ಜಿಮ್ಗೆ ಹೋಗದೇ ಸಣ್ಣ ಆಗಬೇಕೇ? ಬೆಳಗಿನ ಉಪಹಾರದಲ್ಲಿ ಈ ಪ್ರೋಟೀನ್ ಭರಿತ ಆಹಾರಗಳನ್ನು ಸೇವಿಸಿ
Weight Loss With Breakfast: ಪ್ರಸ್ತುತ, ಪ್ರತಿಯೊಬ್ಬರಿಗೂ ಕೂಡ ತೂಕ ಇಳಿಕೆ ದೊಡ್ಡ ಸವಾಲಾಗಿದೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ನಿತ್ಯ ಉಪಹಾರದಲ್ಲಿ ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸುವುದರಿಂದ ಯಾವುದೇ ಜಿಮ್, ವ್ಯಾಯಾಮವಿಲ್ಲದೆಯೇ ಸಣ್ಣಗಾಗಬಹುದಂತೆ... ಅಂತಹ ಉಪಹಾರಗಳು ಯಾವುವು ಎಂದು ತಿಳಿಯೋಣ...
Weight Loss With Breakfast: ಆರೋಗ್ಯವಾಗಿರಲು ಊಟ, ನಿದ್ರೆ ಎಲ್ಲವೂ ಬಹಳ ಮುಖ್ಯ. ಆದರೆ, ಕೆಲವರು ತೂಕ ಇಳಿಸುವ ಪ್ರಕ್ರಿಯೆಯಲ್ಲಿ ಊಟವನ್ನು ಕಡಿಮೆ ಮಾಡುತ್ತಾರೆ. ಇನ್ನೂ ಕೆಲವರು ಬೆಳಗಿನ ಬ್ರೇಕ್ ಫಾಸ್ಟ್ ಅನ್ನು ಸೇವಿಸುವುದಿಲ್ಲ. ಆದರೆ, ಇದು ತಪ್ಪು ಕ್ರಮವಾಗಿದೆ. ವೈದ್ಯರ ಪ್ರಕಾರ, ಪ್ರತಿಯೊಬ್ಬರಿಗೂ ಸಹ ಬೆಳಗಿನ ಉಪಾಹಾರ ಸೇವನೆ ಬಹಳ ಮುಖ್ಯ. ನಾವು ಬೆಳಗಿನ ಉಪಹಾರದಲ್ಲಿ ಸೇವಿಸುವ ಆಹಾರವು ದಿನವಿಡೀ ದೇಹದಲ್ಲಿ ಶಕ್ತಿಯನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಮತ್ತೊಂದು ಪ್ರಮುಖ ವಿಷಯವೆಂದರೆ, ನಾವು ಬೆಳಗಿನ ಉಪಹಾರದಲ್ಲಿ ಕೆಲವು ನಿರ್ದಿಷ್ಟ ಆಹಾರಗಳನ್ನು ಸೇವಿಸುವುದರಿಂದ ಯಾವುದೇ ಜಿಮ್, ವ್ಯಾಯಾಮವಿಲ್ಲದೆಯೇ ಸಣ್ಣಗಾಗಬಹುದಂತೆ...
ತೂಕ ಇಳಿಕೆಗೆ ಉಪಹಾರದಲ್ಲಿ ತಪ್ಪದೇ ಸೇವಿಸಿ ಪ್ರೋಟೀನ್ ಭರಿತ ಆಹಾರ:
ಹೌದು, ನಿತ್ಯ ಉಪಹಾರದಲ್ಲಿ ಪ್ರೋಟೀನ್ ಭರಿತ ಆಹಾರಗಳ ಸೇವನೆಯಿಂದ ಆರೋಗ್ಯಕರವಾಗಿ ತೂಕ ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತದೆ. ಇನ್ನೊಂದು ಪ್ರಮುಖ ವಿಷಯವೆಂದರೆ, ನಾವು ಮುಂಜಾನೆ ಬ್ರೇಕ್ ಫಾಸ್ಟ್ ನಲ್ಲಿ ಪ್ರೋಟೀನ್ ರಿಚ್ ಆಹಾರ ಸೇವಿಸುವುದರಿಂದ ಹಸಿವನ್ನು ನಿಯಂತ್ರಿಸಬಹುದಾಗಿದ್ದು ಇದರಿಂದ ಸುಲಭವಾಗಿ ತೂಕ ಇಳಿಸಬಹುದು ಎಂತಲೂ ಹೇಳಲಾಗುತ್ತದೆ. ಅಂತಹ ಆಹಾರಗಳು ಯಾವುವು ಎಂದು ತಿಳಿಯೋಣ...
