ನವದೆಹಲಿ: ನೀವು ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದೀರಾ? ಹಾಗಾದರೆ ನೀವು ಪ್ರತಿದಿನ ಈ ಆಹಾರಗಳನ್ನು ಸೇವಿಸಿ ನೋಡಿ. ಇದನ್ನು ಪಾಲಿಸಿದರೆ ಉತ್ತಮ ಫಲಿತಾಂಶವನ್ನು ಪಡೆಯುತ್ತೀರಿ. ಹೌದು, ಇಂದಿನ ವೇಗದ ಜಗತ್ತಿನಲ್ಲಿ ಪ್ರತಿಯೊಬ್ಬರ ಲೈಫ್ ಸ್ಟೈಲ್(LifeStyle) ಸಾಕಷ್ಟು ಬದಲಾಗಿಬಿಟ್ಟಿದೆ. ಜಡ ಜೀವನಶೈಲಿಯಿಂದ ಪುರುಷರು ಮತ್ತು ಮಹಿಳೆಯರಲ್ಲಿ ತೂಕ ಹೆಚ್ಚಳದ ಸಮಸ್ಯೆ ಕಂಡುಬರುವುದು ಸಾಮಾನ್ಯವಾಗಿಬಿಟ್ಟಿದೆ.   


COMMERCIAL BREAK
SCROLL TO CONTINUE READING

ಪ್ರತಿಯೊಬ್ಬರೂ ಫಿಟ್ನೆಸ್(Fitness) ಮತ್ತು ಆರೋಗ್ಯಕರ ಜೀವನಶೈಲಿ(Healthy Lifestyle)ಯ ಬಗ್ಗೆ ಹೆಚ್ಚು ಜಾಗೃತರಾಗಿರಬೇಕು. ತೂಕವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಈಗ ಜನರು ಯೋಗ ಮತ್ತು ವ್ಯಾಯಾಮದ ಜೊತೆಗೆ ಆರೋಗ್ಯಕರ ಆಹಾರ ಸೇವಿಸುವ ನಿಯಮಿತ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ವಾಸ್ತವವಾಗಿ ತೂಕ ಹೆಚ್ಚಾಗುವುದು ಅನೇಕ ಆರೋಗ್ಯ ಸಂಬಂಧಿತ ತೊಡಕುಗಳಿಗೆ ಕಾರಣವಾಗುತ್ತದೆ. ವಿಶೇಷವಾಗಿ ಈ ಕೋವಿಡ್ ಕಾಲದಲ್ಲಿ ಉತ್ತಮ ಆರೋಗ್ಯ  ಕಾಪಾಡಿಕೊಳ್ಳುವುದು ಅನಿವಾರ್ಯವಾಗಿದೆ.


ಇದನ್ನೂ ಓದಿ: ಮನಿ ಪ್ಲಾಂಟ್ ಗೆ ನೀರು ಹಾಕುವಾಗ ಜೊತೆಗೆ ಈ ವಸ್ತುವನ್ನು ಬೆರೆಸಿ ನೋಡಿ..!


ತ್ವರಿತವಾಗಿ ತೂಕ ಇಳಿಸಿಕೊಳ್ಳಲು ಅನೇಕರು ಕ್ರಾಶ್ ಡಯಟಿಂಗ್(Crash Dieting) ಸೇರಿದಂತೆ ಅನೇಕ ರೀತಿಯ ಸರ್ಕಸ್ ಮಾಡುತ್ತಾರೆ. ಆದರೆ ಇದು ಆರೋಗ್ಯಕರ ಆಯ್ಕೆಯಾಗಿಲ್ಲ. ಕೆಲ ಆರೋಗ್ಯಕರ ಆಹಾರಗಳನ್ನು ಆಯ್ಕೆ ಮಾಡಿಕೊಂಡರೆ ಸಾಕು. ಅವುಗಳಲ್ಲಿ ಮೊದಲಿಗೆ ಬರುವುದು ಡ್ರೈ ಪ್ರೂಟ್ಸ್.  ಡ್ರೈ ಪ್ರೂಟ್ಸ್(Dry Fruits) ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತವೆ. ಅವು ನಿಮ್ಮ ಹಸಿವಿನ ನೋವನ್ನು ದೂರವಿಟ್ಟು ನಿಮ್ಮ ದೇಹಕ್ಕೆ ಬೇಕಾದ ಅಗತ್ಯ ಪೋಷಕಾಂಶಗಳನ್ನು ನೀಡುತ್ತವೆ.


ತೂಕ ಇಳಿಸಿಕೊಳ್ಳಲು ಪ್ರತಿದಿನ ಈ 5 ಡ್ರೈ ಪ್ರೂಟ್ಸ್ ಸೇವಿಸಿ


ಬಾದಾಮಿ


ಬಾದಾಮಿ ತೂಕ ಇಳಿಸು(Weight Loss)ವಲ್ಲಿ ಹೆಚ್ಚು ಸಹಾಯ ಮಾಡುತ್ತದೆ. ಆಹಾರದ ಹಸಿವನ್ನು ಹೋಗಲಾಡಿಸಲು ಬಾದಾಮಿ ತಿನ್ನಲು ತಜ್ಞರು ಶಿಫಾರಸು ಮಾಡುತ್ತಾರೆ. ಬೆರಳೆಣಿಕೆಯಷ್ಟು ಬಾದಾಮಿ ಸೇವನೆಯು ನಿಮ್ಮ ಹಸಿವನ್ನು ನೀಗಿಸುತ್ತದೆ. ಇವುಗಳಲ್ಲಿ ತುಂಬಾ ಕಡಿಮೆ ಕ್ಯಾಲೋರಿಗಳು ಮತ್ತು ಪೌಷ್ಟಿಕಾಂಶಗಳಿರುತ್ತದೆ. ಇದು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.   


