Tips for Hair: ನಿಮ್ಮ ಕೂದಲಿನ ಆರೋಗ್ಯವನ್ನು ಕಾಪಾಡುವಲ್ಲಿ ನಿಮ್ಮ ಆಹಾರಕ್ರಮ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಬಯೋಟಿನ್, ವಿಟಮಿನ್ ಮತ್ತು ಪ್ರೊಟೀನ್‌ಗಳಲ್ಲಿ ಸಮೃದ್ಧವಾಗಿರುವ ಆಹಾರಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಉದ್ದನೆಯ ಕೂದಲಿಗಾಗಗಿ ನಿಮ್ಮ ಆಹಾರದಲ್ಲಿ ಸೇರಿಸಬಹುದಾದ ಕೆಲವು ಪೌಷ್ಟಿಕ ಆಹಾರಗಳು ಇಲ್ಲಿವೆ.


COMMERCIAL BREAK
SCROLL TO CONTINUE READING

ಬೀಜಗಳು ಹಾಗೂ ನಟ್ಸ್‌
ಕುಂಬಳಕಾಯಿ ಬೀಜ, ಬಾದಾಮಿ ಮತ್ತು ವಾಲ್‌ನಟ್‌ಗಳಂತಹ ಬೀಜಗಳು ಹೆಚ್ಚಿನ ಪ್ರಮಾಣದ ಒಮೆಗಾ -3 ಕೊಬ್ಬಿನಾಮ್ಲಗಳನ್ನು ಹೊಂದಿದ್ದು ಅದು ನಿಮ್ಮ ಕೂದಲಿನ ದಪ್ಪ ಹೆಚ್ಚಿಸುವಲ್ಲಿ ಸಹಕಾರಿ ಮತ್ತು ಇದು ಕೂದಲಿನ ಆರೋಗ್ಯವನ್ನು ಕಾಪಾಡುತ್ತದೆ. 


ಧಾನ್ಯಗಳು
ಧಾನ್ಯಗಳು ಬಯೋಟಿನ್, ಕಬ್ಬಿಣ ಸತ್ವಗಳಿಂದ ತುಂಬಿರುತ್ತವೆ ಅದು ನಿಮ್ಮ ಕೂದಲಿನ ಬೆಳವಣಿಗೆಯನ್ನು ಹೆಚ್ಚಿಸುವುದರಲ್ಲಿ ಸಹಕಾರಿ. ನೆತ್ತಿಯ ಕಡೆಗೆ ರಕ್ತ ಸಂಚಲನೆಯನ್ನು ಹೆಚ್ಚಿಸುವ ಮೂಲಕ ಕೂದಲಿನ ಆರೋಗ್ಯವನ್ನ ಕಾಪಾಡುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ.


ಇದನ್ನೂ ಓದಿ: ಈ ಕಾಳನ್ನು ಅರೆದು ಕೂದಲಿಗೆ ಹಚ್ಚಿದರೆ ಹತ್ತೇ ನಿಮಿಷದಲ್ಲಿ ಬಿಳಿ ಕೂದಲು ಕಪ್ಪಾಗುವುದು


ಹಸಿರು ತರಕಾರಿಗಳು
ಎಲೆಕೋಸು ಮತ್ತು ಪಾಲಕ್ನಂತಹ  ಹಸಿರು ಎಲೆ ತರಕಾರಿಗಳಲ್ಲಿ ವಿಟಮಿನ್ ಎ, ಸಿ, ಕ್ಯಾರೋಟಿನ್ ಅಂಶಗಳು ಸಮೃದ್ಧವಾಗಿದೆ, ಇವೆಲ್ಲವೂ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. 


ಬೆರ್ರಿಗಳು
ರಾಸ್ಪ್‌ ಬೆರ್ರಿಸ್, ಸ್ಟ್ರಾಬೆರಿ ಮತ್ತು ಬ್ಲೂಬೆರ್ರಿಗಳಂತಹ ಬೆರ್ರಿಗಳು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ, ಇದು ಕೂದಲು  ಹಾನಿಯಾಗುವುದರಿಂದ ರಕ್ಷಿಸುತ್ತದೆ ಮತ್ತು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.
 
ಇದನ್ನೂ ಓದಿ: Natural Black Hair Dye: ನಿಮ್ಮ ಮನೆಯಲ್ಲಿಯೇ ತಯಾರಿಸಿ ನೈಸರ್ಗಿಕ ಬ್ಲಾಕ್ ಹೇರ್ ಡೈ


ಮೊಟ್ಟೆ
ಮೊಟ್ಟೆಗಳು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುವ ಮತ್ತು ನಿಮ್ಮ ಕೂದಲಿನ ದಟ್ಟಣೆಯನ್ನ ಸುಧಾರಿಸುವ ವಿವಿಧ ಪ್ರೋಟೀನ್‌ಗಳಿಂದ ತುಂಬಿವೆ. ಇವು ಕೂದಲಿನ ಬೆಳವಣಿಗೆ ಹಾಗೂ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.


(ಸೂಚನೆ:  ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಸಂಶೋಧನೆಯ ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. )


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.