Vastu Tips: ದಾಂಪತ್ಯ ಜೀವನದಲ್ಲಿ ಸಮಸ್ಯೆಯೇ, ಅಶೋಕ ಮರದ ಎಲೆಗಳ ಈ ಉಪಾಯ ಟ್ರೈ ಮಾಡಿ ನೋಡಿ
Ashok Tree Upay: ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಅಶೋಕ ಮರ ಇದ್ದರೆ, ಮನೆಯಲ್ಲಿ ಐಶ್ವರ್ಯ್ತಕ್ಕೆ ಕೊರತೆ ಇರುವುದಿಲ್ಲ ಎನ್ನಲಾಗುತ್ತದೆ. ಈ ಮರ ಪತಿ-ಪತ್ನಿಯರ ನಡುವಿನ ಪ್ರೀತಿಯನ್ನು ಹೆಚ್ಚಿಸಲು ಕಾರಣವಾಗುತ್ತದೆ ಎನ್ನಲಾಗುತ್ತದೆ. ವಾಸ್ತು ಶಾಸ್ತ್ರದ ಆ ಪರಿಹಾರಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
Vastu Tips: ಮನೆಗಳ ಹೊರಗೆ ಹಾಗೂ ರಸ್ತೆಗಳ ಮಧ್ಯದಲ್ಲಿರುವ ವಿಭಜಕಗಳ ಮೇಲೆ ಅಶೋಕ ಮರಗಳು ಇರುವುದನ್ನು ನೀವು ಗಮನಿಸಿರಬಹುದು. ಇದನ್ನು ಶೋ ಪ್ಲಾಂಟ್‌ನಂತೆ ಮನೆಗಳಲ್ಲಿಯೂ ನೆಡಲಾಗುತ್ತದೆ. ಅಶೋಕ ವೃಕ್ಷಕ್ಕೆ ಔಷಧೀಯ ಗುಣಗಳೂ ಇವೆ ಎಂಬುದು ಇಲ್ಲಿ ಉಲ್ಲೇಖನೀಯ. ಹಿಂದೂ ಧರ್ಮಗ್ರಂಥಗಳಲ್ಲಿ ಅಶೋಕ ವೃಕ್ಷದ ವಿಶೇಷ ಪ್ರಾಮುಖ್ಯತೆಯ ಕುರಿತು ವಿವರಿಸಲಾಗಿದೆ. ಅಶೋಕ ಮರವನ್ನು ನೆಡುವುದರಿಂದ ನಕಾರಾತ್ಮಕ ಶಕ್ತಿ ಮನೆಯಿಂದ ತೊಲಗುತ್ತದೆ ಎನ್ನಲಾಗುತ್ತದೆ. ಅಶೋಕ ವೃಕ್ಷವಿರುವ ಮನೆಯಲ್ಲಿ ಶಾಂತಿ ಮತ್ತು ಸಮೃದ್ಧಿ ತಾನಾಗಿಯೇ ಬರುತ್ತದೆ ಎನ್ನಲಾಗುತ್ತದೆ . ಈ ಮರದ ಎಲೆಗಳ ಪರಿಹಾರದಿಂದ ಪತಿ-ಪತ್ನಿಯರ ನಡುವೆ ಪ್ರೀತಿಯೂ ಹೆಚ್ಚಾಗುತ್ತದೆ. ಅಶೋಕ ಮರದ ಎಲೆಗಳ ಆ ಪರಿಹಾರಗಳು ಯಾವುವು ತಿಳಿದುಕೊಳ್ಳೋಣ ಬನ್ನಿ.