ಜಿಮ್, ಯೋಗ, ವ್ಯಾಯಾಮವಿಲ್ಲದೆಯೇ ತೂಕ ಇಳಿಸಿಕೊಳ್ಳಲು ನಿತ್ಯ ಬೆಳಗಿನ ಉಪಹಾರದಲ್ಲಿ ಈ ಆಹಾರಗಳನ್ನು ಸೇವಿಸಿ:
ಹೆಸರು ಬೇಳೆ/ ಮೂಂಗ್ ದಾಲ್ ದೋಸೆ:
ಹೆಸರು ಬೇಳೆ ಉದರದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಅನೇಕ ರೀತಿಯ ಪ್ರೋಟೀನ್‌ಗಳಲ್ಲಿ ಸಮೃದ್ಧವಾಗಿರುವ ಹೆಸರು ಬೆಳೆಯನ್ನು ನೀವು ಬೆಳಗಿನ ಉಪಹಾರದಲ್ಲಿ ಬಳಸುವುದರಿಂದ ಆರೋಗ್ಯಕರವಾಗಿ ತೂಕ ಕಡಿಮೆ ಆಡುತ್ತದೆ. ಹೆಸರು ಬೇಳೆಯೊಂದಿಗೆ ಮಜ್ಜಿಗೆ ಹಾಕಿ ರುಬ್ಬಿ ಇದರಿಂದ ದೋಸೆ ತಯಾರಿಸಿ ಸೇವಿಸಬಹುದು. ಇದರಲ್ಲಿ ಕ್ಯಾಲೋರಿ ಕಡಿಮೆ ಇರುವುದರಿಂದ ತೂಕ ಕಡಿಮೆ ಮಾಡಲು ಸಹಕಾರಿಯಾಗಿದೆ.
ಇದನ್ನೂ ಓದಿ- Weight Loss Mistakes: ತೂಕ ಇಳಿಸುವಾಗ ಈ 10 ತಪ್ಪುಗಳನ್ನು ಮಾಡಲೇಬಾರದು
ಓಟ್ಸ್:
ಓಟ್ಸ್ ಕೂಡ ಪ್ರೋಟೀನ್ ಭರಿತ ಆಹಾರವಾಗಿದೆ. ಇದು ಸುಲಭವಾಗಿ ಜೀರ್ಣವಾಗುವುದರ ಜೊತೆಗೆ ಓಟ್ಸ್ ತಿನ್ನುವುದರಿಂದ ಪದೇ ಪದೇ ಹಸಿವಾಗುವುದಿಲ್ಲ. ಹಾಗಾಗಿ, ಬೆಳಗಿನ ಉಪಹಾರದಲ್ಲಿ ಓಟ್ಸ್ ಸೇವಿಸುವುದರಿಂದ ಆರೋಗ್ಯಕರವಾಗಿ ತೂಕ ಇಳಿಸಬಹುದು ಎಂದು ಹೇಳಲಾಗುತ್ತದೆ.
ಅವಲಕ್ಕಿ:
ಕೃಷ್ಣನಿಗೆ ಪ್ರಿಯವಾದ ಅವಲಕ್ಕಿ ರುಚಿಯಲ್ಲಿ ಮಾತ್ರವಲ್ಲ ಆರೋಗ್ಯಕ್ಕೂ ತುಂಬಾ ಹಿತ. ಇದು ಕಡಿಮೆ ಕ್ಯಾಲೋರಿ ಆಹಾರವಾಗಿದ್ದು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುತ್ತದೆ. ಆದ್ದರಿಂದ, ನೀವು ನಿಮ್ಮ ತೂಕವನ್ನು ಕಡಿಮೆ ಮಾಡಲು ಬಯಸಿದರೆ, ಮಾರ್ನಿಂಗ್ ಬ್ರೇಕ್ ಫಾಸ್ಟ್ ನಲ್ಲಿ ಅವಲಕ್ಕಿಯನ್ನು ಸೇವಿಸಬಹುದು. ಬೇಕೆನಿಸಿದರೆ ಇದಕ್ಕೆ ತರಕಾರಿ ಬೆರೆಸಿಯೂ ಸೇವಿಸಬಹುದು.
ಇದನ್ನೂ ಓದಿ- White Hair Treatment: ಯಾವುದೇ ಸೈಡ್ ಎಫ್ಫೆಕ್ಟ್ಸ್ ಇಲ್ಲ, ಬಿಳಿ ಕೂದಲಿಗೆ ಚಮತ್ಕಾರಿ ಈ 2 ಆಯುರ್ವೇದ ಜ್ಯೂಸ್
ಉಪ್ಪಿಟ್ಟು:
ಬಹಳ ಬೇಗ ಫಟಾಫಟ್ ಎಂದು ತಯಾರಿಸಬಹುದಾದ ತಿಂಡಿ ಎಂದರೆ ಉಪ್ಪಿಟ್ಟು. ಇದರಲ್ಲಿ ತರಕಾರಿಗಳನ್ನು ಬೆರೆಸಿ ಸೇವಿಸುವುದರಿಂದ ಇದು ಹಗುರವಾಗ ಪ್ರೋಟೀನ್ ಭರಿತ ಆಹಾರವಾಗಿದ್ದು ತೂಕ ನಷ್ಟಕ್ಕಾಗಿ ತುಂಬಾ ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.