Granth: ವಿಷ್ಣು ಪುರಾಣದಲ್ಲಿ ಅನೇಕ ವಿಷಯಗಳ ಕುರಿತು ಭವಿಷ್ಯವಾಣಿ ಮಾಡಲಾಗಿದೆ. ಇವುಗಳಲ್ಲಿ ಹಲವು ಸಂಗತಿಗಳು ವರ್ತಮಾನದಲ್ಲಿ ನಿಜ ಎಂದು ಸಾಬೀತಾಗುವ ರೀತಿಯಲ್ಲಿ ತೋರುತ್ತಿದೆ. ಹಾಗಾದರೆ ವಿಷ್ಣು ಪುರಾಣದಲ್ಲಿ ಹೇಳಲಾಗಿರುವ ಈ ಸಂಗತಿಗಳ ಕುರಿತು ತಿಳಿದುಕೊಳ್ಳೋಣ ಬನ್ನಿ,
Vishnu Puran Forecast: ಹಿಂದೂ ಧರ್ಮ-ಶಾಸ್ತ್ರಗಳಲ್ಲಿ ಹಲವು ಧರ್ಮಗ್ರಂಥಗಳಿದ್ದು, ಅವುಗಳಲ್ಲಿ ಯಾವುದೇ ವ್ಯಕ್ತಿಗೆ ಸಂಬಂಧಿಸಿದ ಜೀವನ ವಿಧಾನಗಳು, ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳು ಇತ್ಯಾದಿಗಳ ಕುರಿತು ಉಲ್ಲೇಖಿಸಲಾಗಿದೆ. ಈ ಧರ್ಮಗ್ರಂಥಗಳಲ್ಲಿ ವಿಷ್ಣು ಪುರಾಣ ಕೂಡ ಒಂದಾಗಿದ್ದು, ಅದರಲ್ಲಿಯೂ ಕೂಡ ಇಂತಹ ಅನೇಕ ವಿಷಯಗಳನ್ನು ವಿವರಿಸಲಾಗಿದೆ, ಅವುಗಳನ್ನು ತಿಳಿದುಕೊಳ್ಳುವ ಮೂಲಕ ನೀವು ನಿಮ್ಮ ಭವಿಷ್ಯ ಮತ್ತು ವರ್ತಮಾನವನ್ನು ಸುಧಾರಿಸಬಹುದು ಎನ್ನಲಾಗಿದೆ. ಇದರ ಜೊತೆಗೆ ನೀವು ನಿಮ್ಮ ಭವಿಷ್ಯದ ಕಾರ್ಯಗಳನ್ನು ಮತ್ತಷ್ಟು ಉತ್ತಮಗೊಳಿಸುವ ಮೂಲಕ, ನೀವು ಮೋಕ್ಷದ ಮಾರ್ಗವನ್ನು ಸಾಧಿಸಬಹುದು. ಇದೇ ವೇಳೆ ವಿಷ್ಣು ಪುರಾಣವು ಕಲಿಯುಗದಲ್ಲಿ ನಡೆಯುವ ಕೆಲ ಘಟನೆಗಳ ಬಗ್ಗೆಯೂ ಕೂಡ ಉಲ್ಲೇಖಿಸಲಾಗಿದೆ.
ವಿಷ್ಣು ಪುರಾಣದಲ್ಲಿ, ವ್ಯಕ್ತಿಯೊಬ್ಬನ ಹುಟ್ಟಿನಿಂದ ಸಾವಿನವರೆಗಿನ ಪ್ರಯಾಣದ ಕುರಿತು ಹೇಳಲಾಗಿದೆ. ಶತಮಾನಗಳ ಹಿಂದೆ ಈ ಪುಸ್ತಕದಲ್ಲಿ ಬರೆಯಲಾಗಿರುವ ವಿಷಯಗಳು ಪ್ರಸ್ತುತದಲ್ಲಿ ನಿಜವಾಗುತ್ತಿರುವುದನ್ನು ಕೇಳಿದರೆ, ನಿಮಗೂ ಕೂಡ ಆಶ್ಚರ್ಯವಾಗಲಿದೆ. ಇಂದು ನಾವು ಅಂತಹ ಕೆಲವು ವಿಷಯಗಳ ಕುರಿತು ನಿಮಗೆ ಮಾಹಿತಿಯನ್ನು ನೀಡಲಿದ್ದೇವೆ, ಶತಮಾನಗಳ ಹಿಂದೆ ಧರ್ಮಗ್ರಂಥಗಳಲ್ಲಿ ಬರೆಯಲಾಗಿರುವ ಈ ಸಂಗತಿಗಳು ಇಂದು ನಮ್ಮ ಕಣ್ಣ ಮುಂದೆಯೇ ನಡೆಯುತ್ತಿವೆ.
