ಅಕಾಲಿಕ ಬಿಳಿ ಕೂದಲಿಗೆ ಕಾರಣ:  ವಯಸ್ಸು ಹೆಚ್ಚಾದಂತೆ ಕೂದಲು ಕೂಡ ಬೆಳ್ಳಗಾಗಲು ಪ್ರಾರಂಭಿಸುವುದು ಸಹಜವೇ.  ಆದರೆ ಇತ್ತೀಚಿನ ದಿನಗಳಲ್ಲಿ ಕೂದಲು ಬೆಳ್ಳಗಾಗುವುದಕ್ಕೂ ವಯಸ್ಸಿಗೂ ಸಂಬಂಧವೇ ಇಲ್ಲ. ಕೆಲವರಿಗೆ ಚಿಕ್ಕ ವಯಸ್ಸಿನಲ್ಲಿಯೇ ಬಿಳಿ ಕೂದಲ ಸಮಸ್ಯೆ ಕಾಡುತ್ತದೆ. ಚಿಕ್ಕವಯಸ್ಸಿನಲ್ಲಿ ಬಿಳಿ ಕೂದಲು ಕಾಣಿಸಿಕೊಳ್ಳುವುದರ ಹಿಂದೆ ಆನುವಂಶಿಕತೆಯ ಕಾರಣಗಳಿರಬಹುದು. ಅಷ್ಟು ಮಾತ್ರವಲ್ಲ, ಅಕಾಲಿಕ ಬಿಳಿ ಕೂದಲಿಗೆ ಅನಾರೋಗ್ಯಕರ ಆಹಾರ ಪದ್ಧತಿ, ಕೆಲವು ವಿತಿಮಿನ್ಗಳ ಕೊರತೆಯೂ ಕಾರಣವಿರಬಹುದು ಎಂದು ನಿಮಗೆ ತಿಳಿದಿದೆಯೇ?


COMMERCIAL BREAK
SCROLL TO CONTINUE READING

ನಿರ್ದಿಷ್ಟ ವಿಟಮಿನ್ ಕೊರತೆಯಿಂದ ಕೂದಲು ಬೆಳ್ಳಗಾಗುತ್ತದೆ:
ಕೂದಲು ಚಿಕ್ಕ ವಯಸ್ಸಿನಲ್ಲಿಯೇ ಬೆಳ್ಳಗಾಗುತ್ತದೆ ಎಂಬ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಆದರೆ, ಇದಕ್ಕೆ ಕಾರಣ ಏನೆಂಬುದನ್ನು ತಿಳಿಯುವುದು ಒಳಿತು. ಅದಕ್ಕಾಗಿ ದೇಹದಲ್ಲಿ ಯಾವ ಪೋಷಕಾಂಶಗಳ ಕೊರತೆ ಇದೆ ಎಂದು ಪರೀಕ್ಷೆ ಮಾಡಿಸಿಕೊಳ್ಳಿ. ಸಾಮಾನ್ಯವಾಗಿ ನಾವು ಆರೋಗ್ಯಕರ ಆಹಾರವನ್ನು ನಿರ್ಲಕ್ಷಿಸುತ್ತೇವೆ, ಇದು ನಮ್ಮ ಕೂದಲಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನಿರ್ದಿಷ್ಟ ವಿಟಮಿನ್ ಕೊರತೆಯಿದ್ದರೆ, ನಂತರ ಕೂದಲು ಅಕಾಲಿಕವಾಗಿ ಬೆಳ್ಳಗಾಗಲು ಪ್ರಾರಂಭಿಸುತ್ತದೆ.