ಒಣದ್ರಾಕ್ಷಿ


ನಿಮಗೆ ಹಸಿವಾದಾಗ ಒಣದ್ರಾಕ್ಷಿಯನ್ನು ಕೂಡ ತಿನ್ನಬಹುದು. ಅವು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ದೀರ್ಘಾವಧಿಯವರೆಗೆ ನಿಮಗೆ ಉತ್ತಮ ಆರೋಗ್ಯ ಸಿಗುವಂತೆ ಮಾಡುತ್ತವೆ. ಒಣದ್ರಾಕ್ಷಿ ಹಸಿವನ್ನು ನಿಗ್ರಹಿಸುವ ಗುಣಗಳನ್ನು ಹೊಂದಿದೆ ಮತ್ತು ಹಸಿವಿನ ಹಾರ್ಮೋನ್ (ಗ್ರೆಲಿನ್) ಅನ್ನು ದೂರವಿರಿಸುತ್ತದೆ. ದೇಹದಲ್ಲಿನ ಕೊಬ್ಬಿನ ಅಂಶ ಕಡಿಮೆ ಮಾಡಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


ಇದನ್ನೂ ಓದಿ: Palmistry: ಸರ್ಕಾರಿ ನೌಕರಿ ಕೊಡಿಸುವ ಹಸ್ತರೇಖೆ ಈ ರೀತಿಯಾಗಿರುತ್ತದೆ, ನಿಮ್ಮ ಕೈಯಲ್ಲಿದೆಯಾ?


ಗೋಡಂಬಿ


ತೂಕ ಇಳಿಸಿಕೊಳ್ಳಬಯಸುವವರಿಗೆ ಗೋಡಂಬಿ(Cashews)ಯು ಆರೋಗ್ಯಕರ ಆಯ್ಕೆಯಾಗಿದೆ. ತೂಕ ಕಳೆದುಕೊಳ್ಳಲು ನೀವು ಗೋಡಂಬಿಯನ್ನು ದೈನಂದಿನ ಆಹಾರದಲ್ಲಿ ಸೇರಿಸಿಕೊಳ್ಳಬಹುದು. ಸೀಮಿತ ಪ್ರಮಾಣದಲ್ಲಿ ಮಾತ್ರ ಇವುಗಳನ್ನು ಸೇವಿಸಬೇಕು. ಗೋಡಂಬಿಯಲ್ಲಿ ಬಹಳಷ್ಟು ಮೆಗ್ನೀಸಿಯಮ್ ಇದ್ದು, ಇದು ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತದೆ. ಗೋಡಂಬಿಯಲ್ಲಿ ಪ್ರೋಟೀನ್ ಕೂಡ ಇದ್ದು, ಇದು ತೂಕ ಇಳಿಸಲು ಸಹಾಯ ಮಾಡುತ್ತದೆ.


ಕಡಲೆಕಾಯಿ


ಕಡಲೆಕಾಯಿಯಲ್ಲಿ ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳು ಮತ್ತು ಪಾಲಿಅನ್ ಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳಿವೆ. ಇದು ದೇಹದಲ್ಲಿನ ಉರಿಯೂತವನ್ನು ಕಡಿಮೆ ಮಾಡುತ್ತದೆ. ಕಡಲೆಕಾಯಿ ದೇಹಕ್ಕೆ ಶಕ್ತಿಯನ್ನು ನೀಡುತ್ತದೆ ಮತ್ತು ತೂಕ ಇಳಿಸಲು ಸಹ ಸಹಾಯ ಮಾಡುತ್ತದೆ.


ವಾಲ್ನಟ್ಸ್


ವಾಲ್ನಟ್ಸ್ ತೂಕ ಇಳಿಸಲು ಸಹಾಯ ಮಾಡುತ್ತದೆ. ಇದರಲ್ಲಿ ಪ್ರೋಟೀನ್, ಖನಿಜಗಳು ಮತ್ತು ವಿಟಮಿನ್ ಗಳು ಹೇರಳವಾಗಿವೆ. ನಿಮಗೆ ಹಸಿವಾದಾಗ ವಾಲ್ನಟ್ಸ್ ತಿನ್ನುವುದು ಉತ್ತಮ. ವಾಲ್ನಟ್ಸ್ ಉತ್ತಮ ಪೋಷಕಾಂಶಗಳನ್ನು ಹೊಂದಿರುತ್ತದೆ. ಇದು ಮೆದುಳಿನಲ್ಲಿರುವ ಸಿರೊಟೋನಿನ್ ರಾಸಾಯನಿಕ ಮಟ್ಟವನ್ನು ಹೆಚ್ಚಿಸುತ್ತದೆ. ಇದು ಹಸಿವಿನ ಭಾವನೆಯನ್ನು ಕಡಿಮೆ ಮಾಡುತ್ತದೆ. ಪ್ರತಿದಿನ ಬೆರಳೆಣಿಕೆಯಷ್ಟು ನೆನೆಸಿದ ವಾಲ್ನಟ್ಸ್ ತಿನ್ನುವುದರಿಂದ ತೂಕವನ್ನು ತ್ವರಿತವಾಗಿ ಇಳಿಸಲು ಸಹಕಾರಿಯಾಗುತ್ತದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