ವಾಸ್ತು ಶಾಸ್ತ್ರದ ಪ್ರಕಾರ, ಪತಿ-ಪತ್ನಿಯರ ನಡುವಿನ ಉದ್ವಿಗ್ನತೆ ಅಥವಾ ವೈರಾಗ್ಯವನ್ನು ದೂರಗೊಳಿಸಲು, ಅಶೋಕ ಮರದ ಎಲೆಗಳ ಪರಿಹಾರವು ತುಂಬಾ ಪ್ರಯೋಜನಕಾರಿಯಾಗಿದೆ. ಮನೆಯಲ್ಲಿರುವ ದೇವತೆಗಳ ಮುಂದೆ ಅಶೋಕ ಮರದ 7 ಎಲೆಗಳನ್ನು ಇಡಿ. ಎಲೆಗಳು ಒಣಗಿದ ನಂತರ, ಅವುಗಳನ್ನು ತೆಗೆದುಹಾಕಿ ಮತ್ತು ಮತ್ತೆ 7 ಹೊಸ ಎಲೆಗಳನ್ನು ಹಾಕಿ. ಕೆಲವೇ ದಿನಗಳಲ್ಲಿ, ಪತಿ ಮತ್ತು ಹೆಂಡತಿ ತಮ್ಮ ಸಂಬಂಧದಲ್ಲಿ ಭಾರಿ ಸುಧಾರಣೆಯನ್ನು ನೀವು ಗಮನಿಸಬಹುದು.
>> ಅಶೋಕ ಮರವು ಮನೆಯ ವಾಸ್ತು ದೋಷಗಳನ್ನೂ ನಿವಾರಿಸುತ್ತದೆ. ಮನೆಯ ಮುಂದೆ ಅಶೋಕ ವೃಕ್ಷವನ್ನು ನೆಟ್ಟರೆ ನಕಾರಾತ್ಮಕ ಶಕ್ತಿ ದೂರಾಗಿ ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ.
>> ದೇವಾನುದೇವತೆಗಳಿಗೆ ಅಶೋಕ ಎಲೆಗಳನ್ನು ಅರ್ಪಿಸುವುದರಿಂದ ಅಪೇಕ್ಷಿತ ಫಲಿತಾಂಶಗಳು ಪ್ರಾಪ್ತಿಯಾಗುತ್ತವೆ ಎನ್ನಲಾಗುತ್ತದೆ. ಅಶೋಕ ಎಲೆಗಳನ್ನು ಅರ್ಪಿಸುವುದರಿಂದ ದೇವ-ದೇವತೆಗಳು ಬೇಗನೆ ಪ್ರಸನ್ನರಾಗುತ್ತಾರೆ ಎನ್ನಲಾಗುತ್ತದೆ.
>> ಶಾಸ್ತ್ರಗಳ ಪ್ರಕಾರ, ಅಶೋಕ ಎಲೆಗಳ ಪರಿಹಾರದಿಂದ ವೈವಾಹಿಕ ಜೀವನದಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ತಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಯಿಂದ ಬಳಲುತ್ತಿರುವವರು ಅಶೋಕ ಮರದ ಎಲೆಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಬೇಕು. ಸ್ನಾನದ ನಂತರ, ಅಶೋಕ ಎಲೆಗಳನ್ನು ಅಶ್ವತ್ಥ ಮರದ ಬಳಿ ಇರಿಸಬೇಕು. ಈ ರೀತಿ ಸತತ 42 ದಿನಗಳವರೆಗೆ ಈ ಪ್ರಕ್ರಿಯೆಯನ್ನು ಮುಂದುವರಿಸಿ. ಹೀಗೆ ಮಾಡುವುದರಿಂದ ವೈವಾಹಿಕ ಜೀವನದಲ್ಲಿ ಮತ್ತೆ ಸಂತಸ ಮೂಡುತ್ತದೆ.
ಇದನ್ನೂ ಓದಿ-Sankranti 2023: ಇಂದು ಮಧ್ಯ ರಾತ್ರಿಯಿಂದ ಈ ಜನರ ನಕ್ಷತ್ರಗಳಲ್ಲಿ ಭಾರಿ ಬದಲಾವಣೆ, ಅಪಾರ ಧನವೃಷ್ಟಿ
ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ
ಇದನ್ನೂ ನೋಡಿ-
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.