Love Proposal Mistakes: ಸಂಗಾತಿಗೆ ಪ್ರಪೋಸ್ ಮಾಡುವಾಗ ಮರೆತೂ ಕೂಡ ಈ ತಪ್ಪು ಮಾಡ್ಬೇಡಿ, ಇಲ್ದಿದ್ರೆ ಡೈರೆಕ್ಟ್ ರಿಜೆಕ್ಟ್

Best Marriage Proposal: ನೀವೂ ಕೂಡ ಯಾರಿಗಾದರು ಪ್ರಪೋಸ್ ಮಾಡಲು ಬಯಸುತ್ತಿದ್ದರೆ, ಕೆಲ ವಿಷಯಗಳ ಬಗ್ಗೆ ಕಾಳಜಿ ವಹಿಸುವುದು ತುಂಬಾ ಅಗತ್ಯ, ಏಕೆಂದರೆ ನೀವು ಮಾಡುವ ಸಣ್ಣದೊಂದು ತಪ್ಪು ನಿಮ್ಮ ಪಾಲಿಗೆ ದುಬಾರಿ ಸಾಬೀತಾಗಬಹುದು.  

Written by - Nitin Tabib | Last Updated : Jan 14, 2023, 05:00 PM IST
  • ಕೆಲವರು ಧೈರ್ಯ ಮಾಡಿದರೂ ಕೂಡ ಅವರು ಮಾಡುವ ಕೆಲ ತಪ್ಪುಗಳು
  • ಅವರ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತವೆ ಮತ್ತು
  • ಅವರ ನೆಚ್ಚಿನ ಸಂಗಾತಿಯಿಂದ ರಿಜೆಕ್ಷನ್ ಗೆ ಒಳಗಾಗುತ್ತಾರೆ. ಆ ನೋವು ಅನುಭವಿಸಿದವರಿಗೆ ಗೊತ್ತು.
Love Proposal Mistakes: ಸಂಗಾತಿಗೆ ಪ್ರಪೋಸ್ ಮಾಡುವಾಗ ಮರೆತೂ ಕೂಡ ಈ ತಪ್ಪು ಮಾಡ್ಬೇಡಿ, ಇಲ್ದಿದ್ರೆ ಡೈರೆಕ್ಟ್ ರಿಜೆಕ್ಟ್ title=
Love Propose Common Mistakes

Relationship Tips: ಪ್ರೀತಿಯಲ್ಲಿ ಬೀಳುವುದು ಅಷ್ಟೊಂದು ಸುಲಭದ ಮಾತಲ್ಲ. ಹಲವು ಜನರು ತಾವು ತಮ್ಮ ನೆಚ್ಚಿನ ಕ್ರಶ್ ಗೆ ಮನದಾಳದ ಮಾತನ್ನು ಹೇಳಲಿಲ್ಲ ಎಂಬ ಕೊರಗಿನಲ್ಲಿಯೇ ಇಡೀ ಜೀವನವನ್ನೇ ಕಳೆಯುತ್ತಾರೆ. ಆದರೆ, ಕೆಲವರು ಧೈರ್ಯ ಮಾಡಿದರೂ ಕೂಡ ಅವರು ಮಾಡುವ ಕೆಲ ತಪ್ಪುಗಳು ಅವರ ಪಾಲಿಗೆ ದುಬಾರಿಯಾಗಿ ಪರಿಣಮಿಸುತ್ತವೆ ಮತ್ತು ಅವರ ನೆಚ್ಚಿನ ಸಂಗಾತಿಯಿಂದ ರಿಜೆಕ್ಷನ್ ಗೆ ಒಳಗಾಗುತ್ತಾರೆ. ಆ ನೋವು ಅನುಭವಿಸಿದವರಿಗೆ ಗೊತ್ತು. ಪ್ರಪೋಸ್ ಮಾಡುವಾಗ ಜನರು ಕೆಲ ಸಾಮಾನ್ಯ ತಪ್ಪುಗಳನ್ನು ಮಾಡುತ್ತಾರೆ ಮತ್ತು ಅವುಗಳತ್ತ ಅವರು ಗಮನ ಕೂಡ ಹರಿಸುವುದಿಲ್ಲ.  ತಮ್ಮ ಕ್ರಶ್ ಗೆ ಪ್ರಪೋಸ್ ಮಾಡುವಾಗ ಜನರು ಸಾಮಾನ್ಯವಾಗಿ ಮಾಡುವ ಆ ತಪ್ಪುಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ,