ಭೂಮಿಯ ಶಾಖ ಮತ್ತು ನೀರಿನ ಕೊರತೆ
ಧಾರ್ಮಿಕ ಗ್ರಂಥಗಳ ಪ್ರಕಾರ, ಶಾಸ್ತ್ರಗಳಲ್ಲಿ ಕಲಿಯುಗದ ಬಗ್ಗೆ ಅನೇಕ ಸಂಗತಿಗಳನ್ನು ಹೇಳಲಾಗಿದೆ. ಕಲಿಯುಗದಲ್ಲಿ ಉಂಟಾಗುವ ಪ್ರಭಲವಾದ ಶಾಖಕ್ಕೆ ಭೂಮಿಯಲ್ಲಿ ಬಿರುಕುಗಳು ಕಾಣಿಸಿಕೊಳ್ಳಲಿವೆ ಎಂದು ವಿವರಿಸಲಾಗಿದೆ. ನೀರಿನ ಮಟ್ಟವು ತುಂಬಾ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ. ಇದೇ ವೇಳೆ ಹಲವೆಡೆ ಮಳೆಯಾದರೆ, ಹಲವು ಭಾಗಗಳು ನೀರಿನಲ್ಲಿ ಕೊಚ್ಚಿ ಹೋಗಲಿವೆ ಎನ್ನಲಾಗಿವೆ. ಒಬ್ಬ ವ್ಯಕ್ತಿಯು ತನ್ನ ವಿನಾಶವನ್ನು ನೋಡುತ್ತಲೇ ಇರುವಂತಹ ಪರಿಸ್ಥಿತಿ ಇರಲಿದೆ ಎನ್ನಲಾಗಿದ್ದು, ಇಂದು ಜನರು ಅದನ್ನೇ ನೋಡುತ್ತಿದ್ದಾರೆ.
ಹಣದಿಂದ ದುರಹಂಕಾರ ಹೆಚ್ಚಾಗಲಿದೆ
ಧಾರ್ಮಿಕ ಗ್ರಂಥವಾದ ವಿಷ್ಣು ಪುರಾಣದಲ್ಲಿ ಜನರು ಹಣದ ಕಾರಣ ಅಹಂಕಾರಕ್ಕೆ ಒಳಗಾಗುತ್ತಾರೆ ಎಂದು ಹೇಳಲಾಗಿದೆ. ಸ್ವಲ್ಪ ಹಣ ಹತ್ತಿರ ಬಂದರೂ ಸಾಕು ಅವರಲ್ಲಿ ಅಹಂಕಾರ ಮನೆಮಾಡಲಿದೆ ಎನ್ನಲಾಗಿದೆ. ಹಣದ ಮುಂದೆ ಎಲ್ಲರೂ ಸಂಬಂಧಗಳನ್ನು ಮರೆತುಬಿಡುತ್ತಾರೆ ಮತ್ತು ಹಣವೇ ಸರ್ವಸ್ವವಾಗಲಿದೆ. ಎಲ್ಲರೂ ಹಣವಂತರ ಮಾತನ್ನು ಮಾತ್ರ ಕೇಳುತ್ತಾರೆ ಮತ್ತು ಇದೆ ಹಣದ ಕಾರಣ ವ್ಯಕ್ತಿಗಳು ಕೆಟ್ಟ ವ್ಯವಹಾರಗಳಲ್ಲಿ ಅಥವಾ ಸಾಂಗತ್ಯದಲ್ಲಿ ತೊಡಗಲಿದ್ದಾರೆ ಎಂದು ಹೇಳಲಾಗಿದೆ. ಅದು ಇಂದಿನ ಕಾಲದಲ್ಲಿ ಪ್ರಸ್ತುತವಾಗಿದೆ ಎಂದರೆ ತಪ್ಪಾಗಲಾರದು.