ಇದನ್ನೂ ಓದಿ- White Hair Treatment: ಬಿಳಿ ಕೂದಲನ್ನು ಕಪ್ಪಾಗಿಸಲು ಹುಣಸೇಹಣ್ಣನ್ನು ಈ ರೀತಿ ಬಳಸಿ


ವಿಟಮಿನ್ ಬಿ 12 ಕೊರತೆ:
ಚಿಕ್ಕ ವಯಸ್ಸಿನಲ್ಲಿ ನಿಮ್ಮ ಕೂದಲು ಬಿಳಿಯಾಗುತ್ತಿದ್ದರೆ, ನಿಮ್ಮ ದೇಹದಲ್ಲಿ ವಿಟಮಿನ್ ಬಿ 12 ಕೊರತೆಯಿರುವ ಸಾಧ್ಯತೆಯಿದೆ. ಅಂತಹ ಪರಿಸ್ಥಿತಿಯಲ್ಲಿ, ಖಂಡಿತವಾಗಿಯೂ ನಿಮ್ಮ ಆಹಾರದಲ್ಲಿ ಈ ಪ್ರಮುಖ ಪೋಷಕಾಂಶಗಳನ್ನು ಸೇರಿಸಿ, ಇಲ್ಲದಿದ್ದರೆ,  ಕೂದಲು ದುರ್ಬಲಗೊಳ್ಳುವುದು ಮಾತ್ರವಲ್ಲ ಬೆಳ್ಳಗೂ ಆಗುತ್ತದೆ.


ಚಿಕ್ಕ ವಯಸ್ಸಿನಲ್ಲೇ ಬಿಳಿ ಕೂದಲು ಹೋಗಲಾಡಿಸಲು ಜೀವನಶೈಲಿಯ ಬದಲಾವಣೆಗಳು ಬಹಳ ಮುಖ್ಯ. ಕೂದಲಿನ ಅಕಾಲಿಕ ಬೂದುಬಣ್ಣವನ್ನು ತಡೆಗಟ್ಟಲು, ನೀವು ಈ ಕೆಳಗಿನ ಕ್ರಮಗಳನ್ನು ಅಳವಡಿಸಿಕೊಳ್ಳಬಹುದು.


1. ಜೀವನದಲ್ಲಿ ಒತ್ತಡವನ್ನು ಕಡಿಮೆ ಮಾಡಿ
2. ಯಾವಾಗಲೂ ಆರೋಗ್ಯಕರ ಆಹಾರವನ್ನು ತೆಗೆದುಕೊಳ್ಳಿ.
3. ಎಣ್ಣೆಯುಕ್ತ ಆಹಾರದಿಂದ ಅಂತರ ಕಾಯ್ದುಕೊಳ್ಳಿ
4. ಸಿಗರೇಟ್ ಮತ್ತು ಆಲ್ಕೋಹಾಲ್ ತ್ಯಜಿಸಿ
5. ಪ್ರತಿದಿನ ಶಾಂಪೂ ಮಾಡಬೇಡಿ.
6. ಕೂದಲಿಗೆ ಕೊಬ್ಬರಿ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ. 
7. ವಾರಕ್ಕೆ ಒಂದೆರಡು ಬಾರಿ ಕೂದಲಿಗೆ ಎಣ್ಣೆಯಿಂದ ಮಸಾಜ್ ಮಾಡಿ ಸ್ನಾನ ಮಾಡಿ.


ಇದನ್ನೂ ಓದಿ- White Hair Plucking: ಬಿಳಿ ಕೂದಲು ಕೀಳುವುದು ಸರಿಯೋ? ತಪ್ಪೋ?


ವಿಟಮಿನ್ ಬಿ12 ಪಡೆಯಲು ಈ ಆಹಾರಗಳನ್ನು ಸೇವಿಸಿ:
1. ಮೊಟ್ಟೆ
2. ಸೋಯಾಬೀನ್
3. ಮೊಸರು
4. ಓಟ್ಸ್
5. ಹಾಲು
6. ಚೀಸ್
7. ಬ್ರೊಕೊಲಿ
8. ಮೀನು
9. ಚಿಕನ್
10. ಅಣಬೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.