ಪ್ರಪೋಸ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ
ಪಬ್ಲಿಕಲ್ಲೇ ಪ್ರಪೋಸ್ ಮಾಡ್ಬೇಡಿ
ಕೆಲವರು ಸಂಭ್ರಮದಲ್ಲಿ ಎಲ್ಲರ ಮುಂದೆ ತಮ್ಮ ಪ್ರೀತಿಯನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸುವ ತಪ್ಪನ್ನು ಮಾಡುತ್ತಾರೆ. ಇದು ಸಂಭವಿಸಿದಾಗ, ಅನೇಕ ಬಾರಿ ಮುಂಭಾಗದಲ್ಲಿರುವ ವ್ಯಕ್ತಿಯು ಅಸಹಜತೆಯನ್ನು ಅನುಭವಿಸುತ್ತಾರೆ  ಮತ್ತು ನಂತರ ಅವರು ನಿರಾಕರಿಸುತ್ತಾನೆ. ಹೀಗಾಗಿ ಎಲ್ಲರ ಮುಂದೆ ಪ್ರಪೋಸ್ ಮಾಡುವ ತಪ್ಪನ್ನು ಎಂದಿಗೂ ಮಾಡಬೇಡಿ.

ತೀರಾ ಹಳೆ ಶೈಲಿಯಲ್ಲಿ ಪ್ರಪೋಸ್ ಮಾಡಬೇಡಿ, ನಾವಿನ್ಯತೆ ಇರಲಿ
ನೀವೂ ನಿಮ್ಮ ಪ್ರೀತಿಯನ್ನು ವ್ಯಕ್ತಪಡಿಸಲು ನೀವು ಬಯಸುತ್ತಿದ್ದರೆ, ಅದೇ ಹಳೆಯ ಮಾರ್ಗಗಳನ್ನು ಅನುಸರಿಸಬೇಡಿ. ಇದಕ್ಕಾಗಿ ಯಾವಾಗಲೂ ಹೊಸದನ್ನು ಪ್ರಯತ್ನಿಸಿ. ಹಳೆಯ ಶೈಲಿಯ ಕಾರಣದಿಂದ ನೀವು ನಿರಾಕರಣೆಗೆ ಒಳಗಾಗಬಹುದು.

ಆಹಾರ ಮತ್ತು ಪಾನೀಯದಲ್ಲಿ ಉಂಗುರವನ್ನು ಹಾಕಬೇಡಿ
ಕೆಲವರು ಪ್ರಪೋಸ್ ಮಾಡಲು ಆಹಾರ ಅಥವಾ ಪಾನೀಯಗಳಲ್ಲಿ ಉಂಗುರವನ್ನು ಹಾಕುತ್ತಾರೆ. ಆದಷ್ಟು ಇಂತಹದನ್ನು ಮಾಡುವುದನ್ನು ತಪ್ಪಿಸಿ. ಆಕಸ್ಮಿಕವಾಗಿ ಉಂಗುರವು ವ್ಯಕ್ತಿಯ ಬಾಯಿಗೆ ಹೋದರೆ ಆ ವ್ಯಕ್ತಿ ಇಡೀ ಜೀವನದಲ್ಲಿ ನಿಮ್ಮನ್ನು ಕ್ಷಮಿಸಲ್ಲ ಮತ್ತು ನೀವು ರಿಜೆಕ್ಷನ್ ಎದುರಿಸಬೇಕಾಗಬಹುದು.

ಇದನ್ನೂ ಓದಿ-Relationship Tips: ಸಂಗಾತಿಗೆ ಸರ್ಪ್ರೈಸ್ ಕೊಡಬೇಕೇ? ಈ ಸಲಹೆ ಅನುಸರಿಸಿ, ಪ್ರೀತಿ ಹೆಚ್ಚಾಗುತ್ತೆ

ಪ್ರಸ್ತಾಪಿಸಲು ಸೂಕ್ತ ಸ್ಥಳವನ್ನು ಆರಿಸಿ
ನೀವು ಕೂಡ ಯಾರಿಗಾದರು ಪ್ರಪೋಸ್ ಮಾಡಲು ಬಯಸುತ್ತಿದ್ದರೆ,  ಅದಕ್ಕೆ ಸೂಕ್ತ ಸ್ಥಳವನ್ನು ಆರಿಸಿ. ಪೊಲೀಸರು ಸುರಕ್ಷಿತ ಎಂದು ಭಾವಿಸುವ ಸ್ಥಳ ಅದಾಗಿರಬೇಕು. ನೀವು ಪ್ರಪೋಸ್ ಮಾಡಲು ಆಯ್ಕೆ ಮಾಡುವ ಸ್ಥಳ ಸೂಕ್ತ ಅಥವಾ ಸುರಕ್ಷಿತವಾಗಿಲ್ಲದಿದ್ದರೆ, ನೀವು ರಿಜೆಕ್ಷನ್ಗೆ ಒಳಗಾಗಬಹುದು.  

ಇದನ್ನೂ ಓದಿ-Pregnancy: ಗರ್ಭಾವಸ್ಥೆಯಲ್ಲಿ ಶಾರೀರಿಕ ಸಂಬಂಧ ಬೆಳೆಸುವುದು ಮಹಿಳೆಯರ ಪಾಲಿಗೆ ತುಂಬಾ ಅಪಾಯಕಾರಿ.. ಎಚ್ಚರ!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News