ಸಂಪಾದನೆಯೆಲ್ಲ ಮನೆ ಕಟ್ಟಲು ಖರ್ಚಾಗಲಿದೆ
ಹಿಂದೂ ಸಂಪ್ರದಾಯದಲ್ಲಿ ಕಲಿಯುಗದಲ್ಲಿ ಒಬ್ಬ ವ್ಯಕ್ತಿಯು ತನ್ನ ಎಲ್ಲಾ ಸಂಪಾದನೆಯನ್ನು ಮನೆ ಕಟ್ಟಲು ಖರ್ಚು ಮಾಡುತ್ತಾನೆ ಎಂದು ಹೇಳಲಾಗಿದೆ. ಇತ್ತೀಚಿನ ದಿನಗಳಲ್ಲಿ ಸ್ವಂತ ಮನೆಯನ್ನು ಖರೀದಿಸುವುದು ಜನರ ದೊಡ್ಡ ಕೆಲಸವಾಗಿದೆ. ಎಷ್ಟೇ ಓಡಾಟ ಮತ್ತು ಕಷ್ಟಪಟ್ಟು ಕೆಲಸ ಮಾಡಿದರೂ ಕೂಡ ಒಬ್ಬ ವ್ಯಕ್ತಿಯು ತನ್ನ ಮನೆಯನ್ನು ಖರೀದಿಸಲು ಸಾಧ್ಯವಾಗುವುದಿಲ್ಲ. ವಿಷ್ಣು ಪುರಾಣದಲ್ಲಿ ಹೇಳಲಾದ ಈ ವಿಷಯವು ಸಂಪೂರ್ಣವಾಗಿ ನಿಜವೆಂದು ತೋರುತ್ತದೆ. ಕಷ್ಟಪಟ್ಟು ದುಡಿದು ಬಂದ ಹಣವನ್ನೆಲ್ಲ ಜನರು ಮನೆ ನಿರ್ಮಾಣ ಅಥವಾ ಖರೀದಿಯಲ್ಲಿ ಹೂಡಿಕೆ ಮಾಡುತ್ತಿದ್ದಾರೆ.
ಇದನ್ನೂ ಓದಿ-Zodiac Sign: ಈ ರಾಶಿಯ ಹುಡುಗರನ್ನು ವರಿಸಲು ಹುಡುಗಿಯರು ತುದಿಗಾಲಲ್ಲಿ ನಿಂತಿರುತ್ತಾರೆ
ಅಕಾಲಿಕ ಮರಣ ಹೆಚ್ಚಾಗುತ್ತದೆ
ಧಾರ್ಮಿಕ ಗ್ರಂಥಗಳಲ್ಲಿ, ವ್ಯಕ್ತಿಯ ವಯಸ್ಸಿನ ಬಗ್ಗೆಯೂ ಕೂಡ ಉಲ್ಲೇಖಿಸಲಾಗಿದೆ. ಒಬ್ಬ ವ್ಯಕ್ತಿಯು ಕಲಿಯುಗದಲ್ಲಿ ತನ್ನ ನಿಶ್ಚಿತ ವಯಸ್ಸನ್ನು ಪೂರ್ಣಗೊಳಿಸಲು ಸಾಧ್ಯವಾಗುವುದಿಲ್ಲ ಎಂದು ವಿಷ್ಣು ಪುರಾಣದಲ್ಲಿ ಹೇಳಲಾಗಿದೆ. ಮನುಷ್ಯರು ಅಕಾಲಿಕ ಮರಣಕ್ಕೆ ಬಲಿಯಾಗುತ್ತಾರೆ. ಇದೇ ವೇಳೆ ಅಪಘಾತಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕಲಿಯುಗದಲ್ಲಿ, ಹೊಸ ಸಾಂಕ್ರಾಮಿಕವು ವ್ಯಕ್ತಿಯ ಜೀವನದಲ್ಲಿ ಪ್ರಾಬಲ್ಯ ಸಾಧಿಸಲಿದೆ ಎಂದು ಹೇಳಲಾಗಿದೆ. ವಿಷ್ಣು ಪುರಾಣದಲ್ಲಿ ಹೇಳಲಾದ ಈ ವಿಷಯಗಳು ಪ್ರಸ್ತುತ ಸಂಪೂರ್ಣವಾಗಿ ನಿಜವೆಂದು ತೋರುತ್ತಿದೆ.
ಇದನ್ನೂ ಓದಿ-Shani Vakri 2022: ಶೀಘ್ರದಲ್ಲಿಯೇ ಶನಿಯ ವಕ್ರನಡೆ ಆರಂಭ, ಈ ರಾಶಿಗಳಿಗೆ ಸಮಯ ಕಷ್ಟದಿಂದ ಕೂಡಿರಲಿದೆ
(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.